ಮುಂಬೈ(ಡಿ. 10): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಈಗ ಅಜ್ಜ ಆಗಿದ್ಧಾರೆ. ಆಕಾಶ್ ಅಂಬಾನಿ ಅವರ ಪತ್ನಿ ಶ್ಲೋಕಾ ಮೆಹತಾ ಅವರು ಇಂದು ಗಂಡು ಮಗುವಿಗೆ ಜನ್ಮ ನೀಡಿದ್ಧಾರೆ. ಸದ್ಯ, ತಾಯಿ ಶ್ಲೋಕಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿರುವುದು ತಿಳಿದುಬಂದಿದೆ. ಅಂಬಾನಿ ಕುಟುಂಬದಿಂದ ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಲಾಗಿದೆ.
“ಕೃಷ್ಣ ಪರಮಾತ್ಮನ ದಯೆ ಮತ್ತು ಆಶೀರ್ವಾದದಿಂದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಅವರಿಗೆ ಗಂಡು ಸಂತಾನವಾಗಿದೆ. ನೀತಾ ಮತ್ತು ಮುಕೇಶ್ ಅಂಬಾನಿ ಅವರು ಮೊದಲ ಬಾರಿ ಅಜ್ಜ-ಅಜ್ಜಿಯಾದ ಬಗ್ಗೆ ಸಂತಸ ಪಟ್ಟಿದ್ದಾರೆ. ಧೀರೂಭಾಯ್ ಮತ್ತು ಕೋಕಿಲಾ ಅಂಬಾನಿ ಅವರ ಮರಿಮೊಮ್ಮಗನನ್ನು ತುಂಬು ಸಂತೋಷದಿಂದ ಸ್ವಾಗತಿಸಿದ್ದಾರೆ. ಮಗುವಿನ ಜನನದಿಂದ ಮೆಹತಾ ಮತ್ತು ಅಂಬಾನಿ ಕುಟುಂಬಗಳಿಗೆ ಸಂತಸ ತಂದಿದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: New Parliament Building: ನೂತನ ಸಂಸತ್ ಭವನದ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ
ಖ್ಯಾತ ಉದ್ಯಮಿ ರಸೆಲ್ ಮೆಹತಾ ಅವರ ಮಗಳಾದ ಶ್ಲೋಕಾ ಹಾಗೂ ಆಕಾಶ್ ಅಂಬಾನಿ ಇಬ್ಬರೂ ಧೀರೂಭಾಯ್ ಅಂಬಾನಿ ಶಾಲೆಯಲ್ಲಿ ಬಾಲ್ಯದಲ್ಲಿ ಒಟ್ಟಿಗೆ ಓದಿದವರು. ಡೇಟಿಂಗ್ ಮಾಡುವ ಮುನ್ನವೇ ಅವರಿಬ್ಬರು ಹಲವು ವರ್ಷ ಸ್ನೇಹಿತರಾಗಿದ್ದರು. 2018ರ ಮಾರ್ಚ್ ತಿಂಗಳಲ್ಲಿ ಗೋವಾದಲ್ಲಿ ಇಬ್ಬರ ಎಂಗೇಜ್ಮೆಂಟ್ ಆಯಿತು. ಮರು ವರ್ಷ, ಅಂದರೆ 2019ರ ಮಾರ್ಚ್ ತಿಂಗಳಲ್ಲಿ ವಿವಾಹ ಮಹೋತ್ಸವ ಜರುಗಿತು. ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್, ಗೂಗಲ್ ಸಿಇಒ ಸುಂದರ್ ಪಿಚೈ ಸೇರಿದಂತೆ ಗಣ್ಯಾತಿಗಣ್ಯರು ಅಂಬಾನಿ ಕುಟುಂಬದ ಮದುವೆ ಸಮಾರಂಭದಲ್ಲಿ ಮೇಳೈಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ