News18 India World Cup 2019

ಕೆಂಪು ದೀಪದ ಕಾರಿನಲ್ಲಿ ಓಡಾಡುತ್ತಿದ್ದ ಸಚಿವೆ, ಹೊಟ್ಟೆಪಾಡಿಗಾಗಿ ಕುರಿ ಮೇಯಿಸುತ್ತಿದ್ದಾರೆ!


Updated:August 27, 2018, 2:33 PM IST
ಕೆಂಪು ದೀಪದ ಕಾರಿನಲ್ಲಿ ಓಡಾಡುತ್ತಿದ್ದ ಸಚಿವೆ, ಹೊಟ್ಟೆಪಾಡಿಗಾಗಿ ಕುರಿ ಮೇಯಿಸುತ್ತಿದ್ದಾರೆ!

Updated: August 27, 2018, 2:33 PM IST
ಅಶೋಕ್​ ಅಗರ್​ವಾಲ್, ನ್ಯೂಸ್​ 18 ಕನ್ನಡ

ಭೋಪಾಲ್​(ಆ.27): ಸಮಯ ಎಲ್ಲವನ್ನೂ ನಿರ್ಧರಿಸುತ್ತದೆ ಎಂಬ ಮಾತಿದೆ. ಇದು ತಿರುಕನನ್ನು ಯಾವಾಗ ರಾಜನನ್ನಾಗಿಸಿದರೆ, ರಾಜನನ್ನು ಯಾವಾಗ ತಿರುಕನನ್ನಾಗಿಸುತ್ತದೆ ಎಂಬುವುದು ಯಾರಿಗೂ ತಿಳಿದಿಲ್ಲ. ಮಧ್ಯಪ್ರದೇಶದ ಓರ್ವ ಆದಿವಾಸಿ ಮಹಿಳೆಯ ಕಥೆಯೂ ಇದಕ್ಕೆ ಹೊರತಾಗಿಲ್ಲ. ಒಂದು ಸಮಯದಲ್ಲಿ ಕೆಂಪು ದೀಪದ ಕಾರಿನಲ್ಲಿ ಓಡಾಡಿಕೊಂಡಿದ್ದ, ರಾಜ್ಯ ಸಚಿವೆ ದರ್ಜೆ ಪಡೆದಿದ್ದ ಅದಿವಾಸಿ ಮಹಿಳೆ ಈಗ ಹೊಟ್ಟೆಪಾಡಿಗಾಗಿ ಕುರಿಗಳನ್ನು ಮೇಯಿಸುತ್ತಿದ್ದಾರೆ. ಇಷ್ಟೇ ಅಲ್ಲದೇ, ಮಾಜಿ ಜಿಲ್ಲಾ ಪಂಚಾಯತ್​ ಅಧ್ಯಕ್ಷರಾಗಿದ್ದ ಈ ಮಹಿಳೆಗೆ ವಾಸಿಸಲು ಮನೆಯೂ ಇಲ್ಲದಂತಾಗಿದೆ. ಹೀಗಾಗಿ ಪಾಳುಬಿದ್ದ ಟೆಂಟ್​ ಒಂದರಲ್ಲಿದ್ದು ತನ್ನ ಮಕ್ಕಳನ್ನು ಸಾಕುತ್ತಿದ್ದಾರೆ.

ಜಿಲ್ಲಾ ಪಂಚಾಯತ್​ ಅಧ್ಯಕ್ಷರಾಗಿದ್ದ ಜೂಲೀ ಒಂದು ಸಮಯದಲ್ಲಿ ಕೆಂಪು ಬಣ್ಣದ ದೀಪವಿರುವ ಕಾರಿನಲ್ಲಿ ಓಡಾಡಿಕೊಂಡಿದ್ದರು. ಅಲ್ಲದೇ ಸರ್ಕಾರದಿಂದ ಅವರಿಗೆ ರಾಜ್ಯಮಂತ್ರಿಯ ಸ್ಥಾನಮಾನ ನೀಡಲಾಗಿತ್ತು. ಉನ್ನತ ಅಧಿಕಾರಿಗಳು ಅವರನ್ನು ಮೇಡಂ ಎಂದು ಕರೆಯುತ್ತಿದ್ದರು. ಆದರೆ ಇಂದು ಜೂಲೀ ಅನಾಮಿಕರಂತೆ ಕತ್ತಲೆಯ ಲೋಕದಲ್ಲಿ ತಮ್ಮ ಬದುಕು ಸಾಗಿಸುತ್ತಿದ್ದಾರೆ. ಅವರು ಇಲ್ಲಿನ ರಾಂಪುರಿ ಹೆಸರಿನ ಹಳ್ಳಿಯಲ್ಲಿರುವ ಲುಹಾರ್​ಪುರ ಗಲ್ಲಿಯಲ್ಲಿದ್ದು ಕುರಿಗಳನ್ನು ಮೇಯಿಸುವ ಕೆಲಸ ಮಾಡಿಕೊಂಡಿದ್ದಾರೆ.

2005ರಲ್ಲಿ ಮಾಜಿ ಶಾಸಕ ಹಾಗೂ ಜಿಲ್ಲೆಯ ಬಹುದೊಡ್ಡ ನಾಯಕ ರಾಮ್​ಸಿಂಗ್​ ಯಾದವ್​ ಎಂಬವರು ಜೂಲೀಯವರನ್ನು ಜಿಲ್ಲಾ ಪಂಚಾಯತ್​ ಸದಸ್ಯರನ್ನಾಗಿಸಿದ್ದರು. ಇದಾದ ಬಳಿಕ ಮತ್ತೊಬ್ಬ ಮಾಜಿ ಶಾಸಕ ವೀರೇಂದ್ರ ರಘುವಂಶಿ ಜೂಲೀಯವರನ್ನು ಜಿಲ್ಲಾ ಪಂಚಾಯತ್​ ಅಧ್ಯಕ್ಷ  ಸ್ಥಾನಕ್ಕೇರಿಸಿದ್ದರು. ಆದರೀಗ ಅವರು ಹಳ್ಳಿಯ 50ಕ್ಕೂ ಹೆಚ್ಚು ಕುರಿಗಳನ್ನು ಮೇಯಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ತಿಂಗಳಿಗೆ ಒಂದು ಕುರಿಗೆ 50 ರೂಪಾಯಿಯಂತೆ ಹಣ ಗಳಿಸುತ್ತಿದ್ಧಾರೆ.

ತಮ್ಮ ಕೆಲಸದ ಕುರಿತಾಗಿ ಪ್ರತಿಕ್ರಿಯಿಸಿರುವ ಜೂಲೀ ಕೂಲಿ ಕೆಲಸಕ್ಕಾಗಿ ಗುಜರಾತ್​ ಸೇರಿದಂತೆ ಬೇರೆ ಪ್ರದೇಶಗಳಿಗೂ ತೆರಳಬೇಕಾಗುತ್ತದೆ ಎಂದಿದ್ದಾರೆ. ಬಡತನ ರೇಖೆಗಿಂತ ಕೆಳ ಬರುವ ಅವರು ವಾಸಿಸಲು ಇಂದಿರಾ ಕುಟೀರ ನೀಡುವಂತೆ ಅರ್ಜಿ ಸಲ್ಲಿಸಿದ್ದರಂತೆ. ಆದರೆ ಅರ್ಜಿ ಸ್ವೀಕರಿಸಲಾಗಿತ್ತಾದರೂ, ಮಂಜೂರಾಗಿರಲಿಲ್ಲ. ಹೀಗಾಗಿ ಬೇರೆ ವಿಧಿ ಇಲ್ಲದೇ ಅವರು ಟೆಂಟ್​ನಲ್ಲಿ ವಾಸಿಸಬೇಕಾದ ಅನಿವಾರ್ಯತೆ ಎದುರಾಗಿತ್ತು.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...