HOME » NEWS » National-international » SHIVASENA MLA PRATAP SARNAIK RAIDED AND QUESTIONED IN MONEY LAUNDERING CASE MAK

ಅರ್ನಾಬ್ ಗೋಸ್ವಾಮಿ ಮತ್ತು ನಟಿ ಕಂಗನಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಶಿವಸೇನೆ ನಾಯಕನ ಮೇಲೆ ಇಡಿ ದಾಳಿ

ಶಿವಸೇನೆ ಶಾಸಕರೊಂದಿಗೆ ಸಂಪರ್ಕ ಹೊಂದಿದ್ದ ಥಾಣೆ ಮತ್ತು ಮುಂಬೈನ 10 ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿದ್ದಾರೆ.  ಈ ದಾಳಿಯನ್ನು ಖಂಡಿಸಿದ ಶಿವಸೇನೆ, ಇದು ಬಿಜೆಪಿಯ ರಾಜಕೀಯ ದುರುದ್ದೇಶಪೂರಿತ ದಾಳಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.

news18-kannada
Updated:November 24, 2020, 4:34 PM IST
ಅರ್ನಾಬ್ ಗೋಸ್ವಾಮಿ ಮತ್ತು ನಟಿ ಕಂಗನಾ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ ಶಿವಸೇನೆ ನಾಯಕನ ಮೇಲೆ ಇಡಿ ದಾಳಿ
ಕಂಗನಾ ರಣಾವತ್, ಪ್ರತಾಪ್ ಸರ್ನಾಯಕ್.
  • Share this:
ಮುಂಬೈ (ನವೆಂಬರ್​ 24); ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಶಿವಸೇನೆ ಮುಖಂಡ ಮತ್ತು ಶಾಸಕ ಪ್ರತಾಪ್​ ಸರ್ನಾಯಕ್ ಮನೆ ಮೇಲೆ ದಾಳಿ ನಡೆಸಿದ್ದು ಮನಿ ಲಾಂಡರಿಂಗ್​ ಕುರಿತು ಪ್ರತಾಪ್ ಸರ್ನಾಯಕ್ ಮತ್ತು ಅವರ ಮಗನನ್ನು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಈ ಹಿಂದೆ ಮಹಾರಾಷ್ಟ್ರ ಸರ್ಕಾರದ ವಿರುದ್ಧ ನಟಿ ಕಂಗನಾ ರಣಾವತ್​ ಮತ್ತು ಪತ್ರಕರ್ತ ಅರ್ನಾಬ್​ ಗೋಸ್ವಾಮಿ ನಿರಂತರವಾಗಿ ಟೀಕೆ ನಡೆಸುತ್ತಿದ್ದಸಂದರ್ಭದಲ್ಲಿ ಇದೇ ಪ್ರತಾಪ್ ಸರ್ನಾಯಕ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು. ಇದೇ ಕಾರಣಕ್ಕೆ ರಾಜಕೀಯ ದ್ವೇಷ ಸಾಧಿಸುವ ಸಲುವಾಗಿ ಕೇಂದ್ರ ಬಿಜೆಪಿ ಸರ್ಕಾರ ಶಿವಸೇನೆ ನಾಯಕನ ಮನೆಯ ಮೇಲೆ ದಾಳಿ ಸಂಘಟಿಸಿದೆ ಎಂದು ಆರೋಪಿಸಲಾಗುತ್ತಿದೆ.

ಈ ಹಿಂದೆ ಸುಶಾಂತ್ ಸಿಂಗ್​ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸರ ವಿರುದ್ಧ ಛೀಮಾರಿ ಹಾಕಿ ಸುದ್ದಿಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್​ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಕೆ ಮಾಡಿದ್ದರು. ಈ ಸಂದರ್ಭದಲ್ಲಿ ನಟಿಯ ಹೇಳಿಕೆಯ ವಿರುದ್ಧ ಕಿಡಿಕಾರಿದ್ದ ಪ್ರತಾಪ್ ಸರ್ನಾಯಕ್​ ಕಂಗನಾ ರಣಾವತ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದರು.

ಇನ್ನೂ ಇಂಟೀರಿಯರ್​ ಡಿಸೈನರ್​ ಅನ್ವಯ್​ ನಾಯಕ್ ಆತ್ಮಹತ್ಯೆ ಪ್ರಕರಣದಲ್ಲಿ ಅರ್ನಾಬ್​ ಗೋಸ್ವಾಮಿ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದರು. ಅಲ್ಲದೆ, ಈ ಪ್ರಕರಣದ ಮರು ತನಿಖೆಗೆ ಒತ್ತಾಯಿಸಿದ್ದರು. ಈ ಘಟನೆಗಳು ಸಂಭವಿಸಿದ ಕೆಲವೇ ದಿನಗಳಲ್ಲಿ ಅವರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿರುವುದು ಇದೀಗ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಶಿವಸೇನೆ ಶಾಸಕರೊಂದಿಗೆ ಸಂಪರ್ಕ ಹೊಂದಿದ್ದ ಥಾಣೆ ಮತ್ತು ಮುಂಬೈನ 10 ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿದ್ದಾರೆ.  ಈ ದಾಳಿಯನ್ನು ಖಂಡಿಸಿದ ಶಿವಸೇನೆ, "ಇದು ಬಿಜೆಪಿಯ ರಾಜಕೀಯ ದುರುದ್ದೇಶಪೂರಿತ ದಾಳಿ " ಎಂದು ಆಕ್ರೋಶ ವ್ಯಕ್ತಪಡಿಸಿದೆ.

"ಮುಂದಿನ 25 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರುವ ಕನಸನ್ನು ಬಿಜೆಪಿ ಪಕ್ಷವು ಮರೆತುಬಿಡಬೇಕು. ನೀವು ಇಂದು ಪ್ರಾರಂಭಿಸಿದ್ದೀರಿ, ಅದನ್ನು ಹೇಗೆ ಕೊನೆಗೊಳಿಸಬೇಕು ಎಂದು ನಮಗೆ ತಿಳಿದಿದೆ" ಎಂದು ಶಿವಸೇನಾ ಸಂಸದ ಸಂಜಯ್ ರಾವತ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ : ಪ್ರಧಾನಿ ಮೋದಿ ವಿರುದ್ಧ ವಾರಣಾಸಿಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಸೈನಿಕ ತೇಜ್ ಬಹದ್ದೂರ್ ಅರ್ಜಿ ವಜಾಗೊಳಿಸಿದ ಸುಪ್ರೀಂ

ಅಲ್ಲದೆ, “ಶಾಸಕರು ಮನೆಯಲ್ಲಿ ಇಲ್ಲದಿದ್ದಾಗ ಅವರ ಆಸ್ತಿಗಳ ಮೇಲೆ ದಾಳಿ ನಡೆಸಲಾಗಿದೆ. ನೀವು ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಜನರಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದೀರಿ. ಈ ಕ್ರಮಗಳು ನಿಮಗೆ ಹಿನ್ನಡೆ ಉಂಟುಮಾಡುತ್ತವೆ. ನಿಮ್ಮ ಸಮಯ ಹತ್ತಿರವಾಗಿದೆ ಎಂದು ನಾನು ಭಾವಿಸುತ್ತೇನೆ. ಅದು ಸಿಬಿಐ ಅಥವಾ ಇ.ಡಿ ಆಗಿರಲಿ. ನಮ್ಮ ಸರ್ಕಾರ, ಶಾಸಕರು ಮತ್ತು ನಾಯಕರು ಯಾರಿಗೂ ಶರಣಾಗುವುದಿಲ್ಲ. ನಾವು ಹೋರಾಟ ಮುಂದುವರಿಸುತ್ತೇವೆ" ಎಂದು ಅವರು ಪುನರುಚ್ಚರಿಸಿದ್ದಾರೆ.

ವಿಧಾನಸಭಾ ಚುನಾವಣೆ ನಂತರ ಮಹಾರಾಷ್ಟ್ರದಲ್ಲಿ ಅಧಿಕಾರ ಹಂಚಿಕೆ ವಿವಾದದ ನಂತರ ಶಿವಸೇನೆ ಕಳೆದ ವರ್ಷ ಬಿಜೆಪಿಯೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ಕಡಿದುಕೊಂಡಿತು. ನಂತರ ಸೈದ್ಧಾಂತಿಕ ಪ್ರತಿಸ್ಪರ್ಧಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಜೊತೆಗೆ ಮೈತ್ರಿ ಮಾಡಿಕೊಂಡು ಶಿವಸೇನೆ ಅಧಿಕಾರಕ್ಕೆ ಬಂದಿತು. ಅಂದಿನಿಂದು ಬಿಜೆಪಿ ಮತ್ತು ಶಿವಸೇನೆಯ ನಡುವೆ ಬಹಿರಂಗ ಗುದ್ದಾಟ ನಡೆಯುತ್ತಲೇ ಇದೆ.
Published by: MAshok Kumar
First published: November 24, 2020, 4:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading