Shivangi Singh: ರಫೇಲ್ ಯುದ್ಧ ವಿಮಾನದ ಮೊದಲ ಮಹಿಳಾ ಪೈಲಟ್ ವಾರಾಣಸಿಯ ಶಿವಾಂಗಿ ಸಿಂಗ್

Shivangi Singh IAF: ಮೂಲತಃ ಉತ್ತರ ಪ್ರದೇಶದ ವಾರಾಣಸಿಯವರಾದ ಫ್ಲೈಟ್ ಲೆಫ್ಟಿನೆಂಟ್ ಶಿವಾನಿ ಸಿಂಗ್ ಭಾರತದ 10 ಮಹಿಳಾ ಫೈಟರ್ ಪೈಲಟ್​ಗಳಲ್ಲಿ ಒಬ್ಬರು. ಇದುವರೆಗೂ ವಾಯುಪಡೆಯ ಅತ್ಯಂತ ಹಳೆಯ ಮಿಗ್ 21 ಜೆಟ್ ಚಲಾಯಿಸುತ್ತಿದ್ದ ಶಿವಾಂಗಿ ಸಿಂಗ್ ಇನ್ನು ಅತ್ಯಾಧುನಿಕ ರಫೇಲ್ ಯುದ್ಧ ವಿಮಾನವನ್ನು ಚಲಾಯಿಸಲಿದ್ದಾರೆ.

ಐಎಎಫ್​ ಅಧಿಕಾರಿ ಶಿವಾಂಗಿ ಸಿಂಗ್

ಐಎಎಫ್​ ಅಧಿಕಾರಿ ಶಿವಾಂಗಿ ಸಿಂಗ್

  • Share this:
ನವದೆಹಲಿ (ಸೆ. 24): ಎರಡು ವಾರಗಳ ಹಿಂದಷ್ಟೇ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿದ್ದ ರಫೇಲ್ ಯುದ್ಧವಿಮಾನದ ಮೊದಲ ಮಹಿಳಾ ಪೈಲಟ್ ಆಗಿ ವಾರಾಣಸಿ ಮೂಲದ ಫ್ಲೈಟ್ ಲೆಫ್ಟಿನೆಂಟ್ ಶಿವಾನಿ ಸಿಂಗ್ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಸೆಪ್ಟೆಂಬರ್ 10ರಂದು ಹರಿಯಾಣದ ಅಂಬಾಲ ವಾಯುನೆಲೆ ತಲುಪಿದ್ದ ರಫೇಲ್ ಫೈಟರ್ ಜೆಟ್ ಚಲಾಯಿಸುವ ಮೊದಲ ಮಹಿಳಾ ಪೈಲಟ್ ಶಿವಾನಿ ಸಿಂಗ್ ಆಗಲಿದ್ದಾರೆ. ವಾಯುಪಡೆಯ ಅತ್ಯಂತ ಹಳೆಯ ಯುದ್ಧ ವಿಮಾನಗಳಲ್ಲಿ ಒಂದಾಗಿರುವ ಮಿಗ್-21 ಬಿಸನ್ ಚಲಾಯಿಸುತ್ತಿದ್ದ ಲೆಫ್ಟಿನೆಂಟ್ ಶಿವಾನಿ ಸಿಂಗ್ ಇನ್ನು ವಾಯುಪಡೆಯ ಅತ್ಯಾಧುನಿಕ ಮತ್ತು ಪ್ರಬಲ ಯುದ್ಧ ವಿಮಾನವಾದ ರಫೇಲ್ ಅನ್ನು ಚಲಾಯಿಸಲಿದ್ದಾರೆ. ಈ ಮೊದಲು ಅವರು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರೊಂದಿಗೆ ಮಿಗ್ 21 ಫೈಟರ್ ಜೆಟ್ ಚಲಾಯಿಸಿದ ಅನುಭವವನ್ನೂ ಹೊಂದಿದ್ದಾರೆ.

ಮೂಲತಃ ಉತ್ತರ ಪ್ರದೇಶದ ವಾರಾಣಸಿಯವರಾದ ಫ್ಲೈಟ್ ಲೆಫ್ಟಿನೆಂಟ್ ಶಿವಾನಿ ಸಿಂಗ್ 2017ರಲ್ಲಿ ವಾಯುಪಡೆಗೆ ಸೇರ್ಪಡೆಯಾದ ಐಎಎಫ್​ ಅಧಿಕಾರಿ. ಭಾರತದ 10 ಮಹಿಳಾ ಫೈಟರ್ ಪೈಲಟ್​ಗಳಲ್ಲಿ ಶಿವಾನಿ ಸಿಂಗ್ ಕೂಡ ಒಬ್ಬರು. ಅತ್ಯಾಧುನಿಕವಾದ ರಫೇಲ್ ಯುದ್ಧವಿಮಾನವನ್ನು ಚಲಾಯಿಸಲು ಶಿವಾನಿ ಸಿಂಗ್​ ಅವರಿಗೆ ತರಬೇತಿ ನೀಡಲಾಗುತ್ತಿದೆ. 10 ಫೈಟರ್ ಪೈಲಟ್​ಗಳನ್ನು ಹೊರತಪಡಿಸಿ 18 ಮಹಿಳಾ ಐಎಎಫ್​ ಅಧಿಕಾರಿಗಳು ನ್ಯಾವಿಗೇಟರ್ ಆಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐಎಎಫ್​ನಲ್ಲಿ ಒಟ್ಟಾರೆ 1,875 ಮಹಿಳಾ ಅಧಿಕಾರಿಗಳಿದ್ದಾರೆ.

Varanasi's Shivangi Singh to be first IAF woman fighter pilot to fly Rafale Jet.
ಕುಟುಂಬದೊಡನೆ ಶಿವಾಂಗಿ ಸಿಂಗ್


ಇದನ್ನೂ ಓದಿ: Gujarat Fire Blast: ಗುಜರಾತ್​ನ ONGC ಘಟಕದಲ್ಲಿ ಬೆಂಕಿ ಅವಘಡ; ಬೆಳ್ಳಂಬೆಳಗ್ಗೆ ಭಾರೀ ಸ್ಫೋಟಕ್ಕೆ ಬೆಚ್ಚಿಬಿದ್ದ ಜನ

ಹರಿಯಾಣದ ಅಂಬಾಲದಲ್ಲಿರುವ ಗೋಲ್ಡನ್ ಆ್ಯರೋಸ್​ನ 17 ಪೈಲಟ್​ಗಳ ತಂಡಕ್ಕೆ ಇದೀಗ ಶಿವಾನಿ ಸಿಂಗ್ ಸೇರ್ಪಡೆಯಾಗಿದ್ದಾರೆ. ಫ್ಲೈಟ್ ಲೆಫ್ಟಿನೆಂಟ್ ಶಿವಾನಿ ಸಿಂಗ್ ಯುದ್ಧ ವಿಮಾನಗಳ ಹಾರಾಟದಲ್ಲಿ ಪರಿಣತಿ ಪಡೆದಿದ್ದಾರೆ. ಇದೀಗ ಅವರು ವಾಯುಪಡೆಯ ಅತ್ಯಂತ ಹಳೆಯ ಯುದ್ಧವಿಮಾನದ ಚಾಲನೆಯಿಂದ ಅತ್ಯಾಧುನಿಕ ಯುದ್ಧವಿಮಾನವಾದ ರಫೇಲ್ ಪೈಲಟ್ ಆಗಿ ಆಯ್ಕೆಯಾಗಿರುವ ಮೂಲಕ ಭಾರತದ ಹೆಮ್ಮೆಯ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ರಫೇಲ್ ವಿಮಾನ ಗಂಟೆಗೆ ಗರಿಷ್ಠ 750 ಕಿಲೋ ಮೀಟರ್ ವೇಗದಲ್ಲಿ ಹಾರಾಟ ನಡೆಸಬಲ್ಲದು. ರಫೇಲ್ ಜೆಟ್ 9,500 ಕೆಜಿ ತೂಕದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ. ರಫೇಲ್ ಜಗತ್ತಿನ ಅತ್ಯಂತ ಪ್ರಭಾವಶಾಲಿ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಈ ಯುದ್ಧ ವಿಮಾನವನ್ನು ಚಲಾಯಿಸಲು ಶಿವಾನಿ ಸಿಂಗ್​ಗೆ ಅಂಬಾಲ ವಾಯುನೆಲೆಯಲ್ಲಿ ತರಬೇತಿ ನೀಡಲಾಗುತ್ತಿದೆ. ಓರ್ವ ಫೈಟರ್ ಜೆಟ್​ ಪೈಲಟ್​ಗೆ ತರಬೇತಿ ನೀಡಲು ಸುಮಾರು 15 ಕೋಟಿ ರೂ. ಖರ್ಚಾಗಲಿದೆ.
Published by:Sushma Chakre
First published: