Gyanavapi: ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಯ್ತಂತೆ ಶಿವಲಿಂಗ! ನಾಳೆಯೇ ಕೋರ್ಟ್‌ಗೆ ಅಂತಿಮ ವರದಿ

ಜ್ಞಾನವ್ಯಾಪಿ ಮಸೀದಿಯೊಳಗೆ ಸರ್ವೇ ಕಾರ್ಯ ನಡೆಯುತ್ತಿದೆ. ಸರ್ವೇ ವೇಳೆ ಮಸೀದಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಅಂತ ಇಂಡಿಯಾ ಟುಡೇ ವರದಿ ಮಾಡಿದೆ. ಮಸೀದಿಯ ವೀಡಿಯೋ ಚಿತ್ರೀಕರಣವು ಪೂರ್ಣಗೊಂಡಿದ್ದು ನಂದಿಯ ಎದುರಿನಲ್ಲಿರುವ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲರು ಹೇಳಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ವಿವಾದಕ್ಕೆ ಒಳಗಾದ ಜ್ಞಾನವಾಪಿ ಮಸೀದಿ

ವಿವಾದಕ್ಕೆ ಒಳಗಾದ ಜ್ಞಾನವಾಪಿ ಮಸೀದಿ

  • Share this:
ಉತ್ತರ ಪ್ರದೇಶ: ಸದ್ಯ ದೇಶದ ಜನರ ಗಮನ ಸೆಳೆದಿರುವ ಉತ್ತರ ಪ್ರದೇಶದ ಬನಾರಸ್‌ನ (Banaras) ಜ್ಞಾನವ್ಯಾಪಿ ಮಸೀದಿ (Gyanavapi Mosque) ಸರ್ವೆ (Survey) ಕಾರ್ಯ ನಡೆಯುತ್ತಿದೆ. ಇದುವರೆಗೂ ಶೇಕಡಾ 65ರಷ್ಟು ಸರ್ವೆ ಕಾರ್ಯ ಮುಕ್ತಾಯವಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ನಾಳೆ ಕೋರ್ಟ್‌ಗೆ (Court) ಸರ್ವೆ ರಿಪೋರ್ಟ್ ಸಲ್ಲಿಸಬೇಕಿದೆ. ಇನ್ನು ಸರ್ವೆ ವೇಳೆ ಮಸೀದಿಯೊಳಗೆ ಶಿವಲಿಂಗ (Shivalinga) ಪತ್ತೆಯಾಗಿದೆ ಅಂತ ಇಂಡಿಯಾ ಟುಡೇ ವರದಿ ಮಾಡಿದೆ. ಗ್ಯಾನವಾಪಿ ಮಸೀದಿಯ ವೀಡಿಯೋ ಚಿತ್ರೀಕರಣವು (Video Record) ಪೂರ್ಣಗೊಂಡಿದ್ದು ನಂದಿಯ (Nadi) ಎದುರಿನಲ್ಲಿರುವ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಪರ ವಕೀಲರು (Lawyer) ಹೇಳಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಮಸೀದಿಯೊಳಗೆ ಪತ್ತೆಯಾಯ್ತಾ ಶಿವಲಿಂಗ?

ಮಸೀದಿಯ ಒಳಗೆ 2 ದಿನದಿಂದ ನಡೆಸಲಾದ ಸಮೀಕ್ಷೆಯು ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ವಾದ ದೃಢೀಕರಿಸುತ್ತಿದೆ ಅಂತ ಹೇಳಲಾಗುತ್ತಿದೆ. ಇದೀಗ ಸರ್ವೆ ವೇಳೆ ಮಂದಿರದೊಳಗೆ ಶಿವಲಿಂಗ ಪತ್ತೆಯಾಗಿದೆ ಎನ್ನಲಾಗಿದೆ. ಮೊಘಲ್‌ ದೊರೆ ಔರಂಗಜೇಬ್‌ ಕಾಶಿ ವಿಶ್ವನಾಥ ಮಂದಿರದ ಭಾಗವೊಂದನ್ನು ಕೆಡವಿ ನಿರ್ಮಿಸಿದ್ದ ಎನ್ನಲಾದ ಗ್ಯಾನವಾಪಿ ಮಸೀದಿಯಲ್ಲಿ ನಡೆಸಲಾದ ವಿಡಿಯೋ ಚಿತ್ರೀಕರಣವು ‘ಮಸೀದಿಯು ಈ ಮುಂಚೆ ಮಂದಿರವಾಗಿತ್ತು ಎಂಬ ತಮ್ಮ ವಾದವನ್ನು ಮತ್ತಷ್ಟುದೃಢೀಕರಿಸುತ್ತಿದೆ’ ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ.

ನಾಳೆ ಕೋರ್ಟ್‌ಗೆ ಸರ್ವೇ ರಿಪೋರ್ಟ್

ನಿನ್ನೆ ಭಾನುವಾರವೂ ಮಸೀದಿಯೊಳಗೆ ಸರ್ವೆ ಕಾರ್ಯ ಮಾಡಲಾಗಿದೆ. ಈಗಾಗಲೇ ಶೇ.65ರಷ್ಟುಸಮೀಕ್ಷೆ ಮುಗಿದಿದೆ. ಉಳಿದ ಸಮೀಕ್ಷೆಗೆ ಈಗ ನಡೆಯುತ್ತಿದೆ. ನಾಳೆ ಅಂದರೆ ಮಂಗಳವಾರದೊಳಗೆ ಕೋರ್ಚ್‌ ಸೂಚನೆಯಂತೆ ಸಮೀಕ್ಷೆ ಮುಗಿಯಲಿದೆ. ಜೊತೆಗೆ ಕೋರ್ಟ್‌ಗೆ ಸಮೀಕ್ಷೆಯ ವರದಿ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ: Explained: ಅಯೋಧ್ಯೆಯಷ್ಟೇ ಮಹತ್ವದ್ದೇಕೆ ಜ್ಞಾನವಾಪಿ ಭೂಮಿ? ಅಷ್ಟಕ್ಕೂ ವಿವಾದಕ್ಕೆ ಒಳಗಾಗಿದ್ದೇಕೆ ಮಸೀದಿ?

ಬಿಗಿ ಭದ್ರತೆಯಲ್ಲಿ ಸರ್ವೇ ಕಾರ್ಯ

ಮಸೀದಿಯಲ್ಲಿ ಕೋರ್ಟ್ ಸೂಚನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ಸರ್ವೆ ಕಾರ್ಯ ನಡೆಯುತ್ತಿದೆ. ಈಗಾಗಲೇ ಶೇಕಡಾ 65 ಸಮೀಕ್ಷೆ ಪೂರ್ಣವಾಗಿದ್ದು, ನಾಳೆ ಅಂದರೆ ಮಂಗಳವಾರ ಮುಕ್ತಾಯವಾಗಲಿದೆ. ನಿನ್ನೆ ಬೆಳಗ್ಗೆ 8ರಿಂದ ಮಧ್ಯಾಹ್ನ 12ರವರೆಗೆ ಮಸೀದಿಯಲ್ಲಿ ಸರ್ವೇ ನಡೆದಿದ್ದು, ಮಸೀದಿಯ ಹಲವು ಭಾಗ ವಿಡಿಯೋ ಚಿತ್ರೀಕರಣ ಮಾಡಲಾಗಿದೆ.

ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಾಪಿ ಮಸೀದಿ ವಿವಾದ

ವಾರಣಾಸಿಯ ಕಾಶಿ ವಿಶ್ವನಾಥ್-ಜ್ಞಾನವಾಪಿ ಸಂಕೀರ್ಣದ ಸಮಸ್ಯೆಯು 2019 ರಲ್ಲಿ ಇತ್ಯರ್ಥಗೊಂಡ ಅಯೋಧ್ಯೆ ದೇವಾಲಯ-ಮಸೀದಿ ವಿವಾದಕ್ಕೆ ಹೋಲುತ್ತದೆ. 1669 ರಲ್ಲಿ ಕಾಶಿ ವಿಶ್ವನಾಥ ಮಂದಿರದ ಒಂದು ಭಾಗವನ್ನು ಕೆಡವಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿ 1991 ರಲ್ಲಿ ಸ್ಥಳೀಯ ಅರ್ಚಕರಾಗಿದ್ದ ಅರ್ಜಿದಾರರ ಗುಂಪೊಂದು ವಾರಣಾಸಿ ನ್ಯಾಯಾಲಯಕ್ಕೆ ತೆರಳಿತು.

ಹಿಂದೂ ಭೂಮಿ ಎಂದು ಘೋಷಿಸುವಂತೆ ಮನವಿ

18 ಏಪ್ರಿಲ್ 2021 ರ ಅರ್ಜಿಯಲ್ಲಿ, ಶೃಂಗಾರ್ ಗೌರಿ ದೇವಿಯ ಚಿತ್ರ ಮತ್ತು ಅದರ ಅಸ್ತಿತ್ವವನ್ನು ದೃಢೀಕರಿಸಲು ನ್ಯಾಯಾಲಯವನ್ನು ಕೇಳಲಾಯಿತು. ಕಾಶಿ ವಿಶ್ವನಾಥ ದೇವಸ್ಥಾನವನ್ನು ಪ್ರತಿನಿಧಿಸುವ ಅರ್ಜಿದಾರರು ಮಸೀದಿಯನ್ನು ಹಿಂದೂ ಭೂಮಿ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು, ಆದರೆ ಜ್ಞಾನವಾಪಿ ಮಸೀದಿಯನ್ನು ನಡೆಸುತ್ತಿರುವ ಅಂಜುಮನ್ ಇಂತೇಜಾಮಿಯಾ ಮಸೀದಿ ಅರ್ಜಿಯನ್ನು ವಿರೋಧಿಸಿತು.

ಇದನ್ನೂ ಓದಿ: Explained: ತಾಜ್ ಮಹಲ್ಲೋ, ತೇಜೋ ಮಹಾಲಯವೋ? ಮುಚ್ಚಿದ ಆ 20 ಕೋಣೆಗಳಲ್ಲಿ ಏನಿದೆ ಗೊತ್ತಾ?

ಮೇ 17ರೊಳಗೆ ವರದಿ ಸಲ್ಲಿಸಲು ಸೂಚನೆ

ಏಪ್ರಿಲ್ 26 ರಂದು ವಾರಣಾಸಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯವು ಈದ್ ನಂತರ ಕಾಶಿ ವಿಶ್ವನಾಥ್-ಜ್ಞಾನವಾಪಿ ಮಸೀದಿ ಕಾಂಪ್ಲೆಕ್ಸ್ ಮತ್ತು ಇತರ ಸ್ಥಳಗಳ ಅಡ್ವೊಕೇಟ್ ಕಮಿಷನರ್ ಮೂಲಕ ವೀಡಿಯೊಗ್ರಫಿಗೆ ಆದೇಶಿಸಿತು ಮತ್ತು ಮೇ 17 ರೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಿತು.
Published by:Annappa Achari
First published: