70 ವರ್ಷದ ತಾಯಿಗೆ ಬೈದು, ಹೊಡೆದು, ಮನೆ ಬಿಟ್ಟು ಓಡಿಸಿದ್ದಕ್ಕೆ ಮಗ-ಸೊಸೆ ವಿರುದ್ಧ ಎಫ್‌ಐಆರ್‌

2002 ರಲ್ಲಿ ಪತಿ ತೀರಿಹೋದ ಬಳಿಕ ತನ್ನ ಮಕ್ಕಳ ಜತೆ ತಾಯಿ ವಾಸಿಸುತ್ತಿದ್ದರು. ಆದರೆ, ರಿಹಾನ್ನಾ ತನಗೆ ಕಿರುಕುಳ ನೀಡುತ್ತಿದ್ದರು. ಮಗ ಹಾಗೂ ಸೊಸೆ ಇಬ್ಬರೂ ಸೇರಿ ಮನೆಯಿಂದ ತನ್ನನ್ನು ಓಡಿಸಿದ್ದಾರೆ ಎಂದು 70 ವರ್ಷದ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

FIR (Photo: Google)

FIR (Photo: Google)

 • Share this:
  ಹಿರಿಯರಿಗೆ ಗೌರವ ಕೊಡೋದು ನಮ್ಮ ದೇಶದ ಸಂಸ್ಕೃತಿ. ಆದರೆ, ಇತ್ತೀಚೆಗೆ ಹಿರಿಯರಿಗೆ ಗೌರವ ಕೊಡೋದು ಕಡಿಮೆಯಾಗುತ್ತಿದೆ. ಇದೇ ರೀತಿ, ಮಹಾರಾಷ್ಟ್ರದ ಗೋವಂಡಿಯಲ್ಲಿ ವ್ಯಕ್ತಿಯೊಬ್ಬರ ಹಾಗೂ ಪತ್ನಿ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಇದಕ್ಕೆ ಕಾರಣ ವ್ಯಕ್ತಿ ತನ್ನ ತಾಯಿಗೆ ಬೈದು, ಹೊಡೆದು, ಮನೆ ಬಿಟ್ಟು ಓಡಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಈ ಸಂಬಂಧ ಮುಂಬೈನ ಶಿವಾಜಿನಗರ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಆರೋಪಿಯನ್ನು ಮೊಹಮ್ಮದ್‌ ಶಕೀಲ್‌ (42) ಹಾಗೂ ರಿಹಾನ್ನಾ ಎಂದು ಗುರುತಿಸಲಾಗಿದೆ.

  2002 ರಲ್ಲಿ ಪತಿ ತೀರಿಹೋದ ಬಳಿಕ ತನ್ನ ಮಕ್ಕಳ ಜತೆ ತಾಯಿ ವಾಸಿಸುತ್ತಿದ್ದರು. ಆದರೆ, ರಿಹಾನ್ನಾ ತನಗೆ ಕಿರುಕುಳ ನೀಡುತ್ತಿದ್ದರು. ಮಗ ಹಾಗೂ ಸೊಸೆ ಇಬ್ಬರೂ ಸೇರಿ ಮನೆಯಿಂದ ತನ್ನನ್ನು ಓಡಿಸಿದ್ದಾರೆ ಎಂದು 70 ವರ್ಷದ ತಾಯಿ ಪೊಲೀಸರಿಗೆ ದೂರು ನೀಡಿದ್ದರು.

  ಮನೆಯನ್ನು ಎರಡು ಭಾಗಗಳಾಗಿ ವಿಭಜಿಸಲಾಗಿದ್ದು, ಒಂದು ಮನೆಯಲ್ಲಿ ಹಿರಿಯ ಮಗ ವಾಸಿಸುತ್ತಿದ್ದು, ಇನ್ನೊಂದು ಮನೆಯಲ್ಲಿ ಕಿರಿಯ ಮಗ ವಾಸಿಸುತ್ತಾರೆ. ತಾಯಿಯ ಔಷಧಿಯ ಖರ್ಚನ್ನು ಇಬ್ಬರೂ ಹಂಚಿಕೊಳ್ಳುತ್ತಿದ್ದರು. ಇನ್ನು, ಹಿರಿಯ ಮಗನ ಮನೆಯಲ್ಲಿ ಮಧ್ಯಾಹ್ನದ ಊಟ ನೀಡುತ್ತಿದ್ದರೆ, ಕಿರಿಯ ಮಗನ ಮನೆಯಲ್ಲಿ ರಾತ್ರಿಯ ಊಟ ನೀಡಲು ನಿರ್ಧಾರವಾಗಿತ್ತು ಎಂದೂ ತಿಳಿದುಬಂದಿದೆ.

  ಆದರೆ, ಕಿರಿಯ ಮಗ ಮೊಹಮ್ಮದ್‌ ಶಕೀಲ್‌ ತಾಯಿಯ ಖರ್ಚು ನೀಡಲು ನಿರಾಕರಿಸುತ್ತಿದ್ದ, ಒಮ್ಮೊಮ್ಮೆ ರಾತ್ರಿಯ ಊಟವನ್ನು ಸಹ ನೀಡುತ್ತಿರಲಿಲ್ಲ. ಬದಲಾಗಿ ಬೈಯುತ್ತಿದ್ದ. ಆತನ ಪತ್ನಿ ಸಹ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಇನ್ನು, ಕಿರುಕುಳ ನೀಡಿದ್ದಾರೆಂದು ದೂರು ನೀಡಿದ ಬಳಿಕ ತನ್ನ ಮಗ ಹಾಗೂ ಸೊಸೆ ಬೈದು, ಹೊಡೆದು ಮನೆಯಿಂದ ಹೊರಗೆ ಓಡಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.

  ಈ ಸಂಬಂಧ ಪೊಲೀಸ್‌ ಅಧಿಕಾರಿಯೊಬ್ಬರು ಮಾತನಾಡಿದ್ದು, ''ದೂರಿನ ಆಧಾರದ ಮೇಲೆ ಸೆಕ್ಷನ್‌ 323, 504 ಹಾಗೂ 24 ಅಡಿ ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ, ಈವರೆಗೆ ಯಾರನ್ನೂ ಬಂಧಿಸಿಲ್ಲ'' ಎಂದು ಹೇಳಿದರು.
  Published by:Harshith AS
  First published: