ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು: ಶಿವಸೇನೆ-ಬಿಜೆಪಿ ಜಟಾಪಟಿ: ಗರಿಗೆದರಿದ ರಾಜಕೀಯ ಚಟುವಟಿಕೆ

ನಿತಿನ್​​ ಗಡ್ಕರಿ ಪ್ರವೇಶದ ನಡುವೆಯೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದು ಬಿಜೆಪಿಗೆ ಕಷ್ಟವಾಗಿದೆ. 50:50 ಸೂತ್ರಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸರ್ಕಾರ ರಚನೆ ಮಾಡಲು ಬೆಂಬಲ ನೀಡುವುದಾಗಿ ಶಿವಸೇನೆ ಜಿದ್ದಿಗೆ ಬಿದ್ದಿದೆ.

news18-kannada
Updated:November 10, 2019, 12:36 PM IST
ಮಹಾರಾಷ್ಟ್ರ ಸರ್ಕಾರದ ಬಿಕ್ಕಟ್ಟು: ಶಿವಸೇನೆ-ಬಿಜೆಪಿ ಜಟಾಪಟಿ: ಗರಿಗೆದರಿದ ರಾಜಕೀಯ ಚಟುವಟಿಕೆ
ದೇವೇಂದ್ರ ಫಡ್ನವಿಸ್ ಮತ್ತು ಉದ್ಧವ್ ಠಾಕ್ರೆ
  • Share this:
ಮುಂಬೈ(ನ.10): ಭಾರತೀಯ ಜನತಾ ಪಕ್ಷಕ್ಕೆ ಸರ್ಕಾರ ರಚನೆಗೆ ರಾಜ್ಯಪಾಲರು ಆಹ್ವಾನ ನೀಡಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲೀಗ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅತ್ತ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ನಿನ್ನೆಯೇ ಸರ್ಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿದ್ದಾರೆ. ಇತ್ತ ಸರ್ಕಾರ ರಚನೆಗೆ ಬಿಜೆಪಿ ಭಾರೀ ಸರ್ಕಸ್​​ ನಡೆಸುತ್ತಿದೆ. ಈ ಮಧ್ಯೆ ಸರ್ಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲರ ನಿರ್ಧಾರವನ್ನು ಶಿವಸೇನೆ ಸ್ವಾಗತಿಸಿದೆ.

ರಾಜ್ಯಪಾಲ ಭಗತ್​​ ಸಿಂಗ್​​ ಕೊಶ್ಯರಿ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ಒಂದು ವೇಳೆ ಬಿಜೆಪಿ ಸರ್ಕಾರ ರಚನೆ ಮಾಡದಿದ್ದರೆ, ನಾವು ಮುಂದಾಗುತ್ತೇವೆ. ಶಿವಸೇನೆ ಸರ್ಕಾರ ರಚನೆ ಮಾಡಲಿದೆ. ನಮ್ಮ ಮತ್ತು ಕಾಂಗ್ರೆಸ್​​ ನಡುವೆ ಸೈದ್ದಾಂತಿಕ ಭಿನ್ನಾಭಿಪ್ರಾಯವಿದ್ದರೂ, ನಾವ್ಯಾರು ಶತ್ರುಗಳಲ್ಲ. ಕಾಂಗ್ರೆಸ್​ ನಮ್ಮ ವಿರೋಧಿ ಪಕ್ಷವಲ್ಲ ಎಂದು ಶಿವಸೇನೆ ಮುಖ್ಯ ವಕ್ತಾರ ಸಂಜಯ್​​ ರಾವತ್​​​​​ ಹೇಳಿದ್ದಾರೆ. ಈ ಮೂಲಕ ಕಾಂಗ್ರೆಸ್​​-ಎನ್​​ಸಿಪಿಯೊಂದಿಗೆ ಮೈತ್ರಿಯಾಗಿ ಸರ್ಕಾರ ರಚನೆ ಮಾಡಬಹುದು ಎಂಬ ಮುನ್ಸೂಚನೆ ನೀಡಿದ್ದಾರೆ.

ಬಿಜೆಪಿ ಸರ್ಕಾರ ರಚನೆಗೆ ಭಾರೀ ಸರ್ಕಸ್​​ ನಡೆಸುತ್ತಿದೆ. ಹಂಗಾಮಿ ಸಿಎಂ ದೇವೇಂದ್ರ ಫಡ್ನವೀಸ್​ಗೆ ಸರ್ಕಾರ ರಚನೆಗೆ ನಿನ್ನೆಯೇ ರಾಜ್ಯಪಾಲ ಆಹ್ವಾನ ನೀಡಿದ್ದಾರೆ. ಇನ್ನೊಂದೆಡೆ ತಮ್ಮ ಶಾಸಕರ ಖರೀದಿಗೆ ಬಿಜೆಪಿ ಮುಂದಾಗಿದೆ ಎಂದು ಶಿವಸೇನೆ ಆರೋಪಿಸಿದೆ. ಹಾಗಾಗಿಯೇ ಶಿವಸೇನೆ ತನ್ನ ಪಕ್ಷದ ಶಾಸಕರನ್ನು ಮಲಾದ್‌ನ ಮಾಧ್ ದ್ವೀಪ ಪ್ರದೇಶದ ರೆಸಾರ್ಟ್‌ಗೆ ಶಿಫ್ಟ್​​ ಮಾಡಿದೆ. ಈ ಬೆನ್ನಲ್ಲೀಗ ಶಿವಸೇನೆ ಕಾಂಗ್ರೆಸ್​-ಎನ್​​ಸಿಪಿ ಜತೆ ಮೈತ್ರಿಯಾಗಿ ಸರ್ಕಾರ ರಚನೆ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶರಾದ್​ ಪವಾರ್​​ ಪಕ್ಷವೂ ಶಿವಸೇನೆ ಬೆಂಬಲಕ್ಕೆ ನಿಂತಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಇದನ್ನೂ ಓದಿ: ವಾಹನ ಸವಾರರೇ ಎಚ್ಚರ! ಇನ್ಮುಂದೆ ಹಾಫ್​​ ಹೆಲ್ಮೆಟ್​​ ಹಾಕುವಂತಿಲ್ಲ: ಹಾಕಿದ್ರೆ ದಂಡದ ಬದಲಿಗೆ ಈ ಶಿಕ್ಷೆ ಗ್ಯಾರಂಟಿ

ಮಹಾರಾಷ್ಟ್ರದಲ್ಲಿ 50:50 ಸೂತ್ರಕ್ಕೆ ಒಪ್ಪಿದರೆ ಮಾತ್ರ ಸರ್ಕಾರ ರಚನೆಗೆ ಬೆಂಬಲ ನೀಡುತ್ತೇವೆ ಎಂದು ಶಿವಸೇನೆ ಪಟ್ಟು ಹಿಡಿದಿದೆ. ಹಂಗಾಮಿ ಸಿಎಂ ದೇವೇಂದ್ರ ಫಡ್ನವೀಸ್​ ಸೇರಿದಂತೆ ಮಹಾರಾಷ್ಟ್ರ ಬಿಜೆಪಿ ನಾಯಕರು ಎಷ್ಟೇ ಪ್ರಯತ್ನಿಸಿದರೂ ಶಿವಸೇನೆ ಒಪ್ಪಂದಕ್ಕೆ ಒಪ್ಪಿದರೇ ಮಾತ್ರ ಸರ್ಕಾರ ರಚನೆ ಎನ್ನುತ್ತಿದೆ. ಇದರಿಂದ ಸರ್ಕಾರ ರಚಿಸುವುದು ಬಿಜೆಪಿಗೆ ಮತ್ತಷ್ಟು ಕಗ್ಗಂಟಾಗಿ ಪರಿಣಮಿಸಿದೆ. ಅತ್ತ ಸಮಾನ ಅಧಿಕಾರ ಹಂಚಿಕೆಗೆ ಬಿಜೆಪಿ ಒಪ್ಪದ ಕಾರಣ ಆರ್​ಎಸ್​ಎಸ್​​ ಮಧ್ಯ ಪ್ರವೇಶಿಸಬೇಕೆಂದು ಶಿವಸೇನೆ ಮೋಹನ್ ಭಾಗವತ್​​ಗೆ ಪತ್ರ ಬರೆದಿದೆ. ಈ ಬೆನ್ನಲ್ಲೇ ಇತ್ತ ಸಿಎಂ ದೇವೇಂದ್ರ ಫಡ್ನವೀಸ್​​ ಜತೆಗಿನ ಮಾತುಕತೆ ವೇಳೆ ಶಿವಸೇನೆ-ಬಿಜೆಪಿ ನಡುವಿನ ಭಿನ್ನಾಭಿಪ್ರಾಯ ಸರಿಪಡಿಸುವ ಜವಾಬ್ದಾರಿ ಆರ್​ಎಸ್​ಎಸ್​ ಕಟ್ಟಾಳು ಮತ್ತು ಕೇಂದ್ರ ಸಚಿವ ನಿತಿನ್​​ ಗಡ್ಕರಿಗೆ ವಹಿಸಿದೆ. ಮೋಹನ್​ ಭಾಗವತ್​​ ಸೂಚನೆ ಮೇರೆಗೆ ಇದೀಗ ನಿತಿನ್​​ ಗಡ್ಕರಿ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರ ರಚನೆ ಜವಾಬ್ದಾರಿ ಹೊತ್ತಿದ್ಧಾರೆ.

ನಿತಿನ್​​ ಗಡ್ಕರಿ ಪ್ರವೇಶದ ನಡುವೆಯೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುವುದು ಬಿಜೆಪಿಗೆ ಕಷ್ಟವಾಗಿದೆ. 50:50 ಸೂತ್ರಕ್ಕೆ ಒಪ್ಪಿಗೆ ಸೂಚಿಸಿದರೆ ಮಾತ್ರ ಸರ್ಕಾರ ರಚನೆ ಮಾಡಲು ಬೆಂಬಲ ನೀಡುವುದಾಗಿ ಶಿವಸೇನೆ ಜಿದ್ದಿಗೆ ಬಿದ್ದಿದೆ. ಈ ಸೂತ್ರದ ಪ್ರಕಾರ 5 ವರ್ಷಗಳ ಆಡಳಿತಾವಧಿಯಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ಇಬ್ಬರು ಉಖ್ಯಮಂತ್ರಿಗಳನ್ನು ಮಾಡಬೇಕಾಗುತ್ತದೆ. ಅಂತೆಯೇ ಎರಡೂವರೆ ವರ್ಷ ಶಿವಸೇನೆ ಅಭ್ಯರ್ಥಿ ಸಿಎಂ ಆದರೆ, ಇನ್ನುಳಿದ ಅವಧಿಗೆ ಬಿಜೆಪಿ ಅಭ್ಯರ್ಥಿ ಮುಖ್ಯಮಂತ್ರಿ ಆಗಬಹುದಾಗಿದೆ.

ಆರಂಭದಿಂದಲೂ ಸಿಎಂ ಹುದ್ದೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಶಿವಸೇನೆಯೀಗ, ಇಂತಹ ಬೇಡಿಕೆಯಿಟ್ಟಿದೆ. ಶಿವಸೇನಯಿಂದ ಆದಿತ್ಯ ಠಾಕ್ರೆ ಸಿಎಂ ಸ್ಥಾನಕ್ಕೆ ಯತ್ನಿಸುತ್ತಿದ್ದರೆ, ಅತ್ತ ಬಿಜೆಪಿಯಿಂದ ಹಂಗಾಮಿ ಸಿಎಂ ದೇವೇಂದ್ರ ಫಡ್ನವಿಸ್ ಮತ್ತೆ ತಮ್ಮ ಸ್ಥಾನದಲ್ಲೇ ಮುಂದುವರೆಯಲು ಸಜ್ಜಾಗಿದ್ದಾರೆ. ಆದರೀಗ ಶಿವಸೇನೆ ಆಗ್ರಹದಿಂದ ಬಿಜೆಪಿಗೆ ಸರ್ಕಾರ ರಚಿಸುವುದು ಕಷ್ಟವಾಗಿದೆ.ಇದನ್ನೂ ಓದಿ: ಕ್ಯಾರ್​​​ ಮತ್ತು ಮಹಾ ಬೆನ್ನಲ್ಲೀಗ ಬುಲ್​​ಬುಲ್​​ ಚಂಡಮಾರುತ: ಕೊಲ್ಕತ್ತಾದಲ್ಲಿ ಭೂಕುಸಿತ, ಇಬ್ಬರು ಬಲಿ

ಒಂದೆಡೆ ದೇವೇಂದ್ರ ಫಡ್ನವೀಸ್​​ ನಾವು 50:50 ಸೂತ್ರಕ್ಕೆ ಚುನಾವಣಾಪೂರ್ವ ಮೈತ್ರಿ ವೇಳೆ ಒಪ್ಪಿಕೊಂಡಿರಲಿಲ್ಲ ಎಂದು ಹೇಳುತ್ತಿದೆ. ಇನ್ನೊಂದೆಡೆ ಚುನಾವಣಾಪೂರ್ವ ಮೈತ್ರಿಗೆ ಮುನ್ನವೇ ಬಿಜೆಪಿ ಹೈಕಮಾಂಡ್​ ಅಮಿತ್​​ ಶಾ ಮತ್ತು ಫಡ್ನವೀಸ್ ಒಪ್ಪಂದಕ್ಕೆ ಒಪ್ಪಿದ್ದರು. ಈಗ ಯೂಟರ್ನ್​​ ಹೊಡೆಯುತ್ತಿದ್ದಾರೆ. ಮುಂದಿನ ಮಹಾರಾಷ್ಟ್ರ ಸಿಎಂ ನಮ್ಮ ಪಕ್ಷದವರೇ ಎಂದು ಶಿವಸೇನೆ ಸಂಸದ ಸಂಜಯ್ ರಾವತ್​​ ಘೋಷಿಸಿದ್ದಾರೆ.​​
First published:November 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ