ನಾವು ಹೇಗಿದ್ದರೂ ಮುಳುಗುತ್ತೇವೆ... ಆದ್ರೆ ನಿಮ್ಮನ್ನೂ ಮುಳುಗಿಸುತ್ತೇವೆ!: ಬಿಜೆಪಿ ವಿರುದ್ಧ ಉದ್ಧವ್​ ಠಾಕ್ರೆ ರಣತಂತ್ರ


Updated:August 1, 2018, 12:55 PM IST
ನಾವು ಹೇಗಿದ್ದರೂ ಮುಳುಗುತ್ತೇವೆ... ಆದ್ರೆ ನಿಮ್ಮನ್ನೂ ಮುಳುಗಿಸುತ್ತೇವೆ!: ಬಿಜೆಪಿ ವಿರುದ್ಧ ಉದ್ಧವ್​ ಠಾಕ್ರೆ ರಣತಂತ್ರ
ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ

Updated: August 1, 2018, 12:55 PM IST
ಸಂದೀಪ್​ ಸೋನ್ವಾಲ್ಕರ್​, ನ್ಯೂಸ್​ 18 ಕನ್ನಡ

ಮುಂಬೈ(ಆ.01): ಬಿಜೆಪಿಯ ರಣತಂತ್ರವು ಶಿವಸೇನೆಯ ಮುಖ್ಯಸ್ಥ ಉದ್ದವ್​ ಠಾಕ್ರೆಯನ್ನು ಅದೆಷ್ಟರ ಮಟ್ಟಿಗೆ ಕಾಡಿದೆ ಎಂದರೆ ಅವರು ತಮ್ಮ ಶಾಸಕರ ಬಳಿ ನಾವು ಅಧಿಕಾರ ಪಡೆಯದಿದ್ದರೂ ಚಿಂತೆ ಇಲ್ಲ, ಆದರೆ ಬಿಜೆಪಿ ಅಧಿಕಾರಕ್ಕೇರದಂತೆ ನಿಗಾವಹಿಸಲು ಸೂಚಿಸಿದ್ದಾರೆನ್ನಲಾಗಿದೆ. ಅಲ್ಲದೇ ಉದ್ಧವ್​ ಠಾಕ್ರೆಯು ತಮ್ಮ ಪಕ್ಷವು ಕೇವಲ 120 ಸ್ಥಾನಗಳ ಮೇಲಷ್ಟೇ ಹೆಚ್ಚಿನ ಗಮನವಹಿಸುತ್ತಿದ್ದು, ಇವುಗಳಲ್ಲಿ 70 ರಿಂದ 75 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಶತಪ್ರಯತ್ನ ಮಾಡಲಿದೆ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗ ಇದು ಬಿಜೆಪಿಗೆ ಒಳ್ಳೆಯ ಸುದ್ದಿ ಅಲ್ಲ ಎಂಬುವುದರಲ್ಲಿ ಅನುಮಾನವಿಲ್ಲ.

ಶಿವಸೇನೆಯ ನಾಯಕರ ಅನ್ವಯ ಬಿಜೆಪಿಯು ಕಳೆದ ಬಿಎಂಸಿ ಚುನಾವಣೆಯ ಬಳಿಕ ಸಂಬಂಧವನ್ನು ಕೆಡಿಸಿದೆ ಎಂದಿದೆ. ಈವರೆಗೂ ಮಹಾರಾಷ್ಟ್ರದ ರಾಜಕೀಯದಲ್ಲಿ ಕಳೆದ 30 ವರ್ಷಗಳಲ್ಲಿ ಮುಂಬೈ ಹಾಗೂ ಠಾಣೆಯನ್ನು ಶಿವಸೇನೆಗೆ ಬಿಟ್ಟುಕೊಡಬೇಕೆಂಬುವುದು ಕಾಂಗ್ರೆಸ್, ಬಿಜೆಪಿ, ಶರದ್​ ಪವಾರ್​ ಸೇರಿದಂತೆ ಎಲ್ಲರೂ ಇದೇ ಅಭಿಪ್ರಾಯವಾಗಿದೆ. 36 ರಲ್ಲಿ 15 ಶಿವಸೇನೆಯ ಶಾಸಕರು ಚುನಾಯಿತರಾಗಿದ್ದು, ಮಹಾನಗರ ಪಾಲಿಕೆಯಲ್ಲೂ ಶಿವಸೇನೆಯ 84 ಕಾರ್ಪೋರೇಟರ್ಸ್​ಗಳಿದ್ದಾರೆ. ಬಿಜೆಪಿಯೂ 82 ಕಾರ್ಪೋರೇಟರ್ಸ್​ಗಳನ್ನು ಹೊಂದಿದ್ದೃಆಎ.

ಹೀಗಿರುವಾಗ ಶಿವಸೇನೆಗೆ ತನ್ನ ಅಸ್ತಿತ್ವಕ್ಕೆ ಕುತ್ತು ಬಂದಿರುವ ವಿ್ಚಾರ ಕಅಣಲಾರಂಭಿಸಿದೆ. ಇಂತಹ ಸಂದರ್ಭದಲ್ಲಿ ಉದ್ಧವ್​ ಠಾಕ್ರೆಗೆ ಬಿಜೆಪಿಯನ್ನು ತಡೆಯುವುದು ಅತಿ ಮುಖ್ಯ. ಇದಕ್ಕಾಗಿ ಅವರು ತಮ್ಮ ಮಗ ಆದಿತ್ಯರೊಂದಿಗೆ ಸೇರಿ ರಣತಂತ್ರ ಹೆಣೆದಿರುವ ಠಾಕ್ರೆ ಡಿಸೆಂಬರ್​ನಲ್ಲಿ ಸರ್ಕಾರವನ್ನು ಕೆಳಗಿಳಿಸಲು ಯೋಚಿಸಿದ್ದಾರೆ. ಈ ಮೂಲಕ ಚುನಾವಣೆಯು ಲೋಕಸಭಾ ಚುನಾವಣೆಯೊಂದಿಗೇ ನಡೆದರೆ ಸಂಪೂರ್ಣವಾಗಿ ತಯಾರಾಗಬಹುದೆಂಬ ಉದ್ದೇಶ ಅವರದ್ದಾಗಿದೆ.

 

 

 
Loading...

 
First published:August 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ