152 ಸೀಟುಗಳು ಮತ್ತು ಸಿಎಂ ಸ್ಥಾನ ನೀಡಿದ್ರೆ ಮೈತ್ರಿ ಮಾಡಿಕೊಳ್ಳುತ್ತೇವೆ: ಬಿಜೆಪಿಗೆ ಶಿವಸೇನೆಯ ಷರತ್ತುಗಳು


Updated:June 10, 2018, 9:03 AM IST
152 ಸೀಟುಗಳು ಮತ್ತು ಸಿಎಂ ಸ್ಥಾನ ನೀಡಿದ್ರೆ ಮೈತ್ರಿ ಮಾಡಿಕೊಳ್ಳುತ್ತೇವೆ: ಬಿಜೆಪಿಗೆ ಶಿವಸೇನೆಯ ಷರತ್ತುಗಳು

Updated: June 10, 2018, 9:03 AM IST
ನ್ಯೂಸ್ 18 ಕನ್ನಡ

ಮುಂಬೈ(ಜೂ.10): ಶಿವಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭೇಟಿಯ ಬಳಿಕ ಮಹಾರಾಷ್ಟ್ರದ;ಲ್ಲಿ ಬಿಜೆಪಿ ಹಾಗೂ ಶಿವಸೇನೆ ನಡುವಿನ ಮೈತ್ರಿ ವಿಚಾರವು ಭಾರೀ ಸದ್ದು ಮಾಡುತ್ತಿದೆ. ಆದರೆ ಉದ್ಧವ್ ಠಾಕ್ರೆ ಮಾತ್ರ 'ನಮಗೆ ಅರ್ಧಕ್ಕೂ ಹೆಚ್ಚು ಸೀಟುಗಳನ್ನು ಬಿಟ್ಟುಕೊಡುವುದರೊಂದಿಗೆ, ಸಿಎಂ ಸ್ಥಾನವನ್ನು ನೀಡಿದರಷ್ಟೇ ಮೈತ್ರಿ ಮಾಡಿಕೊಳ್ಳುತ್ತೇವೆ ಎಂಬ ಷರತ್ತನ್ನು ವಿಧಿಸಿದ್ದು, ಇದಕ್ಕ ಒಪ್ಪಿಗೆ ಸೂಚಿಸಿದರಷ್ಟೇ ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಅಲ್ಲಿನ ಒಟ್ಟು 288 ಕ್ಷೇತ್ರಗಳಲ್ಲಿ 152 ಸ್ಥಾನಗಳಲ್ಲಿ ಸ್ಪರ್ಧಿಸುವ ಬಗ್ಗೆ ಉದ್ಧವ್ ಠಾಕ್ರೆ ಮಾತನಾಡಿದ್ದಾರೆ. ಕೇವಲ 136 ಸ್ಥಾನಗಳನ್ನಷ್ಟೇ ಬಿಜೆಪಿಗೆ ಬಿಟ್ಟುಕೊಡುವ ಮೂಲಕ, ಹೆಚ್ಚಿನ ಸ್ಥಾನಗಳಲ್ಲಿ ತಾವೇ ಗೆಲ್ಲಬೇಕೆಂಬುವುದು ಠಾಕ್ರೆ ಉದ್ದೇಶವಾಗಿದೆ. ಇಷ್ಟೇ ಅಲ್ಲದೇ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ತಮಗೇ ಬಿಟ್ಟುಕೊಡಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ.

ಆಂಗ್ಲ ಪತ್ರಿಕೆ 'ಟೈಮ್ಸ್​ ಆಫ್ ಇಂಡಿಯಾ' ಪ್ರಕಟಿಸಿರುವ ವರದಿಯನ್ವಯ, ಶಿವಸೇನೆಯ ನಾಯಕರೊಬ್ಬರು ಮಾತನಾಡುತ್ತಾ 'ಒಂದು ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಮರಳಿ ಅಧಿಕಾರ ಪಡೆದರೆ, ಮಹಾರಾಷ್ಟ್ರದಲ್ಲಿ ಜನರ ಮನಸ್ಸು ಕೂಡಾ ಅದರ ಅನ್ವಯ ಬದಲಾಗಲಿದೆ. ಹೀಗಿರುವಾಗ ಶಿವಸೇನೆಯು ಬಿಜೆಪಿಯಿಂದ ದೂರ ಸರಿದು ಚುನಾವಣೆಯಲ್ಲಿ ಸ್ಪರ್ಧಿಸಿದರೆ ಅತಿ ದೊಡ್ಡ ನಷ್ಟ ಎದುರಿಸುವ ಸಾಧ್ಯತೆಗಳಿವೆ. ಇದು ನಾವು ಮಾಡುವ ಬಹುದೊಡ್ಡ ತಪ್ಪಾಗಲಿದೆ' ಎಂದಿದ್ದಾರೆ.

ಇನ್ನು ಉದ್ಧವ್ ಠಾಕ್ರೆಯ ಪ್ರಸ್ತಾವನೆಯನ್ನು ಆಲಿಸಿರುವ ಬಿಜೆಪಿ ಅಧ್ಯಕ್ಷ ತಾನು ಈ ಕುರಿತಾಗಿ ಯೋಚಿಸಿ ಶೀಘ್ರದಲ್ಲಿ ಮತ್ತೆ ಭೇಟಿಯಾಗುತ್ತೇನೆ ಎಂದು ತಿಳಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಇದಾದ ಬಳಿಕ ಸೀಟುಗಳ ಹಂಚಿಕೆ ವಿಚಾರವಾಗಿ ಫಾರ್ಮುಲಾವೊಂದರ ಮೇಲೆ ಚರ್ಚೆ ನಡೆಯಲಿದೆ.

ಮೇ 28ರಂದು ಪಾಲ್​ಘರ್​ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಮೈತ್ರಿಯ ಎರಡೂ ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಅಲ್ಲದೇ ಚುನಾವಣಾ ಪ್ರಚಾರದಲ್ಲೂ ಉಭಪ ಪಕ್ಷಗಳು ಪರಸ್ಪರ ಭಾರೀ ವಾಗ್ದಾಳಿ ನಡೆಸಿದ್ದವು.


ಪಾಲ್​ಘರ್​ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸೋಲನುಭವಿಸಿದ್ದ ಶಿವಸೇನೆಯು ತನ್ನ ಕಮಲ ಪಾಳಯವನ್ನು 'ತನ್ನ ಅತಿದೊಡ್ಡ ರಾಜಕೀಯ ಶತ್ರು' ಎಂದು ಘೋಷಿಸಿತ್ತು. ಹೀಗಾಗಿ ಬರೋಬ್ಬರಿ 4 ವರ್ಷಗಳ ಬಳಿಕ ಅಮಿತ್ ಷಾ ಹಾಗೂ ಠಾಕ್ರೆ ನಡುವೆ ಮಾತುಕತೆ ನಡೆಯಬೇಕೆಂದಾ ಶಿವಸೇನೆಯು ಈ ಕುರಿತಾಗಿ ಪ್ರಶ್ನಿಸಿತ್ತು. ಹೀಗಿದ್ದರೂ ಶಿವಸೇನೆಯು 2019 ರಲ್ಲಿ ತಾವು ಸ್ವತಂತ್ರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆಂದು ಹೇಳಿಕೆ ನೀಡಿದ್ದ ಗಮನಾರ್ಹ.
Loading...

ಎರಡೂ ಪಕ್ಷಗಳು ಎರಡೂವರೆ ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಮೈತ್ರಿ ಹೊಂದಿದ್ದವು, ಆದರೆ 2014ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೂ ಮೊದಲು ಉಭಯ ಪಕ್ಷಗಳು ತಮ್ಮ ನಡುವಿನ ಅಂಬಂಧ ಮುರಿದಿದ್ದವು. ಇದಾದ ಬಳಿಕ ರಾಜ್ಯದಲ್ಲಿ ಮತ್ತೆ ಫಡ್ನವೀಸ್​ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿಸಲು ಉಭಯ ಪಕ್ಷಗಳು ಕೈ ಮಿಲಾಯಿಸಿದ್ದವು.
First published:June 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...