Marital Rape: ಗಂಡ ಹೆಂಡತಿಯನ್ನು ಲೈಂಗಿಕತೆಗೆ ಒತ್ತಾಯಿಸಬಹುದು ಎಂಬ ನ್ಯಾಯಮೂರ್ತಿ ತೀರ್ಪಿಗೆ ಶಿವಸೇನೆ ಸಂಸದೆ ಆಕ್ರೋಶ

ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವ ಪರವಾಗಿ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೀವ್ ಶಕ್ಧರ್ ತೀರ್ಪು ನೀಡಿದರೆ, ನ್ಯಾಯಮೂರ್ತಿ ಹರಿಶಂಕರ್ ಅವರು ಇದು ಅಸಾಂವಿಧಾನಿಕ ಎಂದು ಪರಿಗಣಿಸಲು ನಿರಾಕರಿಸಿದರು.

 ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವೈವಾಹಿಕ ಅತ್ಯಾಚಾರವನ್ನು (Marital Rape) ಅಪರಾಧ ಗೊಳಿಸುವ ವಿಷಯದ ಕುರಿತು ನಿನ್ನೆ ದೆಹಲಿಯ ದ್ವಿಸದಸ್ಯ ಪೀಠ ಭಿನ್ನ ತೀರ್ಪು ನೀಡಿತ್ತು. ನ್ಯಾಯಮೂರ್ತಿಗಳಾದ ರಾಜೀವ್ ಶಕ್ಧರ್ ಮತ್ತು ಸಿ ಹರಿ ಶಂಕರ್ ಅವರ ಪೀಠ ಈ ಕುರಿತು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದರು . ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವ ಪರವಾಗಿ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜೀವ್ ಶಕ್ಧರ್ ತೀರ್ಪು ನೀಡಿದರೆ, ನ್ಯಾಯಮೂರ್ತಿ ಹರಿಶಂಕರ್ ಅವರು ಇದು ಅಸಾಂವಿಧಾನಿಕ ಎಂದು ಪರಿಗಣಿಸಲು ನಿರಾಕರಿಸಿದರು.

    ನ್ಯಾಯಮೂರ್ತಿಗಳ ತೀರ್ಪಿಗೆ ಆಕ್ರೋಶ

    ಸದ್ಯ ಈ ಪ್ರಕರಣ ದೇಶದಲ್ಲಿ ಸದ್ದು ಮಾಡಿದ್ದು, ಈ ಪ್ರಕರಣ ಸುಪ್ರೀಂ ಮೆಟ್ಟಿಲೇರಿದೆ. ಇನ್ನು ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯ ಮೂರ್ತಿ ಹರಿ ಶಂಕರ್​ ನಡೆಸಿರುವ ಅವಲೋಕನ ಇದೀಗ ಸದ್ದು ಮಾಡುತ್ತಿದ್ದು, ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ತೀರ್ಪು ನೀಡುವ ಸಂದರ್ಭದಲ್ಲಿ ನ್ಯಾಯಮೂರ್ತಿ ಹರಿ ಶಂಕರ್​ ಅವರು, ಪತಿಯು ತನ್ನ ಹೆಂಡತಿಯನ್ನು ತನ್ನೊಂದಿಗೆ ಸಂಭೋಗ ನಡೆಸಲು ಒಲವು ತೋರದಿದ್ದಾಗ, ಆಕೆಯನ್ನು ಚೌಚಿತ್ಯದಿಂದ ತನ್ನೊಂದಿಗೆ ಸಂಭೋಗಿಸಲು ಒತ್ತಾಯಿಸಬಹುದು ಎಂದಿದ್ದರು. ಈ ಅವಲೋಕನದ ಸದ್ಯ ರಾಜಕೀಯ ನಾಯಕರ ಹಾಗೂ ಸಾಮಾನ್ಯ ಜನರ ಟೀಕೆಗೆ ಗುರಿಯಾಗಿದೆ.

    ಕಿಡಿಕಾರಿದ ಶಿವಸೇನಾ ಸಂಸದೆ
    ಈ ಸಂಬಂಧ ಪ್ರತಿಕ್ರಿಯಿಸಿರುವ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ, ಹೌದು. ಹೆಚ್ಚಿನ ಮಹಿಳೆಯರಿಂದ ಔಚಿತ್ಯದ ಮತ್ತು ಅಧಿಕಾರದ ಜೊತೆಗೆ ಹೇಳಬಹುದು. ಗೌರವಾನ್ವಿತ ನ್ಯಾಯಾಧೀಶರೇ, ಅಪರಿಚಿತರು ಅಥವಾ ಪತಿ ಮಹಿಳೆ ಅಥವಾ ಅವರ ಹೆಂಡತಿಯನ್ನು ಬಲವಂತಪಡಿಸುವುದು ಆಕ್ರೋಶ, ಅಗೌರವ ಮತ್ತು ಉಲ್ಲಂಘನೆಯ ಅನುಭವವು ಅಷ್ಟೇ ಪ್ರಬಲವಾಗಿದೆ. ಈ ಬಗ್ಗೆ ನಿಮ್ಮ ಸುತ್ತಲಿರುವ ಮಹಿಳೆಯರನ್ನು ಕೇಳಿ. ಧನ್ಯವಾದಗಳು ಎಂದಿದ್ದಾರೆ.

    ಇನ್ನು ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಸಾಮಾಜಿಕ ಜಾಲತಾಣಿಗರೊಬ್ಬರು, ಗೊಂದಲಕಾರಿಯಾಗಿದೆ. ವೈವಾಹಿಕ ಅತ್ಯಾಚಾರ ಕೂಡಾ ಅತ್ಯಾಚಾರವಾಗಿದೆ, ಆದ್ದರಿಂದ ಇದು ಅಪರಾಧ ಎಂದಿದ್ದಾರೆ

    ಇದನ್ನು ಓದಿ: ಎಲ್ಲೋ ಏನೋ ಮಿಸ್​ ಫೈರ್​ ಆಗಿದೆ ಎಂದ ಡಿಕೆಶಿ; ಕೆಸಿ ವೇಣುಗೋಪಾಲ್ ಮೊರೆ ಹೋದ ರಮ್ಯಾ

    ವಿಭಜಿತ ತೀರ್ಪು ಒಪ್ಪುವುದಿಲ್ಲ

    ಕಾಂಗ್ರೆಸ್ ನಾಯಕ ಜೈವೀರ್ ಶೆರ್ಗಿಲ್ ಅವರು ವೀಕ್ಷಣೆಗೆ ಪ್ರತಿಕ್ರಿಯಿಸಿ, ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಲು ನಿರಾಕರಿಸಿದ ನ್ಯಾಯಮೂರ್ತಿ ಹರಿಶಂಕರ್ ಅವರು ನೀಡಿದ ವಿಭಜಿತ ತೀರ್ಪನ್ನು ಒಪ್ಪುವುದಿಲ್ಲ. ಇಲ್ಲ ಎಂದು ಹೇಳುವ ಹಕ್ಕಿನ ಜೊತೆಗೆ, ತನ್ನ ದೇಹದ ಮೇಲೆ ಮಹಿಳೆಯ ಹಕ್ಕುನ್ನು ಹೊಂದಿದ್ದಾರೆ, ಆರ್ಟಿ 21 ರ ಅಡಿಯಲ್ಲಿ ಗೌರವದಿಂದ ಬದುಕುವ ಹಕ್ಕು. ಸಂವಿಧಾನವು ಮದುವೆಯ ಸಂಸ್ಥೆಗಿಂತ ಹೆಚ್ಚಿನದಾಗಿದೆ. ಸುಪ್ರೀಂ ಕೋರ್ಟ್ ನ್ಯಾಯವನ್ನು ಖಚಿತಪಡಿಸುತ್ತದೆ ಎಂದು ಭಾವಿಸುತ್ತೇವೆ

    ಏನು ಹೇಳಿದ್ರೂ ನ್ಯಾಯಾಮೂರ್ತಿಗಳು

    ಪ್ರಕರಣ ಸಂಬಂಧ ತೀರ್ಪು ನೀಡಿದ ನ್ಯಾಯಾಮೂರ್ತಿ ಶಂಕರ್​, ಮದುವೆ ಸಂಬಂಧ ಎಂಬುದು ವಿಶೇಷ ಪಾತ್ರ ಮತತು ಸಂಕೀರ್ಣತೆಗಳನ್ನು ಒಳಗೊಂಡಿದೆ. ಶಾಸಕಾಂಗವು ಅತ್ಯಾಚಾರ ಆರೋಪಕ್ಕೆ ಯಾವುದೇ ಸ್ಥಾನವಿಲ್ಲ ಎಂದು ಸಲಹೆ ನೀಡಿದೆ. ಶಾಸಕಾಂಗ ಇಂತಹ ಮಾನದಂಡದಿಂದ ಸಂಬಂಧಗಳನ್ನು ದೂರವಿರಿಸಲು ಕೇಳಿದೆ ಎಂದಿದ್ದರು.
    ಐಪಿಸಿಯ ಸೆಕ್ಷನ್ 375 ರಲ್ಲಿ ನೀಡಿರುವ ವಿನಾಯಿತಿಯ ಅಡಿಯಲ್ಲಿ, ಪುರುಷನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಸಂಭೋಗ ಅಥವಾ ಲೈಂಗಿಕ ಕ್ರಿಯೆಗಳನ್ನು ನಡೆಸುವುದು, ಹೆಂಡತಿ ಅಪ್ರಾಪ್ತಳಲ್ಲದಿರುವುದು ಅತ್ಯಾಚಾರವಲ್ಲ ಎಂದು ತಿಳಿಸಿದ್ದರು.

    ಇದನ್ನು ಓದಿ: ಗಂಡ-ಹೆಂಡತಿ ನಡುವಿನ ಬಲವಂತದ ಲೈಂಗಿಕತೆ ಅಪರಾಧವಲ್ಲವೇ? ಕೋರ್ಟ್ ಹೇಳಿದ್ದೇನು?

    ಐಪಿಸಿಯ ಸೆಕ್ಷನ್ 375ರ ಎರಡನೇ ವಿನಾಯಿತಿ, ಸೆಕ್ಷನ್ 376 ಬಿ ಹಾಗೂ ಸಿಆರ್‌ಪಿಸಿ ಸೆಕ್ಷನ್ 198 ಬಿ ಯು ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಪತಿ ಅಥವಾ ಬೇರ್ಪಟ್ಟ ಪತಿ ಲೈಂಗಿಕ ಸಂಭೋಗ ನಡೆಸುವುದಕ್ಕೆ ಸಂಬಂಧಿಸಿರುವುದರಿಂದ ಸಂವಿಧಾನದ 14, 15, 19 (1) (ಎ) ಮತ್ತು 21ನೇ ವಿಧಿಗಳನ್ನು ಉಲ್ಲಂಘಿಸುತ್ತವೆ ಹೀಗಾಗಿ ತಡೆಹಿಡಿಯಲು ಅವು ಅರ್ಹವಾಗಿವೆ ಎಂದು ಸುಮಾರು 200 ಪುಟಗಳ ತೀರ್ಪಿನಲ್ಲಿ, ನ್ಯಾಯಮೂರ್ತಿ ಶಕ್ಧರ್ ತಿಳಿಸಿದರು.
    Published by:Seema R
    First published: