Maharashtra Politics: ಶಿವಸೇನೆ ಶಾಸಕರಿಗೆ ಇಂಜೆಕ್ಷನ್ ಕೊಟ್ಟು, ಕಿಡ್ನಾಪ್ ಮಾಡಿದ್ರಾ? ಇದು 'ಮಹಾ' ಹೈಡ್ರಾಮಾದ ಸ್ಫೋಟಕ ನ್ಯೂಸ್

ರೆಬೆಲ್ ಶಾಸಕರ ಜೊತೆ ಹೋಗಿದ್ದ ಶಿವಸೇನೆ ಎಂಎಲ್‌ಎ ನಿತಿನ್ ದೇಶಮುಖ್ ಮುಂಬೈಗೆ ವಾಪಸ್ ಬಂದಿದ್ದಾರೆ. ಏಕಾಏಕಿ ಪ್ರತ್ಯಕ್ಷರಾದ ಅವರು ನನಗೆ ಮತ್ತು ಬರುವ ಇಂಜೆಕ್ಷನ್ ನೀಡಿ, ನನ್ನನ್ನು ಏಕನಾಥ್ ಶಿಂಧೆ ಟೀಂ ಕಿಡ್ನಾಪ್ ಮಾಡಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.

ಶಿವಸೇನೆ ಶಾಸಕ ನಿತಿನ್ ದೇಶಮುಖ್

ಶಿವಸೇನೆ ಶಾಸಕ ನಿತಿನ್ ದೇಶಮುಖ್

  • Share this:
ಮುಂಬೈ: ಮಹಾರಾಷ್ಟ್ರ ರಾಜಕೀಯ ಹೈಡ್ರಾಮಾ (Maharashtra Political High drama) ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಏಕ್‌ನಾಥ್‌ ಶಿಂಧೆ (Ekanath Shidhe) ಜೊತೆ ಸೇರಿರುವ ಶಿವಸೇನೆಯ (Shiv Sene) ರೆಬೆಲ್ ಶಾಸಕರು (Rebel MLA’s) ಮಹಾ ವಿಕಾಸ್ ಅಗಾಡಿ ಸರ್ಕಾರ (Maha Vikas Aghadi Government) ಬೀಳಿಸಲು ಶತಪ್ರಯತ್ನ ನಡೆಸಿದ್ದಾರೆ. ಈ ನಡುವೆ ರೆಬೆಲ್ ಶಾಸಕರ ಗುಂಪು ಸೇರಿದ್ದ ಶಿವಸೇನೆ ಶಾಸಕರೊಬ್ಬರು ಬಾಂಬ್ ಸಿಡಿಸಿದ್ದಾರೆ. ಗುಜರಾತ್‌ನ (Gujarat) ಸೂರತ್‌ನಿಂದ (Surat) ಮುಂಬೈಗೆ (Mumbai) ಬಂದಿರುವ ಶಿವಸೇನೆ ಶಾಸಕ ನಿತಿನ್ ದೇಶಮುಖ್ (Nitin Deshmukh), ರೆಬೆಲ್ ನಾಯಕ ಏಕನಾಥ್ ಶಿಂಧೆ ಹಾಗೂ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಮತ್ತು ಬರುವ ಔಷಧಿಯನ್ನು ನನಗೆ ಇಂಜೆಕ್ಟ್ ಮಾಡಿ, ನನ್ನನ್ನು ಬಲವಂತವಾಗಿ ಕಿಡ್ನಾಪ್ (Kidnap) ಮಾಡಲಾಯಿತು. ನನ್ನ ನಿಷ್ಠೆ ಯಾವಾಗಿದ್ದರೂ ಉದ್ಧವ್ ಠಾಕ್ರೆ (Uddhav Thackeray) ಹಾಗೂ ಶಿವಸೇನೆಗೆ ಅಂತ ಹೇಳಿದ್ದಾರೆ.

ಕಿಡ್ನಾಪ್ ಮಾಡಿದ್ರಾ ಶಿವಸೇನೆ ರೆಬೆಲ್ ಶಾಸಕರು?

ರೆಬೆಲ್ ಶಾಸಕರ ಜೊತೆ ಹೋಗಿದ್ದ ಶಿವಸೇನೆ ಎಂಎಲ್‌ಎ ನಿತಿನ್ ದೇಶಮುಖ್ ಮುಂಬೈಗೆ ವಾಪಸ್ ಬಂದಿದ್ದಾರೆ. ಏಕಾಏಕಿ ಪ್ರತ್ಯಕ್ಷರಾದ ಅವರು ನನಗೆ ಮತ್ತು ಬರುವ ಇಂಜೆಕ್ಷನ್ ನೀಡಿ, ನನ್ನನ್ನು ಏಕನಾಥ್ ಶಿಂಧೆ ಟೀಂ ಕಿಡ್ನಾಪ್ ಮಾಡಿದೆ ಅಂತ ಗಂಭೀರ ಆರೋಪ ಮಾಡಿದ್ದಾರೆ.

“ಬಲವಂತವಾಗಿ ನನ್ನನ್ನ ಆಸ್ಪತ್ರೆಗೆ ಕರೆದೊಯ್ದರು”

ನಾನು ತಪ್ಪಿಸಿಕೊಂಡು ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಸ್ತೆಯಲ್ಲಿ ನಿಂತಿದ್ದಾಗ ನೂರಕ್ಕೂ ಹೆಚ್ಚು ಪೊಲೀಸರು ಬಂದು ನನ್ನನ್ನು ಆಸ್ಪತ್ರೆಗೆ ಕರೆದೊಯ್ದರು. ಅವರು ನನಗೆ ಹೃದಯಾಘಾತವಾಗಿದೆ ಎಂದು ವೈದ್ಯರಿಗೆ ಹೇಳಿದರು. ಈ ವೇಳೆ ಕೆಲವು ವೈದ್ಯಕೀಯ ಪರೀಕ್ಷೆ ಮಾಡಲು ಪ್ರಯತ್ನ ಮಾಡಿದರು. ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲದಿದ್ದರೂ ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಸ್ಪತ್ರೆಯಲ್ಲಿ ಅವರಿಗೆ ಬಲವಂತವಾಗಿ ಕೆಲವು ಚುಚ್ಚುಮದ್ದುಗಳನ್ನು ನೀಡಲಾಯಿತು ಎಂದು ನಿತಿನ್ ದೇಶಮುಖ್ ಹೇಳಿದರು.

ಇದನ್ನೂ ಓದಿ: Sonia Gandhi: ನಾಳೆ ವಿಚಾರಣೆಗೆ ಹಾಜರಾಗ್ತಾರಾ ಸೋನಿಯಾಗಾಂಧಿ? ಇಡಿಗೆ ಪತ್ರ ಬರೆದ ಎಐಸಿಸಿ ಅಧ್ಯಕ್ಷೆ

“ನನ್ನ ನಿಷ್ಠೆ ಏನಿದ್ದರೂ ಶಿವಸೇನೆ ಮತ್ತು ಉದ್ಧವ್ ಠಾಕ್ರೆಗೆ”

"ನಾನು ಉದ್ಧವ್ ಠಾಕ್ರೆ ಅವರೊಂದಿಗೆ ಸಹಜವಾಗಿಯೇ ಇದ್ದೇನೆ" ಎಂದಿರುವ ನಿತಿನ್ ದೇಶಮುಖ್, ನನ್ನ ನಿಷ್ಠೆ ಯಾವಾಗಿದ್ದರೂ ಶಿವಸೇನೆ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಅಂತ ಹೇಳಿದ್ದಾರೆ. ಇನ್ನು ಮಂಗಳವಾರ ಏಕನಾಥ ಶಿಂಧೆ ಗುಂಪಿನೊಂದಿಗೆ ಸೇರಿಕೊಂಡಿದ್ದ ನಿತಿನ್ ದೇಶಮುಖ್, ಗುಜರಾತ್‌ ಸೇರಿಕೊಂಡಿದ್ದರು. ಇತ್ತ ನಿತಿನ್ ದೇಶಮುಖ್ ಅವರ ಪತ್ನಿ ನಿನ್ನೆ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ, ನಿತಿನ್ ದೇಶ್ ಮುಖ್ ಅವರು ಕಾಣೆಯಾಗಿದ್ದಾರೆ ಅಂತ ನಾಪತ್ತೆ ದೂರು ದಾಖಲಿಸಿದ್ದರು. ಅಲ್ಲದೇ ಅವರಿಗೆ ಜೀವ ಬೆದರಿಕೆ ಇದೆ ಅಂತ ಆರೋಪಿಸಿದ್ದರು. ನಿತಿನ್ ದೇಶಮುಖ್ ಮಹಾರಾಷ್ಟ್ರದ ಬಾಲಾಪುರ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ.

ಇದನ್ನೂ ಓದಿ: Draupadi Murmu: ದೇವಾಲಯದ ಕಸ ಗುಡಿಸಿದ NDA ರಾಷ್ಟ್ರಪತಿ ಅಭ್ಯರ್ಥಿ!

ನಾನು ಅಧಿಕಾರಕ್ಕೆ ಅಂಟಿ ಕುಳಿತಿಲ್ಲ ಅಂದ ಉದ್ಧವ್ ಠಾಕ್ರೆ

'ವಿಧಾನಸಭೆಯನ್ನೇ ವಿಸರ್ಜನೆ ಮಾಡುವಲ್ಲಿಗೆ ರಾಜ್ಯದ ರಾಜಕೀಯ ಪರಿಸ್ಥಿತಿ ತಲುಪಿದೆ' ಎಂದು ಅವರು ಉದ್ಧವ್ ಠಾಕ್ರೆ ಟ್ವೀಟ್‌ ಮಾಡಿದ್ದರು. ಆ ಮೂಲಕ ಬಂಡಾಯ ಶಾಸಕರಿಂದ ಸರ್ಕಾರ ಕಳೆದುಕೊಳ್ಳುವ ಬದಲು, ವಿಧಾನಸಭೆಯನ್ನೇ ವಿಸರ್ಜಿಸಿ ಹೊಸದಾಗಿ ಚುನಾವಣೆ ಹೋಗುವ ಸುಳಿವನ್ನು ನೀಡಿದ್ದರು. ನಾನು ಅಧಿಕಾರಕ್ಕಾಗಿ ಅಂಟಿ ಕುಳಿತಿಲ್ಲ. ಶಾಸಕರು ಬಯಸಿದರೆ ನಾನು ಯಾವುದೇ ಕ್ಷಣದಲ್ಲೂ ರಾಜೀನಾಮೆ ನೀಡೋದಕ್ಕೆ ಸಿದ್ಧ ಅಂತ ಸ್ಪಷ್ಟಪಡಿಸಿದ್ದಾರೆ.
Published by:Annappa Achari
First published: