ಚೀನಾದಿಂದ (China) ಹೊರಹೊಮ್ಮುತ್ತಿರುವ ಕೋವಿಡ್ -19 (Covid-19) ಬೆದರಿಕೆಯನ್ನು ನಿಭಾಯಿಸಲು ಎಲ್ಲಾ ಸಕಾರಾತ್ಮಕ ಮಾದರಿಗಳ ಪರೀಕ್ಷೆ ಮತ್ತು ಜೀನೋಮ್ ಅನುಕ್ರಮದಂತಹ ಕ್ರಮಗಳನ್ನು ಹೆಚ್ಚಿಸಲು ಕೇಂದ್ರ ಸರ್ಕಾರವೂ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿರುವ ಸಮಯದಲ್ಲಿ, ಉದ್ಧವ್ ಠಾಕ್ರೆ (Uddhav Thackeray) ನೇತೃತ್ವದ ಶಿವಸೇನೆ (Shiv Sena) ನರೇಂದ್ರ ಮೋದಿಯ (PM Modi) ವಿರುದ್ಧ ಆರೋಪ ಮಾಡಿದ್ದು, ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ನಿಲ್ಲಿಸಲು ಕೋವಿಡ್ ಅಸ್ತ್ರ NDA ಸರ್ಕಾರದ ಹುನ್ನಾರವಾಗಿದೆ ಎಂದು ಆಪಾದಿಸಿದೆ.
ಕೋವಿಡ್ ನಿಯಮ ಅನುಸರಿಸುವಂತೆ ಪತ್ರ
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಇತ್ತೀಚೆಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಪತ್ರವೊಂದನ್ನು ಕಳುಹಿಸಿದ್ದು, ಕೋವಿಡ್ ನಿಯಮಾವಳಿಗಳನ್ನು ಯಾತ್ರೆಯಲ್ಲಿ ಅನುಷ್ಠಾನಗೊಳಿಸದೇ ಇದ್ದರೆ ಯಾತ್ರೆಯನ್ನು ನಿಲ್ಲಿಸುವ ಇಲ್ಲವೇ, ಮುಂದೂಡುವುದನ್ನು ಪರಿಗಣಿಸುವಂತೆ ಒತ್ತಾಯಿಸಿದ್ದಾರೆ.
The Yatra received love and support from every state that it passed through. The fear in the BJP camp is visible as the Yatra in its full glory advances toward Delhi. #भारतजोड़ो_के_साथ_चलो_दिल्ली pic.twitter.com/TEqmDoR3PU
— Srinivas BV (@srinivasiyc) December 22, 2022
ಭಾರತ್ ಜೋಡೋ ಯಾತ್ರೆಗೆ ಮಾತ್ರ ಏಕೆ ನಿಬಂಧನೆ?
ಆರೋಗ್ಯ ಸಚಿವರ ಈ ವಿನಂತಿಯನ್ನು ಕಾಂಗ್ರೆಸ್ ಮತ್ತು ಹಲವಾರು ವಿರೋಧ ಪಕ್ಷಗಳು ಉತ್ತಮ ಮನೋಭಾವದಿಂದ ಸ್ವೀಕರಿಸಲಿಲ್ಲ, ಬದಲಿಗೆ ಕೇಂದ್ರ ಸರ್ಕಾರದ ಈ ನಿಬಂಧನೆ ವಿಧಾನ ಭಾರತ್ ಜೋಡೋ ಯಾತ್ರೆಗೆ ಮಾತ್ರವೇಕೆ ಎಂದು ಪ್ರಶ್ನಿಸಿವೆ.
ಶಿವಸೇನೆ ತನ್ನ ಪತ್ರಿಕೆ ‘ಸಾಮ್ನಾ’ದಲ್ಲಿ ಈ ಕುರಿತು ಸಂಪಾದಕೀಯ ಪ್ರಕಟಿಸಿದ್ದು, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಭಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವಂತೆ ಅಥವಾ ಪಾದಯಾತ್ರೆಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ 100 ದಿನಗಳನ್ನು ಪೂರೈಸಿದ್ದಾರೆ.
ಭಾರತ್ ಜೋಡೋ ಯಾತ್ರೆ ಮತ್ತು ದೊಡ್ಡ ಪ್ರಮಾಣದಲ್ಲಿ ಜನಬೆಂಬಲವನ್ನು ಪಡೆಯುತ್ತಿದೆ. ಸರ್ಕಾರವು ಕಾನೂನಿನ ಮೂಲಕ ಅಥವಾ ಪಿತೂರಿಯಿಂದ ಅದನ್ನು ತಡೆಯಲು ಸಾಧ್ಯವಾಗದಿರುವ ಕಾರಣ 'ಕೋವಿಡ್-19' ವೈರಸ್ ಅನ್ನು ಬಿಡುಗಡೆ ಮಾಡಿದೆ ಎಂದು ತೋರುತ್ತದೆ ಎಂದು ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ: Narendra Modi: ಮಾಸ್ಕ್ ಹಾಕೋಬೇಕು, ದೂರ ನಿಂತ್ಕೋಬೇಕು! ಕೊರೊನಾ ತಡೆಗೆ '3T' ಸೂತ್ರ ಕೊಟ್ಟ ಮೋದಿ
ಬಿರುಗಾಳಿ ಎಬ್ಬಿಸಿರುವ ಪತ್ರ
ಭಾರತ್ ಜೋಡೋ ಯಾತ್ರೆಯಿಂದ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಭಯ ಎಷ್ಟು ಸರಿ ಎಂದು ಸಂಪಾದಕೀಯ ಬಲವಾಗಿ ಪ್ರಶ್ನಿಸಿದೆ. ಪಕ್ಷದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ರಾಹುಲ್ ಗಾಂಧಿ ಮತ್ತು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ಗೆ ಕೇಂದ್ರ ಆರೋಗ್ಯ ಸಚಿವರ ಸಲಹೆಯು ದೇಶದಲ್ಲಿ ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿದೆ.
ಭಾರತ್ ಜೋಡೋ ಯಾತ್ರೆ ನಿಲ್ಲಿಸುವಂತೆ ಸೂಚನೆ
ರಾಜಸ್ಥಾನದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ. ಮಾಸ್ಕ್-ಸ್ಯಾನಿಟೈಸರ್ ಬಳಕೆಯನ್ನು ಜಾರಿಗೊಳಿಸಬೇಕು. ಲಸಿಕೆ ಹಾಕಿದ ಜನರು ಮಾತ್ರ ಭಾಗವಹಿಸಬೇಕು ಎಂದು ಆರೋಗ್ಯ ಸಚಿವರು ಪತ್ರದಲ್ಲಿ ತಿಳಿಸಿದ್ದಾರೆ. ಈ ನಿಯಮಾವಳಿಗಳನ್ನು ಕಾಂಗ್ರೆಸ್ ಪಾಲಿಸದೇ ಹೋದಲ್ಲಿ ಪಾದಯಾತ್ರೆಯನ್ನು ಮುಂದೂಡುವಂತೆ ಇಲ್ಲವೇ ನಿಲ್ಲಿಸುವಂತೆ ಮಾಂಡವಿಯಾ ಮನವಿ ಮಾಡಿದ್ದಾರೆ.
ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಹಿತಾಸಕ್ತಿಯಿಂದ ಭಾರತ್ ಜೋಡೋ ಯಾತ್ರೆಯನ್ನು ಮುಂದೂಡಬಹುದು ಎಂದು ಆರೋಗ್ಯ ಸಚಿವರು ಪತ್ರದಲ್ಲಿ ಸೂಚಿಸಿದ್ದಾರೆ.
ಕಾಂಗ್ರೆಸ್ನಿಂದ ಬಿಜೆಪಿಯ ಮೇಲೆ ವಾಗ್ದಾಳಿ
ಆರೋಗ್ಯ ಇಲಾಖೆಯ ಪತ್ರ ಕಾಂಗ್ರೆಸ್ ಪಕ್ಷದ ಕಟು ಟೀಕೆಗೆ ಒಳಗಾಗಿದ್ದು, ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಕಟುವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಹರಿದು ಬರುತ್ತಿರುವ ಜನಸ್ಪಂದನೆ ಮೋದಿ ಸರ್ಕಾರದಲ್ಲಿ ನಡುಕ ಹುಟ್ಟಿಸಿದೆ. ಹಾಗಾಗಿಯೇ ಪತ್ರದ ಮೂಲಕ ಕೋವಿಡ್ ನಿಯಮಾವಳಿಗಳೆಂಬ ಹೆಸರಿನಲ್ಲಿ ಕುತಂತ್ರ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ