• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Draupadi Murmu: ಶಿವಸೇನೆ-ಬಿಜೆಪಿ ‘ಮಹಾ‘ ಮುನಿಸಿನ ನಡುವೆ ದ್ರೌಪದಿ ಮುರ್ಮುಗೆ ಬೆಂಬಲ! ಈ ಬಗ್ಗೆ ಉದ್ಧವ್ ಠಾಕ್ರೆ ಹೇಳಿದ್ದೇನು?

Draupadi Murmu: ಶಿವಸೇನೆ-ಬಿಜೆಪಿ ‘ಮಹಾ‘ ಮುನಿಸಿನ ನಡುವೆ ದ್ರೌಪದಿ ಮುರ್ಮುಗೆ ಬೆಂಬಲ! ಈ ಬಗ್ಗೆ ಉದ್ಧವ್ ಠಾಕ್ರೆ ಹೇಳಿದ್ದೇನು?

ದ್ರೌಪದಿ ಮುರ್ಮು ಮತ್ತು ಉದ್ಧವ್ ಠಾಕ್ರೆ

ದ್ರೌಪದಿ ಮುರ್ಮು ಮತ್ತು ಉದ್ಧವ್ ಠಾಕ್ರೆ

ಕೇಂದ್ರದಲ್ಲಿ ಬಹುಮತವಿದ್ದರೂ ಎನ್‌ಡಿಎ ಅಭ್ಯರ್ಥಿ (NDA Candidate) ದ್ರೌಪದಿ ಮುರ್ಮು (Draupadi Murmu) ಮಿತ್ರಪಕ್ಷಗಳ ಬೆಂಬಲ ಯಾಚಿಸುತ್ತಿದ್ದಾರೆ. ಈ ನಡುವೆ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಶಿವಸೇನೆ ಘೋಷಿಸಿದೆ. ಈ ಬಗ್ಗೆ ಖುದ್ದು ಉದ್ಧವ್ ಠಾಕ್ರೆ ಅವರೇ ಸ್ಪಷ್ಟನೆ ನೀಡಿದ್ದಾರೆ.

ಮುಂದೆ ಓದಿ ...
  • Share this:

ಮಹಾರಾಷ್ಟ್ರ: ಒಂದೆಡೆ ಮಹಾರಾಷ್ಟ್ರ ರಾಜಕಾರಣಕ್ಕೆ (Maharashtra Politics) ಟ್ವಿಸ್ಟ್ (Twist) ಮೇಲೆ ಟ್ವಿಸ್ಟ್ ಸಿಕ್ಕು, ಮಹಾ ಬದಲಾವಣೆ ಆಗಿದೆ. ಉದ್ಧವ್ ಠಾಕ್ರೆ (Uddhav Thackrey) ನೇತೃತ್ವದ ಮಹಾ ವಿಕಾಸ್ ಅಘಾಡಿ (Maha Vikas Aghadi) ಮೈತ್ರಿ ಸರ್ಕಾರ (Alliance Government) ಉರುಳಿ ಹೋಗಿದೆ. ಶಿವಸೇನೆಯಿಂದ (Shiv Sene) ಬಂಡಾಯವೆದ್ದಿದ್ದ ಏಕನಾಥ್ ಶಿಂಧೆ (Eknath Shinde) ಹಾಗೂ ಬಿಜೆಪಿ (BJP) ನೇತೃತ್ವದ ಮೈತ್ರಿ ಸರ್ಕಾರ ಈಗ ಆಡಳಿತ ನಡೆಸುತ್ತಿದೆ. ಮೈತ್ರಿ ಸರ್ಕಾರ ಬೀಳಲು ಕಾರಣವಾಗಿದ್ದ ಬಿಜೆಪಿ ವಿರುದ್ಧ ಉದ್ಧವ್ ಠಾಕ್ರೆ ಕಿಡಿ ಕಾರುತ್ತಿದ್ದಾರೆ. ಅತ್ತ ರಾಷ್ಟ್ರಪತಿ ಚುನಾವಣೆಗೆ (Presidential Election) ದಿನಗಣನೆ ಆರಂಭವಾಗಿದೆ. ಕೇಂದ್ರದಲ್ಲಿ ಬಹುಮತವಿದ್ದರೂ ಎನ್‌ಡಿಎ ಅಭ್ಯರ್ಥಿ (NDA Candidate) ದ್ರೌಪದಿ ಮುರ್ಮು (Draupadi Murmu) ಮಿತ್ರಪಕ್ಷಗಳ ಬೆಂಬಲ ಯಾಚಿಸುತ್ತಿದ್ದಾರೆ. ಈ ನಡುವೆ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಶಿವಸೇನೆ ಘೋಷಿಸಿದೆ. ಈ ಬಗ್ಗೆ ಖುದ್ದು ಉದ್ಧವ್ ಠಾಕ್ರೆ ಅವರೇ ಸ್ಪಷ್ಟನೆ ನೀಡಿದ್ದಾರೆ.


 ದ್ರೌಪದಿ ಮುರ್ಮುಗೆ ಶಿವಸೇನೆ ಬೆಂಬಲ


ರಾಷ್ಟ್ರಪತಿ  ಚುನಾವಣೆಯಲ್ಲಿ ಎನ್​​ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಉದ್ಧವ್ ಠಾಕ್ರೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮಾತೋಶ್ರೀಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಶಿವಸೇನೆಯ 16 ಸಂಸದರು ಭಾಗಿಯಾಗಿದ್ದರು. ಈ ವೇಳೆ ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲೆ ಶಿವಸೇನೆಯ ಸಂಸದರು ಒತ್ತಡ ಹೇರಿದ್ದರು. ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಬಹುತೇಕ ಸಂಸದರು ಎನ್​ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು ಎಂಬ ಸಲಹೆ ನೀಡಿದ್ದರು.



ಶಿವಸೇನೆ ಬೆಂಬಲದ ಬಗ್ಗೆ ಉದ್ಧವ್ ಠಾಕ್ರೆ ಘೋಷಣೆ


ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಣೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮೇಲೆ ಶಿವಸೇನೆಯ ಸಂಸದರು ಒತ್ತಡ ಹೇರಿದ್ದರು. ನಿನ್ನೆ ನಡೆದ ಮಹತ್ವದ ಸಭೆಯಲ್ಲಿ ಬಹುತೇಕ ಸಂಸದರು ಎನ್​ಡಿಎ ಅಭ್ಯರ್ಥಿಗೆ ಬೆಂಬಲ ಸೂಚಿಸಬೇಕು ಎಂಬ ಸಲಹೆ ನೀಡಿದ್ದರು. ಇದರ ಬೆನ್ನಲ್ಲೇ ಉದ್ಧವ್ ಠಾಕ್ರೆ ಈ ನಿರ್ಧಾರ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಮತ್ತಷ್ಟು ಬಲ ಬಂದಿದೆ. ಇದರ ಜೊತೆಗೆ ಶಿವಸೇನೆಯಲ್ಲಿ ಉಂಟಾಗಬಹುದಾಗಿದ್ದ ಮತ್ತೊಂದು ಬಂಡಾಯದ ಬೀಸಿ ಶಮನ ಮಾಡುವ ಕೆಲಸವನ್ನ ಮಾಜಿ ಮುಖ್ಯಮಂತ್ರಿ ಮಾಡಿದ್ದಾರೆ.


ಇದನ್ನೂ ಓದಿ: Draupadi Murma: ದ್ರೌಪದಿ ಮುರ್ಮು ಯಾರು? ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ಹಿನ್ನೆಲೆ ಇಲ್ಲಿದೆ


ನಾವು ಸಣ್ಣ ಮನಸ್ಥಿತಿಯವರಲ್ಲ


ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರು ರಾಷ್ಟ್ರಪತಿಯಾಗುವ  ಅವಕಾಶವಿರುವುದಾಗಿ ಪಕ್ಷದ ಬುಡಕಟ್ಟು ಮುಖಂಡರು ಹೇಳಿರುವುದಾಗಿ ಉದ್ಧವ್ ಠಾಕ್ರೆ ತಿಳಿಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ರಾಜಕೀಯ ಪರಿಸ್ಥಿತಿಯಲ್ಲಿ ನಾನು ಮುರ್ಮು ಅವರನ್ನು ಬೆಂಬಲಸಬಾರದು. ಆದರೆ, ನಾವು ಸಣ್ಣ ಮನಸ್ಥಿತಿ ಹೊಂದಿಲ್ಲ. ಹೀಗಾಗಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಲು ಶಿವಸೇನೆ ತೀರ್ಮಾನ ಮಾಡಿದೆ ಅಂತ ಹೇಳಿದ್ರು.


 ಇದನ್ನೂ ಓದಿ: Presidential Election: ರಾಷ್ಟ್ರಪತಿ ಚುನಾವಣೆ ನಡೆಯುವುದು ಹೇಗೆ? ಪ್ರಥಮ ಪ್ರಜೆಯನ್ನು ಆಯ್ಕೆ ಮಾಡುವವರು ಯಾರು?


 ಶಿವಸೇನೆ ನಿರ್ಧಾರಕ್ಕೆ ಕಾಂಗ್ರೆಸ್ ವ್ಯಂಗ್ಯ

top videos


    ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಶಿವಸೇನೆಯ ಕ್ರಮವು 'ಪಕ್ಷದಲ್ಲಿ ಪ್ರಜಾಪ್ರಭುತ್ವದ ಅಂತ್ಯ' ಎಂದು ಮಹಾರಾಷ್ಟ್ರ ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಹೇಳಿದ್ದಾರೆ. ಶಿವಸೇನೆ ದ್ರೌಪದಿ ಮುರ್ಮುಗೆ ಬೆಂಬಲ ನೀಡಿದರೆ ಅದೊಂದು ಐತಿಹಾಸಿಕ ನಿರ್ಧಾರ. ಯಾಕೆ ಗೊತ್ತಾ? ಈ ಹಿಂದೆ ಬಾಳಾಸಾಹೇಬ್ ಠಾಕ್ರೆ ಅವರು ಆದೇಶ ನೀಡುತ್ತಿದ್ದರು ಮತ್ತು ಸಂಸದರು ಅನುಸರಿಸುತ್ತಿದ್ದರು. ಈ ಬಾರಿ ಸಂಸದರ ಆದೇಶದಂತೆ ಪಕ್ಷವು ಅನುಸರಿಸುತ್ತದೆ. ಇದು ಶಿವಸೇನೆಯ ಆಂತರಿಕ ಪ್ರಜಾಪ್ರಭುತ್ವದ ಪರೀಕ್ಷೆಯಾಗಿದೆ ಎಂದು ಸಂಜಯ್ ನಿರುಪಮ್ ಟ್ವೀಟ್ ಮಾಡಿದ್ದಾರೆ.

    First published: