Maharashtra Politics: ರೆಬೆಲ್ ಶಾಸಕರ ವಿರುದ್ಧ ಕಾನೂನು ಅಸ್ತ್ರ ಪ್ರಯೋಗಿಸ್ತಾರಾ ಉದ್ಧವ್? ನಾಳೆ ಮತ್ತೊಂದು ಮಹತ್ವದ ಮೀಟಿಂಗ್

ತಮ್ಮ ಸ್ವಗೃಹ ಮಾತೋಶ್ರಿಯಲ್ಲಿ (Mathoshree) ಸಿಎಂ ಉದ್ಧವ್ ಠಾಕ್ರೆ (Uddhav Thackeray) ಮಹತ್ವದ ಮೀಟಿಂಗ್ (Meeting) ನಡೆಸಿದ್ದಾರೆ. ಎನ್‌ಸಿಪಿ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಸೇರಿದಂತೆ ಹಲವು ಪ್ರಮುಖರು ಈ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ರೆಬೆಲ್ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಉದ್ಧವ್​ ಠಾಕ್ರೆ

ಉದ್ಧವ್​ ಠಾಕ್ರೆ

  • Share this:
ಮುಂಬೈ: ಮಹಾರಾಷ್ಟ್ರ ರಾಜಕೀಯ (Maharashtra Politics) ಕ್ಷಣಕ್ಕೊಂದು ತಿರುವು ಪಡೆಯುತ್ತಿದೆ. ಉದ್ಧವ್‌ ಠಾಕ್ರೆ (Uddhav Thackeray) ವಿರುದ್ಧ ಸಮರ ಸಾರಿರುವ ಬಂಡಾಯ ಶಾಸಕರು (Rebel MLA’s) ಒಬ್ಬೊಬ್ಬರಾಗಿಯೇ ಏಕನಾಥ್ ಶಿಂಧೆ (Ekanath Shindhe) ಟೀಂ (Team) ಸೇರುತ್ತಿದ್ದಾರೆ. ಇತ್ತ ತಮ್ಮ ಸ್ವಗೃಹ ಮಾತೋಶ್ರಿಯಲ್ಲಿ (Mathoshree) ಸಿಎಂ ಉದ್ಧವ್ ಠಾಕ್ರೆ (Uddhav Thackeray) ಮಹತ್ವದ ಮೀಟಿಂಗ್ (Meeting) ನಡೆಸಿದ್ದಾರೆ. ಎನ್‌ಸಿಪಿ (NCP) ಮುಖ್ಯಸ್ಥ ಶರದ್ ಪವಾರ್ (Sharad Pawar) ಸೇರಿದಂತೆ ಹಲವು ಪ್ರಮುಖರು ಈ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದರು. ಈ ವೇಳೆ ರೆಬೆಲ್ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇನ್ನು ನಾಳೆ ಶಿವಸೇನೆಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ (National Executive Meeting) ನಡೆಯಲಿದ್ದು, ಅಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.

 ಉಪ ಸ್ಪೀಕರ್ ಪದಚ್ಯುತಿಗೆ ತಂತ್ರ

ಇಂದು ನಡೆದ ಶಿವಸೇನೆಯ ಬಂಡಾಯ ಶಾಸಕರ ಸಭೆಯಲ್ಲಿ ಡೆಪ್ಯುಟಿ ಸ್ಪೀಕರ್ ನರಹರಿ ಝಿರ್ವಾಲ್ ಅವರನ್ನು ಪದಚ್ಯುತಗೊಳಿಸಲು ನಿರ್ಣಯ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಅದರಂತೆ ಬಂಡಾಯ ಗುಂಪಿನ 46 ಶಾಸಕರ ಸಹಿಯೊಂದಿಗೆ ನಿರ್ಣಯ ಮಂಡನೆಗೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಕಾನೂನು ಕ್ರಮದ ಬಗ್ಗೆ ಶಿವಸೇನೆ ಚಿಂತನೆ

ಇತ್ತ ಉದ್ಧವ್ ಠಾಕ್ರೆ ಬೆಂಬಲಿತ ಶಿವಸೇನೆ ಶಾಸಕರು ಮಾತೋಶ್ರೀಯಲ್ಲಿ ಇಂದು ಮಹತ್ವದ ಮೀಟಿಂಗ್‌ ನಡೆಸಿದ್ದಾರೆ. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಸೇರಿದಂತೆ ಪ್ರಮುಖರು ಭಾಗಿಯಾಗಿದ್ದು, ಮಹತ್ವದ ಚರ್ಚೆ ನಡೆಸಿದ್ದಾರೆ. ಈ ವೇಳೆ ಬಂಡಾಯ ಶಾಸಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಇದನ್ನೂ ಓದಿ: Uddhav Thackeray: ಶಿವಸೇನೆ, ಠಾಕ್ರೆ ಹೆಸರು ಬಳಸದೇ ಗೆಲ್ಲುತ್ತೀರಾ? ಶಿಂಧೆಗೆ ಉದ್ಧವ್ ಠಾಕ್ರೆ ಖಡಕ್ ಪ್ರಶ್ನೆ

ನಾಳೆ ಶಿವಸೇನಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ

ಇನ್ನು ನಾಳೆ ಮಧ್ಯಾಹ್ನ 1:00 ಗಂಟೆಗೆ ನಡೆ ಶಿವಸೇನೆ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ರೆಬೆಲ್ ಶಾಸಕರ ವಿರುದ್ಧ ಕಾನೂನು ಕ್ರಮದ ಕೈಗೊಳ್ಳಬಹುದಾ ಎನ್ನುವ ಬಗ್ಗೆ ಚರ್ಚೆ ನಡೆಯಲಿದೆ. 16 ಬಂಡಾಯ ಶಿವಸೇನೆ ಶಾಸಕರಿಗೆ ನಾಳೆ ಅನರ್ಹತೆ ನೋಟಿಸ್ ಕಳುಹಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಏಕನಾಥ್ ಶಿಂಧೆ ಟೀಂನಲ್ಲಿ 50ಕ್ಕೂ ಹೆಚ್ಚು ಶಾಸಕರು

ಇನ್ನು ಇತ್ತೀಚಿನ ಬೆಳವಣಿಗೆಗಳು ಬಂಡಾಯ ನಾಯಕ ಏಕನಾಥ್ ಶಿಂಧೆ ಅವರು ಸರ್ಕಾರ ಬೀಳಿಸಲು ಅಗತ್ಯವಾದ 37 ಶಾಸಕರ ನಿರ್ಣಾಯಕ ಸಂಖ್ಯೆಯನ್ನು ತಲುಪಿದ್ದಾರೆ ಎಂದು ಹೇಳಲಾಗಿದೆ. ಶಿಂಧೆ ತಂಡದ ಒಟ್ಟು ಬಲ ಈಗ 42 ಆಗಿದೆ. ಶಿವಸೇನೆಯ 40 ಸೇರಿದಂತೆ 50 ಕ್ಕೂ ಹೆಚ್ಚು ಶಾಸಕರು ತಮ್ಮನ್ನು ಬೆಂಬಲಿಸುತ್ತಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ.

ಇದನ್ನೂ ಓದಿ: Maharashtra Politics: 'ಮಹಾ' ರಾಜಕೀಯ ಬಿಕ್ಕಟ್ಟಿಗೆ ಕಾರಣಗಳೇನು? ಮುಂದೆ 'ಲಗಾಟಿ' ಹೊಡೆಯುತ್ತಾ ಅಘಾಡಿ ಸರ್ಕಾರ?

ಶಿವಸೇನೆ, ಠಾಕ್ರೆ ಹೆಸರು ಬಳಸದೇ ಗೆಲ್ಲುತ್ತೀರಾ?

ಈ ಮಧ್ಯೆ ಬಂಡಾಯ ಶಾಸಕರಿಗೆ ಎಚ್ಚರಿಕೆ ನೀಡಿರುವ ಸಿಎಂ ಉದ್ಧವ್ ಠಾಕ್ರೆ, ನಾನು ಸಿಎಂ ಸರ್ಕಾರಿ ನಿವಾಸವನ್ನು ತೊರೆದಿದ್ದೇನೆ ಹೊರತು ನನ್ನ ಗುರಿಯಿಂದ  ಹಿಂದೆ ಸರಿದಿಲ್ಲ ಅಂತ ಹೇಳಿದ್ದಾರೆ. ತಮ್ಮ ಬೆಂಬಲಿಗ ಶಾಸಕರನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಅವರು, ಶಿವಸೇನಾ ತ್ಯಜಿಸುವುದಕ್ಕಿಂತ ಪ್ರಾಣ ಕೊಡುತ್ತೇವೆ ಎಂದು ನನ್ನ ಮುಂದೆ ಬಡಾಯಿ ಕೊಚ್ಚಿದ್ದವರೆಲ್ಲ ಇಂದು ಅವರೊಂದಿಗೆ ಓಡಿಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಏಕನಾಥ್ ಶಿಂಧೆ ವಿರುದ್ಧ ಗುಡುಗಿದ ಉದ್ಧವ್ ಠಾಕ್ರೆ, "ಶಿವಸೇನೆ ಮತ್ತು ಠಾಕ್ರೆ ಹೆಸರು ಬಳಸದೆ ನೀವು ಎಷ್ಟು ದೂರ ಹೋಗಲು ಸಾಧ್ಯ?" ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
Published by:Annappa Achari
First published: