ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ಠಾಕ್ರೆ ಹೇಳಿಕೆಗೆ ಕಿಡಿ: ನಾಳೆಯಿಂದ ಶಿರಡಿ ಬಂದ್

ಮಹರಾಷ್ಟ್ರ ಸಿಎಂ ಉದ್ದವ್​ ಠಾಕ್ರೆ ಕಳೆದ ವಾರ ಪರ್ಭಾನಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಸಭೆ ನಡೆಸಿದ್ದರು. ಈ ವೇಳೆ, ಪತ್ರಿ ಸಾಯಿಬಾಬಾರ ಜನ್ಮಸ್ಥಳವಾಗಿರುವುದರಿಂದ ಅದನ್ನು ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಪತ್ರಿ ಅಭಿವೃದ್ಧಿಗೆ 100 ಕೋಟಿ ರೂ.ನೀಡಲಾಗುವುದು ಎಂದು ಘೋಷಿಸಿದ್ದರು.

Latha CG | news18-kannada
Updated:January 18, 2020, 3:10 PM IST
ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ಠಾಕ್ರೆ ಹೇಳಿಕೆಗೆ ಕಿಡಿ: ನಾಳೆಯಿಂದ ಶಿರಡಿ ಬಂದ್
ಮಹರಾಷ್ಟ್ರ ಸಿಎಂ ಉದ್ದವ್​ ಠಾಕ್ರೆ ಕಳೆದ ವಾರ ಪರ್ಭಾನಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಸಭೆ ನಡೆಸಿದ್ದರು. ಈ ವೇಳೆ, ಪತ್ರಿ ಸಾಯಿಬಾಬಾರ ಜನ್ಮಸ್ಥಳವಾಗಿರುವುದರಿಂದ ಅದನ್ನು ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಪತ್ರಿ ಅಭಿವೃದ್ಧಿಗೆ 100 ಕೋಟಿ ರೂ.ನೀಡಲಾಗುವುದು ಎಂದು ಘೋಷಿಸಿದ್ದರು.
  • Share this:
ಶಿರಡಿ(ಜ.18): ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ವಿವಾದ ಭುಗಿಲೆದ್ದಿರುವ ಹಿನ್ನೆಲೆ, ನಾಳೆಯಿಂದ ಅನಿರ್ದಿಷ್ಟಾವಧಿ ಸಮಯದವರೆಗೆ ಶಿರಡಿ ಬಂದ್​​ಗೆ ಕರೆ ನೀಡಲಾಗಿದೆ. ಸಾಯಿಬಾಬಾರ ಜನ್ಮ ಸ್ಥಳ ಪರ್ಭಾನಿಯ ಪತ್ರಿ ಎಂದು ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ನೀಡಿರುವ ಹೇಳಿಕೆ ಭಾರೀ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಸಿಎಂ ಹೇಳಿಕೆ ವಿರುದ್ಧ ಸಿಡಿದೆದ್ದಿರುವ ಸಾಯಿಬಾಬಾ ಸಮಾಧಿ ಆಡಳಿತ ಮಂಡಳಿ ನಾಳೆಯಿಂದ ಶಿರಡಿ ಬಂದ್​ ಮಾಡಲು ನಿರ್ಧರಿಸಿದೆ.

"ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ವದಂತಿಗಳು ಹಬ್ಬಿರುವ ಹಿನ್ನೆಲೆ,
ನಾವು ಜನವರಿ 19ರಿಂದ ಶಿರಡಿ ಬಂದ್ ಮಾಡುತ್ತಿದ್ದೇವೆ. ಇಂದು ಸಂಜೆ ಗ್ರಾಮಸ್ಥರ ಜೊತೆ ಸಭೆ ನಡೆಸಲಿದ್ದೇವೆ. ಒಂದು ವೇಳೆ ಭಕ್ತರು ಶಿರಡಿಗೆ ಆಗಮಿಸಿದರೆ, ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ,"ಎಂದು ಸಾಯಿಬಾಬಾ ಸಂಸ್ಥಾನ ಟ್ರಸ್ಟ್​​​ನ ಬಿ.ವಾಕ್ಚುರೆ ತಿಳಿಸಿದ್ದಾರೆ.

ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಕೋತಿ; ಮಂಗನ ಕಾಯಿಲೆ ಭೀತಿಯಲ್ಲಿ ಅಂಕೋಲಾ ಜನರು

"ಸಿಎಂ ಉದ್ದವ್​ ಠಾಕ್ರೆ ವಿರುದ್ಧ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಅವರು ಸಾಯಿಬಾಬಾನ ಹುಟ್ಟು ಸ್ಥಳವನ್ನು ಪರ್ಭಾನಿಯ ಪತ್ರಿ ಎಂದು ಹೇಳಿದ್ದಾರೆ. ಆದರೆ ಸಾಯಿಬಾಬಾ ಜನ್ಮಸ್ಥಳವನ್ನು ತಿಳಿಸುವ ಯಾವುದೇ ದಾಖಲೆಗಳಿಲ್ಲ. ಸಾಯಿಬಾಬಾ ಕೂಡ ಅವರ ಜನ್ಮಸ್ಥಳ, ಧರ್ಮ ಮತ್ಯಾವುದರ ಬಗ್ಗೆಯೂ ಯಾವುದೇ ಮಾಹಿತಿಯನ್ನು ನೀಡಿಲ್ಲ," ಎಂದು ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್​ನ ಮಾಜಿ ಟ್ರಸ್ಟೀ ಕೈಲಾಸಬಾಪು ಕೋಟೆ ಹೇಳೀದ್ದಾರೆ.

ಸಿಎಂ ಠಾಕ್ರೆ ಸಾಯಿಬಾಬಾ ಜನ್ಮಸ್ಥಳದ ಬಗ್ಗೆ ಹೊಂದಿರುವ ನಿಲುವನ್ನು ತೆಗೆದುಹಾಕುವವರೆಗೆ ಅವರ ವಿರುದ್ಧ ಶಾಂತಿಯುತ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುತ್ತೇವೆ ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.

ಮಗಳಿಗೆ ಲೈಂಗಿಕ ಕಿರುಕುಳವಾಗಿದೆ ಎಂದು ದೂರು ನೀಡಿದ ತಾಯಿಯನ್ನೇ ಕೊಂದ ಕಾಮುಕರುಮಹರಾಷ್ಟ್ರ ಸಿಎಂ ಉದ್ದವ್​ ಠಾಕ್ರೆ ಕಳೆದ ವಾರ ಪರ್ಭಾನಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಸಭೆ ನಡೆಸಿದ್ದರು. ಈ ವೇಳೆ, ಪತ್ರಿ ಸಾಯಿಬಾಬಾರ ಜನ್ಮಸ್ಥಳವಾಗಿರುವುದರಿಂದ ಅದನ್ನು ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಅಭಿವೃದ್ಧಿಪಡಿಸಲಾಗುವುದು. ಜೊತೆಗೆ ಪತ್ರಿ ಅಭಿವೃದ್ಧಿಗೆ 100 ಕೋಟಿ ರೂ.ನೀಡಲಾಗುವುದು ಎಂದು ಘೋಷಿಸಿದ್ದರು.
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading