Facebook​​ನಲ್ಲಿ ಶುರುವಾಯ್ತು ಲವ್ವಿಡವ್ವಿ: ಗಂಡ, ಮಕ್ಕಳಿದ್ರೂ ಪ್ರೀತಿಗೆ ಬಿದ್ದ ಸಲಿಂಗಿಗಳು

ಹಲವು ವರ್ಷಗಳ ಕಾಲ ಗಂಡನೊಟ್ಟಿಗೆ ಸುಖ ಸಂಸಾರ ನಡೆಸಿದ ವಿವಾಹಿತ ಮಹಿಳೆಯರಿಬ್ಬರು ಇದೀಗ ಪರಸ್ಪರ ಪ್ರೀತಿಸಿ ಸಹಬಾಳ್ವೆ ನಡೆಸಲು ಮುಂದಾಗಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಫೇಸ್​​ಬುಕ್ (Facebook)​ ಮೂಲಕ ಪ್ರೀತಿಗೆ ಬೀಳುವುದು ಹೊಸ ಪ್ರಕರಣವಲ್ಲ. ಆದರೆ, ಇಲ್ಲಿ ನಡೆದಿರುವ ಈ ಫೇಸ್​ ಬುಕ್​ ಪ್ರೀತಿ (Love) ಅನೇಕರ ಗಮನ ಸೆಳೆದಿದೆ. ಕಾರಣ ಇದು ಮಾಮೂಲು ಯುವಕ ಮತ್ತು ಯುವತಿಯ ಪ್ರೇಮ ಕಥೆಯಲ್ಲ. ಹುಡುಗಿ ಹೆಸರಲ್ಲಿ ಯುವಕರು ಚಾಟ್​ ಮಾಡಿ ಮೋಸ ಹೋದ ಕಥೆಯೂ ಅಲ್ಲ. ಇದು ಇಬ್ಬರು ವಿವಾಹಿತರ ನಡುವೆ ಹುಟ್ಟಿದ ಪ್ರೇಮ ಕಾವ್ಯ. ಇಬ್ಬರು ಸಲಿಂಗ ಯುವತಿಯರ (Two women Fall in Love) ನಡುವೆ ಈ ಅನುರಾಗ ಮೂಡಿದ್ದರೆ ಅದಕ್ಕೆ ಕಾನೂನು ಕೂಡ ಅವಕಾಶ ನೀಡುತ್ತದೆ. ಆದರೆ, ಇದು ಕೊಂಚ ಭಿನ್ನವಾಗಿದೆ. ಕಾರಣ ಇಲ್ಲಿ ಪ್ರೀತಿಗೆ ಬಿದ್ದ ಇಬ್ಬರು ಯುವತಿಯರು ವಿವಾಹಿತರು. ಗಂಡ, ಮಕ್ಕಳನ್ನು ಹೊಂದಿದ್ದವರು. ಹಲವು ವರ್ಷಗಳ ಕಾಲ ಗಂಡನೊಟ್ಟಿಗೆ ಸುಖ ಸಂಸಾರ ನಡೆಸಿದ ವಿವಾಹಿತ ಮಹಿಳೆಯರಿಬ್ಬರು ಇದೀಗ ಪರಸ್ಪರ ಪ್ರೀತಿಸಿ ಸಹಬಾಳ್ವೆ ನಡೆಸಲು ಮುಂದಾಗಿದ್ದಾರೆ

    ಫೇಸ್​ಬುಕ್​ ಮೂಲಕ ಪರಿಚಯ

    ಶಿಮ್ಲಾದ ಮಹಿಳೆಗೆ ಫೇಸ್​ ಬುಕ್​ ಮೂಲಕ ಭೋಪಾಲ್​ ಮಹಿಳೆ ಪರಿಚಯವಾಗಿದ್ದಾರೆ. ಬಿಡುವಿನ ವೇಳೆ ಹರಟುತ್ತಿದ್ದ ಇವರು ಪರಸ್ಪರ ಒಬ್ಬರನ್ನು ಒಬ್ಬರು ಭೇಟಿಯಾಗಲು ನಿರ್ಧರಿಸಿದ್ದಾರೆ. ಒಂದು ದಿನ ಶಿಮ್ಲಾದಿಂದ ಬಂದ ಮಹಿಳೆ ಭೋಪಾಲ್​ನಲ್ಲಿ ಸ್ನೇಹಿತೆಯನ್ನು ಮುಖಾಮುಖಿ ಭೇಟಿಯಾಗಿ ದಿನ ಕಳೆದಿದ್ದಾರೆ. ಇದಾದ ಬಳಿಕ ಇವರಿಬ್ಬರ ನಡುವೆ ಅದು ಏನು ಆಯಿತೋ ತಿಳಿಯಲು ಪ್ರೇಮಪಾಶಕ್ಕೆ ಸಿಲುಕಿದ್ದಾರೆ. ಇದೀಗ ಇಬ್ಬರು ಗಾಜಿಯಾಬಾದ್​ನಲ್ಲಿ ಮದುವೆ ಕೂಡ ಆಗಿ ಕುಟುಂಬಕ್ಕೆ ಶಾಕ್ ನೀಡಿದ್ದಾರೆ.

    ಗಂಡ ಮಕ್ಕಳಿದ್ರೂ ಮದುವೆಯಾದ ಮಹಿಳೆಯರು
    ಶಿಮ್ಲಾ ಮೂಲದ ಮಹಿಳೆಗೆ ಇಬ್ಬರು ಮಕ್ಕಳಿದ್ದರೆ, ಭೋಪಾಲ್​ ಮೂಲದ ಮಹಿಳೆ ಒಂದು ಮಗುವಿನ ತಾಯಿ. ಶಿಮ್ಲಾದ ಮಹಿಳೆ ಗಂಡನನ್ನು ತೊರೆದಿದ್ದರೆ, ಇತ್ತ ಭೋಪಾಲ್​ ಮಹಿಳೆ ಕೂಡ ಪತಿಯಿಂದ ದೂರಾಗಿ ಏಕಾಂಗಿ ಜೀವನ ಸಾಗಿಸುತ್ತಿದ್ದರು.

    ಇದನ್ನು ಓದಿ: ರಸ್ತೆಯ ಮೇಲೆ ಮಲಗಿದ್ದ ಕರುವಿನ ಮೇಲೆ ನಾಲ್ವರಿಂದ ಅತ್ಯಾಚಾರ

    ಹೆಂಡತಿ ಕಾಣುತ್ತಿಲ್ಲ ಎಂದು ಓಡಿಬಂದ ಪತಿ

    ಮಹಿಳೆಯೊಬ್ಬರು ನಾಪತ್ತೆಯಾಗಿರುವ ವಿಚಾರ ತಿಳಿದ ಕೆಲ ಸಂಘಟನೆಗಳು ಪೊಲೀಸರನ್ನು ಸಂಪರ್ಕಿಸಿದ್ದವು. ಕಾಣೆಯಾದ ಮಹಿಳೆ ಭೋಪಾಲ್‌ನ ನಿಶಾತ್‌ಪುರದಲ್ಲಿ ವಾಸಿಸಲು ಆರಂಭಿಸಿದ್ದಾಳೆ ಎಂದು ಶಿಮ್ಲಾ ಪೊಲೀಸರಿಗೆ ತಿಳಿದು ಬಂದಿತು. ಮಹಿಳೆಯ ಪತಿ ಕೂಡ ಆಕೆ ಕಾಣುತ್ತಿಲ್ಲ ಎಂದು ಶಿಮ್ಲಾದಿಂದ ಭೋಪಾಲ್‌ಗೆ ಬಂದಿದ್ದಾರೆ. ಆದರೆ, ಇಲ್ಲಿ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಯಾವುದೇ ಒತ್ತಡ ಇಲ್ಲ ಎಂದ ಮಹಿಳೆಯರು

    ಈ ವಿಚಾರ ತಿಳಿಯುತ್ತಿದ್ದಂತೆ ಇಬ್ಬರು ಮಹಿಳೆಯರಿಗೆ ಭೋಪಾಲ್‌ನ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಮಹಿಳಾ ಅಪರಾಧ ತಡೆಗೆ ನಿರ್ಮಿಸಲಾಗಿರುವ ಉರ್ಜಾ ಡೆಸ್ಕ್‌ನ ಅಧಿಕಾರಿಗಳು ಸಮಾಲೋಚನೆ ನಡೆಸಿದ್ದಾರೆ.

    ಇದನ್ನು ಓದಿ: ಮಂಗಳೂರು -ಮಡ್ಗಾವ್ ಸೇರಿದಂತೆ ಅನೇಕ ರೈಲು ಸಂಚಾರದಲ್ಲಿ ವ್ಯತ್ಯಾಯ; ಇಲ್ಲಿದೆ ವಿವರ

    ಪ್ರಕರಣ ಸುಖಾಂತ್ಯ

    ಈ ವೇಳೆ ಮಾತನಾಡಿರುವ ಇಬ್ಬರು ಮಹಿಳೆಯರು, ತಮ್ಮ ಸ್ವ ಇಚ್ಚೆಯಿಂದ ಇಬ್ಬರು ಒಟ್ಟಿಗೆ ಜೀವಿಸುತ್ತಿದ್ದೇವೆ. ನಮಗೆ ಯಾವುದೇ ಒತ್ತಡ ಇಲ್ಲ. ಕಳೆದ 45 ದಿನಗಳಿಂದ ನಾವು ಜೊತೆಯಲ್ಲಿದ್ದೇವೆ ಎಂದಿದ್ದಾರೆ.

    ಇನ್ನು ಪ್ರಕರಣ ಕುರಿತು ಮಾತನಾಡಿರುವ ಹಿರಿಯ ಪೊಲೀಸ್​ ಅಧಿಕಾರಿ ವಿನೀತ್​ ಕಪೂರ್​, ಇಬ್ಬರು ಮಹಿಳೆಯರು ವಯಸ್ಕರಾಗಿದ್ದಾರೆ. ಯಾವುದೇ ಒತ್ತಡ ಅವರಿಗೆ ಇಲ್ಲ ಎಂಬುದು ತಿಳಿದು ಬಂದಿದೆ. ಫೇಸ್​ಬುಕ್​ ಮೂಲಕ ಇಬ್ಬರು ಪರಿಚಯವಾಗಿದ್ದು, ಇಬ್ಬರು ಒಟ್ಟಿಗೆ ಜೀವಿಸಲು ನಿರ್ಧರಿಸಿದ್ದಾರೆ. ಸಮಾಲೋಚನೆ ಬಳಿಕ ಶಿಮ್ಲಾ ಮೂಲದ ಮಹಿಳೆ ತನ್ನ ಗಂಡನೊಂದಿಗೆ ವಾಸ ಮಾಡಲು ಒಪ್ಪಿಗೆ ನೀಡಿದ್ದಾರೆ. ಪ್ರಕರಣದಲ್ಲಿ ಯಾರ ತಪ್ಪು ಕಂಡು ಬಂದಿಲ್ಲ. ಈ ಹಿನ್ನಲೆ ನಾವು ಭೋಪಾಲ್​ ಮೂಲದ ಮಹಿಳೆ ವಿರುದ್ಧ ಕೂಡ ಪ್ರಕರಣ ದಾಖಲಿಸಿಲ್ಲ ಎಂದಿದ್ದಾರೆ.
    Published by:Seema R
    First published: