ರಾಜ್​ ಕುಂದ್ರಾ ಪ್ರಕರಣ: ಮೊದಲ ಬಾರಿಗೆ ಮೌನ ಮುರಿದ ಶಿಲ್ಪಾ ಶೆಟ್ಟಿ: ಕುಟುಂಬದ ಗೌಪ್ಯತೆ ಗೌರವಿಸಿ ಎಂದ ನಟಿ

“ಒಂದು ಕುಟುಂಬವಾಗಿ, ನಾವು ಅವಶ್ಯವಿರುವ ಎಲ್ಲ ಕಾನೂನು ಪರಿಹಾರಗಳನ್ನು ಎದುರು ನೋಡುತ್ತಿದ್ದೇವೆ. ಆದರೆ, ಅಲ್ಲಿಯವರೆಗೆ ನಾನು ವಿನಮ್ರವಾಗಿ ಎಲ್ಲರಲ್ಲಿಯೂ ವಿನಂತಿಸುತ್ತೇನೆ - ವಿಶೇಷವಾಗಿ ತಾಯಿಯಾಗಿ - ನನ್ನ ಮಕ್ಕಳ ಸಲುವಾಗಿ ನಮ್ಮಕುಟುಂಬದ  ಗೌಪ್ಯತೆಯನ್ನು ಗೌರವಿಸಿ.

ನಟಿ ಶಿಲ್ಪಾ ಶೆಟ್ಟಿ- ರಾಜ್​ ಕುಂದ್ರಾ

ನಟಿ ಶಿಲ್ಪಾ ಶೆಟ್ಟಿ- ರಾಜ್​ ಕುಂದ್ರಾ

 • Share this:
  ಶಿಲ್ಪಾ ಶೆಟ್ಟಿ ತನ್ನ ಪತಿ ರಾಜ್ ಕುಂದ್ರಾ ವಿರುದ್ಧದ ಅಶ್ಲೀಲ ಚಿತ್ರ ಪ್ರಕರಣ ಕುರಿತಂತೆ ಮೊದಲ ಬಾರಿಗೆ ಮೌನ ಮುರಿದಿದ್ದು ಪ್ರತಿಕ್ರಿಯೆ ನೀಡಿದ್ದಾರೆ. ಕುಟುಂಬದ ಗೌಪ್ಯತೆಯನ್ನು ಗೌರವಿಸಬೇಕೆಂದು ಪ್ರತಿಯೊಬ್ಬರನ್ನು ಕೇಳುತ್ತೇನೆ ಎಂದು ನಟಿ ತನ್ನ ಹೇಳಿಕೆಯನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

  ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಲು ಶಿಲ್ಪಾ ಶೆಟ್ಟಿ ನಿರಾಕರಿಸಿದ್ದು, ರಾಜ್ ಕುಂದ್ರಾ ಅವರನ್ನು ಜುಲೈ 19 ರಂದು 'ಅಶ್ಲೀಲ' ಚಲನಚಿತ್ರಗಳನ್ನು ನಿರ್ಮಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.

  ಟ್ವಿಟರ್‌ನಲ್ಲಿ ಶಿಲ್ಪಾ ಶೆಟ್ಟಿ ಹೀಗೆ ಹೇಳಿದ್ದು , "ಹೌದು! ಕಳೆದ ಹಲವಾರು ದಿನಗಳಿಂದ ನಮಗೆ ಪ್ರತಿದಿನವೂ ಸವಾಲು ಎದುರಾಗುತ್ತಿದೆ. ಪ್ರತಿಯೊಂದು ರಂಗದಲ್ಲೂ ಈ ಸವಾಲನ್ನೂ ಎದುರಿಸಬೇಕಾದ ಪರಿಸ್ಥಿತಿಯಲ್ಲಿ ನಾನಿದ್ದೇನೆ. ಸಾಕಷ್ಟು ವದಂತಿಗಳು ಮತ್ತು ಆರೋಪಗಳು ಕೇಳಿ ಬಂದಿವೆ. ಮಾಧ್ಯಮಗಳಿಂದ, ಹಿತೈಷಿಗಳಿಂದ ಸಾಕಷ್ಟು ಒತ್ತಡ ಎದುರಿಸಬೇಕಾದ ಪರಿಸ್ಥಿತಿಗೆ ನಾವು ತಲುಪಬೇಕಾಯಿತು. ಬಹಳಷ್ಟು ಟ್ರೋಲಿಂಗ್/ಪ್ರಶ್ನೆಗಳು ನನಗೆ ಎದುರಾಗಿದೆ ... ಇದು ನನಗೆ ಮಾತ್ರವಲ್ಲ ನನ್ನ ಕುಟುಂಬಕ್ಕೂ ಕೂಡ ಇದೇ ರೀತಿಯ ಸವಾಲು ಎದುರಾಗಿದೆ.

  ನನ್ನ ನಿಲುವು ಏನೆಂದರೇ ... ಇದಕ್ಕಿಂತ ಹೆಚ್ಚಾಗಿ ನಾನು ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ, ಈ ಪ್ರಕರಣದಲ್ಲಿ ಹಾಗೆ ಮಾಡುವುದಕ್ಕೆ ನನಗೆ ದಾರಿ ತೋರುತ್ತಿಲ್ಲ, ಇದು ಪೂರ್ವಾಗ್ರಹದಿಂದ ಕೂಡಿರುತ್ತದೆ, ಆದ್ದರಿಂದ ದಯವಿಟ್ಟು ನನ್ನ ವಿರುದ್ದ ಸುಳ್ಳು ಆರೋಪ ಮಾಡುವುದನ್ನು ನಿಲ್ಲಿಸಿ. ನಾನು ಸೆಲೆಬ್ರಿಟಿಯಾದ ಕಾರಣ "ಯಾರನ್ನೂ ದೂರುವುದಿಲ್ಲ, ಹಾಗೂ ಇದರ ಬಗ್ಗೆ ವಿವರಣೆ ನೀಡುವುದಿಲ್ಲ" ಇದು ನನ್ನ ಅಚಲ ನಂಬಿಕೆಯಾಗಿದೆ ಎಂದು ಪುನರುಚ್ಚರಿಸಿದ್ದಾರೆ. ನಾನು ಹೇಳುವುದೇನೆಂದರೆ, ಇನ್ನೂ ತನಿಖೆ ಪ್ರಗತಿಯಲ್ಲಿ ಇರುವ ಕಾರಣ ನೋಡೋಣ ಮುಂದೆ ಏನಾಗುತ್ತದೆ ಎಂದು, ಜೊತೆಗೆ ನನಗೆ ಮುಂಬೈ ಪೊಲೀಸ್ ಮತ್ತು ಭಾರತೀಯ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ. ಈ ರೀತಿಯಾಗಿ ಶಿಲ್ಪಾ ಶೆಟ್ಟಿ ಟ್ವೀಟ್​ ಮೂಲಕ ತಿಳಿಸಿದ್ದಾರೆ.

  ಶಿಲ್ಪಾ ಶೆಟ್ಟಿ ಅವರ ಮುಂದುವರೆದ ಹೇಳಿಕೆಯಂತೆ, “ಒಂದು ಕುಟುಂಬವಾಗಿ, ನಾವು ಅವಶ್ಯವಿರುವ ಎಲ್ಲ ಕಾನೂನು ಪರಿಹಾರಗಳನ್ನು ಎದುರು ನೋಡುತ್ತಿದ್ದೇವೆ. ಆದರೆ, ಅಲ್ಲಿಯವರೆಗೆ ನಾನು ವಿನಮ್ರವಾಗಿ ಎಲ್ಲರಲ್ಲಿಯೂ ವಿನಂತಿಸುವುದೇನೆಂದರೇ - ವಿಶೇಷವಾಗಿ ತಾಯಿಯಾಗಿ - ನನ್ನ ಮಕ್ಕಳ ಸಲುವಾಗಿ ನಮ್ಮ ಕುಟುಂಬದ  ಗೌಪ್ಯತೆಯನ್ನು ಗೌರವಿಸಿ ಮತ್ತು ಘಟನೆಯ ಅಥವಾ ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅರೆಬೆಂದ ಮಾಹಿತಿಯ ಬಗ್ಗೆ ಪ್ರತಿಕ್ರಿಯಿಸಬೇಡಿ ಎಂದು ವಿನಂತಿಸುತ್ತೇನೆ’’, ಎಂದಿದ್ದಾರೆ.

  ’ನಾನು ನನ್ನ ನೆಲದ ಕಾನೂನನ್ನು ಗೌರವಿಸುವ, ಪಾಲಿಸುವ ಭಾರತೀಯ ಪ್ರಜೆ ಮತ್ತು ಕಳೆದ 29 ವರ್ಷಗಳಿಂದ ಕಠಿಣ ಪರಿಶ್ರಮದ ಮೇಲೆ ನನ್ನ ವೃತ್ತಿ ಜೀವನವನ್ನು ಕಟ್ಟಿಕೊಂಡಿದ್ದೇನೆ. ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ ಮತ್ತು ನಾನು ಯಾರನ್ನೂ ನನ್ನ ವೃತ್ತಿ ಜೀವನದಲ್ಲಿ ಘಾಸಿಗೊಳಿಸಿಲ್ಲ. ಆದ್ದರಿಂದ, ಮುಖ್ಯವಾಗಿ, ಈ ಸಮಯದಲ್ಲಿ ಗೌಪ್ಯತೆಗಾಗಿ ನನ್ನ ಕುಟುಂಬದ ಮತ್ತು 'ನನ್ನ ಹಕ್ಕನ್ನು' ಗೌರವಿಸುವಂತೆ ನಾನು ವಿನಂತಿಸುತ್ತೇನೆ. ನಾವು ಮಾಧ್ಯಮದವರು ನಡೆಸುವ ವಿಚಾರಣೆಗೆ ಅರ್ಹರಲ್ಲ. ದಯವಿಟ್ಟು ಕಾನೂನಾತ್ಮಕವಾಗಿ ಯಾವುದೇ ಪ್ರಶ್ನೆ ಎದುರಾದರೂ ಅದಕ್ಕೆ ಉತ್ತರಿಸುವೆ, ಎಂದಿದ್ದಾರೆ.

  ಸತ್ಯಮೇವ ಜಯತೆ! ಕೃತಜ್ಞತೆಯೊಂದಿಗೆ, ಶಿಲ್ಪಾ ಶೆಟ್ಟಿ ಕುಂದ್ರಾ.


  ಇದನ್ನೂ ಓದಿ: ಮುಂಬೈ ಹೌಸಿಂಗ್ ಸೊಸೈಟಿ ಮುಂದೆ ‘ನೋ ಕಿಸ್ಸಿಂಗ್ ಝೋನ್ ಬೋರ್ಡ್‌..! : ಮುತ್ತು ಕೊಟ್ಟರೆ ಹುಷಾರ್ ಎಂದ ನಿವಾಸಿಗಳು

  ನಟಿ ಈ ಹಿಂದೆ ಬಾಂಬೆ ಹೈಕೋರ್ಟ್‌ಗೆ ಕೆಲವು ಸುದ್ದಿ ಸಂಸ್ಥೆಗಳು ಮತ್ತು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನಂತಹ ಸಾಮಾಜಿಕ ಜಾಲತಾಣಗಳ ವಿರುದ್ಧ "ಮಾನಹಾನಿಯಾಗುವಂತಹ" ವಿಷಯ ಪ್ರಕಟಿಸಿದ್ದಕ್ಕೆ ವಿರುದ್ಧವಾಗಿ ಅರ್ಜಿ ಸಲ್ಲಿಸಿದ್ದರು. ತನ್ನ ಮನವಿಯಲ್ಲಿ ಹೀಗೆ ಹೇಳಿದ್ದ ಶಿಲ್ಪಾ ಶೆಟ್ಟಿ, ಕೆಲವು ಮಾಧ್ಯಮ ವೇದಿಕೆಗಳು "ನನ್ನ ಖ್ಯಾತಿಯನ್ನು ಹಾಳು ಮಾಡುತ್ತಿವೆ". ಸುದ್ದಿಯನ್ನು ಉದ್ದೇಶಪೂರ್ವಕವಾಗಿ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ, ಇದರಿಂದ  ಅವರ ಓದುಗರ ಸಂಖ್ಯೆ ಮತ್ತು ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ ಎಂದು ಹೇಳಿದ್ದರು.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: