ಆಕೆಯ ತಲೆಯಲ್ಲಿ ಮೆದುಳೇ ಇಲ್ಲ; ಮಹಿಳಾ ಐಎಎಸ್​ ಅಧಿಕಾರಿಯನ್ನು ಹೀಯಾಳಿಸಿ ವಿವಾದಕ್ಕೀಡಾದ ಕೇರಳ ಶಾಸಕ

ರೇಣು ರಾಜ್​ ಅವರ ಬೆಂಬಲಕ್ಕೆ ನಿಂತಿರುವ ಕೇರಳದ ಕಂದಾಯ ಸಚಿವ ಇ. ಚಂದ್ರಶೇಖರನ್, ಉಪ ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು ಸರಿಯಾಗಿಯೇ ಇದೆ. ಆಕೆ ಕಾನೂನು ಪ್ರಕಾರವಾಗಿಯೇ ಕ್ರಮ ಕೈಗೊಂಡಿದ್ದಾರೆ. ಹಾಗಿದ್ದಮೇಲೆ ನಾವು ಆಕೆಗೆ ಬೆಂಬಲ ನೀಡಲೇಬೇಕು ಎಂದು ಹೇಳಿದ್ದಾರೆ.

sushma chakre | news18
Updated:February 11, 2019, 8:34 AM IST
ಆಕೆಯ ತಲೆಯಲ್ಲಿ ಮೆದುಳೇ ಇಲ್ಲ; ಮಹಿಳಾ ಐಎಎಸ್​ ಅಧಿಕಾರಿಯನ್ನು ಹೀಯಾಳಿಸಿ ವಿವಾದಕ್ಕೀಡಾದ ಕೇರಳ ಶಾಸಕ
ಎಸ್​. ರಾಜೇಂದ್ರನ್
  • News18
  • Last Updated: February 11, 2019, 8:34 AM IST
  • Share this:
ಇಡುಕ್ಕಿ (ಫೆ.11): ಮಹಿಳಾ ಐಎಎಸ್​ ಅಧಿಕಾರಿಗೆ ಅವಾಚ್ಯ ಶಬ್ದಗಳನ್ನು ಬಳಸಿ, ಆಕೆಗೆ ತಲೆಯಲ್ಲಿ ಮೆದುಳೇ ಇಲ್ಲ ಎಂದು ಸಾರ್ವಜನಿಕವಾಗಿ ಹೀಯಾಳಿಸುವ ಮೂಲಕ ಕೇರಳದ ಸಿಪಿಐಎಂ ಶಾಸಕ ವಿವಾದಕ್ಕೀಡಾಗಿದ್ದಾರೆ.

ಕೇರಳದ ಮುನ್ನಾರ್​ ಘಟ್ಟ ಪ್ರದೇಶದಲ್ಲಿ ನಿರ್ಮಾಣವಾಗುತ್ತಿದ್ದ ಅನಧಿಕೃತ ಶಾಪಿಂಗ್​ ಕಾಂಪ್ಲೆಕ್ಸ್​ ಕಾಮಗಾರಿಯನ್ನು ಸ್ಥಗಿತಗೊಳಿಸಲು ಮುಂದಾದ ಮಹಿಳಾ ಐಎಎಸ್​ ಅಧಿಕಾರಿಗೆ ಸಾರ್ವಜನಿಕವಾಗಿಯೇ ದೇವಿಕುಲಂ ಶಾಸಕ ಎಸ್. ರಾಜೇಂದ್ರನ್ ನಿಂದಿಸಿದ್ದು, ನಿಮ್ಮ ತಲೆಯಲ್ಲೇನಾದರೂ ಮೆದುಳು ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಆಕಾಶದಲ್ಲಿ ಹಾರಾಡುವಾಗಲೇ ವಿಮಾನದ ಬಾಗಿಲು ತೆರೆದುಕೊಂಡಿತು!

ಕೇರಳದ ಉಪ ಜಿಲ್ಲಾಧಿಕಾರಿ ಡಾ. ರೇಣು ರಾಜ್​ ಅವರನ್ನು ಸಿಪಿಐಎಂ ಶಾಸಕ ಎಸ್​. ರಾಜೇಂದ್ರನ್ ಟೀಕಿಸಿರುವ ವಿಡಿಯೋವನ್ನು ಖಾಸಗಿ ಚಾನೆಲ್​ ಪ್ರಕಟಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಕಾಮಗಾರಿಯನ್ನು ನಿಲ್ಲಿಸಲು ಆಕೆಗೆ ಯಾವುದೇ ಅಧಿಕಾರವಿಲ್ಲ. ಆ ಕಟ್ಟಡ ಕಾಮಗಾರಿಯ ನಿರ್ಮಾಣ ಪಂಚಾಯತ್​ಗಳ ಅಧೀನಕ್ಕೆ ಬರುತ್ತದೆ. ಸುಮ್ಮನೆ ಎಲ್ಲದರಲ್ಲೂ ತಲೆ ಹಾಕಲು ಬರುತ್ತಾರೆ. ಆಕೆಗೆ ಮೆದುಳೇ ಇಲ್ಲ. ಆಕೆ ಜಿಲ್ಲಾಧಿಕಾರಿಯಾಗಬೇಕು ಎಂಬ ಒಂದೇ ಉದ್ದೇಶದಿಂದ ಶಿಕ್ಷಣ ಪಡೆದಿದ್ದಾರೆ. ಹಾಗಾಗಿ, ಆ ಮಟ್ಟದಲ್ಲಿ ಮಾತ್ರ ಆಕೆ ಯೋಚನೆ ಮಾಡಬಲ್ಲರು. ಜನಸಾಮಾನ್ಯರಂತೆ ಯೋಚನೆ ಮಾಡಲು ಆಕೆಗೆ ಸಾಧ್ಯವಿಲ್ಲ. ಆಕೆಯೇನಾದರೂ ಕಟ್ಟಡಗಳ ಪ್ಲಾನ್​, ಸ್ಕೆಚ್​ ಬಗ್ಗೆ ಓದಿದ್ದಾರಾ? ಎನ್ನುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಹಿಂಸಾಚಾರಕ್ಕೆ ತಿರುಗಿದ ಗುಜ್ಜರ್​ ಸಮುದಾಯದ ಪ್ರತಿಭಟನೆ; ಪೊಲೀಸರ ಮೇಲೆ ಕಲ್ಲು ತೂರಾಟ

ರೇಣು ರಾಜ್​ ಕಳೆದ ನವೆಂಬರ್​ನಲ್ಲಿ ದೇವಿಕುಲಂ ಉಪ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದರು. ಅನಧಿಕೃತ ಕಟ್ಟಡ ಕಾಮಗಾರಿಯನ್ನು ನಿಲ್ಲಿಸುವಂತೆ ಪಂಚಾಯತ್​ಗೆ ನೋಟಿಸ್​ ನೀಡಲಾಗಿತ್ತು. ಆದರೆ, ಕಾಮಗಾರಿಯ ಕೆಲಸ ಇನ್ನೂ ಮುಂದುವರೆದಿದ್ದ ಹಿನ್ನೆಲೆಯಲ್ಲಿ ಅದನ್ನು ಸ್ಥಗಿತಗೊಳಿಸಲು ರೇಣು ರಾಜ್​ ಮುಂದಾಗಿದ್ದರು.

ನಾನು ನನ್ನ ಕರ್ತವ್ಯವನ್ನು ನಿರ್ವಹಿಸಿದ್ದೇನೆ. ಅದಕ್ಕೆ ನನ್ನ  ಮೇಲಧಿಕಾರಿಗಳು, ಮಾಧ್ಯಮಗಳು, ಸಾರ್ವಜನಿಕರು ಬೆಂಬಲ ನೀಡಿದ್ದಾರೆ. ಯಾರು ಏನೇ ಹೇಳಿದರೂ ನಾನು ನನ್ನ ಜವಾಬ್ದಾರಿಗಳನ್ನು ನಿರ್ವಹಿಸುತ್ತೇನೆ ಎಂದು ಐಎಎಸ್​ ಅಧಿಕಾರಿ ರೇಣುರಾಜ್ ಹೇಳಿದ್ದಾರೆ.'ತಾಕತ್ತಿಲ್ಲದ ಸರ್ಕಾರದಿಂದ ಏನೂ ಪ್ರಯೋಜನವಿಲ್ಲ, ಇಂತಹ ಸಿಎಂ ನಾನೆಲ್ಲೂ ನೋಡಿಲ್ಲ'; ರಾಜ್ಯ ಸರ್ಕಾರದ ವಿರುದ್ಧ ಹುಬ್ಬಳ್ಳಿಯಲ್ಲಿ ಮೋದಿ ವಾಗ್ದಾಳಿ

ರೇಣು ರಾಜ್​ ಅವರ ಬೆಂಬಲಕ್ಕೆ ನಿಂತಿರುವ ಕೇರಳದ ಕಂದಾಯ ಸಚಿವ ಇ. ಚಂದ್ರಶೇಖರನ್, ಉಪ ಜಿಲ್ಲಾಧಿಕಾರಿ ತೆಗೆದುಕೊಂಡ ಕ್ರಮಗಳು ಸರಿಯಾಗಿಯೇ ಇದೆ. ಆಕೆ ಕಾನೂನು ಪ್ರಕಾರವಾಗಿಯೇ ಕ್ರಮ ಕೈಗೊಂಡಿದ್ದಾರೆ. ಹಾಗಿದ್ದಮೇಲೆ ನಾವು ಆಕೆಗೆ ಪ್ರೋತ್ಸಾಹ ನೀಡಲೇಬೇಕು ಎಂದು ಹೇಳಿದ್ದಾರೆ.

2010ರಲ್ಲಿ ಕೇರಳ ಹೈಕೋರ್ಟ್​ ನೀಡಿದ್ದ ತೀರ್ಪಿನಲ್ಲಿ ಮುನ್ನಾರ್​ನಲ್ಲಿ ಯಾವುದೇ ಕಾಮಗಾರಿ ನಡೆಸಬೇಕಾದರೂ 'ನೋ ಅಬ್ಜೆಕ್ಷನ್​ (ವಿರೋಧವಿಲ್ಲ)' ಎಂಬ ಸರ್ಟಿಫಿಕೇಟ್​ ಪಡೆಯಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿತ್ತು. ಆದರೆ, ಮುನ್ನಾರ್​ನಲ್ಲಿ ನಿರ್ಮಾಣವಾಗುತ್ತಿದ್ದ 1 ಕೋಟಿ ವೆಚ್ಚದ 4 ಮಹಡಿಗಳ ಕಟ್ಟಡ ನಿರ್ಮಿಸಲು ಅಧಿಕಾರಿಗಳಿಂದ ಯಾವುದೇ ಅನುಮತಿಯನ್ನೂ ಪಡೆದಿರಲಿಲ್ಲ. ಹೀಗಾಗಿ, ಕಾಮಗಾರಿಯನ್ನು ನಿಲ್ಲಿಸಬೇಕಾಯಿತು ಎಂದು ರೇಣು ರಾಜ್​ ಮಾಹಿತಿ ನೀಡಿದ್ದಾರೆ.

First published:February 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ