ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ಜಾಯ್, ಈಗ ತಾಲಿಬಾನ್ನಲ್ಲಿ ಮುಂಚೂಣಿಯಲ್ಲಿ ಕಂಡುಬರುತ್ತಿರುವ ಅಗ್ರ ಏಳು ನಾಯಕರಲ್ಲಿ ಒಬ್ಬರಾಗಿದ್ದು, 1982 ರಲ್ಲಿ ಡೆಹ್ರಾಡೂನ್ನಲ್ಲಿ ಇರುವ ಭಾರತೀಯ ಮಿಲಿಟರಿ ಅಕಾಡೆಮಿಯ (ಐಎಂಎ)ಲ್ಲಿ ತರಬೇತಿ ಪಡೆದಿದ್ದರು ಮತ್ತು ಅವರ ಬ್ಯಾಚ್ಮೇಟ್ಗಳು ಇವರನ್ನು 'ಶೇರು' ಎನ್ನುವ ಅಡ್ಡಹೆಸರಿನಿಂದ ಕರೆಯುತ್ತಿದ್ದರು ಎಂದು ಹೇಳಲಾಗಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಸ್ಟಾನಿಕ್ಜಾಯ್ "ಕಟ್ಟುಮಸ್ತಾದ ಹಾಗೂ ಅಷ್ಟೇನೂ ತುಂಬಾ ಎತ್ತರವಿಲ್ಲದ ಮನುಷ್ಯ ಮತ್ತು ಎಂದಿಗೂ ಧಾರ್ಮಿಕವಾಗಿ ಒಲವು ಹೊಂದಿರಲಿಲ್ಲ". ಅವರು ಐಎಂಎ ಅಕಾಡೆಮಿಯಲ್ಲಿ ಭಗತ್ ಬೆಟಾಲಿಯನ್ ಕೆರೆನ್ ಕಂಪನಿಯ 45 ವಿದೇಶಿ ಸಂಭಾವಿತ ಕೆಡೆಟ್ ಆಗಿ ಸೇರಿಕೊಂಡಿದ್ದರು, ಆಗ ಅವರಿಗೆ 20 ವರ್ಷ ಮಾತ್ರ ವಯಸ್ಸಾಗಿತ್ತು.
"ಅವರು ಅಕಾಡೆಮಿಯಲ್ಲಿರುವ ಇತರ ಕೆಡೆಟ್ಗಳಿಗಿಂತ ಸ್ವಲ್ಪ ವಯಸ್ಸಾದವರಂತೆ ಕಾಣುತ್ತಿದ್ದರು, ಆದರೆ ವಯಸ್ಸು ಮಾತ್ರ ಚಿಕ್ಕದಾಗಿತ್ತು. ಒಳ್ಳೆಯ ವ್ಯಕ್ತಿಯಾಗಿದ್ದ ಅವರು ಎಲ್ಲರನ್ನು ಸೆಳೆಯುವಂತಹ ಗಮನಾರ್ಹವಾದ ಮೀಸೆ ಬಿಟ್ಟಿದ್ದರು. ಆ ಸಮಯದಲ್ಲಿ ಅವರು ಖಂಡಿತವಾಗಿಯೂ ಯಾವುದೇ ಮೂಲಭೂತ ದೃಷ್ಟಿಕೋನಗಳನ್ನು ಅಂದರೆ ಧಾರ್ಮಿಕವಾದ ದೃಷ್ಟಿಕೋನ ಹೊಂದಿರಲಿಲ್ಲ. ಸರಾಸರಿ ಅಫ್ಘಾನ್ ಕೆಡೆಟ್ ಆಗಿದ್ದರು, ಅವರು ಇಲ್ಲಿ ಇದ್ದಷ್ಟು ದಿನ ತಮ್ಮ ಸಮಯವನ್ನು ಆನಂದಿಸುತ್ತಿದ್ದರು ”ಎಂದು ಅವರ ಬ್ಯಾಚ್ಮೇಟ್ ಮೇಜರ್ ಜನರಲ್ ಡಿಎ ಚತುರ್ವೇದಿ (ನಿವೃತ್ತ) ಉಲ್ಲೇಖಿಸಿದ್ದಾರೆ.
ಅವರ ಇನ್ನೊಬ್ಬ ಬ್ಯಾಚ್ಮೇಟ್, ಕರ್ನಲ್ (ನಿವೃತ್ತ) ಕೇಸರ್ ಸಿಂಗ್ ಶೇಖಾವತ್, ತಮ್ಮ ವಾರಾಂತ್ಯದ ದಿನಗಳಲ್ಲಿ ನಡೆಸುತ್ತಿದ್ದ ಟ್ರಕ್ಕಿಂಗ್ ಮತ್ತು ನದಿ ತೀರದ ಪ್ರವಾಸಗಳನ್ನು ನೆನಪಿಸಿಕೊಂಡರು.
1996 ರ ಹೊತ್ತಿಗೆ, ಸ್ಟಾನಿಕ್ಜಾಯ್ ಸೈನ್ಯವನ್ನು ತೊರೆದು ತಾಲಿಬಾನ್ ಪಡೆ ಸೇರಿದರು. ತಾಲಿಬಾನ್ಗೆ ರಾಜತಾಂತ್ರಿಕ ಮಾನ್ಯತೆ ನೀಡುವಂತೆ ಕ್ಲಿಂಟನ್ ಆಡಳಿತವನ್ನು ಮನವೊಲಿಸಲು ಅವರು ನಂತರ ವಾಷಿಂಗ್ಟನ್ಗೆ ಹೋದರು ಆದರೆ ಪ್ರಯತ್ನ ಯಶಸ್ವಿಯಾಗಿರಲಿಲ್ಲ.
ಇವರನ್ನು ಅಫ್ಘಾನ್ ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆಯಲ್ಲಿ ತಾಲಿಬಾನ್ನ ಸಂಧಾನ ತಂಡದ ಮುಖ್ಯಸ್ಥ ಅಬ್ದುಲ್ ಹಕೀಮ್ ಹಕ್ಕಾನಿಗೆ ಉಪ ಸಮಾಲೋಚಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಂಗ್ಲಿಷ್ ಮತ್ತು ಮಿಲಿಟರಿ ತರಬೇತಿ ವಿಭಾಗದ ಹೊಣೆಯು ಇವರ ಮೇಲಿತ್ತು, ಕಾಲಾನಂತರದಲ್ಲಿ ಅವರು ತಾಲಿಬಾನ್ನ ಪ್ರಮುಖ ಸಂಧಾನಕಾರರಲ್ಲಿ ಒಬ್ಬರಾದರು. 2015 ರಲ್ಲಿ, ಅವರನ್ನು ಕತಾರ್ನಲ್ಲಿ ಇರುವ ತಾಲಿಬಾನ್ನ ರಾಜಕೀಯ ಕಚೇರಿಯ ಮುಖ್ಯಸ್ಥರಾಗಿ ನೇಮಿಸಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ