ದೆಹಲಿ ರಾಜಕೀಯಕ್ಕೆ ಶೀಲಾ ದೀಕ್ಷಿತ್ ವಾಪಸ್; ರಾಜ್ಯ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕ

ಮತ್ತೆ ದೆಹಲಿ ರಾಜಕೀಯಕ್ಕೆ ವಾಪಸ್ಸಾಗಿರುವ ಮಾಜಿ ಸಿಎಂ ಶೀಲಾ ದೀಕ್ಷಿತ್​​​ ಅವರಿಗೆ ಅಭಿನಂದನೆಗಳು. ರಾಜ್ಯ ಕಾಂಗ್ರೆಸ್​ ಅಧ್ಯಕ್ಷರಾಗಿ ನಿಮ್ಮನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಮತ್ತೆ ನೀವು ರಾಜ್ಯ ರಾಜಕಾರಣದಲ್ಲಿ ಕೀಲಕ ಪಾತ್ರವಹಿಸಲಿದ್ದೀರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ- ಮಕೇನ್​​

Ganesh Nachikethu | news18
Updated:January 10, 2019, 7:29 PM IST
ದೆಹಲಿ ರಾಜಕೀಯಕ್ಕೆ ಶೀಲಾ ದೀಕ್ಷಿತ್ ವಾಪಸ್; ರಾಜ್ಯ ಕಾಂಗ್ರೆಸ್ ಅಧ್ಯಕ್ಷೆಯಾಗಿ ನೇಮಕ
ದೆಹಲಿ ಸಿಎಂ ಶೀಲಾ ದೀಕ್ಷಿತ್​​
Ganesh Nachikethu | news18
Updated: January 10, 2019, 7:29 PM IST
ನವದೆಹಲಿ(ಜ.10): ಲೋಕಸಭಾ ಚುನಾವಣೆ ಸಮೀಪಿಸುತ್ತಿದಂತೆಯೇ ಕಾಂಗ್ರೆಸ್​​ನಲ್ಲಿ ರಾಜಕೀಯ ಚಟುವಟಿಕೆಗಳು ಬದಲಾಗುತ್ತಿವೆ. ಅಜಯ್ ಮಕೇನ್ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅಖಾಡಕ್ಕೆ ಮಾಜಿ ಸಿಎಂ ಶೀಲಾ ದೀಕ್ಷಿತ್ ವಾಪಸ್ಸಾಗಿದ್ದಾರೆ. ಅಲ್ಲದೇ ರಾಜ್ಯ ಕಾಂಗ್ರೆಸ್​​ ಅಧ್ಯಕ್ಷೆಯಾಗಿ ಮತ್ತೆ ಶೀಲಾ ದೀಕ್ಷತ್​​ರನ್ನು ನೇಮಕ ಮಾಡಲಿದ್ದು, ಅಧಿಕೃತವಾಗಿ ಇನ್ನಷ್ಟೇ ಘೋಷಣೆ ಮಾಡಬೇಕಿದೆ. ಸದ್ಯದಲ್ಲೇ ಕಾಂಗ್ರೆಸ್​​ ಹೈಕಮಾಂಡ್​ ಘೋಷಿಸಲಿದ್ದಾರೆ ಎನ್ನಲಾಗಿದೆ.

ಮತ್ತೆ ದೆಹಲಿ ರಾಜಕೀಯಕ್ಕೆ ವಾಪಸ್ಸಾಗಿರುವ ಮಾಜಿ ಸಿಎಂ ಶೀಲಾ ದೀಕ್ಷಿತ್​​​ ಅವರಿಗೆ ಅಭಿನಂದನೆಗಳು. ರಾಜ್ಯ ಕಾಂಗ್ರೆಸ್​ ಅಧ್ಯಕ್ಷರಾಗಿ ನಿಮ್ಮನ್ನು ನೇಮಕ ಮಾಡಲಾಗುತ್ತಿದೆ. ಇದರಿಂದ ಮತ್ತೆ ನೀವು ರಾಜ್ಯ ರಾಜಕಾರಣದಲ್ಲಿ ಕೀಲಕ ಪಾತ್ರವಹಿಸಲಿದ್ದೀರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್​ ಸಕ್ರಿಯ ರಾಜಕಾರಣಕ್ಕೆ ಆಗಮಿಸಿದ ನಿಮಗೆ ಶುಭಶಾಯಗಳು ಎಂದು ಮಕೇನ್​​ ಟ್ವೀಟ್​ ಮಾಡಿದ್ದಾರೆ.

Loading...ವಾರದ ಹಿಂದೆಯಷ್ಟೇ ಜ.4 ಗುರುವಾರ ಸಂಜೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ಜೊತೆಗೆ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಪಿಸಿ ಚಾಕೋ ಮತ್ತು ಅಜಯ್ ಮಕೇನ್ ಮಾತುಕತೆ ನಡೆಸಿದ್ದರು. ಈ ನಡುವೇ ರಾಹುಲ್ ಗಾಂಧಿ, ಮಕೇನ್ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದವು. ಅನಾರೋಗ್ಯದ ಕಾರಣ ನೀಡಿ ಅಜಯ್ ಮಕೇನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ರಾಜೀನಾಮೆ ಸ್ವೀಕರಿಸಲಾಗಿದೆ ಎಂದು ರಾಹುಲ್​​ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಕೆಎಸ್ಆರ್​ಟಿಸಿಯಿಂದ ಬಂಪರ್ ಆಫರ್; ಟಿಕೆಟ್​ನಲ್ಲಿ ಶೇ.10ರಷ್ಟು ಡಿಸ್ಕೌಂಟ್​

ಬಳಿಕ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ತನಗೆ ಜವಾಬ್ದಾರಿ ವಹಿಸಿದರೆ ಅದನ್ನು ನಿಭಾಯಿಸಲು ಸಿದ್ಧ ಎಂದು ಕಳೆದ ವರ್ಷ ಅಭಿಪ್ರಾಯವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಪಕ್ಷವನ್ನು ಮುನ್ನಡೆಸಿ ಎಂದು ಹೈಕಮಾಂಡ್ ಹೇಳಿದರೆ ನಾನು ಅದಕ್ಕೆ  ಇಲ್ಲ ಎಂದು ಹೇಳಲಾರೆ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​​ ಗಾಂಧಿಯವರು ದೆಹಲಿಯಲ್ಲಿ ಪಕ್ಷವನ್ನು ಮುನ್ನಡೆಸುವ ಜವಾಬ್ದಾರಿ ನೀಡಿದ್ದಾರೆ. ಮತ್ತೆ ಶೀಲಾ ದೀಕ್ಷಿತ್​​ ಅವರು ರಾಜ್ಯ ಕಾಂಗ್ರೆಸ್​ ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕರಾವಳಿಯಲ್ಲಿ ನಾಪತ್ತೆಯಾಗಿದ್ದ ಮೀನುಗಾರರ ಬಗ್ಗೆ ಸುಳಿವು ಸಿಕ್ಕಿದೆ; ಗೃಹ ಸಚಿವ ಎಂ.ಬಿ. ಪಾಟೀಲ್

ಮೂರು ಬಾರಿ ದೆಹಲಿಯ ಸಿಎಂ ಆಗಿರುವ 80 ವರ್ಷ ವಯಸ್ಸಿನ ದೀಕ್ಷಿತ್ ಅವರಲ್ಲದೆ, ಎಐಸಿಸಿ ಕಾರ್ಯದರ್ಶಿ ದೇವೇಂದ್ರ ಯಾದವ್, ಹರೂನ್ ಯಾದವ್ ಹಾಗೂ ರಾಜ್ ಕುಮಾರ್ ಚೌಹಾಣ್ ಅವರ ಹೆಸರುಗಳು ಕೂಡಾ ಅಧ್ಯಕ್ಷ ಸ್ಥಾನಕ್ಕಾಗಿ ಕೇಳಿ ಬಂದಿತ್ತು ಎನ್ನುತ್ತಿವೆ ಮೂಲಗಳು.

---------------
ನೆಚ್ಚಿನ ನಟರ ಕಟೌಟ್​ಗೆ ಹಾಲಿನಾಭಿಷೇಕ ಮಾಡುವಾಗ ಎಚ್ಚರಿಕೆ: ಅದೃಷ್ಟ ಕೈ ಕೊಟ್ಟರೆ ಜೀವಕ್ಕೆ ಬರುತ್ತೆ ಕುತ್ತು..!
First published:January 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ