UAE New President: ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಯುನೈಟೆಡ್ ಅರಬ್ ಎಮಿರೇಟ್ಸ್ನ ಹೊಸ ಅಧ್ಯಕ್ಷ
Sheikh Mohamed bin Zayed: ಯುಎಇ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ಶೇಖ್ ಮೊಹಮ್ಮದ್ ಅವರನ್ನು ಯುಎಇಯ ಫೆಡರಲ್ ಸುಪ್ರೀಂ ಕೌನ್ಸಿಲ್ ಆಯ್ಕೆ ಮಾಡಿದೆ. ಮರು ಚುನಾವಣೆಗೆ ಅರ್ಹರಾಗುವ ಮೊದಲು ಅವರು ಐದು ವರ್ಷಗಳ ಅವಧಿಗೆ ಅಧಿಕಾರವನ್ನು ಹೊಂದಿರುತ್ತಾರೆ.
ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Khalifa Bin Zayed Al Nahyan) ನಿಧನರಾದ ಒಂದು ದಿನದ ನಂತರ ಯುಎಇಯ ಮುಂದಿನ ಅಧ್ಯಕ್ಷರಾಗಿ (UAE Next President) ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ (Sheikh Mohamed Bin Zayed Al Nahyan) ಅಧಿಕಾರ ಸ್ವೀಕರಿಸಲಿದ್ದಾರೆ ಎಂದು ಸುಪ್ರೀಂ ಕೌನ್ಸಿಲ್ ಶನಿವಾರ ಘೋಷಿಸಿದೆ. 61 ವರ್ಷದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ದೇಶದ ಮೂರನೇ ಅಧ್ಯಕ್ಷರಾಗಲಿದ್ದಾರೆ ಎಂದು ಖಲೀಜ್ ಟೈಮ್ಸ್ ವರದಿ ಮಾಡಿದೆ. ಈ ಮೂಲಕ ಯುನೈಟೆಡ್ ಅರಬ್ ಎಮಿರೇಟ್ಸ್ ಹೊಸ ಅಧ್ಯಕ್ಷರ ಹೆಸರು ಅಧಿಕೃತವಾಗಿ ಬಹಿರಂಗಗೊಂಡಂತಾಗಿದೆ.
ಯುಎಇ ಸಶಸ್ತ್ರ ಪಡೆಗಳ ಸುಪ್ರೀಂ ಕಮಾಂಡರ್ ಆಗಿರುವ ಶೇಖ್ ಮೊಹಮ್ಮದ್ ಅವರನ್ನು ಯುಎಇಯ ಫೆಡರಲ್ ಸುಪ್ರೀಂ ಕೌನ್ಸಿಲ್ ಆಯ್ಕೆ ಮಾಡಿದೆ. ಮರು ಚುನಾವಣೆಗೆ ಅರ್ಹರಾಗುವ ಮೊದಲು ಅವರು ಐದು ವರ್ಷಗಳ ಅವಧಿಗೆ ಅಧಿಕಾರವನ್ನು ಹೊಂದಿರುತ್ತಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ (73) ಶುಕ್ರವಾರ ನಿಧನರಾದ ನಂತರ ಈ ಬೆಳವಣಿಗೆ ನಡೆದಿದೆ.
MBZ ಎಂದೇ ಕರೆಯಲಾಗುತ್ತೆ! ಯುಎಇಯ ಏಳು ಎಮಿರೇಟ್ಗಳ ಆಡಳಿತಗಾರರನ್ನು ಒಳಗೊಂಡಿರುವ ಫೆಡರಲ್ ಸುಪ್ರೀಂ ಕೌನ್ಸಿಲ್ನ ಸದಸ್ಯರನ್ನು ಸಾಮಾನ್ಯವಾಗಿ 'MBZ' ಎಂದು ಕರೆಯಲಾಗುವ ಶೇಖ್ ಮೊಹಮ್ಮದ್ ಅವರನ್ನು ಮುಂದಿನ ಅಧ್ಯಕ್ಷರನ್ನಾಗಿ ಘೋಷಣೆ ಮಾಡಿದೆ.
ಶೇಖ್ ಮೊಹಮ್ಮದ್ ಅವರೇ ಯುನೈಟೆಡ್ ಅರಬ್ ಎಮಿರೇಟ್ಸ್ನ ಮುಂದಿನ ಅಧ್ಯಕ್ಷರಾಗಲಿದ್ದಾರೆ ಎಂಬ ನಿರೀಕ್ಷೆ ಈ ಮೊದಲಿಂದೂ ಇತ್ತು.
ಹಲವು ಕಠಿಣ ನಿರ್ಧಾರಗಳ ಹಿಂದಿನ ಶಕ್ತಿ ಅವರ ಅಧ್ಯಕ್ಷೀಯ ಅವಧಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಯುಎಇ ನಿರ್ಧಾರಗಳಲ್ಲಿ ಹೆಚ್ಚು ಮೂಗು ತೂರಿಸದೇ ಇರುವುದು, ಇಸ್ರೇಲ್ ಜೊತೆ ಸಂಬಂಧ ಬೆಸೆಯುವುದು, ಯೆಮೆನ್ನಲ್ಲಿ ಇರಾನ್ ಬೆಂಬಲಿತ ಉಗ್ರಗಾಮಿಗಳ ವಿರುದ್ಧ ಹೋರಾಟ ಮುಂತಾದ ನಿರ್ಣಯಗಳು ಮಧ್ಯಪ್ರಾಚ್ಯದ ನಾಯಕನನ್ನಾಗಿ ಹೊರಹೊಮ್ಮಿಸಿದೆ.
40 ದಿನಗಳ ಅಧಿಕೃತ ಶೋಕಾಚರಣೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್ ನಹ್ಯಾನ್ಮರಣದ ದುಃಖವನ್ನು ಆಚರಿಸಲು ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಯುಎಇಯಾದ್ಯಂತ ಧ್ವಜಗಳನ್ನು ಅರ್ಧಕ್ಕೆ ಇಳಿಸಿ 40 ದಿನಗಳ ಅಧಿಕೃತ ಶೋಕಾಚರಣೆ ಘೋಷಿಸಿದೆ. ಫೆಡರಲ್ ಮತ್ತು ಸ್ಥಳೀಯ ಮಟ್ಟದಲ್ಲಿ ಎಲ್ಲಾ ಯುಎಇ ಸಚಿವಾಲಯಗಳಲ್ಲಿ ಒಸಗಿಸುವ ಸೇವೆಗಳನ್ನು ಮತ್ತು ಖಾಸಗಿ ವಲಯದ ಸೇವೆಗಳನ್ನೂ ಸಹ ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.
ವಿಶ್ವದ ಹಲವು ದೇಶಗಳಿಂದ ಸಂತಾಪ ಅಧ್ಯಕ್ಷೀಯ ವ್ಯವಹಾರಗಳ ಸಚಿವಾಲಯವು ಯುಎಇ ಜನರು, ಅರಬ್ ಮತ್ತು ಇಸ್ಲಾಮಿಕ್ ರಾಷ್ಟ್ರಗಳು ಮತ್ತು ಜಗತ್ತಿಗೆ ಅಧ್ಯಕ್ಷ ಶೇಖ್ ಖಲೀಫಾ ಬಿನ್ ಜಾಯೆದ್ ಅಲ್-ನಹ್ಯಾನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ಶೇಖ್ ಖಲೀಫಾ ಅವರು ನವೆಂಬರ್ 2004 ರಲ್ಲಿ ಯುಎಇಯ ಎರಡನೇ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಶ್ರೀಮಂತರಾಗಿದ್ದ ಇವರು ಅಬುಧಾಬಿಯ 16 ನೇ ಆಡಳಿತಗಾರರಾಗಿದ್ದರು.
2014ರಿಂದ ಇವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಪಾರ್ಶ್ವವಾಯುಗೆ ಒಳಗಾದ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೂ ಅವರು ತೀರ್ಪುಗಳನ್ನು ನೀಡುವುದನ್ನು ಮುಂದುವರೆಸಿದ್ದರೂ 2014ರಿಂದ ಇವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ.
ಅಧ್ಯಕ್ಷರಾಗಿ ಚುನಾಯಿತರಾದ ನಂತರ, ಶೇಖ್ ಖಲೀಫಾ ಅವರು ಯುಎಇ ಸರ್ಕಾರಕ್ಕೆ ಸಮತೋಲಿತ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ತಮ್ಮ ಮೊದಲ ಕಾರ್ಯತಂತ್ರದ ಯೋಜನೆಯನ್ನು ಪ್ರಾರಂಭಿಸಿದ್ದರು.
Published by:guruganesh bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ