ದಿನ ಬೆಳಗಾಗ್ತಿದ್ದಂತೆ ಸ್ಟಾರ್​​ ಆದ ಡೆಲಿವರಿ ಬಾಯ್, ಭೇಟಿಯಾಗುವಂತೆ ಕರೆ ಮಾಡಿದ Dubai ರಾಜಕುಮಾರ!

ಪಾಕಿಸ್ತಾನದ ಅಬ್ದುಲ್ ಗಫೂರ್ ದುಬೈನಲ್ಲಿ 'ತಲಾಬತ್' ಹೆಸರಿನ ಫುಡ್​ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ. ಇತ್ತೀಚೆಗಷ್ಟೇ ಅವರು ಮಾಡಿದ ಒಂದು ಕೆಲಸದಿಂದ ಪ್ರಪಂಚದಾದ್ಯಂತ ಚರ್ಚೆ ಹುಟ್ಟಿಸಿದ್ದಾರೆ, ದುಬೈನಲ್ಲಿ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಕೂಡಾ ಅವರನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾರೆ. ವಾಸ್ತವವಾಗಿ, ಅಬ್ದುಲ್ ದುಬೈ ರಸ್ತೆ ಮೇಲಿದ್ದ ಎರಡು ಕಾಂಕ್ರೀಟ್​ ಕಲ್ಲುಗಳನ್ನು ತೆಗೆದು ಬದಿಗಿರಿಸಿದ್ದ. ಈ ಕಲ್ಲುಗಳನ್ನು ತೆಗೆಯದೇ ಇದ್ದಿದ್ದರೆ ಅನೇಕ ಅವಘಡ ಸಂಭವಿಸಬಹುದಿತ್ತು.

ದಿನ ಬೆಳಗಾಗ್ತಿದ್ದಂತೆ ಸ್ಟಾರ್​​ ಆದ ಫುಡ್​ ಡೆಲಿವರಿ ಬಾಯ್

ದಿನ ಬೆಳಗಾಗ್ತಿದ್ದಂತೆ ಸ್ಟಾರ್​​ ಆದ ಫುಡ್​ ಡೆಲಿವರಿ ಬಾಯ್

  • Share this:
ದುಬೈ(ಆ,13): ಪಾಕಿಸ್ತಾನಿ ಡೆಲಿವರಿ ಬಾಯ್ (Food Delivery Boy) ಮಾಡಿದ ಈ ಮಾನವೀಯ ಕೃತ್ಯದ ವಿಡಿಯೋವನ್ನು ದುಬೈ ರಾಜಕುಮಾರ ಶೇರ್ ಮಾಡಿದಾಗ ಜಗತ್ತಿನಾದ್ಯಂತ ಸದ್ದು ಮಾಡಿದೆ. ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ (Sheikh Hamdan bin Mohammed) ಪಾಕಿಸ್ತಾನದ ಅಬ್ದುಲ್ ಗಫೂರ್ (Abdul Ghafoor)  ಅವರು ರಸ್ತೆ ಮೇಲೆ ಬಿದ್ದಿದ್ದ ಎರಡು ಕಾಂಕ್ರೀಟ್ ಕಲ್ಲುಗಳನ್ನು ತೆಗೆಯುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ಶೇರ್ ಮಾಡಿದ ಬಳಿಕ ಅಬ್ದುಲ್ ಅವರನ್ನು ಭೇಟಿಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಕೊಟ್ಟ ಮಾತಿನಂತೆ ಪ್ರಿನ್ಸ್ ಡೆಲಿವರಿ ಬಾಯ್ ನನ್ನು ಭೇಟಿಯಾಗುವಂತೆ ಕರೆ ಮಾಡಿ, ಭೇಟಿಯಾದ ಫೋಟೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ಫೋಟೋವನ್ನು ಪ್ರಿನ್ಸ್ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ತಕ್ಷಣ ಭಾರೀ ವೈರಲ್ ಆಗಿದೆ.ಕೆಲವು ದಿನಗಳ ಹಿಂದೆ ಸ್ವತಃ ಪ್ರಿನ್ಸ್ ಅಬ್ದುಲ್ರವರ ವಿಡಿಯೋವನ್ನು ಶೇರ್ ಮಾಡಿದ್ದರು.ಅಬ್ದುಲ್ ನ 'ಒಳ್ಳೆಯತನ' ನೋಡಿ ಪ್ರಿನ್ಸ್ ತುಂಬಾ ಇಂಪ್ರೆಸ್ ಆಗಿದ್ದರು. ಆಗ ರಾಜಕುಮಾರನಿಗೆ ಆ ಯುವಕನ ಹೆಸರು ತಿಳಿದಿರಲಿಲ್ಲ. ಹೀಗಾಗಿ ಅಬ್ದುಲ್​ ಮಾಡಿದ ಈ ಮಾನವೀಯ ನಡೆಯ ವೀಡಿಯೋವನ್ನು ಖುದ್ದು ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡು, ಆತನನ್ನು ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:  Zomato: 10 ನಿಮಿಷಗಳಲ್ಲಿ ಮನೆ ಬಾಗಿಲಿಗೆ ಆಹಾರ ಸೇವೆ ಆರಂಭಿಸಿದ ಝೊಮಾಟೊ

ಪಾಕಿಸ್ತಾನದ ಅಬ್ದುಲ್ ಗಫೂರ್ ಎಂಬಾತ ದುಬೈನ ತಲಾಬತ್ ಹೆಸರಿನ ಫುಡ್ ಆರ್ಡರ್ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಈತ ಕೆಲವು ದಿನಗಳ ಹಿಂದೆ ತನ್ನ ಬೈಕ್​ನಲ್ಲಿ ಫುಡ್​ ಡೆಲಿವರಿ ಮಾಡಲು ತೆರಳುತ್ತಿದ್ದಾಗ ದುಬೈನ ಜನನಿಬಿಡ ಅಲ್ ಕ್ವೋಜ್ ಜಂಕ್ಷನ್‌ನಲ್ಲಿ ಕಾಂಕ್ರೀಟ್ ಕಲ್ಲುಗಳು ಬಿದ್ದಿರುವುದನ್ನು ಕಂಡಿದ್ದಾನೆ. ಈ ಕಲ್ಲುಗಳು ವಾಹನಗಳಿಗೆ ಅಪಾಯಕಾರಿಯಾಗಿದ್ದು, ಅಪಘಾತಕ್ಕೂ ಕಾರಣವಾಗುತ್ತಿದ್ದವು. ಇದನ್ನರಿತ ಅಬ್ದುಲ್ ಕೂಡಲೇ ಈ ಎರಡೂ ಕಲ್ಲುಗಳನ್ನು ತೆಗೆದು ನಂತರ ಬೈಕ್ ಏರಿ ಫುಡ್​ ಡೆಲಿವರಿ ನೀಡಲು ಹೊರಟಿದ್ದಾರೆ. ಅಬ್ದುಲ್ ಇದನ್ನೆಲ್ಲ ಮಾಡುತ್ತಿದ್ದಾಗ ಯಾರೋ ವಿಡಿಯೋ ರೆಕಾರ್ಡ್ ಮಾಡಿದ್ದಾರೆ.

ಅದೇ ವೀಡಿಯೊವನ್ನು ದುಬೈನ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಅವರು ಹಂಚಿಕೊಂಡಿದ್ದಾರೆ, ಈ ವೀಡಿಯೊವನ್ನು ಹಂಚಿಕೊಂಡ ನಂತರ, ಅವರು ಈ ಅಪರಿಚಿತ ವ್ಯಕ್ತಿಯನ್ನು ಭೇಟಿಯಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಕ್ರೌನ್ ಪ್ರಿನ್ಸ್ ಬರೆದರು ಈ ಬಗ್ಗೆ ಬರೆಯುತ್ತಾ ದುಬೈನಲ್ಲಿ ಪ್ರಶಂಸಿಸಬೇಕಾದ ಒಳ್ಳೆಯ ವಿಷಯ, ಯಾರಾದರೂ ನಾನು ಈ ವ್ಯಕ್ತಿಯನ್ನು ಭೇಟಿಯಾಗುವಂತೆ ಮಾಡಬಹುದೇ? ಎಂದು ಕೇಳಿದ್ದರು.


ಇದಾದ ಬಳಿಕ ಹಲವರು ಪ್ರಿನ್ಸ್ ವಿಡಿಯೋವನ್ನು ರೀಟ್ವೀಟ್ ಮಾಡಿ ಶೇರ್ ಮಾಡಿದ್ದಾರೆ. ಈ ವೀಡಿಯೊ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಡೆಲಿವರಿ ಬಾಯ್ ವಿಶ್ವದಲ್ಲೇ ಚರ್ಚೆ ಹುಟ್ಟು ಹಾಕಿದ್ದಾನೆ.

ವೀಡಿಯೋ ಶೇರ್ ಮಾಡಿದ ನಂತರ ಈ ವ್ಯಕ್ತಿಗೂ ವಿಷಯ ತಿಳಿಯಿತು. ಅತ್ತ ರಾಜಕುಮಾರ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಹಾಗೂ ಅಬ್ದುಲ್ ಅವರನ್ನು ಭೇಟಿಯಾಗಲು ಕರೆದಿದ್ದಾರೆ. ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಅಬ್ದುಲ್ ಅವರನ್ನು ಭೇಟಿಯಾಗಿ ತುಂಬಾ ಪ್ರಭಾವಿತರಾದರು. ಸರಳತೆ ತೋರಿದ ರಾಜಕುಮಾರ ಯಾವುದೇ ದೊಡ್ಡಸ್ತಿಕೆ ತೋರದೆ ಅಬ್ದುಲ್ ನ ಭುಜದ ಮೇಲೆ ಕೈಯಿಟ್ಟು ಫೋಟೋ ಕ್ಲಿಕ್ಕಿಸಿದ್ದಾರೆ.


ಬಳಿಕ ಪ್ರಿನ್ಸ್​ ಈ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋದ ಜೊತೆಗೆ ಅವರು ಅಬ್ದುಲ್ ಗಫೂರ್ ಅವರನ್ನು ಭೇಟಿಯಾಗಿ ಬಹಳ ಹೆಮ್ಮೆಯಾಗುತ್ತಿದೆ. ಜನರು ಅನುಸರಿಸಬೇಕಾದ ವ್ಯಕ್ತಿತ್ವ ಇವರದ್ದು, ಸೂಕ್ತ ಉದಾಹರಣೆ ಎಂದಿದ್ದಾರೆ.

ಇದನ್ನೂ ಓದಿ:  ಫುಡ್​ ಡೆಲಿವರಿಗೆ ಮುಂದಾದ ಅಮೆಜಾನ್..​! ಶೀಘ್ರದಲ್ಲೇ ಪ್ರಾರಂಭ

ಅಬ್ದುಲ್ ಗಫೂರ್ ಯಾರು?

ಅಬ್ದುಲ್ ಗಫೂರ್ ಅವರ ವೀಡಿಯೋ ವೈರಲ್ ಆದ ತಕ್ಷಣ ಅವರ ಸಂಸ್ಥೆ ‘ತಲಾಬತ್’ ಕೂಡ ಅವರನ್ನು ಸನ್ಮಾನಿಸಿದೆ. ಕಂಪನಿಯು ಅಬ್ದುಲ್​ಗೆ ಆತನ ಎರಡು ವರ್ಷದ ಮಗನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿ ಬರಲು ಅವಕಾಶ ಮಾಡಿಕೊಟ್ಟಿದ್ದಲ್ಲದೇ, ಟಿಕೆಟ್ ಅನ್ನು ಬುಕ್ ಮಾಡಿತು. ಈ ಹಿಂದೆ ಖಲೀಜ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ಅಬ್ದುಲ್, ತನ್ನ ಮಗನಿಗೆ ಕೆಲವೇ ತಿಂಗಳಿರುವಾಗ ಪಾಕಿಸ್ತಾನವನ್ನು ತೊರೆದಿದ್ದೇನೆ ಎಂದು ಹೇಳಿದ್ದರು. ಅವರು ತನ್ನ ಮಗನನ್ನು ಬಹಳ ಮಿಸ್​ ಮಾಡಿಕೊಳ್ಳುತ್ತಿದ್ದ. ರಾಜಕುಮಾರನ ಕರೆ ಬಂದಾಗ ನನಗೆ ನಂಬಲಾಗಲಿಲ್ಲ ಎಂದು ಅಬ್ದುಲ್ ಹೇಳಿದ್ದಾರೆ.
Published by:Precilla Olivia Dias
First published: