Sheep Hired- ಐರ್​ಲೆಂಡ್ ದೇಶದಲ್ಲಿ ಐತಿಹಾಸಿಕ ಸ್ಥಳ ಪತ್ತೆಗೆ ಕುರಿಗಳ ನೇಮಕ

ಐರ್ ಲೆಂಡ್ ದೇಶದಲ್ಲಿ ಸುಮಾರು 150 ವರ್ಷಗಳ ಹಿಂದೆ ಸಾವನ್ನಪ್ಪಿದ ಬಾಲಕಿಯೊಬ್ಬಳ ಸಮಾಧಿಯನ್ನು ಕಂಡುಹಿಡಿಯಲು ಕುರಿಗಳು ನೆರವಾಗಿವೆ. ಅಲ್ಲೀಗ ಇದೇ ರೀತಿ ಸಮಾಧಿಗಳ ಪತ್ತೆ ಕುರಿಗಳ ನೇಮಕ ಮಾಡಲಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವುದೇ ದೇಶದಲ್ಲಿ ಐತಿಹಾಸಿಕ ಸಮಾಧಿಗಳನ್ನು ಗುರುತಿಸುವುದು ಮತ್ತು ಪತ್ತೆ ಹಚ್ಚುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ಸಮಯ,ಸಂಶೋಧನೆ, ಸಂಪನ್ಮೂಲ ಮತ್ತು ಸಾಕಷ್ಟು ಜನರ ಅಗತ್ಯವಿರುತ್ತದೆ. ಅಂತಹ ಕೆಲಸಗಳನ್ನು ಸಾಮಾನ್ಯವಾಗಿ ಪುರಾತತ್ವಜ್ಞರು ಅಥವಾ ಹಳೆಯ ಸಮಾಧಿಗಳ ಬಗ್ಗೆ ಜ್ಞಾನವಿರುವ ಹಾಗೂ ಸರಿಯಾದ ಸಾಧನಗಳನ್ನು ಹೊಂದಿರುವ ತಜ್ಞರು ಮಾಡಬೇಕಾಗುತ್ತದೆ. ಆದರೆ ಐರ್‍ಲ್ಯಾಂಡ್‍ನಲ್ಲಿ ಹಳೆಯ ಸಮಾಧಿಗಳನ್ನು ಹುಡುಕುವ ಕೆಲಸಕ್ಕೆ ಕೆಲವು ಕುರಿಗಳನ್ನು ನೇಮಿಸಲಾಗಿದೆಯಂತೆ! ಕುರಿಗಳು ಸಮಾಧಿ ಹುಡುಕಿ ಕೊಡುವ ಕೆಲಸದಲ್ಲಿ ಸಫಲ ಕೂಡ ಆಗಿವೆ!

ಹೌದು ಇದು ನಿಜ. ಹಾಗೆಂದ ಮಾತ್ರಕ್ಕೆ ಕುರಿಗಳನ್ನು ಸಮಾಧಿ ಅಗೆಯಲು ಬಳಸಿಕೊಳ್ಳಲಾಗುತ್ತದೆ ಎಂದುಕೊಂಡರೆ ಮೂರ್ಖತನವಾಗುತ್ತದೆ. ಆದರೂ ಕುರಿಗಳು ಒಂದು ರೀತಿಯಲ್ಲಿ ಪುರಾತತ್ವ ಶಾಸ್ತ್ರಕ್ಕೆ ಅತ್ಯುತ್ತಮ ಸಾಧನಗಳು ಎಂದು ಬಹಳಷ್ಟು ತಜ್ಞರು ಅಭಿಪ್ರಾಯಪಡುತ್ತಾರೆ. ಅದು ಹೇಗೆ ಅಂತೀರಾ? ಮೂಲತಃ ಅವುಗಳನ್ನು ಸಮಾಧಿಯ ಮೇಲೆ ಮತ್ತು ಸುತ್ತಲು ಅತಿಯಾಗಿ ಬೆಳೆದಿರುವ ಹುಲ್ಲಗಳು ಹಾಗೂ ಪೊದೆಗಳನ್ನು ತಿನ್ನಲು ಬಳಸಲಾಗುತ್ತದೆ. ಆಗ ಇತಿಹಾಸಕಾರರಿಗೆ ಹಳೆಯ ಸಮಾಧಿಗಳನ್ನು ಗುರುತಿಸಿ ಅಗೆಯಲು ಸುಲಭವಾಗುತ್ತದೆ.

ಸಂಪ್ರದಾಯವಾದಿ ಮತ್ತು ಕ್ರೈಸ್ತ ಧರ್ಮೀಯ ರಾಜಕೀಯ ಪಕ್ಷ ಫಿಯಾನ ಫೇಲ್‍ನ ಕೌನ್ಸಿಲರ್ ಆಡ್ರೆ ಬಕ್ಲಿ ಅವರು ಕ್ರಾಸ್ ಹೇವನ್​ನ ಸೇಂಟ್ ಮ್ಯಾಥ್ಯೂಸ್ ಸ್ಮಶಾನದಲ್ಲಿ ಸಮಾಧಿಯೊಂದನ್ನ ಹುಡುಕಲು ಕುರಿ ಬಳಕೆ ಬಗ್ಗೆ ಐಡಿಯಾ ಕೊಟ್ಟರು, ವೇಲ್ಸ್‍ನಲ್ಲಿ ‘ಗೋಟ್ ಸ್ಕೇಪಿಂಗ್’ನ ಉತ್ತಮ ಪರಿಣಾಮವನ್ನು ಗಮನಿಸಿದ ಬಳಿಕ ಅವರು ಕ್ರಾಸ್ ಹೆವನ್‍ನಲ್ಲೂ ಇಂಥದ್ದೊಂದು ಪ್ರಯೋಗ ಮಾಡುವ ಸಾಧ್ಯತೆಯನ್ನ ತೆರೆದಿಟ್ಟರು ಎಂದು ವರದಿಗಳು ತಿಳಿಸಿವೆ.

ಕ್ರಾಸ್ ಹೇವನ್​ನಲ್ಲಿ ಕುರಿಗೆ ನೀಡಲಾಗಿದ್ದ ಟ್ಯಾಸ್ಕ್ ಯಶಸ್ವಿಯಾಗಿ ಪೂರೈಸಿದೆ. 1872ರ ಅಕ್ಟೋಬರ್ 7 ರಂದು ಸಾವನ್ನಪ್ಪಿದ್ದ 2 ವರ್ಷದ ಬಾಲಕಿಯೊಬ್ಬಳ ಸಮಾಧಿಯನ್ನು ಕುರಿ ಮೂಲಕ ಪತ್ತೆ ಹಚ್ಚಲು ಸಾಧ್ಯವಾಯಿತು. ಈ ಶೋಧದ ಬಳಿಕ ಆ ಬಾಲಕಿಯ ಸಂಬಂಧಿಯನ್ನು ಸಂಪರ್ಕಿಸಲಾಯಿತು.

ಇದನ್ನೂ ಓದಿ: Sand Storm- ಮರಳು ಸುನಾಮಿ; ಚೀನಾದಲ್ಲಿ ಬೆಚ್ಚಿಬೀಳಿಸಿತು 100 ಮೀಟರ್ ಎತ್ತರದ ಮರಳು ಬಿರುಗಾಳಿ

“ಆತ ಆಕೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದರು ಮತ್ತು ಅದಕ್ಕಾಗಿ ಕಳೆದ ವರ್ಷ ಬ್ರಿಟನ್ ದೇಶದಿಂದ ಬರುವವರಿದ್ದರು. ಆದರೆ ಕೋವಿಡ್ ಕಾರಣದಿಂದ ಪ್ರಯಾಣವನ್ನು ರದ್ದು ಮಾಡಬೇಕಾಯಿತು. ಅವರೀಗ ಥ್ರಿಲ್ ಆಗಿದ್ದಾರೆ ಮತ್ತು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಬರಲು ಬಯಸುತ್ತಿದ್ದಾರೆ. ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಎಲ್ಲರಿಗೂ ಅವರು ಆಭಾರಿಯಾಗಿದ್ದಾರೆ” ಎಂದು ಕೌನ್ಸಿಲರ್ ಆಡ್ರೆ ಬಕ್ಲಿ ಹೇಳಿದ್ದಾರೆ.

ಕುರಿಗಳು ಎಲ್ಲಾ ಹುಲ್ಲು ಮತ್ತು ಪೊದೆಗಳನ್ನು ತಿಂದು ಮುಗಿಸಿದ ನಂತರ, ನಾಲ್ಕು ಮಂದಿಯ ಕುಟುಂಬಕ್ಕೆ ಸೇರಿದ ಸಮಾಧಿಯನ್ನು ಟೆಂಪಲ್ ಬ್ರಿಡಿ ಎಸ್‍ಒಎಸ್ ಎಂಬ ಸ್ವಯಂ ಸೇವಕರ ಗುಂಪು ಪತ್ತೆ ಹಚ್ಚಿತು.
ಪ್ರಸ್ತುತ, ಕ್ರಾಸ್‍ಹೆವೆನ್‍ನಲ್ಲಿನ ಸ್ಮಶಾನಗಳ ನಿರ್ವಹಣಾ ಕಾರ್ಯವನ್ನು ಟೆಂಪಲ್ ಬ್ರಿಡಿ ಎಸ್‍ಒಎಸ್ ಎಂಬ ಸ್ವಯಂ ಸೇವಕರ ಗುಂಪು ವಹಿಸಿಕೊಂಡಿದೆ.

ಕುರಿಗಳು ಈಗ ಎಲ್ಲಾ ಹುಲ್ಲು ಮತ್ತು ಪೊದೆಗಳನ್ನು ತಿಂದು ಮುಗಿಸಿ, ಸ್ವಯಂ ಸೇವಕರ ಗುಂಪಿಗೆ ಗುರುತು ಹಾಕದ ಸಮಾಧಿಗಳಿರುವ ಜಾಗವನ್ನು ಸುಲಭವಾಗಿ ಹುಡುಕಲು ಸಹಾಯ ಮಾಡಿವೆ ಎಂದು ಕೌನ್ಸಿಲರ್ ಆಡ್ರೆ ಬಕ್ಲಿ ಹೇಳಿದ್ದಾರೆ.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ಭಾಷಾಂತರ ನೆರವು: ಶೈಲಾ ಆರ್, ಏಜೆನ್ಸಿ

Published by:Vijayasarthy SN
First published: