ಬಿಜೆಪಿ ಒಬ್ಬ ವ್ಯಕ್ತಿಯ ಪಕ್ಷವಾಗಿದೆ; ಕಮಲ ತೊರೆದು ಕಾಂಗ್ರೆಸ್​ ಸೇರಿದ ಶತ್ರುಘ್ನ ಸಿನ್ಹಾ ಆರೋಪ

ಎಲ್​.ಕೆ.ಆಡ್ವಾನಿ ಅವರನ್ನು ಪಕ್ಷ ನಡೆಸಿಕೊಂಡಿರುವುದರ ಬಗ್ಗೆ ಮಾತನಾಡಿದ ಶತ್ರುಘ್ನ ಸಿನ್ಹಾ, ಆಡ್ವಾನಿ ಅವರನ್ನು ಮಾರ್ಗದರ್ಶಕ ಮಂಡಳಿಗೆ ಸೇರಿಸಲಾಯಿತು. ಅಲ್ಲಿ ಒಂದೇ ಒಂದು ಸಭೆಯನ್ನೂ ಕೂಡ ಮಾಡಲಿಲ್ಲ. ಅದೇ ರೀತಿ ಜಸ್ವಂತ್​ ಸಿಂಗ್, ಯಶ್ವಂತ್​ ಸಿನ್ಹಾ ಅವರನ್ನು ಕಡೆಗಣಿಸಲಾಯಿತು ಎಂದರು.

HR Ramesh | news18
Updated:April 6, 2019, 2:12 PM IST
ಬಿಜೆಪಿ ಒಬ್ಬ ವ್ಯಕ್ತಿಯ ಪಕ್ಷವಾಗಿದೆ; ಕಮಲ ತೊರೆದು ಕಾಂಗ್ರೆಸ್​ ಸೇರಿದ ಶತ್ರುಘ್ನ ಸಿನ್ಹಾ ಆರೋಪ
ಬಿಜೆಪಿ ತೊರೆದು ಕಾಂಗ್ರೆಸ್​ ಸೇರ್ಪಡೆಯಾದ ಶತ್ರುಘ್ನ ಸಿನ್ಹಾ
  • News18
  • Last Updated: April 6, 2019, 2:12 PM IST
  • Share this:
 ನವದೆಹಲಿ: ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ ಅವರು ಬಿಜೆಪಿಯ ಸಂಸ್ಥಾಪನಾ ದಿನದಂದೇ ಆ ಪಕ್ಷದಿಂದ ಹೊರಬಂದು ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದರು. ಬಿಜೆಪಿಯಲ್ಲಿ ಇದ್ದಾಗಲೂ ಪ್ರಧಾನಿ ಮೋದಿ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಶಾ ಅವರನ್ನು ಟೀಕೆ ಮಾಡಿಕೊಂಡೇ ಬಂದ ಶತ್ರುಘ್ನ ಸಿನ್ಹಾ ಇಂದು ಸಹ ಬಿಜೆಪಿ ವಿರುದ್ಧ ಹರಿಹಾಯ್ದರು.

ಬಿಜೆಪಿ ಏಕವ್ಯಕ್ತಿಯ ಪ್ರದರ್ಶನ, ಇಬ್ಬರು ಮನುಷ್ಯ ಸೇನೆ. ಇಲ್ಲಿ ಎಲ್ಲವೂ ಪ್ರಧಾನಮಂತ್ರಿ ಕಚೇರಿಯಿಂದ ನಿರ್ವಹಿಸಲ್ಪಡುತ್ತವೆ. ಸಚಿವರು ನಿರಾಳವಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಶತ್ರುಘ್ನ ಸಿನ್ಹಾ ಆರೋಪಿಸಿದರು. ಪ್ರಜಾಪ್ರಭುತ್ವ ಸರ್ವಾಧಿಕಾರತ್ವಕ್ಕೆ ಬದಲಾಗಿರುವುದನ್ನು ನಾವು ನೋಡಿದ್ದೇವೆ ಎಂದರು.

ಎಲ್​.ಕೆ.ಆಡ್ವಾನಿ ಅವರನ್ನು ಪಕ್ಷ ನಡೆಸಿಕೊಂಡಿರುವುದರ ಬಗ್ಗೆ ಮಾತನಾಡಿದ ಶತ್ರುಘ್ನ ಸಿನ್ಹಾ, ಆಡ್ವಾನಿ ಅವರನ್ನು ಮಾರ್ಗದರ್ಶಕ ಮಂಡಳಿಗೆ ಸೇರಿಸಲಾಯಿತು. ಅಲ್ಲಿ ಒಂದೇ ಒಂದು ಸಭೆಯನ್ನೂ ಕೂಡ ಮಾಡಲಿಲ್ಲ. ಅದೇ ರೀತಿ ಜಸ್ವಂತ್​ ಸಿಂಗ್, ಯಶ್ವಂತ್​ ಸಿನ್ಹಾ ಅವರನ್ನು ಕಡೆಗಣಿಸಲಾಯಿತು. ತಪ್ಪನ್ನು ನಾನು ವಿಮರ್ಶಿಸುತ್ತೇನೆ. ಏಕೆಂದರೆ ನನ್ನ ವ್ಯಕ್ತಿತ್ವ ಸ್ವಚ್ಛವಾಗಿದೆ ಎಂದರು.

ನೋಟು ಅಮಾನ್ಯೀಕರಣವನ್ನು ಜಗತ್ತಿನ ಅತಿದೊಡ್ಡ ಹಗರಣ ಎಂದು ಕರೆದ ಸಿನ್ಹಾ, ಇದೊಂದು ಬುದ್ಧಿಹೀನ ನಿರ್ಧಾರ. ಹಲವು ಜನರು ಇದರಿಂದ ಪ್ರಾಣ ಕಳೆದುಕೊಂಡರು. ಮೋದಿ ಜೀ ಅವರ ತಾಯಿ ಕೂಡ ಹಣ ಪಡೆಯಲು ಸಾಲಿನಲ್ಲಿ ನಿಂತಿದ್ದರು. ಮತ್ತು ಇದು ಸಾಮಾನ್ಯ ಎಂದಿದ್ದಾಗಿ ಹೇಳಿದರು.

ಇದನ್ನು ಓದಿ: ಕಾಂಗ್ರೆಸ್​ ಸೇರಲು ಸಿದ್ಧರಾದ ಬಿಜೆಪಿ ರೆಬೆಲ್​ ನಾಯಕ ಶತ್ರುಘ್ನ ಸಿನ್ಹಾ; ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧೆ?

72 ವರ್ಷದ ಶತ್ರುಗ್ನ ಸಿನ್ಹಾ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಬಿಹಾರದ ಪಾಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ.

ಈವರೆಗೂ ಬಿಜೆಪಿಯಲ್ಲಿದ್ದ ಸಿನ್ಹಾ ಕಳೆದೊಂದು ವರ್ಷದಿಂದ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ನಿರಂತರವಾಗಿ ಟೀಕಿಸುತ್ತಾ ಬಂದಿದ್ದಾರೆ. ಕಳೆದ ಜನವರಿಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೊಲ್ಕತ್ತಾದಲ್ಲಿ ಆಯೋಜಿಸಿದ್ದ ವಿರೋಧ ಪಕ್ಷಗಳ ಮೆಗಾ ರ್ಯಾಲಿಯಲ್ಲಿ ಸಿನ್ಹಾ ಪಾಲ್ಗೊಂಡಿದ್ದರು. ಈ ಮೂಲಕ ಪಕ್ಷ ತೊರೆಯುವ ಸೂಚನೆಯನ್ನು ಅಂದೇ ನೀಡಿದ್ದರು.
First published:April 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ