• Home
  • »
  • News
  • »
  • national-international
  • »
  • WB Bypoll: ದೀದಿ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ

WB Bypoll: ದೀದಿ ಪಕ್ಷದಿಂದ ಕಣಕ್ಕಿಳಿಯುತ್ತಿದ್ದಾರೆ ನಟ, ರಾಜಕಾರಣಿ ಶತ್ರುಘ್ನ ಸಿನ್ಹಾ

ಶತ್ರುಘ್ನ ಸಿನ್ಹಾ

ಶತ್ರುಘ್ನ ಸಿನ್ಹಾ

ಮುಂಬರುವ ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗಾಗಿ ಮಾಜಿ ಕೇಂದ್ರ ಸಚಿವರಾದ ಶತ್ರುಘ್ನ ಸಿನ್ಹಾ ಹಾಗೂ ಬಾಬುಲ್ ಸುಪ್ರಿಯೊ ಸ್ಪರ್ಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಘೋಷಿಸಿದ್ದಾರೆ

  • Share this:

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸಿನಿ ತಾರೆಗಳು ಕಣ್ಣಕ್ಕಿಳಿಯುವುದು ತುಂಬಾ ಕಾಮನ್. ವಿಧಾನಸಭಾ ಚುನಾವಣೆ, ಉಪ ಚುನಾವಣೆಗೆ ಟಿಎಂಸಿ ಪ್ರತಿಬಾರಿಯೂ ಸ್ಟಾರ್ ರಂಗು ಮಾತ್ರ ಕಡಿಮೆ ಮಾಡುವುದಿಲ್ಲ. ಯುವ ನಟ ಅಥವಾ ಯುವನಟಿಯರಿಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸುತ್ತದೆ. ಇದು ಬಹಳಷ್ಟು ಸಲ ವರ್ಕೌಟ್ ಆಗಿದೆ ಕೂಡಾ. ಇದೀಗ ಮುಂಬರುವ ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ಮತ್ತೆ ಟಿಎಂಸಿ ನಟರನ್ನೇ ಕಣಕ್ಕಿಳಿಸುತ್ತಿದೆ. ಟಿಎಂಸಿ ನಾಯಕಿ ತಮ್ಮ ಪಕ್ಷದ ಅಬ್ಯರ್ಥಿಗಳ ಹೆಸರನ್ನು ಎನೌನ್ಸ್ ಮಾಡಿದ್ದಾರೆ.


ಟಿಎಂಸಿ ಟಿಕೆಟ್ ನೀಡುವಾಗ ತಾರಾ ಪ್ರಚಾರ ಬಳಸುವುದಲ್ಲದೆ ಅಬ್ಯರ್ಥಿಗಳನ್ನೂ ಸಿನಿರಂಗದಿಂದ ಆರಿಸಿಕೊಳ್ಳಲು ಹಿಂಜರಿಯುವುದಿಲ್ಲ. ರಾಜಕೀಯಕ್ಕೆ ಹೊಸ ಮುಖವಾದರೂ ಸರಿ ಸಿನಿಮಾದವರಾದರೆ ತಟ್ಟನೆ ಟಿಕೆಟ್ ಕೊಟ್ಟುಬಿಡುತ್ತದೆ ಟಿಎಂಸಿ.


ಅಬ್ಯರ್ಥಿಗಳನ್ನು ಘೋಷಿಸಿದ ಟಿಎಂಸಿ


ಮುಂಬರುವ ಪಶ್ಚಿಮ ಬಂಗಾಳ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗಾಗಿ ಮಾಜಿ ಕೇಂದ್ರ ಸಚಿವರಾದ ಶತ್ರುಘ್ನ ಸಿನ್ಹಾ ಹಾಗೂ ಬಾಬುಲ್ ಸುಪ್ರಿಯೊ ಸ್ಪರ್ಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ಘೋಷಿಸಿದ್ದಾರೆ. ಸಿನ್ಹಾ ಅವರು ಅಸನ್ಸೋಲ್‌ನಿಂದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದರೆ, ಸುಪ್ರಿಯೊ ಅವರು ಬಳ್ಳಿಗುಂಜೆಯಿಂದ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದಾರೆ.


ಖ್ಯಾತ ನಟ ಶತ್ರುಘ್ನ ಸಿನ್ಹಾ


"ಮಾಜಿ ಕೇಂದ್ರ ಸಚಿವ ಮತ್ತು ಖ್ಯಾತ ನಟ ಶ್ರೀ ಶತ್ರುಘ್ನ ಸಿನ್ಹಾ ಅವರು ಅಸನ್ಸೋಲ್‌ನಿಂದ ಲೋಕಸಭೆಯ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗುತ್ತಾರೆ ಎಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಪರವಾಗಿ ಘೋಷಿಸಲು ಸಂತೋಷವಾಗಿದೆ" ಎಂದು ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.


ಖ್ಯಾತ ಗಾಯಕ ಶ್ರೀ ಬಾಬುಲ್ ಸುಪ್ರಿಯೋ


“ಮಾಜಿ ಕೇಂದ್ರ ಸಚಿವ ಮತ್ತು ಖ್ಯಾತ ಗಾಯಕ ಶ್ರೀ ಬಾಬುಲ್ ಸುಪ್ರಿಯೋ ಅವರು ಬ್ಯಾಲಿಗುಂಗೆಯಿಂದ ವಿಧಾನಸಭಾ ಉಪಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯಾಗಲಿದ್ದಾರೆ. ಜೈ ಹಿಂದ್, ಜೈ ಬಾಂಗ್ಲಾ, ಜೈ ಮಾ- ಮತಿ- ಮಾನುಷ್!
ಸೆಪ್ಟೆಂಬರ್‌ನಲ್ಲಿ, ಸುಪ್ರಿಯೊ ಭಾರತೀಯ ಜನತಾ ಪಕ್ಷದಿಂದ (ಬಿಜೆಪಿ) ಹೊರಬಂದರು. ಎರಡು ತಿಂಗಳ ನಂತರ ಟಿಎಂಸಿಗೆ ಸೇರಿದರು.ಅವರು ಕೇಂದ್ರದ ರಾಜ್ಯ ಸಚಿವ ಸ್ಥಾನದಿಂದ ತೆಗೆದುಹಾಕಲ್ಪಟ್ಟರು. ನನ್ನ ಕಠಿಣ ಪರಿಶ್ರಮ ಮತ್ತು ಉತ್ತಮ ಕೆಲಸದ ಹೊರತಾಗಿಯೂ ಈಗ ಏನಾಯಿತೋ ಅದರ ಬಗ್ಗೆ ನಿರಾಶೆಗೊಂಡಿದ್ದೇನೆ ಎಂದು ಅವರು ಹೇಳಿದ್ದರು.


ಇದನ್ನೂ ಓದಿ: Modi: 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಬಗ್ಗೆ ಮೋದಿ ಮೆಚ್ಚುಗೆ! ಈ Movie ನೋಡ್ತಾರಾ ಪ್ರಧಾನಿ?


ನಟ ಕಮ್ ರಾಜಕಾರಣಿ ಸಿನ್ಹಾ 2019 ರ ಸಂಸತ್ ಚುನಾವಣೆಗೆ ಮುನ್ನ ಬಿಜೆಪಿಯಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಅವರು ಬಿಹಾರದ ಪಾಟ್ನಾ ಸಾಹಿಬ್‌ನಿಂದ ಬಿಜೆಪಿಯ ರವಿಶಂಕರ್ ಪ್ರಸಾದ್ ಎದುರು ಸೋತರು. ಅಸನ್ಸೋಲ್ ಮತ್ತು ಬಳ್ಳಿಗುಂಜೆ ಸೇರಿದಂತೆ ನಾಲ್ಕು ವಿಧಾನಸಭಾ ಸ್ಥಾನಗಳಿಗೆ ಏಪ್ರಿಲ್ 12 ರಂದು ಉಪಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ.


ಇದನ್ನೂ ಓದಿ: Morning Digest: ಪ್ರಿಯಾಂಕಾ ಗಾಂಧಿ ರಾಜೀನಾಮೆ ಸಾಧ್ಯತೆ, ಮಗನಿಂದ ಒಂದಾದ ದಂಪತಿ, ಚಿನ್ನದ ಬೆಲೆ ಏರಿಕೆ: ಬೆಳಗಿನ ಟಾಪ್ ನ್ಯೂಸ್ ಗಳು

Published by:Divya D
First published: