ಫ್ರಾನ್ಸ್​ನಲ್ಲಿ ರಕ್ಷಣಾ ಸಚಿವ; ವಿಜಯ ದಶಮಿಯಂದು ಮೊದಲ ರಫೇಲ್​ ಯುದ್ಧ ವಿಮಾನ ಸ್ವೀಕರಿಸಲಿದ್ದಾರೆ ರಾಜನಾಥ್​ ಸಿಂಗ್​

Latha CG | news18-kannada
Updated:October 8, 2019, 9:08 AM IST
ಫ್ರಾನ್ಸ್​ನಲ್ಲಿ ರಕ್ಷಣಾ ಸಚಿವ; ವಿಜಯ ದಶಮಿಯಂದು ಮೊದಲ ರಫೇಲ್​ ಯುದ್ಧ ವಿಮಾನ ಸ್ವೀಕರಿಸಲಿದ್ದಾರೆ ರಾಜನಾಥ್​ ಸಿಂಗ್​
ರಕ್ಷಣಾ ಸಚಿವ ರಾಜನಾಥ್ ಸಿಂಗ್​
  • Share this:
ನವದೆಹಲಿ(ಅ.08): ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಎರಡು ದಿನಗಳ ಫ್ರಾನ್ಸ್​ ಪ್ರವಾಸಕ್ಕೆ ತೆರಳಿದ್ದಾರೆ. ವಿಜಯದಶಮಿ ದಿನವಾದ ಇಂದು ಅವರು ಫ್ರಾನ್ಸ್​ನಿಂದ ರಫೇಲ್​ ಯುದ್ಧ ವಿಮಾನ ಸ್ವೀಕರಿಸಲಿದ್ದಾರೆ. ಯುದ್ಧ ವಿಮಾನಕ್ಕೆ ಶಸ್ತ್ರ ಪೂಜೆ ನೆರವೇರಿಸಿದ ಬಳಿಕ ರಫೇಲ್​ ಯುದ್ಧ ವಿಮಾನವನ್ನು ಮೊಟ್ಟ ಮೊದಲ ಬಾರಿಗೆ ಭಾರತಕ್ಕೆ ಹಸ್ತಾಂತರ ಮಾಡಿಕೊಳ್ಳಲಿದ್ಧಾರೆ.

ಇಂದು ಭಾರತೀಯ ವಾಯುಪಡೆಯ 87ನೇ ಸಂಸ್ಥಾಪನಾ ದಿನವೂ ಕೂಡ ಆಗಿದೆ. ಹೀಗಾಗಿ ರಕ್ಷಣಾ ಸಚಿವರು ಪ್ಯಾರಿಸ್​ನಲ್ಲಿಯೇ ರಫೇಲ್​ ಯುದ್ಧ ವಿಮಾನಕ್ಕೆ ಶಸ್ತ್ರ ಪೂಜೆ ಸಲ್ಲಿಸಲಿದ್ಧಾರೆ. ಶಸ್ತ್ರ ಪೂಜೆ ಭಾರತೀಯ ಸಂಪ್ರದಾಯವಾಗಿದ್ದು, ಸಾವಿರಾರು ವರ್ಷಗಳಿಂದ ಭಾರತೀಯರು ಈ ಪದ್ಧತಿಯನ್ನು ನಡೆಸಿಕೊಂಡು ಬಂದಿದ್ದಾರೆ.

ಆರೆ ಪ್ರಕರಣ: ಸುಪ್ರೀಂ ತೀರ್ಪು ಬೆನ್ನಲ್ಲೇ ಮರ ಕಡಿದ ಜಾಗದಲ್ಲಿ ಕಾಮಗಾರಿ ಮುಂದುವರೆಯಲಿದೆ ಎಂದ ಮುಂಬೈ ಮೆಟ್ರೋ

ಭಾರತಕ್ಕೆ ಯುದ್ಧ ವಿಮಾನ ಹಸ್ತಾಂತರವಾದ ಬಳಿಕ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ರಫೇಲ್​ನಲ್ಲಿ ಮೊದಲ ಹಾರಾಟ ನಡೆಸಲಿದ್ದಾರೆ. ಬೊರಾಡೆಕ್ಸ್​ನ ಮೆರಿಗ್ನ್ಯಾಕ್​ ವಾಯುನೆಲೆಯಲ್ಲಿ ಯುದ್ಧ ವಿಮಾನ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ.ಭಾರತ ಖರೀದಿಸುತ್ತಿರುವ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಒಂದನ್ನು ಮಾತ್ರ ಇಂದು ಫ್ರಾನ್ಸ್ ಹಸ್ತಾಂತರ ಮಾಡುತ್ತಿದೆ. ಮೊದಲ ಹಂತದಲ್ಲಿ ನೀಡಲಾಗುವ 4 ರಫೇಲ್​ ಯುದ್ಧ ವಿಮಾನಗಳು 2020ರ ಮೇ ತಿಂಗಳಿನಲ್ಲಿ ಭಾರತಕ್ಕೆ ಬರಲಿವೆ. ಸೆಪ್ಟೆಂಬರ್​ 22ರ ವೇಳೆಗೆ 36 ವಿಮಾನಗಳು ಭಾರತದ ಕೈ ಸೇರಲಿದೆ.

Bengaluru Weather: ಬೆಂಗಳೂರ ಹಬ್ಬದ ಸಂಭ್ರಮಕ್ಕಿಲ್ಲ ಮಳೆಯ ಅಡ್ಡಿ; ರಾಜ್ಯದ ವಿವಿಧೆಡೆ ಮಳೆ

ರಾಜನಾಥ್​ ಸಿಂಗ್​ ಫ್ರಾನ್ಸ್​ ಅಧ್ಯಕ್ಷ ಎಮ್ಮಾನ್ಯುಯಲ್ ಮಾಕ್ರೋನ್​  ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.  ಬಳಿಕ ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವ ಫ್ಲಾರೆನ್ಸ್ ಪಾರ್ಲಿ ಅವರೊಂದಿಗೆ ವಾರ್ಷಿಕ ರಕ್ಷಣಾ ಸಂವಾದವನ್ನು ನಡೆಸಲಿದ್ದಾರೆ ಎನ್ನಲಾಗಿದೆ.

First published:October 8, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading