ಟಾಮ್​ ವಡಕ್ಕನ್​ ಬೆನ್ನಲ್ಲೇ ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್​ ಮುಖಂಡ ಶಶಿ ತರೂರ್​​ ಸಂಬಂಧಿಕರು

ಕೇರಳ ಕಾಂಗ್ರೆಸ್​ ನಾಯಕ ಹಾಗೂ ಸೋನಿಯಾ ಗಾಂಧಿ ಅವರಿಗೂ ಆಪ್ತರಾಗಿದ್ದ ಟಾಮ್​ ವಡಕ್ಕನ್​ ಅವರು ಬಿಜೆಪಿಗೆ ಸೇರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಕೇರಳ ಕಾಂಗ್ರೆಸ್ಸಿಗರ ಮುಜುಗರಕ್ಕೆ ಕಾರಣವಾಗಿದೆ.

Sushma Chakre | news18
Updated:April 3, 2019, 7:13 PM IST
ಟಾಮ್​ ವಡಕ್ಕನ್​ ಬೆನ್ನಲ್ಲೇ ಬಿಜೆಪಿಗೆ ಸೇರ್ಪಡೆಯಾದ ಕಾಂಗ್ರೆಸ್​ ಮುಖಂಡ ಶಶಿ ತರೂರ್​​ ಸಂಬಂಧಿಕರು
ಶಶಿ ತರೂರ್
Sushma Chakre | news18
Updated: April 3, 2019, 7:13 PM IST
ಕೊಚ್ಚಿ (ಮಾ. 16): ಲೋಕಸಭಾ ಚುನಾವಣೆಯಲ್ಲಿ ಎದುರಾಳಿಗಳಾಗಿ ಅಖಾಡಕ್ಕಿಳಿಯಲು ಸಕಲ ರೀತಿಯ ಸಿದ್ಧತೆಯನ್ನೂ ಮಾಡಿಕೊಂಡಿರುವ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳ ನಡುವೆ ಚಟುವಟಿಕೆಗಳು ಜೋರಾಗೇ ನಡೆಯುತ್ತಿವೆ. ರಾಜ್ಯದಲ್ಲಿ ಕೆಲ ಕಾಂಗ್ರೆಸ್​ ನಾಯಕರು ಬಿಜೆಪಿ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ. ಅತ್ತ ಕೇರಳದಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್​ನ ಹಿರಿಯ ನಾಯಕ ಶಶಿ ತರೂರ್​ ಅವರ ಕುಟುಂಬಸ್ಥರು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಶಶಿ ತರೂರ್​ ಅವರ ಚಿಕ್ಕಮ್ಮ ಮತ್ತು ಚಿಕ್ಕಪ್ಪ ನಿನ್ನೆ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಕೇರಳ ಕಾಂಗ್ರೆಸ್​ ನಾಯಕ ಹಾಗೂ ಸೋನಿಯಾ ಗಾಂಧಿ ಅವರಿಗೂ ಆಪ್ತರಾಗಿದ್ದ ಟಾಮ್​ ವಡಕ್ಕನ್​ ಅವರು ಬಿಜೆಪಿಗೆ ಸೇರಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿರುವುದು ಕೇರಳ ಕಾಂಗ್ರೆಸ್ಸಿಗರ ಮುಜುಗರಕ್ಕೆ ಕಾರಣವಾಗಿದೆ. ನಿನ್ನೆ ಕೊಚ್ಚಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಶಿ ತರೂರ್​ ಅವರ ಅಮ್ಮನ ತಂಗಿ ಮತ್ತು ಆಕೆಯ ಗಂಡ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇವರಿಬ್ಬರೂ ಸೇರಿದಂತೆ ಒಟ್ಟು 14 ಜನ ನಿನ್ನೆ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಇಂದು ಬಿಜೆಪಿ ಲೋಕಸಭಾ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ತರೂರ್​ ಅವರ ಚಿಕ್ಕಮ್ಮ ಶೋಭನಾ ಶಶಿಕುಮಾರ್​ ಮತ್ತು ಚಿಕ್ಕಪ್ಪ ಶಶಿಕುಮಾರ್​ ಬಿಜೆಪಿಗೆ ಸೇರಿದ ಬಳಿಕ ಮಾತನಾಡಿದ್ದು, ನಾವು ಅನೇಕ ವರ್ಷಗಳಿಂದ ಬಿಜೆಪಿ ಸಿದ್ಧಾಂತಗಳನ್ನೇ ಪಾಲಿಸಿಕೊಂಡು ಬರುತ್ತಿದ್ದೆವು. ನಮ್ಮನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಇಷ್ಟು ದೊಡ್ಡ ಕಾರ್ಯಕ್ರಮ ಆಯೋಜಿಸಿರುವುದು ನೋಡಿ ಆಶ್ಚರ್ಯವಾಗಿದೆ ಎಂದಿದ್ದಾರೆ.

First published:March 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626