Rahul Gandhi: ಕಾಂಗ್ರೆಸ್‌ನಲ್ಲೀಗ ಭಿನ್ನ 'ರಾಗ'! ರಾಹುಲ್ ನಾಯಕತ್ವದ ಬಗ್ಗೆ ಶಶಿ ತರೂರ್ ಅಪಸ್ವರ

ಪಂಚ ರಾಜ್ಯಗಳ ಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕೂಗು ಎದ್ದಿದೆ. ರಾಹುಲ್ ಗಾಂಧಿ ಬದಲು ಮತ್ತೋರ್ವ ಯುವ ಮುಖಕ್ಕೆ ಮಣೆ ಹಾಕುವಂತೆ ಕಾಂಗ್ರೆಸ್ ಹಿರಿಯ ನಾಯಕರೇ ಒತ್ತಾಯಿಸುತ್ತಿದ್ದಾರೆ. ನಿನ್ನೆ ಸಂಜಯ್ ಝಾ ಅಭಿಪ್ರಾಯ ಪಟ್ಟಿದ್ದರೆ, ಇಂದು ಶಶಿ ತರೂರ್ ಸರಣಿ ಟ್ವೀಟ್ ಮಾಡಿದ್ದಾರೆ.

ಶಶಿ ತರೂರ್ ಸಂಗ್ರಹ ಚಿತ್ರ

ಶಶಿ ತರೂರ್ ಸಂಗ್ರಹ ಚಿತ್ರ

  • Share this:
ಪಂಚ ರಾಜ್ಯಗಳಲ್ಲಿ (5 States) ನಡೆದಿದ್ದ ವಿಧಾನಸಭಾ ಚುನಾವಣಾ ಫಲಿತಾಂಶ (Assembly Election Result) ಹೊರಬಿದ್ದಿದೆ. ಉತ್ತರ ಪ್ರದೇಶ (Uttara Pradesh), ಪಂಜಾಬ್ (Punjab), ಉತ್ತರಾಖಂಡ್ (Uttarakhand), ಗೋವಾ (Goa) ಹಾಗೂ ಮಣಿಪುರದಲ್ಲಿ (Manipura) ಹೊಸ ಸರ್ಕಾರ (Government) ರಚನೆಯಾಗಲಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿ (BJP) ಅಧಿಪತ್ಯ ಸಾಧಿಸಿದ್ರೆ, ಒಂದರಲ್ಲಿ ಆಮ್ ಆದ್ಮಿ ಪಕ್ಷ (Aam Admi Party) ಗೆಲುವು ಸಾಧಿಸಿದೆ. ಆದರೆ ಪ್ರಮುಖ ರಾಷ್ಟ್ರೀಯ ಪಕ್ಷವಾಗಿದ್ದ ಕಾಂಗ್ರೆಸ್ (Congress) ಮಾತ್ರ ತೀರಾ ಕಳಪೆ ಸಾಧನೆ ತೋರಿದೆ. ಪಂಚ ರಾಜ್ಯಗಳ ಪೈಕಿ ಅಧಿಕಾರದಲ್ಲಿದ್ದ ಪಂಜಾಬ್‌ ರಾಜ್ಯವನ್ನೂ ಸಹ ಕಾಂಗ್ರೆಸ್ ಕಳೆದುಕೊಂಡಿದೆ. ಈ ಸೋಲು ಎಐಸಿಸಿಯನ್ನು (AICC) ತೀವ್ರವಾಗಿ ಕಂಗೆಡಿಸಿದೆ. ಖುದ್ದು ರಾಹುಲ್ ಗಾಂಧಿ (Rahul Gandhi), ಪ್ರಿಯಾಂಕಾ ಗಾಂಧಿ (Priyanka Gandhi) ಸೇರಿದಂತೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಪ್ರಚಾರದಲ್ಲಿ ಭಾಗಿಯಾಗಿದ್ರೂ ಮತದಾರರ ಒಲವು ಗಳಿಸುವಲ್ಲಿ ಸೋತಿದ್ದಾರೆ. ಈ ಸೋಲಿನಿಂದ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆಯ ಕೂಗು ಎದ್ದಿದೆ. ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ್ದಾರೆ.

 ರಾಹುಲ್ ಗಾಂಧಿ ನಾಯಕತ್ವದ ವಿರುದ್ಧ ಅಪಸ್ವರ

 ಸತತ ಸೋಲಿನಿಂದ ಕಾಂಗ್ರೆಸ್ ಪಕ್ಷ ಸಂಪೂರ್ಣವಾಗಿ ಕಂಗೆಟ್ಟಿದೆ. ಸದ್ಯ ತಮ್ಮದೇ ಆಡಳಿತವಿದ್ದ ಪಂಜಾಬ್‌ನಲ್ಲಿ ಆದರೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿತ್ತು. ಇದೀಗ  ಆ ರಾಜ್ಯದಲ್ಲೂ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಇದು ಕಾಂಗ್ರೆಸ್ ನಾಯಕರಿಗೆ ಭಾರೀ ಆಘಾತ ತಂದಿದೆ.

ಪಂಚ ರಾಜ್ಯಗಳ ಚುನಾವಣೆ ಸೋಲಿನ ಬಳಿಕ ನಾಯಕತ್ವ ಬದಲಾವಣೆ ಕೂಗು ಕೇಳಿ ಬಂದಿದೆ. ರಾಹುಲ್ ಗಾಂಧಿ ಬದಲು ಬೇರೆಯವರಿಗೆ ಪಕ್ಷದ ಹೊಣೆ ನೀಡುವಂತೆ ಕಾಂಗ್ರೆಸ್ ಹಿರಿಯ ನಾಯಕರೇ ಆಗ್ರಹಿಸುತ್ತಿದ್ದಾರೆ.

ನಾಯಕತ್ವ ಬದಲಾವಣೆ ಬಗ್ಗೆ ಶಶಿ ತರೂರ್ ಟ್ವೀಟ್

ಕಾಂಗ್ರೆಸ್ ನಾಯಕ ಮತ್ತು ಸಂಸದ ಶಶಿ ತರೂರ್, ಕಾಂಗ್ರೆಸ್‌ ಪಕ್ಷದ ಸಾಂಸ್ಥಿಕ ನಾಯಕತ್ವದಲ್ಲಿ ಬದಲಾವಣೆ ತರುವುದು ಅನಿವಾರ್ಯ ಎಂದು ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಶಶಿ ತರೂರ್, ಕಾಂಗ್ರೆಸ್ ಪಕ್ಷದ ಸಿದ್ದಾಂತದ ಮೇಲೆ ನಂಬಿಕೆ ಇಟ್ಟು ದುಡಿಯುತ್ತಿರುವ ನಾಯಕರು ಮತ್ತು ಕಾರ್ಯಕರ್ತರಿಗೆ ಈ ಫಲಿತಾಂಶ ಅತ್ಯಂತ ನಿರಾಸೆ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: Rahul Gandhi: ಎಐಸಿಸಿ ಅಧಿಕಾರ ರಾಹುಲ್ 'ಕೈ' ಸೇರುವುದು ಇನ್ನು ಸುಲಭವಲ್ಲವಾ? ಹಿರಿಯ ನಾಯಕರಿಂದಲೇ ಅಪಸ್ವರ, ಸಚಿನ್ ಪೈಲಟ್ ಮೇಲೆ ಒಲವು

ಸಾಂಸ್ಥಿಕ ನಾಯಕತ್ವದಲ್ಲಿ ಬದಲಾವಣೆ ಅಗತ್ಯವಿದೆ

ಪಂಚರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಪ್ರದರ್ಶನ ಕಂಡಿದೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಸೋಲಿನ ಪರಾಮರ್ಶೆ ನಡೆಸುವಾಗ ಸಾಂಸ್ಥಿಕ ನಾಯಕತ್ವದಲ್ಲಿ ಬದಲಾವಣೆ ತರುವ ಬಗ್ಗೆಯೂ ಚರ್ಚೆ ಮಾಡಬೇಕು. ಇದು ಇಂದಿನ ತುರ್ತು ಅಗತ್ಯ ಎಂಬುದನ್ನು ಪಕ್ಷ ಮನಗಾಣಬೇಕಿದೆ ಎಂದು ಶಶಿ ತರೂರ್ ಹೇಳಿದ್ದಾರೆ.

ಈಗಲೇ ಎಚ್ಚೆತ್ತುಕೊಳ್ಳುವಂತೆ ಶಶಿ ತರೂರ್ ಸಲಹೆ

ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, 2024ರ ಲೋಕಸಭೆ ಚುನಾವಣೆಯಲ್ಲೂ ತೀವ್ರ ಮುಖಭಂಗ ಅನುಭವಿಸಬೇಕಾಗುತ್ತದೆ ಎಂದು ಶಶಿ ತರೂರ್ ಎಚ್ಚರಿಸಿದ್ದಾರೆ. ಈ ದೇಶದ ಉಜ್ವಲ ಭವಿಷ್ಯಕ್ಕಾಗಿ ಕಾಂಗ್ರೆಸ್ ಅನಿವಾರ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ನಾವು ಬದಲಾವಣೆಗೆ ಮುಂದಾಗದಿದ್ದರೆ, ಪಕ್ಷಕ್ಕೆ ಉಳಿಗಾಲವಿಲ್ಲ ಎಂಬ ಸತ್ಯವನ್ನೂ ಅರಿಯಬೇಕಿದೆ ಎಂದು ಶಶಿ ತರೂರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಸಚಿನ್ ಪೈಲಟ್‌ಗೆ ಪಟ್ಟ ಕಟ್ಟುವಂತೆ ಸಂಜಯ್ ಝಾ ಸಲಹೆ

ರಾಹುಲ್ ಗಾಂಧಿ ಅವರ ಸ್ಥಾನಕ್ಕೆ ಮತ್ತೋರ್ವ ಯುವ ನಾಯಕ ಸಚಿನ್ ಪೈಲಟ್ ಅವರನ್ನು ತರಬೇಕು ಎನ್ನುವ ಮಾತು ಕಾಂಗ್ರೆಸ್ ವಲಯದಲ್ಲೇ ಕೇಳಿ ಬರುತ್ತಿದೆ. ನಿನ್ನೆ ಈ ಬಗ್ಗೆ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ಮಾಜಿ ವಕ್ತಾರ ಸಂಜಯ್‌ ಝಾ, ಸಚಿನ್‌ ಪೈಲಟ್‌ ಕಾಂಗ್ರೆಸ್‌ ಅಧ್ಯಕ್ಷರಾಗಬೇಕು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ.

ಇದನ್ನೂ ಓದಿ: Karnataka Assembly: "ಕಾಂಗ್ರೆಸ್‌ ನಡಿಗೆ ಈಗ ಇಟಲಿ ಕಡೆಗೆ!" ಪಂಚರಾಜ್ಯಗಳ ಚುನಾವಣೆಯಲ್ಲಿ 'ಕೈ' ಸೋಲಿಗೆ ಯತ್ನಾಳ್ ವ್ಯಂಗ್ಯ

ಕಾಂಗ್ರೆಸ್‌ ಪಕ್ಷವನ್ನು ಮುನ್ನಡೆಸಲು ಸಚಿನ್‌ ಪೈಲಟ್‌ಗೆ ಅವಕಾಶ ನೀಡುವ ಸಮಯ ಇದು. ಅವರು ಶ್ರಮ ಜೀವಿ, 24x7 ಕೆಲಸ ಮಾಡುವ ನಾಯಕ, ಗೆಲುವಿನ ಹಸಿವಿದೆ ಹಾಗೂ ಅತ್ಯಂತ ಉತ್ತಮ ಸಂವಹನಕಾರ. ಅವರಿಗೆ ಅಧಿಕಾರ ನೀಡಿದರೆ ಕಾಂಗ್ರೆಸ್ ಗೆಲುವು ಸುಲಭ ಎಂದು ಹೇಳಿದ್ದರು.
Published by:Annappa Achari
First published: