ಜಾಗತಿಕ ವೇದಿಕೆಯಲ್ಲೇ ಕಾಶ್ಮೀರ ವಿಚಾರದಲ್ಲಿ ಪಾಕ್​​ ಬಣ್ಣ ಬಯಲು ಮಾಡಿದ ಶಶಿ ತರೂರ್​​: ಭಾರೀ ಮೆಚ್ಚುಗೆ

ಜಮ್ಮು-ಕಾಶ್ಮೀರದಲ್ಲಿನ ಉಗ್ರ ಕೃತ್ಯಗಳಿಗೆ ಪಾಕಿಸ್ತಾನವೇ ಕಾರಣ. ಆದರೂ, ತನ್ನ ಪ್ರಾಯೋಜಿತ ಉಗ್ರ ಕೃತ್ಯಗಳನ್ನು ಕಾಶ್ಮೀರದ ತಲೆಗೆ ಕಟ್ಟುತ್ತಿದೆ. ಈ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಪಾಕ್​​ ಹಸ್ತಕ್ಷೇಪ ಸರಿಯಲ್ಲ ಎಂದು ಕಿಡಿಕಾರಿದರು ಶಶಿ ತರೂರ್​​.

news18-kannada
Updated:October 17, 2019, 4:35 PM IST
ಜಾಗತಿಕ ವೇದಿಕೆಯಲ್ಲೇ ಕಾಶ್ಮೀರ ವಿಚಾರದಲ್ಲಿ ಪಾಕ್​​ ಬಣ್ಣ ಬಯಲು ಮಾಡಿದ ಶಶಿ ತರೂರ್​​: ಭಾರೀ ಮೆಚ್ಚುಗೆ
ಶಶಿ ತರೂರ್
  • Share this:
ನವದೆಹಲಿ(ಅ.17): ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಭಾರತದ ಸಂಸತ್ತಿನ ನಿಯೋಗದ ಪರವಾಗಿ ಭಾಗಿಯಾಗಿದ್ದ ಕಾಂಗ್ರೆಸ್​ನ ಹಿರಿಯ ಸಂಸದ ಶಶಿ ತರೂರ್​​​, ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನಕ್ಕೆ ತಪರಾಕಿ ಬಾರಿಸಿದ್ದಾರೆ.

ಸೆರ್ಬಿಯಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯಾವಹಾರಿಕ ಸಭೆಯಲ್ಲಿ ಭಾರತದ ಪರವಾಗಿ ಮಾತಾಡಿದ ಶಶಿ ತರೂರ್, ಪಾಕಿಸ್ತಾನದ ನಿಜವಾದ ಸ್ವರೂಪ ಬಯಲು ಮಾಡಿದ್ದಾರೆ. ಕಾಶ್ಮೀರವೂ ಭಾರತದ ಅವಿಭಾಜ್ಯ ಅಂಗ. ಇದು ಜಾಗತೀಕ ಸತ್ಯ. ಆದರೆ, ತಮ್ಮ ರಾಜಕೀಯ ಲಾಭಕ್ಕಾಗಿ ಪಾಕಿಸ್ತಾನ ಕಾಶ್ಮೀರ ವಿಚಾರದಲ್ಲಿ ಸುಳ್ಳು ಹೇಳಿಕೊಂಡು ಬಂದಿದೆ. ಅದಕ್ಕಾಗಿ ಜಾಗತಿಕ ವೇದಿಕೆಯನ್ನೇ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

ಜಮ್ಮು-ಕಾಶ್ಮೀರದಲ್ಲಿನ ಉಗ್ರ ಕೃತ್ಯಗಳಿಗೆ ಪಾಕಿಸ್ತಾನವೇ ಕಾರಣ. ಆದರೂ, ತನ್ನ ಪ್ರಾಯೋಜಿತ ಉಗ್ರ ಕೃತ್ಯಗಳನ್ನು ಕಾಶ್ಮೀರದ ತಲೆಗೆ ಕಟ್ಟುತ್ತಿದೆ. ಈ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಪಾಕ್​​ ಹಸ್ತಕ್ಷೇಪ ಸರಿಯಲ್ಲ ಎಂದು ಕಿಡಿಕಾರಿದರು ಶಶಿ ತರೂರ್​​.

ಪಾಕಿಸ್ತಾನದ ಬಣ್ಣ ಬಯಲು ಮಾಡಿದ ಶಶಿ ತರೂರ್​​, ತಮ್ಮ ಭಾಷಣದ ತುಣುಕೊಂದನ್ನು ಟ್ವೀಟ್​​ ಮಾಡಿದ್ದಾರೆ. ಈ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನೊಂದೆಡೆ ಇವರು ಬಳಸಿರುವ ಕೆಲವೊಂದು ಪದಗಳಿಗೆ ಡಿಕ್ಷನರಿಯಲ್ಲಿ ಅರ್ಥ ಹುಡುಕಲಾಗುತ್ತಿದೆ.


ಇತ್ತೀಚೆಗೆ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕೈಗೊಂಡ ಈ ನಿರ್ಧಾರದ ವಿರುದ್ಧ ಪಾಕಿಸ್ತಾನ ಸೇರಿದಂತೆ ಜಮ್ಮು-ಕಾಶ್ಮೀರದ ರಾಜಕೀಯ ನಾಯಕರು ಕಿಡಿಕಾರಿದ್ದರು. ಹೀಗೆ ಟ್ವೀಟ್​​ ಮೂಲಕ ಕೇಂದ್ರದ ನಿರ್ಧಾರವನ್ನು ವಿರೋಧಿಸಿದ್ದ ಎನ್​ಸಿ ಮುಖ್ಯಸ್ಥ ಒಮರ್​ ಅಬ್ದುಲ್ಲಾ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.

ಇದನ್ನೂ ಓದಿ: ಯೂರೋಪ್ ಒಕ್ಕೂಟ ಮತ್ತು ಬ್ರಿಟನ್ ಮಧ್ಯೆ ಹೊಸ ಬ್ರೆಕ್ಸಿಟ್ ಒಪ್ಪಂದ

ಬಳಿಕ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿರುವ ಬೆಳವಣಿಗೆಯ ಬಗ್ಗೆ ಕೇಂದ್ರ ವಿರೋಧ ಪಕ್ಷಗಳು ಪ್ರಶ್ನಿಸುತ್ತಲೇ ಇದ್ದವು. ಏನು ನಡೆಯುತ್ತಿದೆ? ರಾಜಕೀಯ ಮುಖಂಡರು ಏನೂ ತಪ್ಪು ಮಾಡದೆ ಯಾಕೇ ಗೃಹಬಂಧನದಲ್ಲಿ ಇರಿಸಲಾಗಿದೆ? ಎಂದು ಕುಟಕಿದ್ದರು. ಕಾಶ್ಮೀರಿಗಳು ನಮ್ಮಂತೆ ನಾಗರಿಕರು ಎಂದು ಉಮರ್​ ಹಾಗೂ ಮುಫ್ತಿ ಗೃಹಬಂಧನವನ್ನು ವಿರೋಧಿಸಿದ್ದರು. ಈ ವಿಚಾರವೂ ವಿಶ್ವಮಟ್ಟದಲ್ಲಿ ಚರ್ಚೆಗೀಡಾಯ್ತು. ಅಮೆರಿಕಾ ಅಧ್ಯಕ್ಷ ಟ್ರಂಪ್​​ ಕೂಡ ಭಾರತ ಮತ್ತು ಪಾಕ್​​ ನಡುವೇ ಕಾಶ್ಮೀರ ವಿಚಾರ ಬಗೆಹರಿಸಲು ಮಧ್ಯಸ್ಥಿಕೆ ವಹಿಸುವುದಾಗಿಯೂ ಹೇಳಿದ್ದರು. ಆದರೆ, 370ನೇ ವಿಧಿ ರದ್ದು ಆದೇಶ ಭಾರತದ ಆಂತರಿಕ ವಿಚಾರ ಎಂದು ಪ್ರಧಾನಿ ಮೋದಿ ಈ ಚರ್ಚೆಗಳಿಗೆ ತೆರೆಳೆದರು.

ಈ ಮಧ್ಯೆ ಪಾಕಿಸ್ತಾನ ಮಾತ್ರ ಕಾಶ್ಮೀರಕ್ಕೆ ಮೊದಲಿನಂತೆಯೇ ವಿಶೇಷ ಸ್ಥಾನಮಾನ ನೀಡದಿದ್ದರೆ ಭಾರತದ ಜೊತೆಗೆ ಮಾತುಕತೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿತ್ತು. ರದ್ದುಗೊಳಿಸಿದ 370ನೇ ಆದೇಶ ಹಿಂಪಡೆಯಯುವಂತೆ ಭಾರತ ಸರ್ಕಾರಕ್ಕೆ ಆಗ್ರಹಿಸಿತ್ತು. ಅಲ್ಲದೇ 370ನೇ ವಿಧಿ ರದ್ದತಿಯೂ ಉಭಯ ದೇಶಗಳ ನಡುವೆ ಯುದ್ಧಕ್ಕೆ ಕಾರಣವಾದೀತು ಎಂದು ಪಾಕ್​​​ ಪ್ರಧಾನಿ ಇಮ್ರಾನ್​​ ಖಾನ್ ಕೂಡ​​ ಭಾರತಕ್ಕೆ ಎಚ್ಚರಿಕೆ ನೀಡಿದ್ದರು. ಭಾರತ ಪಾಕಿಸ್ತಾನದ ಮೇಲೆ ದಾಳಿಗೆ ಮುಂದಾದರೆ, ನಾವು ನಿಮಗೆ ತಕ್ಕಪಾಠ ಕಲಿಸುತ್ತೇವೆ. ಬಳಿಕ ಭಾರತವೂ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದಿದ್ದಾರೆ.
-----------
First published:October 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading