Congress President Election: ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕು, ಸ್ವಂತ ನಾಡಿನಲ್ಲೇ ತರೂರ್​ಗೆ ಸಿಗುತ್ತಿಲ್ಲ ಬೆಂಬಲ!

Congress President Election: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಕೇರಳದ ತಿರುವನಂತಪುರಂ ಸಂಸದ ಶಶಿ ತರೂರ್ ಮನಸ್ಸು ಮಾಡಿದ್ದಾರೆ. ಆದರೆ ಕೇರಳದ ಹಿರಿಯ ಕಾಂಗ್ರೆಸ್ ನಾಯಕನಿಗೆ ಅವರದ್ದೇ ತವರು ನಾಡಿನಲ್ಲಿ ಬೆಂಬಲ ಸಿಗುತ್ತಿಲ್ಲ. ಕೇರಳ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯೇ ಮತ್ತೆ ಅಧ್ಯಕ್ಷರಾಗುವುದಬನನ್ನು ನೋಡಲು ಬಯಸುತ್ತೇವೆ ಎಂದು ಹೇಳಿದ್ದಾರೆ.

ಶಶಿ ತರೂರ್

ಶಶಿ ತರೂರ್

  • Share this:
ತಿರುವನಂತಪುರಂ(ಸೆ.22)ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆ (Congress President Election) ಭಾರೀ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಸಂಸದ ಶಶಿ ತರೂರ್ (Congress MP Shashi Tharoor) ಚುನಾವಣೆಗೆ ನಿಲ್ಲುವ ಮನಸ್ಸು ಮಾಡಿದ್ದಾರೆ. ಹೀಗಿದ್ದರೂ ಅವರಿಗೆ ತಮ್ಮ ರಾಜ್ಯವಾದ ಕೇರಳದಿಂದ ಬೆಂಬಲ ಸಿಗುತ್ತಿಲ್ಲ. ರಾಹುಲ್ ಗಾಂಧಿಯೇ (Rahul Gandhi) ಮತ್ತೆ ಅಧ್ಯಕ್ಷರಾಗಬೇಕೆಂದು ಕೇರಳ ಕಾಂಗ್ರೆಸ್ ನಾಯಕರು ಬಯಸುತ್ತಿದ್ದಾರೆ. ಶಶಿ ತರೂರ್‌ಗೆ ಇದು ಹಿನ್ನಡೆಗಿಂತ ಕಡಿಮೆಯಿಲ್ಲ. ಅಂದಹಾಗೆ, ಕೇರಳಕ್ಕೂ ಮುನ್ನ 7 ರಾಜ್ಯಗಳ ಕಾಂಗ್ರೆಸ್ ಸಮಿತಿಗಳೂ ರಾಹುಲ್ ಅವರನ್ನು ಅಧ್ಯಕ್ಷರನ್ನಾಗಿಸಲು ಮುಂದಾಗಿವೆ. ಆದರೆ, ಇದುವರೆಗೂ ರಾಹುಲ್‌ ಅಭ್ಯರ್ಥಿಯಾಗುವ ಬಗ್ಗೆ ಏನೂ ಸ್ಪಷ್ಟನೆ ನೀಡಿಲ್ಲ.

ಶಶಿ ತರೂರ್ ಬಗ್ಗೆ ಹೇಳುವುದಾದರೆ, ಅವರು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ತರೂರ್ ಚುನಾವಣೆಗೆ ಸ್ಪರ್ಧಿಸಲು ಬಯಸಿದರೆ ಅದು ಅವರ ನಿರ್ಧಾರ ಎಂದು ಸೋನಿಯಾ ಗಾಂಧಿ ಕೂಡ ಹೇಳಿದ್ದಾರೆ. ಶಶಿ ತರೂರ್ ಸದ್ಯ ಅಶೋಕ್ ಗೆಹ್ಲೋಟ್ ಅವರ ಸವಾಲನ್ನು ಎದುರಿಸುತ್ತಿದ್ದಾರೆ. ಅವರು ಈ ತಿಂಗಳ ಅಂತ್ಯದೊಳಗೆ ಅಧ್ಯಕ್ಷರ ಚುನಾವಣೆಗೆ ನಾಮನಿರ್ದೇಶನ ಮಾಡಬಹುದು. ಶಶಿ ತರೂರ್ ಕೂಡ ಇದೇ ತಿಂಗಳು ನಾಮಿನೇಷನ್ ಫೈಲ್ ಮಾಡಬಹುದು ಆದರೆ ಅವರಿಗೆ ಎಷ್ಟು ಬೆಂಬಲ ಸಿಗುತ್ತದೆ ಎಂಬುದು ಕಾದು ನೋಡಬೇಕು. ಏಕೆಂದರೆ ಇಲ್ಲಿ ತರೂರ್ ಕಾಂಗ್ರೆಸ್‌ನ ರೆಬೆಲ್ ಬಣ G-23 ರೊಂದಿಗೆ ಸಂಬಂಧ ಹೊಂದಿದ್ದಾರೆ, ಆದರೆ ಗೆಹ್ಲೋಟ್ ಅವರನ್ನು ಗಾಂಧಿ ಕುಟುಂಬಕ್ಕೆ ಆಪ್ತರೆಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: Rahul Gandhi: ಎಐಸಿಸಿ ಅಧಿಕಾರ ರಾಹುಲ್ 'ಕೈ' ಸೇರುವುದು ಇನ್ನು ಸುಲಭವಲ್ಲವಾ? ಹಿರಿಯ ನಾಯಕರಿಂದಲೇ ಅಪಸ್ವರ, ಸಚಿನ್ ಪೈಲಟ್ ಮೇಲೆ ಒಲವು

ರಾಹುಲ್ ಗಾಂಧಿ ಬೆಂಬಲಕ್ಕೆ ಕೇರಳದ ನಾಯಕ

ಶಶಿ ತರೂರ್ ಅವರು ಕೇರಳದ ತಿರುವನಂತಪುರಂನಿಂದ ಸಂಸದರಾಗಿದ್ದಾರೆ. ಹೀಗಿದ್ದರೂ ಕೇರಳದ ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲಕ್ಕೆ ನಿಂತಿಲ್ಲ. ಆಜ್ ತಕ್ ಅವರು ಕೇರಳ ಕಾಂಗ್ರೆಸ್‌ನ ಕೆಲವು ಹಿರಿಯ ನಾಯಕರು ಮತ್ತು ಸಂಸದರೊಂದಿಗೆ ಮಾತನಾಡಿದ್ದು, ಎಲ್ಲರೂ ರಾಹುಲ್ ಗಾಂಧಿಯೇ ತಮ್ಮ ಆಯ್ಕೆ ಎಂದು ಹೇಳಿರುವುದಾಗಿ ವರದಿ ಮಾಡಿದೆ.

ಸ್ಪರ್ಧಿಸುವುದು ಅವರ ಇಚ್ಛೆ:

ಪಕ್ಷದ ಅಧ್ಯಕ್ಷರ ಚುನಾವಣೆಗೆ ಸ್ಪರ್ಧಿಸಬೇಕೋ, ಬೇಡವೋ ಎಂಬುವುದು ತರೂರ್ ಅವರ ನಿರ್ಧಾರ ಎಂದು ಹಿರಿಯ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತ್ತಲ ಹೇಳಿದ್ದಾರೆ. ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷರಾಗಬೇಕು ಎಂಬುದು ಕೇರಳದ ಜನರ ಅಭಿಪ್ರಾಯವಾಗಿದೆ ಎಂದ ಅವರು, ಈ ಬಗ್ಗೆ ಯಾವುದೇ ರೀತಿಯ ಪ್ರಸ್ತಾವನೆ ತರುವ ಅಗತ್ಯವಿಲ್ಲ ಎಂದಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಯಾರು ಬೇಕಾದರೂ ಸ್ಪರ್ಧಿಸಬಹುದು ಎಂದು ಸಂಸದ ಕೊಡುಕುನಿಲ್ ಸುರೇಶ್ ಹೇಳಿದ್ದಾರೆ. ಪಕ್ಷ ಸರ್ವಾನುಮತದಿಂದ ನಿರ್ಧಾರ ತೆಗೆದುಕೊಳ್ಳಲಿದೆ. ಶಶಿ ತರೂರ್ ಅಭ್ಯರ್ಥಿಯಾಗುವ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ ಎಂದರು. ರಾಹುಲ್ ಈ ಹುದ್ದೆಗೆ ಅರ್ಹರು. ರಾಹುಲ್ ಅಧ್ಯಕ್ಷರಾಗಿ ಮರಳುತ್ತಾರೆ ಎಂಬ ಭರವಸೆ ನಮಗಿದೆ ಎಂದಿದ್ದಾರೆ.

ಸಂಸದ ಕೆ.ಮುರಳೀಧರನ್ ಕೂಡ ಇದೇ ಮಾತನ್ನು ಹೇಳಿದ್ದಾರೆ. ಪಕ್ಷದ ಅಧ್ಯಕ್ಷರ ಚುನಾವಣೆಗೆ ಯಾರೇ ಸ್ಪರ್ಧಿಸಲಿ, ಆದರೆ ನೆಹರೂ ಕುಟುಂಬದ ಬೆಂಬಲ ಇರುವವರೇ ಅಧ್ಯಕ್ಷರಾಗುತ್ತಾರೆ ಎಂದಿದ್ದಾರೆ.

ಗಾಂಧಿ ಕುಟುಂಬಕ್ಕೆ ಬಹಿರಂಗ ಬೆಂಬಲ ನೀಡುವವರೇ ಅಧ್ಯಕ್ಷ

ಮುರಳೀಧರನ್ ಕೂಡ ತರೂರ್ ಅವರನ್ನು ಬೆಂಬಲಿಸದ ಬಗ್ಗೆ ಸನ್ನೆಗಳಲ್ಲೇ ತಿಳಿಸಿದ್ದಾರೆ. ನಮ್ಮ ದೃಷ್ಟಿಯಲ್ಲಿ ನೆಹರೂ-ಗಾಂಧಿ ಕುಟುಂಬವನ್ನು ಬಹಿರಂಗವಾಗಿ ಬೆಂಬಲಿಸುವವರಿಗೆ ಮಾತ್ರ ಪಿಸಿಸಿ ಸದಸ್ಯರು ಬೆಂಬಲ ನೀಡುತ್ತಾರೆ ಎಂದು ಹೇಳಿದರು. ಅವರು (ತರೂರ್) ನೆಹರು-ಗಾಂಧಿ ಕುಟುಂಬವನ್ನು ಬೆಂಬಲಿಸುತ್ತಾರೆಯೇ? ನೆಹರೂ-ಗಾಂಧಿ ಕುಟುಂಬಕ್ಕೆ ಬಹಿರಂಗವಾಗಿ ಬೆಂಬಲ ನೀಡುವ ವ್ಯಕ್ತಿ ಮಾತ್ರ ಎಲ್ಲಾ ಮತಗಳನ್ನು ಪಡೆಯುತ್ತಾನೆ, ಇಲ್ಲದಿದ್ದರೆ ಇಲ್ಲ ಎಂದಿದ್ದಾರೆ.

ಇದನ್ನೂ ಓದಿ: Karnataka Assembly: "ಕಾಂಗ್ರೆಸ್‌ ನಡಿಗೆ ಈಗ ಇಟಲಿ ಕಡೆಗೆ!" ಪಂಚರಾಜ್ಯಗಳ ಚುನಾವಣೆಯಲ್ಲಿ 'ಕೈ' ಸೋಲಿಗೆ ಯತ್ನಾಳ್ ವ್ಯಂಗ್ಯ

ಇದೇ ವೇಳೆ ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಅಲ್ಲಿ ಇಷ್ಟೊಂದು ಪ್ರೀತಿ, ಗೌರವ ಸಿಗುತ್ತಿದೆ ಎಂದರೆ ಅದನ್ನು ರಾಹುಲ್ ಗಾಂಧಿ ನಡೆಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಮಾತ್ರ ಎಂದು ಕೇರಳ ನಾಯಕರು ಕೂಡ ಹೇಳುತ್ತಾರೆ.
Published by:Precilla Olivia Dias
First published: