ಕಾಂಗ್ರೆಸ್ ನಾಯಕ ಶಶಿ ತರೂರ್ (Congress leader Shashi Tharoor) ಹಾಸ್ಯಮಿಶ್ರಿತ ಟ್ವೀಟ್ಗಳನ್ನು ಮಾಡಿದರೂ ಅದರಲ್ಲೇನಾದರೂ ಸಂದೇಶವನ್ನು ನೀಡುತ್ತಲೇ ಇರುತ್ತಾರೆ. ಸಾಮಾಜಿಕ ತಾಣದಲ್ಲಿ (Social Media) ಟ್ವೀಟ್ಗಳನ್ನು ಅಗಾಗ್ಗೆ ಮಾಡುತ್ತಿರುವ ಶಶಿ ತರೂರ್ ಗಂಭೀರ್ ಅರ್ಥವಿರುವ ಟ್ವೀಟ್ಗಳಿಗೆ (Tweet) ಹಾಸ್ಯದ ಲೇಪನವನ್ನು ನೀಡಿ ತಮ್ಮ ಫಾಲೋವರ್ಸ್ಗಳಲ್ಲಿ ಹೆಸರುವಾಸಿಯಾಗಿದ್ದಾರೆ.
ಇದೀಗ ತಮ್ಮ ಟ್ವಿಟರ್ ಫಾಲೋವರ್ಸ್ಗಳ ತಲೆಗೆ ಕೆಲಸ ಕೊಡುವಂತಹ ಟ್ವೀಟ್ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಹೊಸ ಪೋಸ್ಟ್ನಲ್ಲಿ ಸ್ಥಿರ-ಟೆಲಿಫೋನ್ಗಳು ಸಾಮಾನ್ಯವಲ್ಲದ ಸಮಯದಲ್ಲಿ ಕೂಡ ಸೆಲ್ ಫೋನ್ಗಳು ತಮ್ಮ ಜೀವನದ ಅವಿಭಾಜ್ಯ ಅಂಗವಾಗುವಂತಹ ರೀತಿಯಲ್ಲಿ ತಂತ್ರಜ್ಞಾನ ವಿಕಸನಗೊಳ್ಳುತ್ತದೆ ಎಂಬುದಾಗಿ ಜನರು ಊಹಿಸಿದ್ದರು ಎಂದು ತಿಳಿಸಿದ್ದಾರೆ.
ಕಾರ್ಟೂನ್ ಹಂಚಿಕೊಂಡು ಟ್ವೀಟ್ ಮಾಡಿದ ಶಶಿ ತರೂರ್
ಸೆಲ್ ಫೋನ್ಗಳ ಬಳಕೆಯ ಬಗ್ಗೆ ಟ್ವೀಟ್ ಮಾಡಿರುವ ಶಶಿ ತರೂರ್, ಇಂದಿನ ಜಗತ್ತಿನಲ್ಲಿ ಫೋನ್ ಎಂಬುದು ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಆದರೆ ಈ ಊಹೆಯನ್ನು ಜನರು ಅಂದೇ ಮಾಡಿದ್ದರು ಎಂಬುದಕ್ಕೆ ನಿದರ್ಶನವಾಗಿ ಕಾರ್ಟೂನ್ ಒಂದನ್ನು ಹಂಚಿಕೊಂಡಿದ್ದಾರೆ.
ತರೂರ್ ಅವರು ನೂರು ವರ್ಷಗಳಷ್ಟು ಹಳೆಯದಾದ ಒಂದು ಚಿತ್ರಣವನ್ನು ಪೋಸ್ಟ್ ಮಾಡಿದ್ದಾರೆ ಹಾಗೂ ಆ ಚಿತ್ರದಲ್ಲಿ ವಿವಿಧ ಸಂದರ್ಭಗಳಲ್ಲಿ ಮನುಷ್ಯ ಬ್ಯೂಸಿ ಆಗಿದ್ದಾಗಲೂ ಯಾವಾಗ ಫೋನ್ ರಿಂಗಣಿಸುತ್ತದೆ ಹೇಳಲಾಗದು ಎಂಬಂತೆ ಕಾರ್ಟೂನ್ ಚಿತ್ರ ಬಿಡಿಸಲಾಗಿದೆ.ಆ ಚಿತ್ರದಲ್ಲಿ ವ್ಯಕ್ತಿಯೊಬ್ಬ ರೈಲು ಹತ್ತಲು ಓಡುತ್ತಿರುವಾಗ, ಸಭೆಯಲ್ಲಿ, ಕೈಗಳು ಕೆಲಸ ಮಾಡುತ್ತಿರುವಾಗ, ಮಳೆ ಬರುತ್ತಿರುವಾಗ, ಕೈಯಲ್ಲಿ ಮಗುವಿರುವಾಗ ಇನ್ನು ವಿವಾಹವಾಗುವ ಸಂದರ್ಭದಲ್ಲಿ ಕೂಡ ಫೋನ್ ರಿಂಗ್ ಆಗುವುದನ್ನು ಗಮನಿಸಬಹುದು.
Scarcely believable, but predictions about technology (usually wide off the mark) sometimes were eerily prescient. See this 1919 cartoon, when fixed-line telephones were still rare, which anticipated the mobile phone & the nuisance it could turn out to be 80 years later! pic.twitter.com/FlLaJ5ZKgk
— Shashi Tharoor (@ShashiTharoor) November 19, 2022
ಮೊಬೈಲ್ ಫೋನ್ಗಳಿಗೆ ಅಂಟಿಕೊಂಡಿರುವ ಆಧುನಿಕ ಯುಗ
ತಂತ್ರಜ್ಞಾನದ ಕುರಿತಾದ ಭವಿಷ್ಯವಾಣಿಗಳು ಮುಂದೆ ನಿಜವಾಗುತ್ತವೆ ಎಂಬುದಕ್ಕೆ ಇಂದಿನ ಆಧುನಿಕ ಯುಗವು ಮೊಬೈಲ್ ಫೋನ್ಗಳಿಗೆ ಎಷ್ಟು ಅವಲಂಬಿಸಿಕೊಂಡಿದೆ ಎಂಬುದನ್ನು ಅರಿತುಕೊಳ್ಳಬಹುದು ಎಂದು ಹೇಳಿದ್ದಾರೆ. 1919 ರ ಕಾರ್ಟೂನ್ ಒಂದನ್ನು ಹಂಚಿಕೊಂಡು ಶಶಿ ತರೂರ್ ಸ್ಥಿರ ದೂರವಾಣಿಗಳು ಅಪರೂಪವಾಗಿದ್ದ ಸಮಯದಲ್ಲಿಯೇ ಮೊಬೈಲ್ ಫೋನ್ಗಳಿಂದ ಉಂಟಾಗಬಹುದಾದ ತೊಂದರೆಯನ್ನು ಜನರು ನಿರೀಕ್ಷಿಸಿದ್ದರು ಎಂಬ ಅರ್ಥಗರ್ಭಿತ ಟ್ವೀಟ್ ಅನ್ನು ಹಂಚಿಕೊಂಡಿದ್ದಾರೆ.
ಬಳಕೆದಾರರು ಮಾಡಿರುವ ಟ್ವೀಟ್ಗಳೇನು?
ಹೆಚ್ಚಿನ ಟ್ವಿಟರ್ ಬಳಕೆದಾರರು ಶಶಿ ತರೂರ್ ಅವರ ಟ್ವೀಟ್ ಅನ್ನು ವಿನೋದಮಯ ಎಂದು ಕಂಡುಕೊಂಡಿದ್ದಾರೆ. ಶಶಿ ತರೂರ್ ಹಂಚಿಕೊಂಡಿರುವ ಕಾರ್ಟೂನ್ ತಂತ್ರಜ್ಞಾನದ ಅದ್ಭುತ ಕೈಚಳಕವನ್ನು ಉಂಟುಮಾಡಿದ್ದು ಇಂದಿನ ಕಾಲಮಾನಕ್ಕೆ ಉತ್ತಮವಾಗಿ ಹೋಲಿಕೆಯಾಗಿದೆ.
ಇನ್ನೊಬ್ಬ ಟ್ವಿಟರ್ ಬಳಕೆದಾರರು ತಮ್ಮ ಮೊಬೈಲ್ ಅನುಭವವನ್ನು ಹಂಚಿಕೊಂಡಿದ್ದು 1979 ರಲ್ಲಿ ಆತ ತಮ್ಮ ನಿವಾಸದಲ್ಲಿ ಸ್ಥಿರ ಲೈನ್ MTNL ಫೋನ್ ಸೌಲಭ್ಯವನ್ನು ಹೊಂದಿದ್ದರು; ನಂತರ 2001 ರಲ್ಲಿ ಸೆಲ್ ಫೋನ್ ಹೊಂದಿದೆ.
ಇದೀಗ ಸೆಲ್ಫೋನ್ ಇಲ್ಲ ಎಂದಾದರೆ ಏನೋ ಕಳೆದುಕೊಂಡಂತೆ ಭಾಸವಾಗುತ್ತದೆ ಒಟ್ಟಿನಲ್ಲಿ ಜೀವನ ಅರ್ಥಹೀನ ಎಂದೆನಿಸುತ್ತದೆ. ನಿಜವಾಗಿ ಹೇಳಬೇಕೆಂದರೆ ನನ್ನ ಜೀವನದ ಅತ್ಯಂತ ಸಂತೋಷದ ಭಾಗವು 1979 ರಲ್ಲಿ ಕೊನೆಗೊಂಡಿತು ಈ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ತಂತ್ರಜ್ಞಾನದ ವಿಷಯದಲ್ಲಿ ಯಾವುದೇ ಭವಿಷ್ಯವಾಣಿಗಳು ನಿಜವಾಗುತ್ತವೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. 1919 ರಲ್ಲಿಯೇ ಮೊಬೈಲ್ ಫೋನ್ಗಳ ಅಸ್ತಿತ್ವವಿತ್ತು ಎಂಬುದಕ್ಕೆ ಇದು ಪುರಾವೆಯಾಗಿದೆ ಎಂದು ಕಾಮೆಂಟ್ ಮಾಡಿದ್ದು, ವೈದಿಕ ಯುಗದಲ್ಲಿ ರಾವಣನಿಂದ ಹಾರುವ ರಥಗಳನ್ನು ನಡೆಸಲಾಯಿತು ಎಂಬುದನ್ನು ಈ ದೃಷ್ಟಾಂತ ಸಾಬೀತು ಪಡಿಸುತ್ತದೆ ಎಂದು ಹೇಳಿದ್ದಾರೆ. ನೀವು ಹಂಚಿಕೊಂಡಿರುವ ಕಾರ್ಟೂನ್ ಇಂದಿನ ಕಾಲಮಾನಕ್ಕೆ ಹೊಂದಿಕೊಳ್ಳುವಂತಿದೆ ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಹೆಚ್ಚಿನ ಬಳಕೆದಾರರು ಆ ಕಾಲದಲ್ಲಿಯೇ ನಾವೆಲ್ಲರೂ ಹೆಚ್ಚು ಸಂತೋಷವಾಗಿದ್ದೆವು ಎಂಬ ಮಾತನ್ನೇ ಅನುಕರಿಸಿದ್ದು, ಇಂದು ಎಲ್ಲರೂ ಮೊಬೈಲ್ ಫೋನ್ಗಳಿಗೆ ಹೆಚ್ಚು ಅವಲಂಬಿಸಿಕೊಂಡಿದ್ದಾಗಿಯೂ ಹಾಗೂ ತಮ್ಮ ಸಂತಸ ನಷ್ಟವಾಗಿದೆ ಎಂದೇ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ