Shashi Tharoor: ಓಣಂ ಸಂಭ್ರಮ; ಉಯ್ಯಾಲೆ ಆಡಿ ಹಬ್ಬ ಆಚರಿಸಿದ ಕಾಂಗ್ರೆಸ್​ ನಾಯಕ

ಉಯ್ಯಾಲೆ ಆಡುವ ಮೂಲಕ ಶುಭ ಕೋರಿರುವ ಶಶಿತರೂರ್​ ಅವರ ಇನ್ಸ್ಟಾಗ್ರಾಂ ಖಾತೆಗೆ ಅನೇಕರು ಪ್ರತಿಕ್ರಿಯಿಸಿದ್ದು, ಸರಳವಾಗಿ, ಸಂಪ್ರದಾಯಿಕವಾಗಿ ಕುಟುಂಬದೊಂದಿಗೆ ಹಬ್ಬ ಆಚರಿಸಿದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ

ಶಶಿತರೂರ್​

ಶಶಿತರೂರ್​

  • Share this:
    ಇಂದು ಓಣಂ ಸಂಭ್ರಮ. ಕೇರಳದಾದ್ಯಂತ ಜನರು ಈ ಹಬ್ಬದ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಇದೇ ವೇಳೆ ಕಾಂಗ್ರೆಸ್​ ನಾಯಕ ಶಶಿ ತರೂರ್​ ತವರಿನಲ್ಲಿ ಕೂಡ ಹಬ್ಬದ ಸಂಭ್ರಮ ಮೆಳೈಸಿದೆ. ಓಣಂ ಹಿನ್ನಲೆ ನಾಡಿನ ಜನತೆಗೆ ಈ ಬಾರಿ ಅವರು ವಿಶೇಷವಾಗಿ ಶುಭ ಕೋರಿ ಅವರು ಗಮನ ಸೆಳೆದಿದ್ದಾರೆ. ಓಣಂ ದಿನದ ಸಂಪ್ರದಾಯಿಕ ಪದ್ಧತಿಯಾದ ಉಯ್ಯಾಲೆ ಆಡುವ ಮೂಲಕ ಅವರು ಹಬ್ಬದ ಖುಷಿ ಹಂಚಿಕೊಂಡಿದ್ದಾರೆ. ಓಣಂ ದಿನ ಸಾಮಾನ್ಯವಾಗಿ ಯುವತಿಯರು ಉಯ್ಯಾಲೆ ಆಡುತ್ತಾರೆ. ಕೇವಲ ಯುವತಿಯರಿಗೆ ಮಾತ್ರ ಈ ಆಟ ಮೀಸಲು ಅಲ್ಲ ಎನ್ನುವ ಮೂಲಕ ಶಶಿ ತರೂರ್​ ಕೂಡ ಈ ಜೋಕಾಲಿಯಲ್ಲಿ ಕುಳಿತು ಹಬ್ಬ ಆಚರಿಸಿದ್ದಾರೆ. ಈ ಆಟದ ವಿಡಿಯೋವನ್ನು ಅವರು ತಮ್ಮ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.

    ಓಣಂ ಹಬ್ಬದ ಸಂಪ್ರದಾಯಿಕ ಉಡುಗೆಯಾದ ಕೆಂಪು ಕುರ್ತಾ, ಬಿಳಿ ಪಂಚೆ ಉಟ್ಟು ಉಯ್ಯಾಲೆ ಆಡುತ್ತಾ ನಾಡಿನ ಜನತೆಗೆ ಓಣಂ ಶುಭ ಕೋರಿರುವ ಅವರ ವಿಡಿಯೋ ಎಲ್ಲರ ಗಮನಸೆಳೆದಿದೆ. ಕೇರಳದ ಪಲಕ್ಕಾಡುನಲ್ಲಿ ಕುಟುಂಬದೊಂದಿಗೆ ಹಬ್ಬ ಆಚರಿಸುತ್ತಿದ್ದು, ಈ ವೇಳೆ ಯುವತಿಯರ ಮನವೊಲಿಸಿ, ಈ ಉಯ್ಯಾಲೆ ಆಡುವ ಅವಕಾಶ ಪಡೆದಿರುವುದಾಗಿ ಅವರು ತಿಳಿಸಿದ್ದಾರೆ.



    ಉಯ್ಯಾಲೆ ಆಡುವ ಮೂಲಕ ಶುಭ ಕೋರಿರುವ ಶಶಿತರೂರ್​ ಅವರ ಇನ್ಸ್ಟಾಗ್ರಾಂ ಖಾತೆಗೆ ಅನೇಕರು ಪ್ರತಿಕ್ರಿಯಿಸಿದ್ದು, ಸರಳವಾಗಿ, ಸಂಪ್ರದಾಯಿಕವಾಗಿ ಕುಟುಂಬದೊಂದಿಗೆ ಹಬ್ಬ ಆಚರಿಸಿದ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ನಮ್ಮ ಬಾಲ್ಯವನ್ನು ನೆನೆಪಿಸಿದ್ದೀರಾ ನೀವು ಎಂದು ಉತ್ತರಿಸಿದ್ದಾರೆ.

    ಇದನ್ನು ಓದಿ: 60ನೇ ಹುಟ್ಟುಹಬ್ಬ ಆಚರಿಸಿದ ನಟಿ ಸುಹಾಸಿನಿ; ಇಲ್ಲಿದೆ ಸಂಭ್ರಮದ ಫೋಟೋಗಳು

    ಓಣಂ ಕೇರಳದ ಅತ್ಯಂತ ಮಹತ್ವದ ಹಬ್ಬವಾಗಿದೆ. ಇದು ರಾಜ ಮಹಾಬಲಿಯ ವಾರ್ಷಿಕ ಗೃಹ ಪ್ರವೇಶದ ಸಂಕೇತವಾಗಿದೆ, ಅವರ ಆಡಳಿತವು ರಾಜ್ಯಕ್ಕೆ ಅತ್ಯಂತ ಸಮೃದ್ಧ ಸಮಯ ಎಂದು ನಂಬಲಾಗಿದೆ. ವಿಶ್ವದಾದ್ಯಂತ ಇರುವ ಮಲಯಾಳಿ ಸಮುದಾಯದವರು 10 ದಿನಗಳ ಆಚರಣೆಗಳೊಂದಿಗೆ ಈ ಹಬ್ಬವನ್ನು ಬಹಳ ವೈಭವದಿಂದ ಆಚರಿಸುತ್ತಾರೆ. ಇದು ಮಲಯಾಳಂ ಕ್ಯಾಲೆಂಡರ್ ತಿಂಗಳಾದ ಚಿಂಗಂನ 22ನೇ ನಕ್ಷತ್ರ ತಿರುವೋಣಂನಲ್ಲಿ ಬರುತ್ತದೆ ಮತ್ತು ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ ಹಬ್ಬ ಆಚರಿಸಲಾಗುತ್ತದೆ. ಈ ವರ್ಷ, ಆಗಸ್ಟ್ 12, ಗುರುವಾರದಂದು ಓಣಂ ಆರಂಭವಾಯಿತು ಮತ್ತು ಸೋಮವಾರ, ಆಗಸ್ಟ್ 23 ರಂದು ಕೊನೆಗೊಳ್ಳುತ್ತದೆ.

    ಸುಗ್ಗಿಯ ಹಬ್ಬವನ್ನು ವಿವಿಧ ಚಟುವಟಿಕೆಗಳೊಂದಿಗೆ ಅತ್ಯಂತ ವೈಭವದಿಂದ ಮತ್ತು ಪ್ರದರ್ಶನದೊಂದಿಗೆ ಆಚರಿಸಲಾಗುತ್ತದೆ. ವಲ್ಲಂ ಕಾಳಿ (ದೋಣಿ ಓಟಗಳು), ಪುಲಿಕಲಿ (ಹುಲಿ ನೃತ್ಯಗಳು), ಪೂಕಳಂ (ಹೂವಿನ ರಂಗೋಲಿ) ಓಣತಪ್ಪನ್ (ಪೂಜೆ), ಓಣಂ ಕಲಿ, ಟಗ್ ಆಫ್ ವಾರ್, ತುಂಬಿ ತುಳ್ಳಲ್ (ಮಹಿಳಾ ನೃತ್ಯ), ಕುಮ್ಮಟ್ಟಿಕಾಲಿ (ಮುಖವಾಡ ನೃತ್ಯ), ಓಣತಲ್ಲು (ಸಮರ ಕಲೆಗಳು), ಓನವಿಲ್ಲು (ಸಂಗೀತ), ಕಜ್ಜಕ್ಕುಳ (ಗಿಡದ ಕೊಡುಗೆಗಳು), ಒನಪೊಟ್ಟನ್ (ವೇಷಭೂಷಣಗಳು) ಮತ್ತು ಅಠಚಮಯಂ (ಜಾನಪದ ಹಾಡುಗಳು ಮತ್ತು ನೃತ್ಯ) - ಇವು ಓಣಂನ ಕೆಲವು ಪ್ರಮುಖ ಆಚರಣೆಗಳು

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದು ಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
    Published by:Seema R
    First published: