ನಾನು ರಾಷ್ಟ್ರಪತಿ ಚುನಾವಣೆಗೆ ನಿಲ್ಲುವುದಿಲ್ಲ, ಎಲ್ಲಾ ಊಹಾಪೋಹಗಳು ಸುಳ್ಳು: ಎನ್​ಸಿಪಿ ನಾಯಕ ಶರದ್​ ಪವಾರ್​

ಮೇ ತಿಂಗಳಿನಿಂದ ಮೂರು ಬಾರಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾದ ನಂತರ ರಾಷ್ಟ್ರಪತಿ ಚುನಾವಣೆಗೆ ಪವಾರ್ ಅವರು ಸ್ಪರ್ಧಿಸಲಿದ್ದಾರೆ ಎನ್ನುವ  ಸಂಚಲನ ಮೂಡಿತು. ಈ ಸಭೆಗಳು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಮೂಹವನ್ನು ಸೋಲಿಸಲು  ವೇದಿಕೆ ನಿರ್ಮಿಸುತ್ತಿದ್ದು ಎಲ್ಲಾ ವಿರೋಧ ಪಕ್ಷಗಳ ಒಗ್ಗೂಡಿಸಲು ಮುಂಚೂಣಿಯಲ್ಲಿರುವ ಪವಾರ್ ಅವರ ನಡೆ ಈ ಅನುಮಾನವನ್ನು ಹುಟ್ಟುಹಾಕಿತು.

ಶರದ್ ಪವಾರ್

ಶರದ್ ಪವಾರ್

 • Share this:
  ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಅಧ್ಯಕ್ಷೀಯ ಚುನಾವಣೆಗೆ ನಿಲ್ಲುತ್ತಾರೆ ಎನ್ನುವ ಮಾತು ಎಲ್ಲೆಡೆ ಹರಿದಾಡುತ್ತಿತ್ತು. ಆದರೆ ಅವರೇ ಸ್ವತಃ ಈ ಗಾಳಿ ಸುದ್ದಿಗೆ  ಬುಧವಾರ ತಡೆ ಹಾಕಿದ್ದು ತಮ್ಮ  ಉಮೇದುವಾರಿಕೆಯ ವದಂತಿಗಳನ್ನು ತಳ್ಳಿಹಾಕಿದ್ದಾರೆ. ಅಲ್ಲದೇ ಈ ಹಿರಿಯ ನಾಯಕ ಬೇಕಂತಲೇ ಏಕೆ ಸೋಲನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ಮಾತು ಸಹ ಹರಿದಾಡುತ್ತಿತ್ತು.  ಬಿಜೆಪಿ ನೇತೃತ್ವದ ಎನ್‌ಡಿಎ ಸಂಸತ್ತಿನಲ್ಲಿ 300 ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದು ಬಿಜೆಪಿ ಒಲವು ತೋರಿಸುವ ಅಭ್ಯರ್ಥಿ ಸುಲಭವಾಗಿ ಗೆಲ್ಲುವಾಗ ಶರದ್​ ಪವಾರ್​ ಇಂತಹ ಸಾಹಸಕ್ಕೆ ಕೈ ಹಾಕುತ್ತಾರೆ ಎನ್ನುವುದು ಸಹ ದೂರದ ಮಾತು.

  ಎಎನ್‌ಐ ಸುದ್ದಿ ಸಂಸ್ಥೆ  ಹಿರಿಯ ರಾಜಕಾರಣಿಯ ಮಾತುಗಳನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ  “ನಾನು ಅಧ್ಯಕ್ಷೀಯ ಚುನಾವಣೆಗೆ ಅಭ್ಯರ್ಥಿಯಾಗುತ್ತೇನೆ ಎಂಬುದು ಸಂಪೂರ್ಣವಾಗಿ ಸುಳ್ಳು. 300 ಕ್ಕೂ ಹೆಚ್ಚು ಸಂಸದರನ್ನು ಹೊಂದಿರುವ ಪಕ್ಷ ಇರುವಾಗ  ಫಲಿತಾಂಶ ಏನೆಂದು ನನಗೆ ತಿಳಿದಿದೆ. ನಾನು ರಾಷ್ಟ್ರಪತಿ ಚುನಾವಣೆಗೆ ಅಭ್ಯರ್ಥಿಯಾಗುವುದಿಲ್ಲ. ” ಎಂದು ಸಾರಾಸಗಟಾಗಿ ತಿಳಿಸಿದ್ದಾರೆ.

  ಮೇ ತಿಂಗಳಿನಿಂದ ಮೂರು ಬಾರಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರನ್ನು ಭೇಟಿಯಾದ ನಂತರ ರಾಷ್ಟ್ರಪತಿ ಚುನಾವಣೆಗೆ ಪವಾರ್ ಅವರು ಸ್ಪರ್ಧಿಸಲಿದ್ದಾರೆ ಎನ್ನುವ  ಸಂಚಲನ ಮೂಡಿತು. ಈ ಸಭೆಗಳು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸಮೂಹವನ್ನು ಸೋಲಿಸಲು  ವೇದಿಕೆ ನಿರ್ಮಿಸುತ್ತಿದ್ದು ಎಲ್ಲಾ ವಿರೋಧ ಪಕ್ಷಗಳ ಒಗ್ಗೂಡಿಸಲು ಮುಂಚೂಣಿಯಲ್ಲಿರುವ ಪವಾರ್ ಅವರ ನಡೆ ಈ ಅನುಮಾನವನ್ನು ಹುಟ್ಟುಹಾಕಿತು.

  2024 ರ ಚುನಾವಣೆಯಲ್ಲಿ ನಾನು ಯಾವುದೇ ನಾಯಕತ್ವವನ್ನು ವಹಿಸಿಕೊಳ್ಳುವುದಿಲ್ಲ ಎನ್ನುವ ಮೂಲಕ ಶರದ್​ ಪವಾರ್ ಅವರು ಮತ್ತೊಂದು ಗಾಳಿಸುದ್ದಿಗೆ ತಿಲಾಂಜಲಿ ಹಾಡಿದ್ದಾರೆ. 2024 ರಲ್ಲಿ ಯಾವುದೇ ನಾಯಕತ್ವ ವಹಿಸಿಕೊಳ್ಳುವ ಎಲ್ಲ ಉಹಾಪೋಹಗಳನ್ನು ತಳ್ಳಿಹಾಕಿದರು, "ಇಲ್ಲಿಯವರೆಗೆ ಏನನ್ನೂ ನಿರ್ಧರಿಸಿಲ್ಲ, ಅದು 2024 ರ ಸಾರ್ವತ್ರಿಕ ಚುನಾವಣೆ ಆಗಿರಲಿ ಅಥವಾ ರಾಜ್ಯ ಚುನಾವಣೆಗಳಾಗಿರಲಿ. ಚುನಾವಣೆ ದೂರದಲ್ಲಿದೆ, ಮತ್ತು ರಾಜಕೀಯ ಪರಿಸ್ಥಿತಿ ಬದಲಾಗುತ್ತಲೇ ಇರುತ್ತದೆ. ನೋಡೋಣ ಮುಂದೆ ಏನಾಗುತ್ತದೆ ಎಂದು ಹೇಳಿರುವುದಾಗಿ ವರದಿ ಹೇಳಿದೆ.

  ಕಿಶೋರ್​ ಜೊತೆ ಯಾವುದೇ ರಾಜಕೀಯ ಮಾತನಾಡಲೇ ಇಲ್ಲ. ಕೇವಲ ಉಭಯ ಕುಶಲೋಪರಿಯ ಭೇಟಿ. ಅವರ ಕಂಪೆನಿಯ ಬಗ್ಗೆ ಮಾತನಾಡಿದ್ದೇವೆ ಹೊರತು ಬೇರೇನೂ ಮಾತನ್ನಾಡಿಲ್ಲ. ಅಲ್ಲದೇ 2024 ಚುನಾವಣೆ ಮತ್ತು ರಾಷ್ಟ್ರಪತಿ ಚುನಾವಣೆ ಬಗ್ಗೆ ಕೂಡ ನಾವು ಚರ್ಚೆ ನಡೆಸಲಿಲ್ಲ ಎಂದು ಪುನರುಚ್ಚರಿಸಿದರು.

  ಇದನ್ನೂ ಓದಿ: 7th Pay Commission DA Hike: ತುಟ್ಟಿ ಭತ್ಯೆ ಹೆಚ್ಚಳ- ಕೇಂದ್ರದ ನೌಕರರು ಹಾಗೂ ಪಿಂಚಣಿದಾರರಿಗೆ ಸಂತಸ

  ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದೊಳಗೆ ಈವರೆಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ನವಾಬ್ ಮಲಿಕ್ ಎಎನ್‌ಐಗೆ ತಿಳಿಸಿದರು. "ಯಾರಾದರೂ ಈ ಸುದ್ದಿಯನ್ನು ಪ್ರಸಾರ ಮಾಡುತ್ತಿದ್ದರೆ, ಅದು ನಿಜವಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ" ಎಂದು ಹೇಳಿದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: