ವಿರೋಧ ಪಕ್ಷಗಳ ಮಿಷನ್ 2024: ಮೋದಿನ ಕಟ್ಟಿ ಹಾಕಲು ಶರದ್ ಪವಾರ್ ನೇತೃತ್ವದಲ್ಲಿ ಮೆಗಾಪ್ಲಾನ್!

ಎಲ್ಲರೂ ಒಂದಾದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂಬ ಆಶಾಭಾವ ವಿರೋಧ ಪಕ್ಷಗಳಲ್ಲಿ ಹುಟ್ಟಿಕೊಂಡಿವೆ.

ಶರದ್ ಪವಾರ್.

ಶರದ್ ಪವಾರ್.

  • Share this:
ನವದೆಹಲಿ: ದೇಶದಲ್ಲಿ ಯುಪಿಎ ಅಥವಾ ತೃತೀಯ ರಂಗ ರಚನೆಯ ಕಸರತ್ತು ಮತ್ತೆ ಮುನ್ನಲೆಗೆ ಬಂದಿದೆ. ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ದೆಹಲಿಯಲ್ಲಿ ಕಾಂಗ್ರೆಸೇತರ ವಿರೋಧ ಪಕ್ಷಗಳ ನಾಯಕರ ಸಭೆ ನಡೆಸಲಿದ್ದು ಭಾರೀ ಕುತೂಹಲ ಹುಟ್ಟುಹಾಕಿದೆ. ಈ ಮೂಲಕ ಆಡಾಳಿತಾರೂಢ ಬಿಜೆಪಿಗೆ ಪರ್ಯಾಯ ರೂಪಿಸುವ ಕೆಲಸ ಸದ್ದಿಲ್ಲದೆ ಸಾಗಿದೆ ಎಂದು ಹೇಳಲಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಜನಪ್ರಿಯತೆ ಕುಸಿಯುತ್ತಿರುವುದು, ಕೇಂದ್ರ ಸರ್ಕಾರ ಕೊರೋನಾವನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಹಾಗೂ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸೋತಿರುವುದರಿಂದ ವಿರೋಧ ಪಕ್ಷಗಳಲ್ಲಿ ಎಲ್ಲರೂ ಒಂದಾದರೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಬಹುದು ಎಂಬ ಆಶಾಭಾವ ಹುಟ್ಟುಕೊಂಡಿದೆ. ಹಾಗಾಗಿ ಅವು 'ಮಿಷನ್ 2024' ಕೆಲಸ ಆರಂಭಿಸಿವೆ.

ಮುಂಚೂಣಿಗೆ ಬಂದ ಶರದ್ ಪವಾರ್

ಎರಡು ವಾರಗಳಲ್ಲಿ ಎರಡನೇ ಬಾರಿಗೆ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆ ಚರ್ಚೆ ಮಾಡಿರುವ ಹಿರಿಯ ನಾಯಕ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಈಗ ವಿರೋಧ ಪಕ್ಷಗಳನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಮಂಗಳವಾರ ದೆಹಲಿಯ‌ ತಮ್ಮ ನಿವಾಸದಲ್ಲಿ ಕಾಂಗ್ರೆಸೇತರ ವಿರೋಧ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ.

ರಾಷ್ಟ್ರ ಮಂಚ್ ಹೆಸರಿನಲ್ಲಿ ಸಭೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ 2018ರಲ್ಲಿ ಮಾಜಿ ಸಚಿವ ಯಶ್ವಂತ್ ಸಿನ್ಹಾ ಅವರು ರಚಿಸಿದ ರಾಷ್ಟ್ರ ಮಂಚ್ ಹೆಸರಿನಲ್ಲಿ ಶರದ್ ಪವಾರ್ ಸಭೆ ನಡೆಸಿದ್ದಾರೆ. ಯುಪಿಎ ಮತ್ತು ತೃತೀಯ ರಂಗ ಎಂಬ ಹೆಸರುಗಳನ್ನು ಬಿಟ್ಟು ರಾಷ್ಟ್ರ ಮಂಚ್ ಹೆಸರಿನಲ್ಲಿ ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಮೊದಲು ರಾಹುಲ್ ಗಾಂಧಿ ಲಸಿಕೆ ಹಾಕಿಸಿಕೊಳ್ಳಲಿ ಇದು ನನ್ನ ವಿನಮ್ರ ಮನವಿ; ಸಚಿವ ರವಿಶಂಕರ್ ಪ್ರಸಾದ್

ಮಮತಾ ಬ್ಯಾನರ್ಜಿ ಸುತ್ತ

ಪಶ್ಚಿಮ ಬಂಗಾಳ ಚುನಾವಣೆ ಬಳಿಕ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ. ಪಶ್ಚಿಮ ಬಂಗಾಳದ ಗೆಲುವಿನ ಮೂಲಕ ಮಮತಾ ಬ್ಯಾನರ್ಜಿ ಪ್ರಧಾನ ಮಂತ್ರಿ ಅಭ್ಯರ್ಥಿ ಆಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷದ ಉಪಾಧ್ಯಕ್ಷ ಯಶವಂತ ಸಿನ್ಹ ರಚಿಸಿದ ರಾಷ್ಟ್ರ ಮಂಚ್ ವೇದಿಕೆಯಲ್ಲಿ ಚರ್ಚೆ ಆಗುತ್ತಿದೆ. ಟಿಎಂಸಿಗೆ ರಣತಂತ್ರ ರೂಪಿಸಿದ್ದ ಪ್ರಶಾಂತ್ ಕಿಶೋರ್ ಈಗಲೂ ತೆರೆಯ ಹಿಂದೆ ಇದ್ದಾರೆ. ಒಟ್ಟಾರೆ ಎಲ್ಲವೂ ಮಮತಾ ಬ್ಯಾನರ್ಜಿ ಸುತ್ತಲೇ ಸುತ್ತುತ್ತಿವೆ.ಒಂದೆಡೆ ಒಗ್ಗಟ್ಟು, ಇನ್ನೊಂದೆಡೆ ಬಿಕ್ಕಟ್ಟು

ಒಂದೆಡೆ ರಾಷ್ಟ್ರ ಮಟ್ಟದಲ್ಲಿ ಎಲ್ಲಾ ವಿರೋಧ ಪಕ್ಷಗಳು ಒಂದಾಗಬೇಕು, 2024ರ ಲೋಕಸಭಾ ಚುನಾವಣೆಯನ್ನು ಒಟ್ಟಾಗಿಯೇ ಎದುರಿಸಬೇಕು ಎಂಬ ಮಾತು ಕೇಳಿಬರುತ್ತಿದೆ. ಆದರೆ ಇನ್ನೊಂದೆಡೆ ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್​ಸಿಪಿ ಮೈತ್ರಿ ಸರ್ಕಾರದಲ್ಲಿ ಬಿರುಕು ಮೂಡುವ ಲಕ್ಷಣಗಳು ಗೋಚರವಾಗುತ್ತಿವೆ. ಹಾಗಾಗಿ ಯುಪಿಎ ಅಥವಾ ತೃತೀಯ ರಂಗ ಬಲಪಡಿಸುವುಸು ತುಸು ಕಷ್ಟ ಎಂದು ಕೂಡ ಹೇಳಲಾಗುತ್ತಿದೆ.
Published by:Kavya V
First published: