ಮಹಾರಾಷ್ಟ್ರ ಬಿಕ್ಕಟ್ಟು: ಇಂದು ಪರ್ಯಾಯ ಸರ್ಕಾರ ರಚನೆ ಬಗ್ಗೆ ಸೋನಿಯಾ-ಶರದ್ ಅಂತಿಮ​​​ ಮಾತುಕತೆ

ಈಗಾಗಲೇ ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ಹಲವು ಬಾರಿ ಮಾತುಕತೆ ನಡೆಸಿವೆ. ಅಲ್ಲದೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ (ಸಿಎಂಪಿ) ಕರಡು ಅಂತಿಗೊಳಿಸಲಾಗಿದೆ. ಈ ಕರಡು ಅಂತಿಮಗೊಳಿಸಿದ್ದರಿಂದ ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಯತ್ನದ ಹಾದಿ ಸುಗಮಗೊಂಡಿದೆ ಎನ್ನಲಾಗುತ್ತಿದೆ.

news18-kannada
Updated:November 19, 2019, 6:55 AM IST
ಮಹಾರಾಷ್ಟ್ರ ಬಿಕ್ಕಟ್ಟು: ಇಂದು ಪರ್ಯಾಯ ಸರ್ಕಾರ ರಚನೆ ಬಗ್ಗೆ ಸೋನಿಯಾ-ಶರದ್ ಅಂತಿಮ​​​ ಮಾತುಕತೆ
ಸೋನಿಯಾ, ಶರದ್​ ಪವಾರ್​​, ಉದ್ಧವ್​​ ಠಾಕ್ರೆ
  • Share this:
ನವದೆಹಲಿ(ನ.19): ಮಹಾರಾಷ್ಟ್ರದ ರಾಜಕಾರಣವೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ರಾಜ್ಯಪಾಲ ಭಗತ್​​ ಸಿಂಗ್​ ಕೊಶ್ಯಾರಿ ಗಡುವು ಕೊಟ್ಟರೂ ಭಾರತೀಯ ಜನತಾ ಪಕ್ಷ ಸೇರಿದಂತೆ ಶಿವಸೇನೆ ಮತ್ತು ಕಾಂಗ್ರೆಸ್-ಎನ್​​ಸಿಪಿಯೂ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾದವು. ರಾಜ್ಯಪಾಲರ ಶಿಫಾರಸು ಮೇರೆಗೆ ರಾಷ್ಟ್ರಪತಿ ಆಳ್ವಿಕೆಯೂ ಜಾರಿಗೆ ಬಂದಾಯ್ತು. ಈ ಬೆನ್ನಲ್ಲೀಗ ಸರ್ಕಾರ ರಚನೆ ವಿಳಂಬ ಕುರಿತಂತೆ ಕಾಂಗ್ರೆಸ್​​ ಸೋನಿಯಾ ಗಾಂಧಿ ಜತೆಗೆ ನ್ಯಾಷನಲಿಸ್ಟ್​​ ಕಾಂಗ್ರೆಸ್​​ ಪಕ್ಷದ ಮುಖ್ಯಸ್ಥ ಶರದ್​​ ಪವಾರ್​ ಮಂಗಳವಾರ(ನ.19) ಅಂತಿಮ ಸುತ್ತಿನ ಮಹತ್ವದ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಹಾಗೆಯೇ ಶಿವಸೇನೆ ಜತೆಗೂ ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಿ ರಾಷ್ಟ್ರಪತಿ ಆಡಳಿತಕ್ಕೆ ತಿಲಾಂಜಲಿ ಹಾಡಲಿದ್ಧಾರೆ ಎಂದು ಹೇಳಲಾಗುತ್ತಿದೆ.

ಸೋಮವಾರ(ನ.17) ಭಾರತದ ರಾಜಧಾನಿ ದೆಹಲಿಯಲ್ಲಿ ಸೋನಿಯಾ ಗಾಂಧಿಯವರನ್ನು ಶರದ್​​ ಪವಾರ್​​ ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರ ಜತೆ ಮಾತಾಡಿದ ಎನ್​​ಸಿಪಿ ವರಿಷ್ಠ ಶರದ್​​ ಪವಾರ್​​, ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಬದಲಿಗೆ ಸದ್ಯದ ರಾಜಕೀಯ ಮತ್ತು ಸಂಖ್ಯಾಬಲದ ಕುರಿತು ಚರ್ಚಿಸಿದ್ದೇವೆ. ಶಿವಸೇನೆ ಮತ್ತು ಕಾಂಗ್ರೆಸ್​ನೊಂದಿಗೆ ಮೈತ್ರಿ ಸರ್ಕಾರದ ಬಗ್ಗೆ ಕೊನೆಯ ಸುತ್ತಿನ ಮಾತುಕತೆ ನಡೆಸಬೇಕಾಗಿದೆ ಎಂದ್ದಿದ್ದರು. ಅಂತೆಯೇ ಇಂದು ಪರ್ಯಾಯ ಸರ್ಕಾರ ರಚನೆಗೆ ಬಗ್ಗೆ ಅಂತಿಮ ಮಾತುಕತೆ ನಡೆಸಲಿದ್ದು, ಒಂದು ನಿರ್ಧಾರಕ್ಕೆ ಬರಲಿದ್ದಾರೆ ಎನ್ನುತ್ತಿವೆ ಮೂಲಗಳು.

ಈಗಾಗಲೇ ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ಹಲವು ಬಾರಿ ಮಾತುಕತೆ ನಡೆಸಿವೆ. ಅಲ್ಲದೇ ಸಾಮಾನ್ಯ ಕನಿಷ್ಠ ಕಾರ್ಯಕ್ರಮದ (ಸಿಎಂಪಿ) ಕರಡು ಅಂತಿಗೊಳಿಸಲಾಗಿದೆ. ಈ ಕರಡು ಅಂತಿಮಗೊಳಿಸಿದ್ದರಿಂದ ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳು ಸೇರಿ ಸರ್ಕಾರ ರಚಿಸುವ ಪ್ರಯತ್ನದ ಹಾದಿ ಸುಗಮಗೊಂಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಮೈತ್ರಿ ಸರ್ಕಾರದ ಬಗ್ಗೆ ಅಂತಿಮ ಮಾತುಕತೆ ಆಗಿಲ್ಲ: ಸೋನಿಯಾ ಭೇಟಿ ಬಳಿಕ ಶರದ್​​ ಪವಾರ್​​ ಸ್ಪಷ್ಟನೆ

ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಕರಡು ಅಂತಿಮ ಅನುಮತಿಗಾಗಿ ಆಯಾ ಪಕ್ಷದ ಹೈಕಮಾಂಡ್​​ಗೆ ಕಳಿಸಿಕೊಡಲಾಗಿದೆ. ಈ ಕರಡು ಕಾಂಗ್ರೆಸ್​​-ಎನ್​​ಸಿಪಿ ಮತ್ತು ಶಿವಸೇನೆ ವರಿಷ್ಠರಿಗೆ ಒಪ್ಪಿಗೆಯಾದ ಕೂಡಲೇ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮುಂದೆ ತಮ್ಮ ಹಕ್ಕು ಮಂಡನೆ ಮಾಡಲಿವೆ. ಸರ್ಕಾರ ರಚನೆಗೆ ಬೇಕಾದ ಸಂಖ್ಯಾಬಲ ಎಂದು ಹೇಳಲಿದ್ದಾರೆ.

ಈ ಮುನ್ನ ಸರ್ಕಾರ ರಚಿಸುವಂತೆ ಮೊದಲು ಬಿಜೆಪಿಗೆ ನಂತರ ಶಿವಸೇನಾಗೆ ಮಹಾರಾಷ್ಟ್ರ ರಾಜ್ಯಪಾಲ ಭಗತ್​​ ಸಿಂಗ್​ ಕೊಶ್ಯಾರಿ ಆಹ್ವಾನಿ ನೀಡಿದ್ದರು. ಆದರೆ, ಉಭಯ ಪಕ್ಷಗಳು ರಾಜ್ಯಪಾಲರು ನೀಡಿದ ಗಡುವಿನೊಳಗೆ ಸರ್ಕಾರ ರಚಿಸಲು ವಿಫಲವಾದವು. ಹಾಗಾಗಿ ಮತ್ತೆ ನಿನ್ನೆ ಸರ್ಕಾರ ರಚನೆಗೆ ಎನ್​ಸಿಪಿಗೆ ಆಹ್ವಾನ ನೀಡಿದ್ದರು. ಅಲ್ಲದೇ ಎನ್​​ಸಿಪಿಗೆ ಸರ್ಕಾರ ರಚಿಸಲು ಇಂದು ರಾತ್ರಿ 8:30ರವರೆಗೂ ಗಡುವು ನೀಡಿದ್ದರು. ಈ ಮಧ್ಯೆಯೀಗ ರಾಜ್ಯಪಾಲರು ಏಕಾಏಕಿ ರಾಷ್ಟ್ರಪತಿ ಆಳ್ವಿಕೆಗೆ ಶಿಫಾರಸು ಮಾಡಿರುವುದು ಈಗ ರಾಜಕೀಯ ವಲದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ರಾಜ್ಯಪಾಲರ ಶಿಫಾರಸು ಕಳುಹಿಸಿದ ಬಳಿಕ ಕೇಂದ್ರ ಸಂಪುಟವು ಸಭೆ ನಡೆಸಿ ಒಪ್ಪಿಗೆ ಸೂಚಿಸಿತು. ಈ ಶಿಫಾರಸಿಗೆ ರಾಷ್ಟ್ರಪತಿಯವರೂ ಅಂಕಿತ ಹಾಕಿದ್ದರು.
-----------
First published:November 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ