shankhanad andolan: ಮಹಾರಾಷ್ಟ್ರದಲ್ಲಿ ದೇವಸ್ಥಾನ ತೆರೆಯಲು ಆಗ್ರಹಿಸಿ ಬಿಜೆಪಿಯಿಂದ ಶಂಖನಾದ ಆಂದೋಲನ

ಸೊಲ್ಲಾಪುರ ದೇವಸ್ಥಾನದಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪೊಲೀಸರ ಆದೇಶ ಉಲ್ಲಂಘಿಸಿ, ಬ್ಯಾರಿಯರ್​ ಮುರಿದು ಬಿಜೆಪಿ ಧ್ವಜವಿಡಿದು ದೇವಾಲಯದ ಒಳಗೆ ಹೋಗಲು ಪ್ರಯತ್ನಿಸಿದರು.

ANI Photo

ANI Photo

 • Share this:
  ಮುಂಬೈ (ಆ. 30): ಮಹಾರಾಷ್ಟ್ರದಲ್ಲಿ ಡೆಲ್ಟಾ ಸೋಂಕು (delta cases in maharashtra) ಪತ್ತೆಯಾಗಿದ್ದು, ದೇಶದಲ್ಲಿ ಸಾಕಷ್ಟು ಆತಂಕ ಮೂಡಿಸಿವೆ. ಇದೇ ಕಾರಣಕ್ಕೆ ಮಹಾರಾಷ್ಟ್ರದಲ್ಲಿ ಇನ್ನು ಕಟ್ಟು ನಿಟ್ಟಿನ ಕೋವಿಡ್​ ನಿಯಮ ಪಾಲನೆಗೆ ಸರ್ಕಾರ ಮುಂದಾಗಿದೆ. ಈ ನಡುವೆ ಕಳೆದೊಂದುವರೆ ವರ್ಷಗಳಿಂದ ಮುಚ್ಚಿರುವ ದೇವಾಲಯಗಳಲ್ಲಿ (Temple reopens) ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂಬ ಕೂಗು ಕೇಳಿದೆ. ಇದೇ ಉದ್ದೇಶದಿಂದ ಬಿಜೆಪಿ (Bjp) ರಾಜ್ಯಾದಾದ್ಯಂತ ಶಂಖನಾದ ಆಂದೋಲನಕ್ಕೆ (shankhanad andolan) ಮುಂದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್​ ಪಾಟೀಲ್​ ನೇತೃತ್ವದಲ್ಲಿ ಮುಂಬೈ, ಪುಣೆ, ನಾಸಿಕ್​​, ನಾಗಪುರ ಮತ್ತು ಸೊಲ್ಲಾಪುರ ಸೇರಿದಂತೆ ಹಲವೆಡೆ ಇಂದಿನಿಂದ ಶಂಖನಾದ ಆಂದೋಲನ ಪ್ರತಿಭಟನೆ ನಡೆಸಲಾಗಿದೆ.

  ದೇವಾಲಯಗಳ ಮುಂಚೆ ಬಿಜೆಪಿ ನಾಯಕರು ಶಂಖಗಳನ್ನು ಊದುವ ಮೂಲಕ ಈ ಹೋರಾಟಕ್ಕೆ ಚಾಲನೆ ನೀಡಿದರು. ಪುಣೆಯ ಕಸ್ಬಪೆತ್​ ಗಣೇಶ ದೇವಾಲಯದ ಮುಂದೆ ಶಂಖ ಊದುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಪಾಟೀಲ್​, ದೇವಸ್ಥಾನಗಳನ್ನು ತೆಗೆಯುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಅವರು, ದೇವಸ್ಥಾನಗಳನ್ನು ಮತ್ತೆ ತೆರೆಯಬೇಕು. ಕಳೆದ 15 ತಿಂಗಳಿನಿಂದ ಈ ಬಗ್ಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಈ ಹಿನ್ನಲೆ ಮಹಾ ವಿಕಾಸ ಅಘಾಡಿ ಸರ್ಕಾರವನ್ನು ಎಚ್ಚರಿಸಲು ಈ ಶಂಖನಾದದ ಅವಶ್ಯಕತೆ ಇದೆ ಎಂದರು.

  ಸೊಲ್ಲಾಪುರ, ಪಂಡ್ರಾಪುರ ದೇವಸ್ಥಾನಗಳಲ್ಲಿ ನೂರಾರು ಬಿಜೆಪಿ ಕಾರ್ಯಕರ್ತರು ಪೊಲೀಸರ ಆದೇಶ ಉಲ್ಲಂಘಿಸಿ, ಬ್ಯಾರಿಯರ್​ ಮುರಿದು ಬಿಜೆಪಿ ಧ್ವಜವಿಡಿದು ದೇವಾಲಯದ ಒಳಗೆ ಹೋಗಲು ಪ್ರಯತ್ನಿಸಿದರು.

  ಸರ್ಕಾರ ದೇವಾಲಗಳಿಗೆ ನಿರ್ಬಂಧ ವಿಧಿಸಿ, ಮದ್ಯದ ಅಂಗಡಿ ತೆರೆಯಲು ಅನುಮತಿಸಿದೆ. ಸರ್ಕಾರಕ್ಕೆ ದೇವಾಲಯಕ್ಕಿಂತ ಬಾರ್​ಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತವೆ. ಬಾರ್​ ಮುಂದೆ ಜನಸಂದಣಿ ಉಂಟಾದರೆ ಸುಮ್ಮನಿರುವ ಪೊಲೀಸರು, ಬಿಜೆಪಿ ಕಾರ್ಯಕರ್ತರು ದೇವಸ್ಥಾನಕ್ಕೆ ಭೇಟಿ ನೀಡಲು ಮುಂದಾದಗ ಲಾಠಿ ಪ್ರಹಾರ ನಡೆಸುತ್ತಾರೆ ಎಂದು ಇದೇ ವೇಳೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.

  ಇದನ್ನು ಓದಿ: 5ರಿಂದ 12 ವರ್ಷದ ಮಕ್ಕಳಿಗೆ ಫೈಜರ್​ ಲಸಿಕೆ ಬಳಕೆಗೆ ಅಕ್ಟೋಬರ್​ನಲ್ಲಿ ಅನುಮೋದನೆ

  ದೇವಸ್ಥಾನಕ್ಕೆ ತೆರೆಯಲು ಬಿಜೆಪಿ ನಿರಾಕರಿಸುತ್ತಿರುವ ಕಾರ್ಯಕ್ಕೆ ಬಿಜೆಪಿ ಆಧ್ಯಾತ್ಮಿಕ ಘಟಕದ ಮುಖ್ಯಸ್ಥ ತುಷಾರ್ ಭೋಸಲೆ ಸರ್ಕಾರದ ವಿರುದ್ಧ ಟೀಕಾಸ್ತ್ರ ನಡೆಸಿದರು. ದೇವಸ್ಥಾನಗಳಿಗೆ ಇನ್ನು ಯಾಕೆ ಕೋವಿಡ್​ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ದೇವಸ್ಥಾನಕ್ಕೆ ಅವಕಾಶ ನೀಡದಿರುವುದುರಿಂದ ಜನರು ತಾಳ್ಮೆಗೆಡುತ್ತಿದ್ದಾರೆ. ಈ ಸಂಬಂದ ಈಗಾಗಲೇ ನಾವು ಮನವಿ ಮಾಡಿದ್ದು, ಸರ್ಕಾರ ಈ ಬಗ್ಗೆ ಗಮನ ಹರಿಸಿದ ಹಿನ್ನಲೆ ಈ ಹೋರಾಟ ಅನಿರ್ವಾಯವಾಗಿದೆ

  ಪ್ರತಿಭಟನೆಯಲ್ಲಿ ಬಿಜೆಪಿಯ ನಾಯಕರು ಯಾವುದೇ ಕೋವಿಡ್​ ನಿಯಮಾವಳಿಗಳ ಪಾಲನೆ ಮಾಡಲಿಲ್ಲ. ಸೊಲ್ಲಾಪುರದಲ್ಲಿ ಪಕ್ಷದ ಕಾರ್ಯಕರ್ತರು ಸಾಮಾಜಿಕ ಅಂತರ ಮರೆದು ದೇವಾಲಯದ ಒಳಗೆ ಪ್ರವೇಶಿಸುವ ಪ್ರಯತ್ನ ಮಾಡಿದರು. ಉಳಿದ ಸ್ಥಳಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿರಲಿಲ್ಲ.

  ಕಳೆದ ಒಂದು ತಿಂಗಳಿನಿಂದ ಮಹಾರಾಷ್ಟ್ರದಲ್ಲಿ ನಿಧಾನವಾಗಿ ಸೋಂಕಿನ ಸಂಖ್ಯೆ ಏರಿಕೆಯಾಗಿದೆ. ಈ ಹಿನ್ನಲೆ ಕರ್ನಾಟಕ ಗಡಿ ಪ್ರವೇಶಕ್ಕೆ ಮಹಾರಾಷ್ಟ್ರದ ಜನರಿಗೆ ಕೋವಿಡ್​ ನೆಗೆಟಿವ್​ ವರದಿ ಕಡ್ಡಾಯ ಮಾಡಲಾಗಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:Seema R
  First published: