Swaroopanand Saraswati: ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ, ರಾಮಮಂದಿರ ನಿರ್ಮಾಣಕ್ಕಾಗಿ ಶ್ರಮಿಸಿದ್ದ ಯತಿ ಇನ್ನು ನೆನಪು ಮಾತ್ರ

ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ರಾಮಮಂದಿರ ನಿರ್ಮಾಣಕ್ಕಾಗಿ ಸುದೀರ್ಘ ಹೋರಾಟ ನಡೆಸಿದ್ದರು. ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೂ ಹೋಗಿದ್ದರು. ಇದೀಗ ಈ ಹಿರಿಯ ಯತಿ ಇಹಲೋಕ ತ್ಯಜಿಸಿದ್ದಾರೆ.

ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

 • Share this:
  ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ (Swami Swaroopanand Sarasvati) ಅವರು ವಿಧಿವಶರಾಗಿದ್ದಾರೆ (Death). ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರಿಗೆ 99 ವರ್ಷ ವಯಸ್ಸಾಗಿತ್ತು. ಮಧ್ಯಪ್ರದೇಶದ (Madhya Pradesh) ನರಸಿಂಗ್‌ಪುರದಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಮಾಹಿತಿಯ ಪ್ರಕಾರ, ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಧ್ಯಾಹ್ನ 3 ಗಂಟೆ ಸುಮಾರಿಗೆ ತಮ್ಮ ಆಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳ ಹಿಂದೆ ಅವರು ತಮ್ಮ 99ನೇ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಣೆ ಮಾಡಿಕೊಂಡಿದ್ದರು. ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು 2 ಸೆಪ್ಟೆಂಬರ್ 1924 ರಂದು ಜನಿಸಿದರು. ಅವರು ಹಿಂದೆ ದ್ವಾರಕಾ ಮತ್ತು ಜ್ಯೋತಿರ್ಮಠದ ಶಂಕರಾಚಾರ್ಯರು ಆಗಿದ್ದರು.

  ಸ್ವಾಮಿ ಸ್ವರೂಪಾನಂದ ಸರಸ್ವತಿ ನಿಧನ

  ಹಿಂದೂಗಳ ಆರಾಧ್ಯ ಮತ್ತು ಭಕ್ತಿಯ ಮಠಗಳಲ್ಲಿ ಒಂದಾಗಿರುವ ದ್ವಾರಕಾ ಶಾರದಾ ಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.  ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಗೋಟೆಗಾಂವ್ ಬಳಿಯ ಜೋತೇಶ್ವರ ಧಾಮದಲ್ಲಿ ನಿಧನರಾದರು.

  ಸೆಪ್ಟಂಬರ್ 2ರಂದು ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಹುಟ್ಟುಹಬ್ಬದ ಆಚರಣೆಯ ದಿನ ಭಕ್ತ ರಾಜ್ಯದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಆಶೀರ್ವಾದ ಪಡೆದಿದ್ದರು.

  ಇದನ್ನೂ ಓದಿ: ಭಾರತಕ್ಕೆ ದುರ್ಬಲ ಪ್ರಧಾನಿ ಸಿಗಲಿ ಎಂದ ಅಸಾದುದ್ದೀನ್ ಓವೈಸಿ

  ಅನಾರೋಗ್ಯದಿಂದ ಬಳಲುತ್ತಿದ್ದರು ಸ್ವಾಮಿ ಸ್ವರೂಪಾನಂದ ಸರಸ್ವತಿ

  ಕಳೆದ ಕೆಲವು ದಿನಗಳಿಂದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದರು ಬದರಿ ಆಶ್ರಮ ಮತ್ತು ದ್ವಾರಕಾಪೀಠದ ಜವಾಬ್ದಾರಿ ಹೊತ್ತಿದ್ದರು. ಅವರು ಸಾಯುವಾಗ ಅವರ ಆಶ್ರಮದಲ್ಲೇ ಇದ್ದರು.

  ಕಳೆದ ಹಲವು ದಿನಗಳಿಂದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಮಾಹಿತಿ ಇದೆ. ನರಸಿಂಗ್‌ಪುರ ಜಿಲ್ಲೆಯ ಜೋತೇಶ್ವರ ಆಶ್ರಮದಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮಧ್ಯಾಹ್ನ ಅವರು ಲಘು ಹೃದಯಾಘಾತದಿಂದ ತಮ್ಮ ಪರಮಹಂಸಿ ಗಂಗಾ ಆಶ್ರಮದಲ್ಲಿ ಕೊನೆಯುಸಿರೆಳೆದಿದ್ದಾರೆ.

  ಸ್ವರೂಪಾನಂದರು ತಮ್ಮ ಕೊನೆಯ ದಿನಗಳಲ್ಲಿ ತಮ್ಮ ಶಿಷ್ಯರ ಜೊತೆ ಆಶ್ರಮದಲ್ಲೇ ವಾಸಿಸುತ್ತಿದ್ದರು. ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಶಿಷ್ಯ ಶಿಷ್ಯ ಬ್ರಹ್ಮ ವಿದ್ಯಾನಂದ ಮಾತನಾಡಿ, ಸೋಮವಾರ ಸಂಜೆ 5 ಗಂಟೆಗೆ ಪರಮಹಂಸಿ ಗಂಗಾ ಆಶ್ರಮದಲ್ಲಿ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ದೇಹದ ಸಮಾಧಿ ನೀಡಲಾಗುವುದು ಎಂದು ಹೇಳಿದ್ದಾರೆ.

  ಇನ್ನು ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ರಾಮಮಂದಿರ ನಿರ್ಮಾಣಕ್ಕಾಗಿ ಸುದೀರ್ಘ ಹೋರಾಟ ನಡೆಸಿದ್ದರು. ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಜೈಲಿಗೂ ಹೋಗಿದ್ದರು.

  ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರ ಭಕ್ತರಲ್ಲಿ ಮಡುಗಟ್ಟಿದ ಶೋಕ

  ಇತ್ತ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ನಿಧನರಾದ ಸುದ್ದಿ ಕೇಳಿ ಕೂಡಲೇ ಭಕ್ತ ವೃಂದ ಆಶ್ರಮದತ್ತ ಹರಿದು ಬರುತ್ತಿದೆ. ಭಕ್ತರಲ್ಲಿ ಶೋಕ ಮಡುಗಟ್ಟಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಜೋತೇಶ್ವರ ಆಶ್ರಮವನ್ನು ತಲುಪಿದ್ದಾರೆ.

  ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಸಂತಾಪ

  ಶಂಕರಾಚಾರ್ಯ ಸ್ವರೂಪಾನಂದ ಅವರ ನಿಧನಕ್ಕೆ ಮಧ್ಯಪ್ರದೇಶ ರಾಜ್ಯ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಸಿಎಂ ಟ್ವೀಟ್ ಮಾಡಿದ್ದಾರೆ. ಭಗವಾನ್ ಶಂಕರಾಚಾರ್ಯರು ಸ್ಥಾಪಿಸಿದ ಪಶ್ಚಿಮ ಆಮ್ನಾಯ ಶ್ರೀ ಶಾರದಾ ಪೀಠದ ಪೂಜ್ಯ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದ ಸರಸ್ವತಿಯವರ ನಿಧನದ ಸುದ್ದಿ ಅತ್ಯಂತ ದುಃಖಕರ. ಪೂಜ್ಯ ಸ್ವಾಮಿಜಿ ಸನಾತನ ಧರ್ಮದ ಶಲಾಕ ಪುರುಷ ಮತ್ತು ಸನ್ಯಾಸ್ ಸಂಪ್ರದಾಯದ ಸೂರ್ಯ ಎಂದು ಬರೆದಿದ್ದಾರೆ.

  ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಕೂಡ ಟ್ವೀಟ್ ಮಾಡಿದ್ದಾರೆ. ಸ್ವಾಮಿ ಸ್ವರೂಪಾನಂದ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಸ್ವಾಮಿ ಸ್ವರೂಪಾನಂದರು ದಿಗ್ವಿಜಯ್ ಸಿಂಗ್ ಅವರ ಗುರು.

  ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿ ದುಃಖ ವ್ಯಕ್ತಪಡಿಸಿದ್ದಾರೆ

  ಮಧ್ಯಪ್ರದೇಶದ ಸಿಯೋನಿ ಜಿಲ್ಲೆಯಲ್ಲಿ ಜನಿಸಿದ ಸ್ವರೂಪಾನಂದ ಸರಸ್ವತಿ ಅವರು 1982 ರಲ್ಲಿ ಗುಜರಾತ್‌ನ ದ್ವಾರಕಾ, ಶಾರದಾ ಪೀಠ ಮತ್ತು ಬದರಿನಾಥದ ಜ್ಯೋತಿರ್ ಮಠದ ಶಂಕರಾಚಾರ್ಯರಾದರು. ಅವರ ನಿಧನಕ್ಕೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಸಂತಾಪ ಸೂಚಿಸಿದ್ದಾರೆ.

  ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಮದುವೆ ಪ್ರಸ್ತಾಪ!

  ಪ್ರಿಯಾಂಕಾ ಗಾಂಧಿ ಟ್ವೀಟ್ ಮಾಡಿದ್ದಾರೆ. 'ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಜಿ ಮಹಾರಾಜ್ ಅವರ ನಿಧನದ ಸುದ್ದಿ ತುಂಬಾ ದುಃಖ ತಂದಿದೆ. ಸ್ವಾಮೀಜಿ ತಮ್ಮ ಇಡೀ ಜೀವನವನ್ನು ಧರ್ಮ, ಆಧ್ಯಾತ್ಮಿಕತೆ ಮತ್ತು ದಾನಕ್ಕಾಗಿ ಮುಡಿಪಾಗಿಟ್ಟವರು ಎಂದು ಬರೆದಿದ್ದಾರೆ.
  Published by:renukadariyannavar
  First published: