Piyush Goyal: ಕಬ್ಬು, ಗೋವಿನ‌ ಜೋಳ, ಭತ್ತಗಳಿಂದ ಎಥನಾಲ್ ಉತ್ಪಾದನೆಗೆ ಕೇಂದ್ರದ ಸಹಕಾರ ಕೇಳಿದ ಸಚಿವ ಮುನೇನಕೊಪ್ಪ

ನಾನು ಸಕ್ಕರೆ ಖಾತೆಯ ಸಚಿವನಾದ ಮೇಲೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಾಗಿದ್ದ ಬಾಕಿಯನ್ನು ಚುಕ್ತ ಮಾಡುವಂತೆ ಶ್ರಮಿಸಿದ್ದೇನೆ ಎಂದ  ಶಂಕರಗೌಡ ಪಾಟೀಲ್ ಮುನೇನಕೊಪ್ಪ ತಿಳಿಸಿದರು.

ಪಿಯೋಷ್ ಗೋಯಲ್-  ಶಂಕರ ಪಾಟೀಲ್ ಮುನೇನಕೊಪ್ಪ

ಪಿಯೋಷ್ ಗೋಯಲ್- ಶಂಕರ ಪಾಟೀಲ್ ಮುನೇನಕೊಪ್ಪ

  • Share this:
ನವದೆಹಲಿ, (ಜ. 5) : ಕಬ್ಬು, ಗೋವಿನ‌ ಜೋಳ, ಭತ್ತ ಬೆಳೆಗಳಿಂದ ಎಥನಾಲ್ ಉತ್ಪಾದನೆ (Ethanol Productive) ಮಾಡಲು ಹಾಗೂ ಎಥನಾಲ್ ಉತ್ಪಾದನೆ ಮುಖಾಂತರ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಸಮಸ್ಯೆ ಬಗೆಹರಿಸಲು ಹೆಚ್ಚಿನ‌ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ (Union Government) ಮನವಿ ಮಾಡಿಕೊಂಡಿರುವುದಾಗಿ ರಾಜ್ಯ ಜವಳಿ, ಕೈಮಗ್ಗ ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ (Shankara Patil Munenakopa) ಅವರು ತಿಳಿಸಿದ್ದಾರೆ. ಈ ಬಗ್ಗೆ ಶಂಕರ ಪಾಟೀಲ ಮುನೇನಕೊಪ್ಪ ಅವರು ಬುಧವಾರ ಕೇಂದ್ರದ ಜವಳಿ ಮತ್ತು ಸಕ್ಕರೆ ಸಚಿವರಾದ ಪಿಯೋಷ್ ಗೋಯಲ್ (Piyush Goyal) ಅವರನ್ನು ನವದೆಹಲಿಯ ಕೃಷಿಭವನದಲ್ಲಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಇದೇ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಶಂಕರ ಪಾಟೀಲ ಮುನೇನಕೊಪ್ಪ ಅವರು, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ನಂತರ ಕರ್ನಾಟಕವು ದೇಶದಲ್ಲೇ ಕಬ್ಬು ಬೆಳೆಯುವ 3ನೇ ದೊಡ್ಡ ರಾಜ್ಯವಾಗಿದೆ. ಆದರೆ ರಾಜ್ಯದಲ್ಲಿ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳು ನಷ್ಟದಲ್ಲಿವೆ.  ಆದುದರಿಂದ ಇಬ್ಬರಿಗೂ ಲಾಭ ಆಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊಸ ಎಥೆನಾಲ್ ನೀತಿ ಜಾರಿ ಮಾಡುತ್ತಿದೆ‌. ಜೊತೆಗೆ ಗೋವಿನ‌ ಜೋಳ ಮತ್ತು ಭತ್ತದಿಂದಲೂ ಎಥನಾಲ್ ಉತ್ಪಾದನೆ ಮಾಡುವುದರಿಂದ ಆ ಬೆಳೆಗಳ ರೈತರಿಗೂ ಅನುಕೂಲ ಆಗಲಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ತಜ್ಞರ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ. ಈಗ ಕೇಂದ್ರ ಸರ್ಕಾರದ ಸಹಕಾರವನ್ನು ಪಡೆಯುವ ಪ್ರಯತ್ನವನ್ನೂ ನಡೆಸಿದ್ದೇವೆ ಎಂದು ತಿಳಿಸಿದರು.

ಪರಿಸರಸ್ನೇಹಿ ಎಥನಾಲ್ ನೀತಿ
ಹೊಸ ನೀತಿ ಪ್ರಕಾರ ಎಥನಾಲ್ ಉತ್ಪಾದನೆಯಾದರೆ‌ ಬೆಳೆಗಾರರು ಹಾಗೂ ಕಾರ್ಖಾನೆ ಮಾಲಿಕರು ಎಲ್ಲರಿಗೂ ಲಾಭ ಆಗುತ್ತದೆ. ಇದೇ ಹಿನ್ನೆಲೆಯಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರ ಹಾಗೂ ಕೇಂದ್ರ ಸರ್ಕಾರದ ಎಥನಾಲ್ ಪಾಲಿಸಿಗಳನ್ನು ಮಾದರಿಯಾಗಿ ಇಟ್ಟುಕೊಂಡು ರಾಜ್ಯದಲ್ಲಿ ಎಥನಾಲ್ ನೀತಿ ಜಾರಿ ಮಾಡಲಾಗಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಜೊತೆ ಶೇಕಡಾ 10ರಷ್ಟು ಎಥನಾಲ್ ಸೇರಿಸಬೇಕು ಎಂದು‌ ಸೂಚನೆ ನೀಡಿದೆ. ಇದರಿಂದ ಪರಿಸರ ಮಾಲಿನ್ಯವೂ ನಿಯಂತ್ರಣಕ್ಕೆ ಬರಲಿದೆ. ಇದು ಕೂಡ ಎಥನಾಲ್ ಉತ್ಪಾದನೆಗೆ ಉತ್ತೇಜನ ನೀಡಲು ಕಾರಣ ಎಂದು ತಿಳಿಸಿದರು.

ಇದನ್ನು ಓದಿ: Omicronಗೆ ದೇಶದಲ್ಲಿ ಮೊದಲ ಬಲಿ; ಉದಯಪುರದಲ್ಲಿ ಸೋಂಕಿತ ಸಾವು

ನಾನು ಸಕ್ಕರೆ ಖಾತೆಯ ಸಚಿವನಾದ ಮೇಲೆ ರಾಜ್ಯದ ಎಲ್ಲಾ ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನೀಡಬೇಕಾಗಿದ್ದ ಬಾಕಿಯನ್ನು ಚುಕ್ತ ಮಾಡುವಂತೆ ಶ್ರಮಿಸಿದ್ದೇನೆ ಎಂದ  ಶಂಕರ  ಪಾಟೀಲ್ ಮುನೇನಕೊಪ್ಪ ಅವರು ಮುಂದೆ ಎಥನಾಲ್ ಉತ್ಪಾದನೆ ಮೂಲಕ ಸಕ್ಕರೆ ಕಾರ್ಖಾನೆ ಮಾಲಿಕರಿಗೂ ಲಾಭ ಆಗುವಂತಹ ಕ್ರಮ ಕೈಗೊಳ್ಳಬೇಕಿದೆ ಎಂದರು.

ಇದನ್ನು ಓದಿ: ಫ್ಲೈಓವರ್ ಮೇಲೆ ಸಿಲುಕಿದ PM Car; ಪಂಜಾಬ್ ಸರ್ಕಾರದಿಂದ ಭದ್ರತಾ ಲೋಪ ಎಂದ ಕೇಂದ್ರ

ಜವಳಿ ಯೋಜನೆಗೂ ಕೇಂದ್ರದ ಸಹಕಾರ
ಇದಲ್ಲದೆ ಮೈಸೂರು ಮೆಗಾ ಸಿಲ್ಕ್ ಕ್ಲಸ್ಟರ್ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು. ರಾಜ್ಯದ ರೇಷ್ಮೆ ಗುಣಮಟ್ಟಕ್ಕೆ ವಿಶ್ವದಾದ್ಯಂತ ಹೆಸರು ಪಡೆದಿದೆ, ಮೈಸೂರು ರೇಷ್ಮೆ ವಲಯದ ಕೇಂದ್ರ ಸ್ಥಾನವಾಗಿದೆ. ಇಲ್ಲಿ ರೇಷ್ಮೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಭಾಗಿತ್ವದ ಮೆಗಾ ಸಿಲ್ಕ್ ಕ್ಲಸ್ಟರ್ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಬದ್ದವಾಗಿದೆ. ಯೋಜನೆಯ ಮೂಲ ಸ್ವರೂಪದಂತೆಯೇ ಅನುಷ್ಠಾನಗೊಳಿಸಲಾಗುವುದು. ಹೀಗಾಗಿ ಕೇಂದ್ರ ಸರ್ಕಾರ ಈ ಮೊದಲು ಘೋಷಿಸಿದಂತೆಯೇ ಅನುದಾನ ನೀಡಬೇಕು, ಯಾವುದೇ ಕಾರಣಕ್ಕೂ ಅನುದಾನ ಕಡಿತಗೊಳಿಸಬಾರದು ಎಂದು ಸಚಿವ ಶಂಕರ ಪಾಟೀಲ ಬಿ ಮುನೇನಕೊಪ್ಪ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಕೇಂದ್ರ ಸಚಿವ ಪಿಯೋಷ್ ಗೋಯಲ್ ಈ ಯೋಜನೆಯ ಮೊದಲ ಹಂತದ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಪೂರ್ಣ ಪ್ರಮಾಣದಲ್ಲಿ ಅನುದಾನ ಒದಗಿಸಲಾಗುತ್ತದೆ. ಅವಶ್ಯಕತೆ ಇದ್ದಲಿ ಹೆಚ್ಚಿನ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು ಎಂದು ತಿಳಿಸಿದ್ದಾರೆ.
Published by:Seema R
First published: