ಚೀನಾದಲ್ಲಿ ಕೋವಿಡ್ (Covid in China) ಪರಿಸ್ಥಿತಿ ಹದಗೆಡುತ್ತಿದೆ. ಅದರಲ್ಲೂ ಶಾಂಘೈನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಶಾಂಘೈನಲ್ಲಿ (Shanghai) ಒಂದು ದಿನದಲ್ಲಿ 8 ಸಾವಿರದ ದಾಖಲೆಗಳು ಏರಿಕೆ ಕಂಡಿದೆ. ಅಪಾಯಕಾರಿ ಓಮಿಕ್ರಾನ್ (Omicron) ರೂಪಾಂತರವು ದೇಶದ ಹಲವು ಪ್ರಾಂತ್ಯಗಳಲ್ಲಿ ಹರಡಿದೆ. ಇದರಿಂದಾಗಿ ಜನರಲ್ಲಿ ಭಯದ ವಾತಾವರಣ ಮೂಡಿದೆ. ಪರಿಸ್ಥಿತಿ ಗಂಭೀರವಾದ ಹಿನ್ನಲೆ ಚೀನಾದ ಆಡಳಿತವು ದೇಶದ ಆರ್ಥಿಕ ರಾಜಧಾನಿ ಶಾಂಘೈನಲ್ಲಿ ಲಾಕ್ಡೌನ್ ಘೋಷಿಸಿದೆ. ಅಲ್ಲದೇ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಇಲ್ಲಿ ಯಾವುದೇ ಕಾರಣವಿಲ್ಲದೆ ಜನರು ಮನೆಯಿಂದ ಹೊರಗೆ ಬರುವಂತಿಲ್ಲ ಎಂದು ಸೂಚಿಸಿದೆ.
ಕೋವಿಡ್ ಹಾಟ್ಸ್ಪಾಟ್ ಆದ ಶಾಂಘೈ
ವೈದ್ಯಕೀಯ ತುರ್ತು ಪರಿಸ್ಥಿತಿಯಿದ್ದರೆ ಮಾತ್ರ ಮನೆಯಿಂದ ಹೊರ ಬರುವಂತೆ ಸೂಚಿಸಿದೆ.
ಶಾಂಘೈ ಕೋವಿಡ್ ಹಾಟ್ಸ್ಪಾಟ್ ಆಗಿ ರೂಪು ಗೊಂಡಿದ್ದುಮ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಇತರೆ ದೇಶಗಳಿಗೆ ಹೋಲಿಸಿಕೊಂಡರೆ, ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕು ಹರಡದಂತೆ ಪ್ರತ್ಯೇಕ ಕ್ರಮಕ್ಕೆ ಕೈಗೊಳ್ಳಲಾಗಿದ್ದು, ಶಾಂಘೈನಲ್ಲಿ, ಸೋಂಕಿತರನ್ನು ಪ್ರತ್ಯೇಕಿಸಲು ಜಾಗವಿಲ್ಲ.
ಡ್ರೋನ್ ಮೂಲಕ ಜನರಿಗೆ ಜಾಗೃತಿ
ಅದಕ್ಕಾಗಿಯೇ ಅವರನ್ನು ಬೇರೆಡೆಗೆ ಕಳುಹಿಸಲಾಗುತ್ತಿದೆ. ಸೋಂಕಿತರನ್ನು ಶಾಂಘೈ ಪಕ್ಕದಲ್ಲಿರುವ ಝೆಜಿಯಾಂಗ್ ಮತ್ತು ಜಿಯಾಂಗ್ಸುಗೆ ಬಲವಂತವಾಗಿ ಕಳುಹಿಸಲಾಗುತ್ತಿದೆ.
ಕಟ್ಟು ನಿಟ್ಟಿನ ಲಾಕ್ಡೌನ್ ಜಾರಿಯಾದ ಹಿನ್ನಲೆ ಜನರಿಗೆ ದಿನನಿತ್ಯದ ವಸ್ತುಗಳು ಪೂರೈಕೆಯಲ್ಲಿ ವ್ಯತ್ಯಾಯವಾಗಿದೆ. ಅನೇಕರು ಸಾಮಾಗ್ರಿ ಸಿಗದೇ ಪರದಾಡುವಂತೆ ಆಗಿದೆ.
ಈ ನಡುವೆ ಕೋವಿಡ್ ಜಾಗೃತಿ ಮೂಡಿಸಲು ಡ್ರೋನ್ ಒಂದು ನಗರದಲ್ಲಿ ಹಾರಾಡುತ್ತಿದ್ದು, ಕೋವಿಡ್ ಮುನ್ನೆಚ್ಚರಿಕೆ ಪಾಲಿಸುವಂತೆ ಹಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ.
ಅಪ್ಪಿಕೊಳ್ಳಬೇಡಿ, ಮುತ್ತಿಡಬೇಡಿ
ಅಷ್ಟೇ ಅಲ್ಲದೇ ಮನೆಯ ಕಿಟಕಿ, ಬಾಲ್ಕನಿಗಳನ್ನು ತೆರೆಯದಂತೆ ಈ ಡ್ರೋನ್ ಹೇಳುತ್ತಿರುವ ದೃಶ್ಯ ಕಂಡು ಬಂದಿದೆ, ಜೊತೆಗೆ ಆರೋಗ್ಯ ಕಾರ್ಯಕರ್ತರು ಕೂಡ ಶಾಂಘೈ ಬೀದಿಯಲ್ಲಿ ಇಂದಿನಿಂದ ಸಂಗಾತಿಗಳನ್ನು ಜೊತೆಯಾಗಿ ಮಲಗಬೇಡಿ, ಮುತ್ತಿಡಬೇಡಿ. ಅಪ್ಪಿಕೊಳ್ಳಬೇಡಿ. ಪ್ರತ್ಯೇಕವಾಗಿ ಇರಿ ಎಂದು ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಕಂಡು ಬಂದಿದೆ.
ಇದನ್ನು ಓದಿ: ಕೋವಿಡ್ ನಾಲ್ಕನೇ ಅಲೆಯೇ Omicron XE? ಎಷ್ಟು ಅಪಾಯಕಾರಿ ಗೊತ್ತಾ ಈ ಹೊಸ ರೂಪಾಂತರಿ?
ವಾರದ ಹಿಂದ ನಾಲ್ಕು ಕಾಲಿನ ರೋಬೋಟ್ ಒಂದು ಶಾಂಘೈ ಬೀದಿಯಲ್ಲಿ ಆರೋಗ್ಯ ಕುರಿತು ಜಾಗೃತಿ ಮೂಡಿಸುತ್ತಿರುವುದು ಕಂಡು ಬಂದಿತು.
ಆಹಾರ ಪೂರೈಕೆಯಲ್ಲೂ ಸಮಸ್ಯೆ
ಈ ನಡುವೆ ಆಹಾರ ಪೂರೈಕೆಯಲ್ಲಿ ಸಮಸ್ಯೆ ಕಂಡು ಬಂದಿದೆ. ಶಾಂಘೈಯಲ್ಲಿ ಜನರಿಗೆ ಅವಶ್ಯಕವಾದಿ ಅಕ್ಕಿ ಮತ್ತು ಮಾಂಸ ಇದೆ. ಆದರೆ, ಇದನ್ನು ಹಂಚಿಕೆ ಮಾಡುವುದು ಸಮಸ್ಯೆ ಆಗಿದೆ. ಸೋಂಕು ನಿಯಂತ್ರಣದಿಂದ ಈ ರೀತಿ ಅನಾನುಕೂಲ ಉಂಟಾಗಿದೆ ಎಂದು ಶಾಂಘೈ ಉಪ ಮೇಯರ್ ಚೆನ್ ಟಾಂಗ್ ತಿಳಿಸಿದ್ದಾರೆ.
ಇದನ್ನು ಓದಿ: ಆನ್ಸರ್ ಪೇಪರ್ನಲ್ಲಿ ರಾಜಕೀಯ ಪಕ್ಷದ ಘೋಷಣೆ, ಸಿಂಬಲ್ ಮಾಡಿದ್ರೆ ಬೀಳುತ್ತೆ ದುಬಾರಿ ದಂಡ
ಸೋಮವಾರ ಶಾಂಘೈನಲ್ಲಿ ಕರೋನಾ ಪತ್ತೆಗೆ ಸಾಮೂಹಿಕ ಪರೀಕ್ಷೆಯನ್ನು ಸಹ ಮಾಡಲಾಯಿತು. ಇಲ್ಲಿರುವ 2.6 ಕೋಟಿ ಜನಸಂಖ್ಯೆಯನ್ನು ಪರೀಕ್ಷೆಗೊಳಪಡಿಸಲಾಗಿದೆ. ಶಾಂಘೈ ಆರೋಗ್ಯ ಅಧಿಕಾರಿಗಳು ಜನರ ಮೇಲೆ ನ್ಯೂಕ್ಲಿಯಿಕ್ ಆಸಿಡ್ ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ.
ನಗರದ ಆರ್ಥಿಕ ಚಟುವಟಿಕೆ ಬಂದ್
ಮಾರ್ಚ್ 28 ರಂದು ನಗರದಲ್ಲಿ ಎರಡು ಹಂತದ ಲಾಕ್ಡೌನ್ ಪ್ರಾರಂಭವಾಗಿದೆ. ಹೊರಗೆ ಕಾಲಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಅಷ್ಟೇ ಅಲ್ಲ ನಗರದಲ್ಲಿ ಆರ್ಥಿಕ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ವಿದೇಶಗಳಿಗೆ ರಫ್ತಾಗುವ ವಸ್ತುಗಳ ಪೂರೈಕೆಯನ್ನು ನಿಲ್ಲಿಸಲಾಗಿದೆ.
ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ ಶಾಂಘೈನ ಯಾವುದೇ ಆಸ್ಪತ್ರೆಯಲ್ಲಿ ಕರೋನಾ ಸೋಂಕಿತ ರೋಗಿಗಳನ್ನು ದಾಖಲಿಸಲು ಸ್ಥಳವಿಲ್ಲ. ಇದರ ಹೊರತಾಗಿಯೂ, ಶಾಂಘೈನಲ್ಲಿ ಇದುವರೆಗೆ ಕರೋನಾ ಸೋಂಕಿನಿಂದ ಯಾರೂ ಸಾವನ್ನಪ್ಪಿಲ್ಲ ಎಂದು ಚೀನಾ ಹೇಳಿಕೊಂಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ