Viral Video; ಹರಿದ್ವಾರ ಯಾತ್ರೆಗೆ ಹೊರಟ ಯುವಕನ ಪಾದ ಮಸಾಜ್ ಮಾಡಿದ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ

ಸುರಕ್ಷತೆಯ ಜೊತೆ ಜೊತೆಗೆ ಸೇವೆಯನ್ನೂ ಮಾಡುತ್ತೇವೆ ಎಂದು ಈ ವಿಡಿಯೋವನ್ನು ಶಾಮ್ಲಿ ಪೊಲೀಸ್​ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Sushma Chakre | news18
Updated:July 28, 2019, 11:23 AM IST
Viral Video; ಹರಿದ್ವಾರ ಯಾತ್ರೆಗೆ ಹೊರಟ ಯುವಕನ ಪಾದ ಮಸಾಜ್ ಮಾಡಿದ ಉತ್ತರ ಪ್ರದೇಶದ ಐಪಿಎಸ್ ಅಧಿಕಾರಿ
ಪಾದಕ್ಕೆ ಮಸಾಜ್ ಮಾಡುತ್ತಿರುವ ಎಸ್​ಪಿ
  • News18
  • Last Updated: July 28, 2019, 11:23 AM IST
  • Share this:
ನವದೆಹಲಿ (ಜು.28):  ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಪೊಲೀಸ್​ ಅಧಿಕಾರಿ ಹರಿದ್ವಾರಕ್ಕೆ ಹೊರಟಿದ್ದ ಯಾತ್ರಾರ್ಥಿಯ ಪಾದಕ್ಕೆ ಮಸಾಜ್​ ಮಾಡುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ. 

ಶಾಮ್ಲಿ ಪೊಲೀಸ್​ ಅಧಿಕಾರಿಯ ಅಧಿಕೃತ ಟ್ವಿಟ್ಟರ್​ನಿಂದಲೇ ಈ ವಿಡಿಯೋ ಪೋಸ್ಟ್​ ಆಗಿದೆ. ಹರಿದ್ವಾರಕ್ಕೆ ಉತ್ತರಪ್ರದೇಶದ ಮೂಲಕ ಹೋಗುವ ಯಾತ್ರಾರ್ಥಿಗಳಿಗೆ ಡಯಾಗ್ನಾಸ್ಟಿಕ್ ಕ್ಯಾಂಪ್​ ಏರ್ಪಡಿಸುವುದಾಗಿ ಉತ್ತರಪ್ರದೇಶದ ಸೂಪರಿಂಟೆಂಡ್​ ಆಫ್​ ಪೊಲೀಸ್​ ಘೋಷಿಸಿದ್ದಾರೆ. ಹಾಗೇ, ಈ ವೇಳೆ ಯಾತ್ರಾರ್ಥಿಯೊಬ್ಬನ ಕಾಲಿಗೆ ಯೂನಿಫಾರಂ ಧರಿಸಿಕೊಂಡೇ ಎಸ್​ಪಿ ಅಜಯ್ ಕುಮಾರ್ ಪಾಂಡೆ ಮಸಾಜ್ ಮಾಡುತ್ತಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ನಾಳೆ ಬಹುಮತ ಸಾಬೀತು ಹಿನ್ನೆಲೆ ಇಂದು ಶಾಸಕಾಂಗ ಪಕ್ಷದ ಸಭೆ ಕರೆದ ಬಿಜೆಪಿ; ಎಲ್ಲ ಶಾಸಕರಿಗೆ ವಿಪ್ ಜಾರಿ ಸಾಧ್ಯತೆ

'ಸುರಕ್ಷತೆಯ ಜೊತೆ ಜೊತೆಗೆ ಸೇವೆಯನ್ನೂ ಮಾಡುತ್ತೇವೆ' ಎಂದು ಈ ವಿಡಿಯೋವನ್ನು ಶಾಮ್ಲಿ ಪೊಲೀಸ್​ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮೆಡಿಕಲ್ ಕ್ಯಾಂಪ್​ಗೆ ಭೇಟಿ ನೀಡಿದ್ದ ಎಸ್​ಪಿ ಅಜಯ್ ಕುಮಾರ್ ಪಾಂಡೆ ಅಲ್ಲಿನ ಯುವ ಯಾತ್ರಾರ್ಥಿಯೊಬ್ಬನ ಕಾಲನ್ನು ಮಸಾಜ್ ಮಾಡುತ್ತಿರುವ ವಿಡಿಯೋ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಯೂನಿಫಾರಂ ಧರಿಸಿಕೊಂಡು ಬೇರೆಯವರ ಕಾಲು ಒತ್ತುತ್ತಿರುವುದು ಸರಿಯಲ್ಲ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ. ಪ್ರಚಾರಕ್ಕಾಗಿ ಹೀಗೆಲ್ಲ ಮಾಡಲಾಗುತ್ತಿದೆ. ಇದು ನಿಜವಾದ ಕಾಳಜಿಯಲ್ಲ, ಪ್ರಚಾರದ ಗಿಮಿಕ್ ಎಂದು ಕೂಡ ಅನೇಕರು ಟ್ವೀಟ್ ಮಾಡಿದ್ದಾರೆ.ಮತ್ತೊಂದು ಪಬ್ ದುರಂತ; ಸಿಸಿಬಿ ದಾಳಿ ವೇಳೆ ಕಟ್ಟಡದಿಂದ ಜಿಗಿದು ಕೋಮಾ ಸ್ಥಿತಿ ತಲುಪಿದ ಯುವತಿ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಜಯ್ ಕುಮಾರ್ ಪಾಂಡೆ, ನಾನು ಯಾವುದೇ ಅಹಂಕಾರವಿಲ್ಲದೆ, ನಿಸ್ವಾರ್ಥದಿಂದ ಆ ಬಾಲಕನ ಕಾಲನ್ನು ಒತ್ತಿದ್ದೆ. ಆತ ಬಹಳ ಸುಸ್ತಾದಂತೆ ಕಾಣುತ್ತಿದ್ದ. ಹೀಗಾಗಿ, ಕಾಲಿಗೆ ಮಸಾಜ್ ಮಾಡಿದೆ. ನಾವು ಸಾರ್ವಜನಿಕ ವಲಯದಲ್ಲಿದ್ದು ಕೆಲಸ ಮಾಡಬೇಕಾದ್ದರಿಂದ ಜನರೊಂದಿಗೆ ಆದಷ್ಟು ಬೆರೆಯಬೇಕಾಗುತ್ತದೆ. 200ರಿಂದ 300 ಕಿ.ಮೀ. ದೂರ ಹಸಿವು ಮತ್ತು ಬಾಯಾರಿಕೆಯಿಂದ ನಡೆಯಬೇಕೆಂದರೆ ಅದು ಸುಲಭವಲ್ಲ. ಹೀಗಾಗಿ, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಾವು ಮೆಡಿಕಲ್ ಕ್ಯಾಂಪ್ ಮಾಡಿದ್ದೆವು' ಎಂದು ಹೇಳಿದ್ದಾರೆ.
Loading...

ಕಾರ್ಗಿಲ್ ವಿಜಯೋತ್ಸವ ಆಚರಣೆ; ಹುತಾತ್ಮ ಯೋಧರು ನಮ್ಮ ದೇಶಕ್ಕೆ ಮಾದರಿ ಎಂದ ಮೋದಿ

ಎಸ್​ಪಿ ಅಜಯ್ ಕುಮಾರ್ ಪಾಂಡೆ ಅವರ ಕಾರ್ಯಕ್ಕೆ ಹಿರಿಯ ಪೊಲೀಸ್​ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಶಾಮ್ಲಿ ಜಿಲ್ಲೆಯ ಕೆಲವು ಪೊಲೀಸರು ಯಾತ್ರಾರ್ಥಿಗಳಿಗೆ ಹಣ್ಣು, ನೀರು ಕೊಟ್ಟು ಸಹಾಯ ಮಾಡುತ್ತಿದ್ದಾರೆ. ಇನ್ನು ಕೆಲವರು ಆಸ್ಪತ್ರೆಗೆ ಚಿಕಿತ್ಸೆ ಖುದ್ದಾಗಿ ಕರೆದುಕೊಂಡು ಹೋದವರಿದ್ದಾರೆ. ಅದೇರೀತಿ ಅಜಯ್ ಸಿಂಗ್ ಆ ಬಾಲಕನ ಪಾದ ಮಸಾಜ್ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಅದರಲ್ಲಿ ತಪ್ಪೇನೂ ಇಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

 

 

 

 

 
First published:July 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...