ಮಹಿಳಾ ಹಾಕಿ ತಂಡಕ್ಕೆ ವಿಶೇಷ ಸಂದೇಶ ನೀಡಿದ ಹಳೆಯ ಕೋಚ್​ ಕಬೀರ್​ ಖಾನ್​ ಅಲಿಯಾಸ್​ ಶಾರುಖ್​ ಖಾನ್​!!

ಭಾರತ ಮಹಿಳಾ ತಂಡದ ಕೋಚ್ ಮರಿಜ್ನೆ ಟ್ವೀಟ್ ಮಾಡಿ, “ಎಲ್ಲರ ಬೆಂಬಲ ಮತ್ತು ಪ್ರೀತಿಗಾಗಿ ಧನ್ಯವಾದಗಳು. ನಾವು ಈ ಪ್ರೀತಿಯನ್ನು ಮರಳಿ ನೀಡುತ್ತೇವೆ. ತಂಡದ ನಿಜವಾದ ತರಬೇತುದಾರ ಮರಿಜ್ನೆ, " ಎಂದು ರಿಪ್ಲೆ ಕೊಟ್ಟಿದ್ದಾರೆ.

ಭಾರತ ಮಹಿಳಾ ಹಾಕಿ ತಂಡ

ಭಾರತ ಮಹಿಳಾ ಹಾಕಿ ತಂಡ

 • Share this:
  ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸೆಮಿಫೈನಲ್‌ನಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು 1-0 ಗೋಲುಗಳಿಂದ ಸೋಲಿಸಿ ಭಾರತೀಯ ಮಹಿಳಾ ಹಾಕಿ ತಂಡ ಇತಿಹಾಸ ನಿರ್ಮಿಸಿದೆ. ಮಹಿಳಾ ತಂಡವು ಒಲಿಂಪಿಕ್ಸ್ ಸೆಮಿಸ್ ತಲುಪಿದ್ದು ಇದೇ ಮೊದಲು. ಆದ ಕಾರಣ ಇಡೀ ತಂಡಕ್ಕೆ ಶುಭಾಶಯಗಳ ಸುರು ಮಳೆಯೇ ಆಗುತ್ತಿದೆ.

  ಕ್ವಾರ್ಟರ್‌ಫೈನಲ್‌ನಲ್ಲಿ ಭಾರತವು ವಿಶ್ವ ನಂ .2 ಆಸ್ಟ್ರೇಲಿಯಾವನ್ನು 1-0 ಅಂತರದಿಂದ ಸೋಲಿಸಿತು,  ಡ್ರ್ಯಾಗ್-ಫ್ಲಿಕರ್ ಗುರ್ಜಿತ್ ಕೌರ್ 22 ನೇ ನಿಮಿಷದಲ್ಲಿ ಅತ್ಯಂತ ಮಹತ್ವದ ಗೋಲನ್ನು ಹೊಡೆದು ಜಯದ ಬಾಗಿಲನ್ನು ತೆರೆದು ಇತಿಹಾಸ ನಿರ್ಮಿಸಿದರು.


  ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್, ಭಾರತೀಯ ಮಹಿಳಾ ಹಾಕಿ ತಂಡದ ಕೋಚ್ ಕಬೀರ್ ಖಾನ್ ಪಾತ್ರವನ್ನು ನಿರ್ವಹಿಸಿದ್ದ, 'ಚಕ್ ದೇ ಇಂಡಿಯಾ!' ಚಿತ್ರ ಸೂಪರ್​ ಹಿಟ್​ ಆಗಿತ್ತು, ಈಗ ಮತ್ತೆ ಈ ಚಿತ್ರ ಸದ್ದು ಮಾಡುತ್ತಿದ್ದು, ಇದು ನಿಜಕ್ಕೂ ಕಾಲ್ಪನಿಕ ಕಥೆ ಎಂದಿದ್ದವರು, ಇಲ್ಲ ನದು ನಿಜವಾದ ಕತೆ ಎನ್ನುತ್ತಿದ್ದಾರೆ.

  "ಏನೂ ಸಮಸ್ಯೆ ಇಲ್ಲ. ಕೋಟ್ಯಂತರ ಕುಟುಂಬ ಸದಸ್ಯರಿಗೆ ಹಿಂತಿರುಗುವಾಗ ಚಿನ್ನವನ್ನು ತನ್ನಿ ...  ಈ ಬಾರಿ ದೀಪಾವಳಿ ಹಬ್ಬ ಕೂಡ ನವೆಂಬರ್​ 2ಕ್ಕೆ ಇದೆ. ನಿಮ್ಮ ಮಾಜಿ ತರಬೇತುದಾರ ಕಬೀರ್ ಖಾನ್, " ಎಂದು ನಟ ಶಾರುಖ್​ ಖಾನ್​ ಅವರು ನಿಜ ಜೀವನದ ಕೋಚ್ ಸ್ಜೋರ್ಡ್ ಮರಿಜ್ನೆ ಅವರ ಪೋಸ್ಟ್ ಅನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.

  ಭಾರತ ಮಹಿಳಾ ತಂಡದ ಕೋಚ್ ಮರಿಜ್ನೆ ಟ್ವೀಟ್ ಮಾಡಿ, “ಎಲ್ಲರ ಬೆಂಬಲ ಮತ್ತು ಪ್ರೀತಿಗಾಗಿ ಧನ್ಯವಾದಗಳು. ನಾವು ಈ ಪ್ರೀತಿಯನ್ನು ಮರಳಿ ನೀಡುತ್ತೇವೆ. ತಂಡದ ನಿಜವಾದ ತರಬೇತುದಾರ ಮರಿಜ್ನೆ, " ಎಂದು ರಿಪ್ಲೆ ಕೊಟ್ಟಿದ್ದಾರೆ.

  ಆಶ್ಚರ್ಯದ ಸಂಗತಿ ಏನೆಂದರೆ, ಚಲನಚಿತ್ರದಲ್ಲಿ, ಭಾರತ ತಂಡ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು ಮತ್ತು ನಂತರ ಫೈನಲ್‌ನಲ್ಲಿ ಅದೇ ತಂಡವನ್ನು ಸೋಲಿಸುತ್ತದೆ. ಒಲಂಪಿಕ್​ನಲ್ಲೂ ಸಹ ಅದೇ ದೇಶದ ತಂಡ ಎದುರಾಗಿದೆ.

  ಗುರ್ಜಿತ್ ಕೌರ್ ಗೆಲುವಿನ ಗೋಲು ಗಳಿಸಿದರೂ ಸಹ, ಕೀಪರ್ ಸವಿತಾ ಪುನಿಯಾ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಮೆಚ್ಚುಗೆಗೆ ಪಾತ್ರರಾಗಿದ್ದಾರೆ, ಅನೇಕರು 'ವಾಲ್ ಆಫ್ ಇಂಡಿಯಾ' ಎಂದು ಹಾಡಿ ಹೊಗಳಿದ್ದಾರೆ. ಸವಿತಾ ಗೆದ್ದ ಪಂದ್ಯದಲ್ಲಿ ಆಸ್ಟ್ರೇಲಿಯಾ ಹೊಡೆದ ಎಂಟು ಪೆನಾಲ್ಟಿ ಕಾರ್ನರ್‌ಗಳನ್ನು ತಡೆದು ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ.

  .ಅಭಿಮಾನಿಯೊಬ್ಬರು ಟ್ವೀಟ್ಟರ್‌ನಲ್ಲಿ "ಭಾರತೀಯ ಮಹಿಳಾ ಹಾಕಿ ತಂಡವನ್ನು ಬದಲಾಯಿಸಿದ ಇಬ್ಬರು ಪುರುಷರು. ಕಬೀರ್ ಖಾನ್ (ರೀಲ್ ಲೈಫ್) ಮರಿಜ್ನೆ ( ರಿಯಲ್​ ಲೈಫ್​​) ಎಂದು ಕಾಮೆಂಟ್‌ ಮಾಡಿದ್ದಾರೆ.


  ಇದನ್ನೂ ಓದಿ: ರಾಜ್​ಕುಂದ್ರಾ ಪ್ರಕರಣ: ಡ್ಯಾನ್ಸ್​ ಶೋನಿಂದ 2 ಕೋಟಿ ಕಳೆದುಕೊಂಡ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ

  ಕೋಚ್​ ಮರಿಜ್ನೆ ಮಾತನಾಡಿ "ಇದು ಮನಸ್ಥಿತಿಯ ಬಗೆಗಿನ ಪರೀಕ್ಷೆ. ನಾವು ಕಳೆದುಕೊಳ್ಳಲು ಏನೂ ಇಲ್ಲ ಎಂಬುದಾಗಿ ನಮ್ಮ ಹುಡುಗಿಯರಿಗೆ ಹೇಳಿದೆ, ಆದ್ದರಿಂದ ಮುಕ್ತವಾಗಿ ಆಟವಾಡಿ, ಆದರೆ ಇಂದು ಕನಸು ನನಸಾಗಿದೆ. ಇದು ವಾಸ್ತವದಲ್ಲಿ ಚಕ್ ದೇ ಇಂಡಿಯಾ ಎಂದು ನಾನು ಭಾವಿಸುತ್ತೇನೆ, "ಎಂದು ಹೇಳಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: