• Home
  • »
  • News
  • »
  • national-international
  • »
  • Tirupati ವೆಂಕಟೇಶ್ವರ ದೇವಾಲಯಗೆ 5 ಕೋಟಿ ಮೌಲ್ಯದ ವಿದೇಶದ ಭೂಮಿ ದಾನ

Tirupati ವೆಂಕಟೇಶ್ವರ ದೇವಾಲಯಗೆ 5 ಕೋಟಿ ಮೌಲ್ಯದ ವಿದೇಶದ ಭೂಮಿ ದಾನ

ತಿರುಪತಿ ವೆಂಕಟೇಶ್ವರ ದೇವರು

ತಿರುಪತಿ ವೆಂಕಟೇಶ್ವರ ದೇವರು

ನಾಲ್ಕು ಎಕರೆ ವಿಸ್ತಾರದ ಪ್ರದಾನ ಭೂಮಿಯನ್ನು ತಿರುಮಲ ತಿರುಪತಿ ದೇವಸ್ಥಾನಮ್‍ಗೆ ದಾನ ಮಾಡಲು ಬಯಸುತ್ತೇನೆ. ಅಲ್ಲಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಬೇಕೆಂದು, ದೇವಸ್ಥಾನದ ಟ್ರಸ್ಟನ್ನು ವಿನಂತಿಸಿಕೊಳ್ಳುತ್ತೇನೆ.

  • Share this:

ತಿರುಮಲ ತಿರುಪತಿ ದೇವಸ್ಥಾನಮ್ (TTD) ವಿದೇಶದಲ್ಲಿ ತನ್ನ ಮೊತ್ತ ಮೊದಲ ಭೂಮಿಯನ್ನು ದಾನವಾಗಿ ಸ್ವೀಕರಿಸುವ ಸಾಧ್ಯತೆ ಇದೆ. ಇದು ಟಿಟಿಡಿ ಟ್ರಸ್ಟ್ ಮಂಡಳಿಯ ಅನುಮೋದನೆಗೆ ಒಳಪಟ್ಟಿರುತ್ತದೆ. ಸೀಶೆಲ್ಸ್‌ನಲ್ಲಿ (Seychelles) ವಾಸವಾಗಿರುವ ಭಾರತ ಮೂಲದ ವಿದೇಶಿ ನಾಗರಿಕ, ರಾಮಕೃಷ್ಣ ಪಿಳ್ಳೈ ಅವರು, ಸೀಶೆಲ್ಸ್‌ನ ರಾಜಧಾನಿ ವಿಕ್ಟೋರಿಯಾದಲ್ಲಿ ತಿರುಮಲ ತಿರುಪತಿ ದೇವಸ್ಥಾನಮ್‍ಗೆ ಭೂಮಿಯನ್ನು ದಾನ (Donation) ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ ನಂತರ ಈ ಬೆಳವಣಿಗೆಗಳು ನಡೆಯಲು ಆರಂಭಿಸಿವೆ. ಈ ಐತಿಹಾಸಿಕ ದಾನದ ಪ್ರಕ್ರಿಯೆಯನ್ನು, ಕಾರ್ಯರೂಪಕ್ಕೆ ತರುವ ಕುರಿತು, ದೇವಾಲಯದ ಟ್ರಸ್ಟ್ ಸಂಪೂರ್ಣ ಕಾರ್ಯ ಸಾಧ್ಯತೆಯ ಕುರಿತು ಅಧ್ಯಯನವನ್ನು ನಡೆಸಬೇಕಾಗುತ್ತದೆ ಎಂದು ಹೇಳಲಾಗಿದೆ.


ಸೀಶೆಲ್ಸ್​​ನಲ್ಲಿ ಭೂಮಿ ದಾನ


ಸೀಶೆಲ್ಸ್‌ನಲ್ಲಿ ಹಿಂದೂಗಳು ಬಹಳಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಅಲ್ಲಿನ ಹಿಂದೂ ಸಮುದಾಯವು ಈಗಾಗಲೇ ಗಣೇಶ ಮಂದಿರವನ್ನು ನಿರ್ಮಿಸಿದೆ. ಅಷ್ಟೇ ಅಲ್ಲ, ಆ ಗಣೇಶ ಮಂದಿರವು ಹೆಚ್ಚಿನ ಸಂಖ್ಯೆಯ ವಿದೇಶಿ ಪ್ರವಾಸಿಗರನ್ನು ತನ್ನ ಕಡೆ ಸೆಳೆಯುತ್ತಿದೆ ಕೂಡ. ಇದನ್ನು ಗಮನಿಸಿದ ರಾಮಕೃಷ್ಣ ಪಿಳ್ಳೈ ಅವರಿಗೆ ಅಲ್ಲಿ ಒಂದು ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಿದರೆ ಹೇಗೆ ಎಂಬ ಆಲೋಚನೆ ಮೂಡಿದ್ದು.


5 ಕೋಟಿ ಮೌಲ್ಯದ ಭೂಮಿಯಲ್ಲಿ ವೆಂಕಟೇಶ್ವರ ದೇಗುಲ


“ನಾನು ಸೀಶೆಲ್ಸ್‌ನ ವಿಕ್ಟೋರಿಯಾದಲ್ಲಿಸುಮಾರು 5 ಕೋಟಿ ರೂ ಬೆಲೆ ಬಾಳುವ, ನಾಲ್ಕು ಎಕರೆ ವಿಸ್ತಾರದ ಪ್ರದಾನ ಭೂಮಿಯನ್ನು ತಿರುಮಲ ತಿರುಪತಿ ದೇವಸ್ಥಾನಮ್‍ಗೆ ದಾನ ಮಾಡಲು ಬಯಸುತ್ತೇನೆ. ಅಲ್ಲಿ ವೆಂಕಟೇಶ್ವರ ದೇವಸ್ಥಾನವನ್ನು ನಿರ್ಮಿಸಬೇಕೆಂದು, ದೇವಸ್ಥಾನದ ಟ್ರಸ್ಟನ್ನು ವಿನಂತಿಸಿಕೊಳ್ಳುತ್ತೇನೆ” ಎಂದು ರಾಮಕೃಷ್ಣ ಪಿಳ್ಳೈ ಅವರು ತಿರುಮಲ ತಿರುಪತಿ ದೇವಸ್ಥಾನಮ್ ಅನ್ನು ಒತ್ತಾಯಿಸಿದ್ದಾರೆ.


ಇದನ್ನು ಓದಿ: ಸೌಂಡ್ ಮಾಡುತ್ತೆ ಎಂದು 4 ತಿಂಗಳ ಬೆಕ್ಕಿನ ಮರಿಯನ್ನು ಕೊಂದಳು, ಕೇಸ್ ದಾಖಲು


ಬ್ಯುಸಿನೆಸ್ ನೆಟ್‍ವರ್ಕ್ ಕ್ಯಾಬಿನೆಟ್ (ಬಿಎನ್‍ಸಿ) ಗ್ರೂಪ್‍ನ ಪೋಷಕ ಸದಸ್ಯ, ತಿರುಪತಿ ಸಂಸದ ಡಾ. ಎಂ ಗುರುಮೂರ್ತಿ ಮತ್ತು ಗ್ರೂಪ್‍ನ ಉಪಾಧ್ಯಕ್ಷ ಹಾಗೂ ಟಿಟಿಡಿ ಟ್ರಸ್ಟ್ ಬೋರ್ಡ್‍ನ ಸದಸ್ಯ ಡಾ. ಎಸ್ . ಶಂಕರ್ ಅವರು, ಉದ್ಯಮ ನಾಯಕರು ಮತ್ತು ಎನ್‍ಆರ್‌ಐಗಳ ಗುಂಪನ್ನು ಇತ್ತೀಚೆಗೆ ಚೆನ್ನೈನಲ್ಲಿ ಭೇಟಿಯಾಗಿ, ದೇವಾಲಯಗಳ ನಗರವಾದ ತಿರುಪತಿ ಮತ್ತು ಟಿಟಿಡಿಯ ಅಭಿವೃದ್ಧಿಗೆ ತಮ್ಮ ಬೆಂಬಲ ಮತ್ತು ಕೊಡುಗೆಯನ್ನು ನೀಡುವಂತೆ ಕೇಳಿಕೊಂಡರು. ಈ ಸಂದರ್ಭದಲ್ಲಿ, ರಾಮಕೃಷ್ಟ ಪಿಳ್ಳೈ ಅವರು, ತಾವು ಸೀಶೆಲ್ಸ್‌ನಲ್ಲಿ ವೆಂಕಟೇಶ್ವರ ದೇವಾಲಯ ನಿರ್ಮಿಸಲು 5 ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ದಾನ ಮಾಡುವ ಪ್ರಸ್ತಾಪವನ್ನು ಮಾಡಿದರು.


ಇದೇ ಮೊದಲ ಬಾರಿಗೆ ವಿದೇಶಿ ಭೂಮಿ ದಾನ


ರಾಮಕೃಷ್ಟ ಪಿಳ್ಳೆಯವರು ಮಾಡಿರುವ, ವಿದೇಶದಲ್ಲಿ ಭೂದಾನದ ಕುರಿತ ಈ ಪ್ರಸ್ತಾಪವನ್ನು, ಡಾ. ಎಂ ಗುರುಮೂರ್ತಿ ಮತ್ತು ಡಾ. ಎಸ್ ಶಂಕರ್ ನೇತೃತ್ವದ ಬ್ಯುಸಿನೆಸ್ ನೆಟ್‍ವರ್ಕ್ ಕ್ಯಾಬಿನೆಟ್ ಸದಸ್ಯರು , ಭಾನುವಾರ ತಿರುಪತಿಯಲ್ಲಿ ನಡೆದ ಸಭೆಯಲ್ಲಿ, ಟಿಟಿಡಿಯ ಹೆಚ್ಚುವರಿ ಇಓ ಎ.ವಿ ಧರ್ಮ ರೆಡ್ಡಿ ಅವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಎ.ವಿ ಧರ್ಮಾ ರೆಡ್ಡಿ ಅವರು, ತಿರುಮಲ ತಿರುಪತಿ ದೇವಸ್ಥಾನಮ್‍ಗೆ ಇದೇ ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ಭೂಮಿಯನ್ನು ದಾನ ನೀಡುವ ಪ್ರಸ್ತಾಪ ಬಂದಿದ್ದು, ಈ ಬಗ್ಗೆ ತಿರುಮಲ ತಿರುಪತಿ ದೇವಸ್ಥಾನಮ್ ಟ್ರಸ್ಟ್ ಬೋರ್ಡ್ ಒಂದು ಅಂತಿಮ ತಿರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಇದನ್ನು ಓದಿ: Fungus: ವೈರಸ್​ ಆಯ್ತು, ಈಗ ಫಂಗಸ್ ಸರದಿ? ಸಾಂಕ್ರಾಮಿಕ ರೋಗ ಭೀತಿ


ಈ ಭೂಮಿ ದಾನಕ್ಕೆ ಸಂಬಂಧಿಸಿದಂತೆ ಆಗಬೇಕಾಗಿರುವ ಮುಂದಿನ ಕೆಲಸಗಳ ಕುರಿತು ಮಾತನಾಡುತ್ತಾ, “ಅಲ್ಲದೆ, ಸೀಶೆಲ್ಸ್‌ನಲ್ಲಿ ಇರುವ ಭೂಮಿಗೆ ಸಂಬಂಧಿಸಿದ ನೀತಿಗಳ ಕುರಿತು ಸಂಪೂರ್ಣ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸುವ ಅಗತ್ಯ ಕೂಡ ಇದೆ ..” ಎಂದು ಎ.ವಿ ಧರ್ಮಾ ರೆಡ್ಡಿ ತಿಳಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನಡೆದರೆ, ಸೀಶೆಲ್ಸ್‌ನ ವಿಕ್ಟೋರಿಯಾದಲ್ಲೂ ವೆಂಕಟೇಶ್ವರ ದೇವಸ್ಥಾನ ನಿರ್ಮಾಣವಾಗಿ, ವಿದೇಶಿಗರನ್ನು ಆಕರ್ಷಿಸುವ ದಿನ ದೂರವಿಲ್ಲ.

Published by:Seema R
First published: