ಮದುವೆಯ ನಂತರ ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ, ಬಲವಂತವಾಗಿ ಗಂಡ ಲೈಂಗಿಕತೆಯಲ್ಲಿ ತೊಡಗುವುದು ಅತ್ಯಾಚಾರವೇ ಅಗುತ್ತದೆ ಎಂದೇ ಇಷ್ಟು ದಿನ ಹೇಳಲಾಗುತ್ತಿತ್ತು. ಆದರೆ ಛತ್ತೀಸ್ಘಡ ಹೈಕೋರ್ಟ್(Chhattisgarh HC ) ಪ್ರಕರಣವೊಂದರ ಸಂಬಂಧ ನೀಡಿರುವ ಆದೇಶ ಇಡೀ ದೇಶದ ಗಮನ ಸೆಳೆದಿದೆ. ಮದುವೆಯಾದ ನಂತರ ಗಂಡ ತನ್ನ ಹೆಂಡತಿಯ ಇಚ್ಛೆಯ ವಿರುದ್ಧವಾಗಿ, ಬಲವಂತವಾಗಿ ಸೆಕ್ಸ್ ಮಾಡಿದರೆ ಅದು ಅತ್ಯಾಚಾರವೆಸಿಕೊಳ್ಳುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಜೊತೆಗೆ ವೈವಾಹಿಕ ಅತ್ಯಾಚಾರ(Marital Rape) ಆರೋಪ ಎದುರಿಸುತ್ತಿದ್ದ ಪತಿಯನ್ನು ಕೋರ್ಟ್ ಪ್ರಕರಣದಿಂದ ಖುಲಾಸೆಗೊಳಿಸಿದೆ. ಕಾನೂನುಬದ್ಧವಾಗಿ ಮದುವೆಯಾದ ಪುರುಷ ಮತ್ತು ಮಹಿಳೆಯ ನಡುವಿನ ಲೈಂಗಿಕ ಸಂಭೋಗ ಬಲವಂತವಾಗಿ ಅಥವಾ ಪತ್ನಿಯ ಇಚ್ಛೆಗೆ ವಿರುದ್ಧವಾಗಿದ್ದರೂ ಅತ್ಯಾಚಾರವಲ್ಲ ಎಂದು ಕೋರ್ಟ್ ತೀರ್ಪು ನೀಡಿದೆ.
ಪತ್ನಿ ವಯಸ್ಕಳಾಗಿದ್ದರೆ ಅತ್ಯಾಚಾರವಾಗಲ್ಲ
ಪತ್ನಿ 18 ವರ್ಷ ಮೇಲ್ಪಟ್ಟಿದ್ದರೆ ಆಕೆಯೊಂದಿಗೆ ಪತಿ ನಡೆಸುವ ಬಲವಂತದ ಸೆಕ್ಸ್ನ ಅತ್ಯಾಚಾರವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೋರ್ಟ್ ಹೇಳಿದೆ. ಈ ಪ್ರಕರಣದಲ್ಲಿ ಹೆಂಡತಿ ತನ್ನ ಗಂಡನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾರೆ. ಆದರೆ ಇದನ್ನು ರೇಪ್ ಕೇಸ್ ಎಂದು ಪರಿಗಣಿಸಲು ಸಾಧ್ಯವಿಲ್ಲ. ಆಕೆಯೊಂದಿಗೆ ಯಾವುದೇ ಲೈಂಗಿಕ ಕ್ರಿಯೆ ಬಲತ್ಕಾರ ಅಥವಾ ಆಕೆಯ ಇಚ್ಛೆಗೆ ವಿರುದ್ಧವಾಗಿದ್ದರೂ ಅತ್ಯಾಚಾರದ ಅಪರಾಧವಾಗುವುದಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ. ಪತಿ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಮಹಿಳೆ ಸಲ್ಲಿಸಿದ್ದ ದೂರು ಕಾನೂನಿನ ಮುಂದೆ ನಿಲ್ಲಲಿಲ್ಲ ಎಂದು ಮುಂಬೈ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಸಂಜಶ್ರೀ ಜೆ ಘರತ್ ತಿಳಿಸಿದ್ದಾರೆ.
ಗಂಡನನ್ನು ಅತ್ಯಾಚಾರಿ ಎನ್ನಲು ಸಾಧ್ಯವಿಲ್ಲ
ದೂರುದಾರೆಯೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ್ದು ಪತಿಯಾಗಿರುವುದರಿಂದ ಆತ ಯಾವುದೇ ಕಾನೂನುಬಾಹಿರ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗುವುದಿಲ್ಲ. ಕಳೆದ ವರ್ಷದ ನವೆಂಬರ್ 22 ರಂದು ಮಹಿಳೆ ವಿವಾಹವಾದರು ಎಂದು ಪ್ರಾಸಿಕ್ಯೂಷನ್ ಹೇಳಿದೆ. ಮಹಿಳೆಯ ಪ್ರಕಾರ, ವಿವಾಹದ ನಂತರ ಆಕೆಯ ಪತಿ ಮತ್ತು ಅವನ ಕುಟುಂಬವು ಅವಳ ಮೇಲೆ ಮಿತಿಗಳನ್ನು ಹಾಕಲು ಆರಂಭಿಸಿತು, ಅವಳನ್ನು ನಿಂದಿಸುತ್ತಿತ್ತು, ಹಣದ ಬೇಡಿಕೆಯನ್ನೂ ಇಟ್ಟಿತ್ತು. ಮದುವೆಯಾದ ಒಂದು ತಿಂಗಳ ನಂತರ ತನ್ನ ಪತಿ ತನ್ನ ಇಚ್ಛೆಗೆ ವಿರುದ್ಧವಾಗಿ ತನ್ನ ಜೊತೆ ಸಂಭೋಗ ನಡೆಸಿದ್ದಾನೆ ಎಂದು ಮಹಿಳೆ ದೂರಿದ್ದರು.
ಬಲವಂತದ ಸೆಕ್ಸ್ನಿಂದ ಪಾರ್ಶ್ವವಾಯು
ಜನವರಿ 2 ರಂದು ಈ ಜೋಡಿ ಮುಂಬೈ ಬಳಿಯ ಮಹಾಬಲೇಶ್ವರ ಎಂಬ ಗಿರಿಧಾಮಕ್ಕೆ ಪ್ರಯಾಣ ಬೆಳೆಸಿದ್ದರು. ಅಲ್ಲಿ ಅವರು ಮಹಿಳೆಯ ಆಸೆಗೆ ವಿರುದ್ಧವಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಅದರ ನಂತರ, ಮಹಿಳೆ ಅನಾರೋಗ್ಯಕ್ಕೆ ಒಳಗಾದಳು. ಆಕೆಯ ಸೊಂಟದ ಕೆಳ ಭಾಗ ಪಾರ್ಶ್ವವಾಯುವಿಗೆ ಒಳಗಾಗಿದೆ ಎಂದು ವೈದ್ಯರು ಮಾಹಿತಿ ನೀಡಿದರು. ಇದಾದ ನಂತರ, ಮಹಿಳೆ ತನ್ನ ಪತಿ ಮತ್ತು ಇತರರ ವಿರುದ್ಧ ಮುಂಬೈನಲ್ಲಿ ಎಫ್ಐಆರ್ ದಾಖಲಿಸಿದರು. ಪತಿಯ ಮನೆಯವರು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Women’s Equality Day 2021: ಮಹಿಳೆಯರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ನಿಮಗೆಷ್ಟು ಗೊತ್ತು?
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ