Sexual Harassment: ಗುರುವಿನಿಂದಲೇ ನಡೀತು ಹೇಯಕೃತ್ಯ!; 14 ವರ್ಷದ ಬಾಲಕಿಗೆ ಕೋಚ್​​ನಿಂದ ಲೈಂಗಿಕ ಕಿರುಕುಳ

ಕೋಚ್ ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಾಲಕಿ, ಮನೆಗೆ ಬಂದು ತನ್ನ ತಾಯಿಯ ಬಳಿ ನಡೆದ ಘಟನೆಯನ್ನು ಸಂಪೂರ್ಣವಾಗಿ ಹೇಳಿಕೊಂಡಿದ್ದಾಳೆ. ಬಳಿಕ ಅವರು ಬಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಗುರುಬ್ರಹ್ಮ ಗುರುವಿಷ್ಣು.. ಗುರುದೇವೋ ಮಹೇಶ್ವರ, ಗುರು ಸಾಕ್ಷಾತ್ ಪರಬ್ರಹ್ಮ.. ತಸ್ಮೈ ಶ್ರೀ ಗುರವೇ ನಮಃ.. ಗುರು ಇಲ್ಲದೆಯೇ ಗುರಿ ಮುಟ್ಟಲು ಸಾಧ್ಯವಿಲ್ಲ. ಮುಂದೆ ಗುರಿ, ಹಿಂದೆ ಗುರು(Teacher) ಇದ್ದರೆ ಮಾತ್ರ ಗೆಲುವು. ತಂದೆ- ತಾಯಿಯನ್ನು(Parents) ಬಿಟ್ಟರೆ ನಾವು ಗೌರವಿಸುವುದು ಗುರುವನ್ನೇ. ಆತನ ಮಕ್ಕಳ ಮೇಲೆ ಗಮನ ಕೊಡದೆ, ತಮ್ಮ ಶಿಷ್ಯರ ಮೇಲೆ ಹೆಚ್ಚಿನ ಗಮನ ಕೊಟ್ಟು ಅವರನ್ನ ಜಯಶಾಲಿಯನ್ನಾಗಿ ಮಾಡುವುದು ಗುರುಗಳೇ. ಕೇವಲ ಪಾಠ ಮಾಡುವವರು ಮಾತ್ರ ಗುರುಗಳಲ್ಲ, ಜೀವನದ ಪಾಠ ಕಲಿಸುವವರು ಗುರುವೇ. ಗುರುಗಳು ಅಂದರೆ ಬರೀ ಶಿಕ್ಷಣ ಕ್ಷೇತ್ರಗಳಲ್ಲಿ(Education Field) ಮಾತ್ರ ಅಲ್ಲ. ನಮಗೆ ಜೀವನದ ಮಾರ್ಗ ತೋರಿಸುವವರೆಲ್ಲ ಗುರುಗಳೇ. ನಮ್ಮ ಸಂಸ್ಕೃತಿಯಲ್ಲಿ ಗುರುವನ ದೇವರ ಸ್ಥಾನದಲ್ಲಿಟ್ಟು ನೋಡಲಾಗುತ್ತದ. ಆದರೆ ಇಲ್ಲೊಬ್ಬ ಕಾಮಿ ಗುರು ತನ್ನ ಶಿಷ್ಯೆಗೆ ಲೈಂಗಿಕ ಕಿರುಕುಳ(Sexual Harassment) ನೀಡಿದ್ದಾನೆ. 14 ವರ್ಷದ ಬಾಲಕಿ ಮೇಲೆ 35 ವರ್ಷದ ಬ್ಯಾಡ್ಮಿಂಟನ್ ಕೋಚ್(Badminton coach) ಕ್ರೌರ್ಯ ಮೆರೆದಿದ್ದಾನೆ.

    ನಿನಗೆ ಒಳ್ಳೆ ಭವಿಷ್ಯ ಕೊಡುತ್ತೇನೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಪುಣೆಯ ಬ್ಯಾಡ್ಮಿಂಟನ್ ಕ್ಲಬ್ ಒಂದರಲ್ಲಿ ಈ ಘಟನೆ ನಡೆದಿದೆ. ಕೋಚಿಂಗ್ ಮುಗಿಸಿದ ನಂತರ ಎಲ್ಲಾ ಮಕ್ಕಳು ತಮ್ಮ ಮನೆಯತ್ತ ಹೊರಟಿದ್ದರು. ಆದರೆ ಈ ಬಾಲಕಿಯನ್ನ ಇನ್ನು ಕೆಲವು ಹೊತ್ತು ಪ್ರಾಕ್ಟೀಸ್ ಮಾಡಲು ಕೋಚ್ ಹೇಳಿದ್ದಾನೆ. ಕೋಚ್ ಹೇಳಿದಂತೆ ಬಾಲಕಿಯು ಕೂಡ ಹೆಚ್ಚಿನ ಸಮಯ ಪ್ರಾಕ್ಟಿಸ್ ಮಾಡಿ ಮನೆಕಡೆ ಹೊರಡಲು ರೆಡಿಯಾಗಿದ್ದಾಳೆ. ಈ ವೇಳೆ ಶಟಲ್ ಗಳನ್ನು ಬಾಕ್ಸ್ ನಲ್ಲಿ ಹಾಕಿ ಲಾಕರ್ ರೂಂನಲ್ಲಿ ಎತ್ತಿಡಲು ಕೋಚ್ ಬಾಲಕಿ ತಿಳಿಸಿದ್ದ.

    ಇದನ್ನೂ ಓದಿ:Heart Breaking: ಮರುಮದುವೆಯಾಗೋಕೆ ಮಗುವನ್ನೇ ಮಾರಿಬಿಟ್ಟಳು, ಹೆತ್ತಕರುಳು ಅನ್ನೋದೆಲ್ಲಾ ಸುಳ್ಳಾ?

    ಬಾಲಕಿಯನ್ನು ಹಿಂಬಾಲಿಸಿಕೊಂಡು ಬಂದ ಕೋಚ್

    ಅದರಂತೆ ಬಾಲಕಿ ಲಾಕರ್ ರೂಂ ಬಳಿ ಹೋಗಿದ್ದಾಳಂತೆ. ಆಕೆಯನ್ನು ಹಿಂಬಾಲಿಸಿಕೊಂಡು ಬಂದ ಕೋಚ್, ಆಕೆಯನ್ನು ತುಂಬಾ ಸಲುಗೆಯಿಂದ ಮಾತನಾಡಿಸಲು ಶುರು ಮಾಡಿದ್ದನಂತೆ. ಯಾಕೆ ನೀನು ಸರಿಯಾಗಿ ಕ್ಲಾಸ್ ಗೆ
    ಬರುತ್ತಿಲ್ಲ. ರೆಗುಲರ್ ಆಗಿ ಬಂದು ಆಟವಾಡುವುದನ್ನು ಕಲಿತುಕೋ ಎಂದು ಬಾಲಕಿಯನ್ನು ಮಾತನಾಡಿಸಿದ್ದ. ಈ ರೀತಿಯಾಗಿ ಹತ್ತಿರದಿಂದ ಮಾತನಾಡುತ್ತಿದ್ದನ್ನ ಕಂಡ ಬಾಲಕಿಗೆ ಕೋಚ್ ಮೇಲೆ ಅನುಮಾನ ಬಂದಿತ್ತು. ಬಳಿಕ ಕೋಚ್ ನಿನಗೆ ಒಳ್ಳೆ ಭವಿಷ್ಯವಿದೆ ಎಂದು ಬಾಲಕಿ ಬಳಿ ಹೇಳಿದ್ದ.

    ಬಾಲಕಿ ಜೊತೆ ಅಸಭ್ಯ ವರ್ತನೆ

    ಇಷ್ಟಾದ ಬಳಿಕ ಬಾಲಕಿ ಕೈ ಕುಲುಕುವ ನೆಪದಲ್ಲಿ ಆಕೆಯನ್ನು ತನ್ನ ಬಳಿ ಎಳೆದುಕೊಂಡಿದ್ದ. ಅನುಚಿತವಾಗಿ ಆಕೆಯ ದೇಹವನ್ನು ಮುಟ್ಟಿದ್ದ. ನನಗೆ ನೀನು ಸಹಾಯ ಮಾಡಿದರೆ ನಾನು ನಿನಗೆ ಸಹಾಯ ಮಾಡುತ್ತೇನೆ ಎಂದು ಬಾಲಕಿಗೆ ತಿಳಿಸಿದ್ದ. ನನ್ನ ಬೇಕು ಬೇಡಗಳನ್ನು ನೀನು ಕೇಳು ಎಂದು ಹೇಳಿದ್ದನಂತೆ ಈ ಕಾಮಿ ಗುರು. ಬಳಿಕ ಬಾಲಕಿಯನ್ನ ಗಟ್ಟಿಯಾಗಿ ತಬ್ಬಿಕೊಂಡಿದ್ದ ಎಂದು ಬಾಲಕಿ ದಾಖಲಿಸಿರುವ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿ ಕೊಟ್ಟ ದೂರಿನ ಆಧಾರದ ಮೇಲೆ ಕೋಚ್ ನನ್ನ ಬಂಧಿಸಲಾಗಿದೆ.

    ಪೊಲೀಸರಿಗೆ ದೂರು

    "ಕೋಚ್ ನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದ ಬಾಲಕಿ, ಮನೆಗೆ ಬಂದು ತನ್ನ ತಾಯಿಯ ಬಳಿ ನಡೆದ ಘಟನೆಯನ್ನು ಸಂಪೂರ್ಣವಾಗಿ ಹೇಳಿಕೊಂಡಿದ್ದಾಳೆ. ಬಳಿಕ ಅವರು ಬಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಎಂದು ಈ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಆತನಿಗೆ ಕಠಿಣ ಶಿಕ್ಷೆ ನೀಡುವಂತೆ ಪೋಷಕರು ಆಗ್ರಹಿಸಿದ್ದಾರೆ.

    • ವರದಿ - ವಾಸುದೇವ್. ಎಂ

    Published by:Latha CG
    First published: