Sexual Harassment: ಕ್ಯಾಬ್​​​ ಕ್ಯಾನ್ಸಲ್​ ಮಾಡಿದ್ದಕ್ಕೆ ಡ್ರೈವರ್​ನಿಂದ ಲೈಂಗಿಕ ಕಿರುಕುಳ!

ಕ್ಯಾಬ್​ನಲ್ಲಿ ಎಸಿ ಇಲ್ಲದ ಕಾರಣ, ಹಾಗೂ ಡಬಲ್​ ರೇಟ್​ ಹೇಳಿದ್ದಕ್ಕೆ ಮಹಿಳೆ ಕ್ಯಾಬ್​ ಕ್ಯಾನ್ಸಲ್​ ಮಾಡಿದ್ದಳು. ಇದಾದ ಬಳಿಕ ಬೇರೆ ವಾಹನದಲ್ಲಿ ಸೌತ್​ ಮುಂಬೈ ಮಹಿಳೆ ಹಾಗೂ ಕುಟುಂಬಸ್ಥರು ತಲುಪಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಭೂಮಿ ಮೇಲೆ ನಿಜಕ್ಕೂ ಅದೆಂತಹ ಸೈಕೋಗಳಿದ್ದಾರೋ ಗೊತ್ತಿಲ್ಲ. ಚಿತ್ರ, ವಿಚಿತ್ರವಾಗಿ ಟಾರ್ಚರ್​​ ನೀಡುವುದು ಇವರ ಕೆಲಸ. ನೋಡಲು ಆರಾಮಾಗಿ ಇದ್ದರು, ಅವರ ಸೈಕೋ ಗುಣಗಳನ್ನ ಪ್ರದರ್ಶನ ಮಾಡುತ್ತಾರೆ. ಇದಕ್ಕೆ ತಕ್ಕ ಉದಾಹರಣೆ ಎಂಬಂತೆ ಬಿಹಾರದಲ್ಲೊಬ್ಬ ಸೈಕೋನನ್ನ ಪೊಲೀಸರು ಬಂಧಿಸಿದ್ದಾರೆ. ಆತ ಮಾಡಿದ ಕೆಲಸವನ್ನ ನೀವು ಕೇಳಿದರೆ ಒಂದು ಕ್ಷಣ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತೀರಾ. ಈ ರೀತಿಯ ಕೃತ್ಯಗಳನ್ನೂ ಮಾಡುತ್ತಾರಾ ಅಂತ ಆಶ್ಚರ್ಯವಾಗುತ್ತೆ. ಕ್ಯಾಬ್​ ಬುಕ್(Cab Book)​ ಮಾಡಿ ಕ್ಯಾನ್ಸಲ್​ ಮಾಡಿದ್ದಕ್ಕೆ ಈತ, ಪ್ರಯಾಣಿಕರಿಗೆ ಅಶ್ಲೀಲ ಸಂದೇಶ, ಫೋಟೋಗಳನ್ನ ಕಳುಹಿಸಿ ಕಿರುಕುಳ(Harassment) ನೀಡುತ್ತಿದ್ದ. ಕ್ಯಾಬ್​ ಬುಕ್​ ಮಾಡಿ ಕ್ಯಾನ್ಸಲ್​ ಮಾಡಿದ್ದಕ್ಕೆ, ದ್ವೇಷ ತಿರಿಸಿಕೊಳ್ಳಲು ಹೋಗಿ 18 ವರ್ಷದ ಚಾಲಕ(Cab Driver) ಪೊಲೀಸರ(Police) ಅತಿಥಿಯಾಗಿದ್ದಾನೆ. ಬೇರೆ ಬೇರೆ ನಂಬರ್​ಗಳಿಂದ ಹಲವು ತಿಂಗಳಿನಿಂದ ಕ್ಯಾಬ್​ ಕ್ಯಾನ್ಸಲ್​ ಮಾಡಿದ್ದ ಪ್ರಯಾಣಿಕರಿಗೆ ಕಿರುಕುಳ ಕೊಡುತ್ತಲೇ ಚಾಲಕ ಬಂದಿದ್ದ. ಇವನ ಟೈಂ ಬ್ಯಾಡ್​ ಆಗಿ ಪ್ರಯಾಣಿಕರು ಈತನ ಟಾರ್ಚರ್​ ತಾಳಲಾರದೆ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಆತನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

  ಜುಲೈ 3ರಂದು ದೂರು ನೀಡಿರುವ ಮಹಿಳೆಯ ಪತಿ, ಮಾವ ಮುಂಬೈನ ಬೋರಿವಲ್ಲಿ ನಗರದಲ್ಲಿ ಮೀಟಿಂಗ್​ ಇದ್ದ ಕಾರಣ ಅವರು ಅಲ್ಲಿಗೆ ಹೋಗಬೇಕಿತ್ತು. ಹೀಗಾಗಿ ಪತ್ನಿ ಖಾಸಗಿ ಟ್ರಾವೆಲ್ಸ್​​ವೊಂದರಲ್ಲಿ ಪ್ರಯಾಣದ ದರದ ಬಗ್ಗೆ ವಿಚಾರಿಸಿದ್ದಳು. ಆದರೆ ಮಹಿಳೆ ದರ ಹೆಚ್ಚಾಯಿತು ಎಂದು ಕ್ಯಾಬ್​ ಬುಕ್​ ಮಾಡದೇ, ಆಕೆ ಹಾಗೂ ಆಕೆಯ ಕುಟುಂಬಸ್ಥರು ಬೇರೆ ವಾಹನದಲ್ಲಿ ಬೋರಿವಲ್ಲಿ ​ತಲುಪಿದ್ರು. ಮತ್ತೆ ಇಲ್ಲಿಂದ ಬೇರೆಡೆ ಹೋಗಬೇಕಿದ್ದ ಕಾರಣ ಬೋರಿವಲ್ಲಿ ಇಂದ ಸೌತ್​ ಮುಂಬೈಗೆ ತೆರಳಲು ವಿಚಾರಿಸಿದ್ದ ಕಡೆಯಲ್ಲೆ ಕ್ಯಾಬ್​ ಬುಕ್​ ಮಾಡಿದ್ದಳು.

  ಕ್ಯಾಬ್​​ ಕೂಡ ಇವರನ್ನ ಪಿಕ್​ ಮಾಡಲು ಬಂದಿತ್ತು. ಬಳಿಕ ಚಾಲಕ ಇಲ್ಲಿ ತನ್ನ ಅಸಲಿ ಆಟವನ್ನು ಶುರುಮಾಡಿದ್ದ. ಇಲ್ಲಿಂದ ಸೌತ್​ ಮುಂಬೈಗೆ ತೆರಳಲು ಒನ್​ ಟು ಡಬಲ್​ ರೇಟ್​ ಆಗುತ್ತೆ ಎಂದು ಹೇಳಿದ್ದ. ಕ್ಯಾಬ್​ನಲ್ಲಿ ಎಸಿ ಇಲ್ಲದ ಕಾರಣ, ಹಾಗೂ ಡಬಲ್​ ರೇಟ್​ ಹೇಳಿದ್ದಕ್ಕೆ ಮಹಿಳೆ ಕ್ಯಾಬ್​ ಕ್ಯಾನ್ಸಲ್​ ಮಾಡಿದ್ದಳು. ಇದಾದ ಬಳಿಕ ಬೇರೆ ವಾಹನದಲ್ಲಿ ಸೌತ್​ ಮುಂಬೈ ಮಹಿಳೆ ಹಾಗೂ ಕುಟುಂಬಸ್ಥರು ತಲುಪಿದರು. ಇತ್ತ ಕ್ಯಾಬ್​ ಕ್ಯಾನ್ಸಲ್​ ಮಾಡಿದ್ದಕ್ಕೆ ಕೋಪಗೊಂಡಿದ್ದ 18 ವರ್ಷದ ಚಾಲಕ ಉತ್ಸವ್​ ಪ್ರಮೋದ್​ ಶುಕ್ಲಾ, ಮಹಿಳೆಗೆ ಹಲವು ಬಾರಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಇಷ್ಟಕ್ಕೆ ನಿಲ್ಲದ ಇವನ ಕ್ರೌರ್ಯ ಆಕೆಯ ಮೊಬೈಲ್​ಗೆ​ ಅಶ್ಲೀಲ ಚಿತ್ರಗಳು ಹಾಗೂ ವಿಡಿಯೋಗಳನ್ನ ಕಳುಹಿಸಿದ್ದಾನೆ. ನ್ಯಾಷನಲ್​ ನಂಬರ್​ ಹಾಗೂ ಇಂಟರ್​ನ್ಯಾಷನಲ್​ ನಂಬರ್​ಗಳಿಂದ ಈ ರೀತಿಯ ಕೃತ್ಯವನ್ನು ಎಸಗಿದ್ದಾನೆ.

  ಇದನ್ನೂ ಓದಿ:ಹೋಟೆಲ್​ಗೆ ಕರೆಸಿ ಪೋರ್ನ್ ವಿಡಿಯೋ ಮಾಡಿದ್ಳು; ಲೋನ್ ನೆಪದಲ್ಲಿ 44ರ ಆಂಟಿಯ ಸಂಚಿನ ಕಥೆ

  ಇದೆಲ್ಲಾ ಆದ ಬಳಿಕ ಮಹಿಳೆ ಪೊಲೀಸ್​ ಠಾಣೆಗೆ ಹೋಗಿ ಈ ಬಗ್ಗೆ ದೂರು ದಾಖಲಿಸಿದ್ದಾಳೆ. ಆರೋಪಿಯ ಬಲೆಗಾಗಿ ವಿಶೇಷ ತನಿಖಾ ತಂಡವನ್ನ ಪೊಲೀಸರು ರಚಿಸಿದ್ದರು. ತನಿಖೆ ವೇಳೆ ಆರೋಪಿ ಶುಕ್ಲಾ ಬಿಹಾರದಲ್ಲಿರುವ ಬಗ್ಗೆ ಮಾಹಿತಿ ದೊರಕಿದೆ. ಕೂಡಲೇ ವಿಶೇಷ ತಂಡ ಬಿಹಾರ್​ಗೆ ತೆರಳಿ ಶುಕ್ಲಾಗಾಗಿ ಹಳ್ಳ ತೋಡಿದ್ದರು. 2 ದಿನಗಳ ಹಿಂದೆ ಬಿಹಾರದಲ್ಲಿ ಶೋಧ ನಡೆಸಿ ಆರೋಪಿ ಶುಕ್ಲಾನನ್ನ ಪೊಲೀಸರು ಬಂಧಿಸಿ ಮುಂಬೈಗೆ ಕರೆತಂದಿದ್ಧಾರೆ. ಪೊಲೀಸ್​ ವಿಚಾರಣೆ ವೇಳೆ ಶುಕ್ಲಾ ತಪ್ಪೊಪ್ಪಿಕೊಂಡಿದ್ದಾನೆ. ಮಹಿಳೆಯ ಮೊಬೈಲ್​ ನಂಬರ್​ ಅನ್ನು ವಾಟ್ಸ್​ಆಪ್​ನ ಹಲವು ಗ್ರೂಪ್​ಗಳಲ್ಲಿ ಕಳುಹಿಸಿದ್ದಾಗಿ ಬಾಯಿ ಬಿಟ್ಟಿದ್ದಾನೆ. ಈ ಹಿಂದೆಯೂ ಈ ರೀತಿಯ ಕೃತ್ಯಗಳನ್ನ ಈತ ಮಾಡಿದ್ದ ಎಂಬ ಅನುಮಾನದ ಹಿನ್ನಲೆ, ತನಿಖೆಯನ್ನ ಮುಂದುವರಿಸಿದ್ದಾರೆ.

  ವರದಿ - ವಾಸುದೇವ್​​. ಎಂ
  Published by:Latha CG
  First published: