HOME » NEWS » National-international » SEXUAL HARASSMENT AGAINST HINDU GIRL IN KERALA WHAT IS VIRAL VIDEO REAL FACT MAK

Fact Check: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಯಿತೇ? ವೈರಲ್ ವಿಡಿಯೋ ಅಸಲಿಯತ್ತೇನು?

2011 ರ ಜನಗಣತಿಯ ಪ್ರಕಾರ ಹಿಂದೂಗಳು ಕೇರಳದ ಜನಸಂಖ್ಯೆಯ ಶೇಕಡಾ 54.7 ರಷ್ಟಿದ್ದರೆ, ಮುಸ್ಲಿಮರು ಶೇ. 26.5 ಮತ್ತು ಕ್ರಿಶ್ಚಿಯನ್ನರು ಶೇ.18.3 ಇದ್ದಾರೆ ಎಂದು ತಿಳಿಸಿದೆ. ಆದ್ದರಿಂದ, ವೈರಲ್ ಆಗಿದ್ದ ಈವಿಡಿಯೋ ಮತ್ತು ಪೋಸ್ಟ್ ಜನರನ್ನು ತಪ್ಪುದಾರಿಗೆ ಎಳೆಯುವಂತಿದೆ ಎಂದು ತೀರ್ಮಾನಿಸಬಹುದು. ಮೂರು ವರ್ಷದ ವಿಡಿಯೋ ಆಂಧ್ರಪ್ರದೇಶದವರೇ ಹೊರತು ಕೇರಳದವರಲ್ಲ, ಅಲ್ಲಿ ಹಿಂದೂಗಳು ಇನ್ನೂ ಅಲ್ಪಸಂಖ್ಯಾತರಾಗಿಲ್ಲ.

MAshok Kumar | news18-kannada
Updated:September 9, 2020, 5:43 PM IST
Fact Check: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಯಿತೇ? ವೈರಲ್ ವಿಡಿಯೋ ಅಸಲಿಯತ್ತೇನು?
ವೈರಲ್ ಆಗಿದ್ದ ವಿಡಿಯೋ ದೃಶ್ಯ.
  • Share this:
ನಿರ್ಜನ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಒಂದು ಹುಡುಗಿಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿರುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್ ಆಗಿತ್ತು. ಅಲ್ಲದೆ, ಈ ಘಟನೆ ಕೇರಳ ರಾಜ್ಯದಲ್ಲಿ ದಾಖಲಾಗಿದೆ. ಕೇರಳದಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಾಗಿದ್ದು, ಅವರ ಮೇಲೆ ಇಂತಹ ದೌರ್ಜನ್ಯಗಳು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಈ ವಿಡಿಯೋವನ್ನು ಮುಂದಿಟ್ಟು ಹೇಳಲಾಗಿತ್ತು. ಅಸಲಿಗೆ ವೈರಲ್ ಆಗಿದ್ದ ಆ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಹುಡುಗಿಯನ್ನು ವಿವಸ್ತ್ರಗೊಳಿಸಿ ಆಕೆಯ ಮೇಲೆ ದೈಹಿಕ-ಲೈಂಗಿಕ ಹಲ್ಲೆಗೆ ಮುಂದಾಗುತ್ತಾನೆ. ಆಕೆ, ತನ್ನನ್ನು ಬಿಟ್ಟುಬಿಡುವಂತೆ ಎಷ್ಟೇ ಬೇಡಿಕೊಂಡರೂ, ಕಿರುಚಿದರೂ ಸಹ ಆತ ಅದನ್ನು ಗಮನಿಸಿದೆ ಆಕೆಯ ಮೇಲಿನ ಲೈಂಗಿಕ ದೌರ್ಜನ್ಯವನ್ನು ಮುಂದುವರೆಸುತ್ತಾನೆ. ಇದೇ ವೇಳೆ ಮತ್ತೋರ್ವ ಯುವತಿ ಆಕೆಯ ರಕ್ಷಣೆಗೆ ಮುಂದಾಗುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅಲ್ಲದೆ, ಈ ಮೂವರ ಧ್ವನಿಯನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ಕೇಳಬಹುದಾಗಿದೆ.

ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಇಂಡಿಯಾ ಟುಡೆ ಸುಳ್ಳು ಸುದ್ದಿ ಪತ್ತೆ) ಈ ವಿಡಿಯೋ ಅಸಲಿ ಕಥೆಯನ್ನು ಹೊರಗೆಡವಿದ್ದು, ಸತ್ಯವನ್ನು ಬಯಲು ಮಾಡಿದೆ. ಅಸಲಿಗೆ ಇದು ಕೇರಳದಲ್ಲಿ ನಡೆದ ಘಟನೆಯೇ ಅಲ್ಲ. ಬದಲಾಗಿ ಇದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಮೂರು ವರ್ಷಗಳ ಹಿಂದೆ ನಡೆದಿರುವ ಘಟನೆಯಾಗಿದ್ದು, ಸ್ವತಃ ಯುವತಿಯ ಗೆಳೆಯನೇ ಆತನ ಸ್ನೇಹಿತರ ಜೊತೆಗೂಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬ ಅಂಶವನ್ನು ಪತ್ತೆ ಮಾಡಿದೆ.

ಸೆಪ್ಟೆಂಬರ್ 07 ರಂದು ಈ ವಿಡಿಯೋವನ್ನು ಟ್ವಿಟ್ ಮೂಲಕ ಹಂಚಿಕೊಂಡಿದ್ದ ವ್ಯಕ್ತಿಯೊಬ್ಬರು, “ಇದು ಕೇರಳದ ಮಹಿಳೆಯೊಬ್ಬಳ ಕಿರುಕುಳವನ್ನು ತೋರಿಸುವ ಏಕೈಕ ವೈರಲ್ ವಿಡಿಯೋ ಅಲ್ಲ. ಇಂತಹ ಘಟನೆಗಳು ಅಲ್ಲಿ ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಉದ್ದೇಶವೆಂದರೆ ಹಿಂದೂಗಳು ಆ ರಾಜ್ಯದಲ್ಲಿ ಅಲ್ಪಸಂಖ್ಯಾತರು” ಎಂದು ಶೀರ್ಷಿಕೆ ನೀಡಿದ್ದರು.

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಹುಡುಗಿಯ ರಕ್ಷಣೆಗೆ ಮುಂದಾದ ಗೆಳತಿ.


ಈ ಟ್ವೀಟ್ ಅನ್ನು ಅಳಿಸಲಾಗಿತ್ತಾದರೂ ಅಷ್ಟೊತ್ತಿಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಸುಪ್ರೀಂ ಕೋರ್ಟ್ ವಕೀಲ ಮತ್ತು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಕೂಡ ಇದನ್ನು ರಿಟ್ವೀಟ್ ಮಾಡಿದ್ದು, ಈ ವಿಷಯವನ್ನು ಕೈಗೆತ್ತಿಕೊಳ್ಳಲು ರಾಷ್ಟ್ರೀಯ ಮಹಿಳಾ ಆಯೋಗವನ್ನು ಕೋರಿದ್ದರು.

ಇಂಡಿಯಾ ಟುಡೆ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ ತನಿಖೆ

ಇನ್ವಿಡ್ ಬಳಸಿ ಈ ವಿಡಿಯೋ ಕೀಫ್ರೇಮ್ಗಳಲ್ಲಿ ಒಂದರ ಮೂಲವನ್ನು ಪತ್ತೆ ಹಚ್ಚಲು ನಾವು ಹಿಮ್ಮುಖವಾಗಿ ಚಲಿಸಿದ್ದಾಗ ಈ ಘಟನೆಯ ಸತ್ಯಾಸತ್ಯತೆ ಬಯಲಾಗಿದೆ. ಈ ಘಟನೆಯ ಕುರಿತು “ದಿ ಟೈಮ್ಸ್ ಆಫ್ ಇಂಡಿಯಾ” ವರದಿಯನ್ನೂ ನಾವು ಶೋಧಿಸಿದ್ದೇವೆ. ಈ ವರದಿಯ ಪ್ರಕಾರ 2017ರ ಆಗಸ್ಟ್‌ನಲ್ಲಿ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಆದರೆ, ಈ ವಿಡಿಯೋ ಈಗ ವೈರಲ್ ಆಗುತ್ತಿದೆ ಎಂಬುದು ತಿಳಿದುಬಂದಿದೆ.ಇದನ್ನೂ ಓದಿ : ಆತ್ಮ ನಿರ್ಭರ್‌ ಪ್ಯಾಕೇಜ್‌ನಿಂದ ಏನೂ ಪ್ರಯೋಜನವಿಲ್ಲ, ಆರ್ಥಿಕತೆ ವೃದ್ಧಿಸಲು ಜನರ ಕೈಗೆ ಹಣ ನೀಡಿ; ಸುಬ್ರಮಣಿಯನ್‌ ಸ್ವಾಮಿ

“ದಿ ಹಿಂದೂ” ವರದಿಯ ಪ್ರಕಾರ, ಬಾಲಕಿ 19 ವರ್ಷದ ವಿದ್ಯಾರ್ಥಿನಿಯಾಗಿದ್ದು, ಆಗಸ್ಟ್ 29, 2017 ರಂದು ತನ್ನ ಗೆಳೆಯ ಸಾಯಿ ಎಂಬ ವ್ಯಕ್ತಿಯಿಂದಲೇ ಆಕೆ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಅಲ್ಲದೆ, ಯುವಕನ ಸ್ನೇಹಿತ ಕಾರ್ತಿಕ್ ಮತ್ತು ಪವನ್ ಈ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಹುಡುಗಿ ಆರೋಪಿಯ ಪ್ರೀತಿ ಒಪ್ಪದ್ದಕ್ಕೆ ಪ್ರತಿಕಾರವಾಗಿ ಈ ಕೆಲಸ ಮಾಡಲಾಗಿದೆ ಎನ್ನಲಾಗಿದ್ದು, ಅಪರಾಧ ನಡೆದ ಸುಮಾರು ಒಂದು ತಿಂಗಳ ನಂತರ ಮೂವರನ್ನು ಬಂಧಿಸಲಾಗಿದೆ.

ಕೇರಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರೇ?

2011 ರ ಜನಗಣತಿಯ ಪ್ರಕಾರ ಹಿಂದೂಗಳು ಕೇರಳದ ಜನಸಂಖ್ಯೆಯ ಶೇಕಡಾ 54.7 ರಷ್ಟಿದ್ದರೆ, ಮುಸ್ಲಿಮರು ಶೇ. 26.5 ಮತ್ತು ಕ್ರಿಶ್ಚಿಯನ್ನರು ಶೇ.18.3 ಇದ್ದಾರೆ. ಆದಾಗ್ಯೂ, 2016 ರಲ್ಲಿ “ಡೆಕ್ಕನ್ ಕ್ರಾನಿಕಲ್” ಪ್ರಕಟಿಸಿದ ಅಧ್ಯಯನವು 2051 ರ ವೇಳೆಗೆ ರಾಜ್ಯದ ಹಿಂದೂ ಜನಸಂಖ್ಯೆಯು ಶೇಕಡಾ 49.3 ಕ್ಕೆ ಇಳಿಯಲಿದೆ ಎಂದು ಹೇಳಿದೆ.

ಆದ್ದರಿಂದ, ವೈರಲ್ ಆಗಿದ್ದ ಈವಿಡಿಯೋ ಮತ್ತು ಪೋಸ್ಟ್ ಜನರನ್ನು ತಪ್ಪುದಾರಿಗೆ ಎಳೆಯುವಂತಿದೆ ಎಂದು ತೀರ್ಮಾನಿಸಬಹುದು. ಮೂರು ವರ್ಷದ ವಿಡಿಯೋ ಆಂಧ್ರಪ್ರದೇಶದವರೇ ಹೊರತು ಕೇರಳದವರಲ್ಲ, ಅಲ್ಲಿ ಹಿಂದೂಗಳು ಇನ್ನೂ ಅಲ್ಪಸಂಖ್ಯಾತರಾಗಿಲ್ಲ.
Published by: MAshok Kumar
First published: September 9, 2020, 5:43 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories