ಸಂಸತ್ತಿನಲ್ಲಿ ಸುರಸುಂದರಾಂಗಿಯರು: ಮೊದಲ ದಿನವೇ ಟ್ರೋಲ್​ಗೊಳಗಾದ ಸಂಸದೆಯರು

ಇಂತಹ ಟ್ರೋಲ್​ ಹಾಗೂ ಟೀಕೆಗಳಿಗೆ ನಾನು ಗಮನ ನೀಡುವುದಿಲ್ಲ. ನನ್ನಷ್ಟಿದ್ದ ಬಟ್ಟೆ ಧರಿಸುವುದ ನನ್ನ ಹಕ್ಕು ಎಂದು ಟೀಕಾಗಾರರಿಗೆ ಅಲೆಕ್ಸಾಂಡ್ರಿಯಾ ತಿರುಗೇಟು ನೀಡಿದ್ದರು.

zahir | news18
Updated:May 28, 2019, 3:38 PM IST
ಸಂಸತ್ತಿನಲ್ಲಿ ಸುರಸುಂದರಾಂಗಿಯರು: ಮೊದಲ ದಿನವೇ ಟ್ರೋಲ್​ಗೊಳಗಾದ ಸಂಸದೆಯರು
ಮಿಮಿ-ನುಸ್ರತ್
zahir | news18
Updated: May 28, 2019, 3:38 PM IST
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಈ ಹಿಂದೆಗಿಂತಲೂ ಅತೀ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ಸಂಸದೆಯರು ಆಯ್ಕೆಯಾಗಿದ್ದಾರೆ. 542 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 78 ಮಹಿಳಾ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದರಲ್ಲಿ 41 ಬಿಜೆಪಿ ಸಂಸದೆಯರು ಎಂಬುದು ವಿಶೇಷ. ಹಾಗೆಯೇ ಪಶ್ಚಿಮ ಬಂಗಾಳದಿಂದ ಈ ಬಾರಿ 9 ಮಹಿಳಾ ಅಭ್ಯರ್ಥಿಗಳು ಲೋಕಸಭೆಯನ್ನು ಪ್ರವೇಶಿಸಿದ್ದಾರೆ. ಅದರಲ್ಲೂ ಚುನಾವಣಾ ಆರಂಭದಿಂದಲೇ ಸುದ್ದಿಯಲ್ಲಿದ್ದ ನಟಿಯರಾದ ನುಸ್ರತ್ ಜಹಾನ್ ಮತ್ತು ಮಿಮಿ ಚಕ್ರವರ್ತಿ ಸಂಸತ್ತಿಗೆ ಕಾಲಿಟ್ಟಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಈ ಇಬ್ಬರು ನಟಿಯರು ಬಂಗಾಳದ ಬಸಿರ್ಹತ್ ಮತ್ತು ಜಾಧವಪುರ ಕ್ಷೇತ್ರದಿಂದ ಭಾರೀ ಮತಗಳಿಂದ ಗೆದ್ದಿದ್ದರು.

ಟಿಎಂಸಿ ಪಕ್ಷವು ಈ ಇಬ್ಬರು ನಟಿಯರಿಗೆ ಟಿಕೆಟ್ ನೀಡಿದಾಗಲೇ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್​ಗೆ ಒಳಗಾಗಿದ್ದರು. ಆದರೀಗ ಸಂಸದೆಯರಾಗಿ ಆಯ್ಕೆಯಾದ ಮೇಲೂ ಟ್ರೋಲ್ ಮುಂದುವರೆದಿದೆ. ಸಂಸತ್ತಿಗೆ ರಂಗ ಪ್ರವೇಶಿಸಿದ ಖುಷಿಯಲ್ಲಿದ್ದ ನುಸ್ರತ್ ಹಾಗೂ ಮಿಮಿ, ಸಿನಿಮಾ ತಾರೆಯರಂತೆ ಫೋಟೋಗಳಿಗೆ ಪೋಸ್​ ನೀಡಿರುವುದಕ್ಕೆ ಆಕ್ರೋಶಗಳು ವ್ಯಕ್ತವಾಗಿದೆ. ಸಾಂಪ್ರದಾಯಿಕ ರಾಜಕಾರಣಿಗಳಿಗಿಂತ ವಿಭಿನ್ನವಾಗಿ ಜೀನ್ಸ್ , ವೈಟ್​ ಶರ್ಟ್​ ಹಾಗೂ ಸ್ನೀಕರ್ಸ್​​ ಧರಿಸಿ ಮಿಮಿ ಮಿಂಚಿದ್ದರು . ಹಾಗೆಯೇ ನುಸ್ರತ್​ ಜಹಾನ್​ ಕೂಡ ಪ್ಯಾಂಟ್​​ ಮತ್ತು ಟಾಪ್​​ ಧರಿಸಿದ್ದು, ಸಂಸತ್​​ ಭವನದ ಮುಂದೆ ಫೋಟೋಗೆ ಪೋಸ್​ ನೀಡಿದ್ದಾರೆ. ಈ ಫೋಟೋಗಳಿಗೆ ಇದೀಗ ಸಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗಳು ಕೇಳಿ ಬಂದಿವೆ.

Loading...ಸರ್ಕಾರದ ಕೆಲಸ ದೇವರ ಕೆಲಸ ಎನ್ನುವ ಜಾಗದಲ್ಲಿ ಸಿನಿಮಾ ತಾರೆಯರು ತಮ್ಮ ಸ್ಥಾನ ಘನತೆಯನ್ನು ಮರೆತಿದ್ದಾರೆ. ರಾಜಕೀಯ ಅನುಭವವಿಲ್ಲದಿದ್ದರೂ ಮಮತಾ ಬ್ಯಾನರ್ಜಿಯವರ ಪಕ್ಷದಿಂದ ಆಯ್ಕೆಯಾದ ಈ ಇಬ್ಬರು ಸಂಸದೆಯರಿಗೆ ಕನಿಷ್ಠ ಜ್ಞಾನ ಇಲ್ಲವೇ ಎಂದು ಟ್ವಿಟರ್​ನಲ್ಲಿ ಪ್ರಶ್ನಿಸಲಾಗಿದೆ.

ಸಂಸತ್ತಿನಲ್ಲಿ ಮೊದಲ ದಿನ ಖುಷಿಯನ್ನು ಹಂಚಿಕೊಳ್ಳಲು ಹೋದ ನಟಿಯರು ಇದೀಗ ಮೀಮ್ಸ್ ಹಾಗೂ ಟ್ರೋಲ್​ಗೆ ತುತ್ತಾಗಿದ್ದಾರೆ. ನುಸ್ರತ್ ಜಹಾನ್ 3.50 ಲಕ್ಷ ಮತಗಳ ಅಂತದಿಂದ ಗೆದ್ದರೆ, ಮಿಮಿ ಚಕ್ರವರ್ತಿ 2.95 ಲಕ್ಷಗಳಿಂದ ಗೆದ್ದಿದ್ದರು. ಅಂದರೆ ಇವರನ್ನು ಆಯ್ಕೆ ಮಾಡಿದವರು ಮುಠ್ಠಾಳರೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಮುಂದಿಡಲಾಗಿದೆ.

ಪಾರ್ಲಿಮೆಂಟ್​ಗೆ ಕಾಲಿಡುತ್ತಿದ್ದಂತೆ ವಿವಾದಕ್ಕೀಡಾಗಿರುವ ನೂತನ ಸಂಸದೆಯರು ಪಾಶ್ಚಾತ್ಯ ಉಡುಗೆಗಳನ್ನು ಧರಿಸಿರುವುದೇ ಹಲವರ ಕಣ್ಣು ಕೆಂಪಾಗಿಸಿದೆ. ಇವರಿಗೆಲ್ಲಾ ರಾಜಕೀಯ ಎಂಬುದು ಒಂದು ಟೈಂ ಪಾಸ್, ತಮ್ಮ ಸ್ಥಾನದ ಮೌಲ್ಯವನ್ನು ಆರಂಭದಲ್ಲೇ ಕಳೆದುಕೊಂಡರು ಎಂದು ಟ್ವಿಟ್ಟಗರೊಬ್ಬರು ಬರೆದುಕೊಂಡಿದ್ದಾರೆ.

ಮಿಮಿ ಚಕ್ರವರ್ತಿ-ನುಸ್ರತ್ ಜಹಾನ್


ಆದರೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ವಾವ್ಹ್, ಬಂಗಾಳದ ಹೊಸ ಸಂಸದೆಯರು ಎಂದು ಟ್ವಿಟಿಸಿರುವ ವರ್ಮಾ, ಭಾರತವು ಪ್ರಗತಿಯ ಹಾದಿಯಲ್ಲಿದೆ. ಈ ಬಾರಿ ಸುಂದರ ಸಂಸದೆಯರನ್ನು ನೋಡುವ ಅವಕಾಶ ಒದಗಿದೆ ಎಂಬಾರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.ಇನ್ನೊಬ್ಬರು ಕರ್ನಾಟಕ ಕಿರಿಯ ಸಂಸದ ತೇಜಸ್ವಿ ಸೂರ್ಯ ಸಂಸತ್ತಿಗೆ ಪ್ರವೇಶಿಸುವ ಮುನ್ನ ಕೈ ಮುಗಿಯುತ್ತಿರುವ ಫೋಟೋ ಮತ್ತು ನುಸ್ರತ್ ಹಾಗೂ ಮಿಮಿ ಜತೆಯಾಗಿರುವ ಚಿತ್ರವನ್ನು ಟ್ವೀಟ್ ಮಾಡಿ, ಸಂಸ್ಕಾರಿ ಮತ್ತು ಅಸಂಸ್ಕಾರಿಗಿರುವ ವ್ಯತ್ಯಾಸ ಇಷ್ಟೇ ಎಂದು ಪೋಸ್ಟ್​ ಮಾಡಿದ್ದಾರೆ. ಇನ್ನು ಚುನಾವಣೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ಬಗ್ಗೆ ಚರ್ಚಿಸುವವರು, ವಿಶೇಷ ಸ್ಥಾನಮಾನದ ಬಗ್ಗೆ ವಾದ ಮಂಡಿಸುವವರು ಇದಕ್ಕೆ ಉತ್ತರಿಸಬೇಕೆಂದು ಟ್ವಿಟರ್​ ಬಳಕೆದಾರನೊಬ್ಬ ಕೇಳಿಕೊಂಡಿದ್ದಾರೆ.ಅಮೆರಿಕಾ ಸಂಸದೆಯ ಮೇಲೂ ಆಗಿತ್ತು ಟ್ರೋಲ್ ದಾಳಿ:
ಕಳೆದ ವರ್ಷ ಅಮೆರಿಕಾ ಸಂಸತ್ತಿಗೆ ಆಯ್ಕೆಯಾಗಿದ್ದ ಅಲೆಕ್ಸಾಂಡ್ರಿಯಾ ಓಕಾಸಿಯೊ-ಕೊರ್ಟೆಜ್ ಅವರ ಉಡುಗೆ ತೊಡುಗೆ ಬಗ್ಗೆ ಸಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಲಾಗಿತ್ತು. ಆದರೆ ಇಂತಹ ಟ್ರೋಲ್​ ಹಾಗೂ ಟೀಕೆಗಳಿಗೆ ನಾನು ಗಮನ ನೀಡುವುದಿಲ್ಲ. ನನ್ನಷ್ಟಿದ್ದ ಬಟ್ಟೆ ಧರಿಸುವುದ ನನ್ನ ಹಕ್ಕು ಎಂದು ಟೀಕಾಗಾರರಿಗೆ ಅಲೆಕ್ಸಾಂಡ್ರಿಯಾ ತಿರುಗೇಟು ನೀಡಿದ್ದರು. ಅಲ್ಲದೆ ಸಂಸದೆಯ ಉತ್ತರಕ್ಕೆ ವ್ಯಾಪಕ ಬೆಂಬಲಗಳು ವ್ಯಕ್ತವಾಗಿದ್ದವು. ಇದೀಗ ಅದೇ ಮಾದರಿಯಲ್ಲಿ ಯುವ ಸಂಸದೆಯರನ್ನು ಸಾಮಾಜಿಕ ಜಾಲತಾಣದಲ್ಲಿ ಗುರಿ ಮಾಡಲಾಗಿದೆ. ಇಲ್ಲಿ ಉಡುಗೆ-ತೊಡುಗೆಗಳಿಗಿಂತ ಅವರ ಕರ್ತವ್ಯದ ಬಗ್ಗೆ ಮತ್ತು ಸೇವೆಯ ಬಗ್ಗೆ ಚರ್ಚೆಯಾಗಬೇಕು ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.ಬೆಂಗಾಳ್ ಟಾಪ್ ತಾರೆಯರು:

ನುಸ್ರತ್ ಜಹಾನ್ ಹಾಗೂ ಮಿಮಿ ಚಕ್ರವರ್ತಿ ಬೆಂಗಾಳಿ ಸಿನಿರಂಗದ ಖ್ಯಾತ ನಟಿಯರು. 'ಲವ್​ ಎಕ್ಸ್​ಪ್ರೆಸ್', 'ಶೊತ್ರು', 'ಯೋಧ'ದಂತಹ ಸೂಪರ್​ ಹಿಟ್​ ಚಿತ್ರಗಳು ನುಸ್ರತ್​ಗೆ ಭಾರೀ ಹೆಸರು ತಂದುಕೊಟ್ಟಿತ್ತು. ಇನ್ನು ಮಿಮಿ ಚಕ್ರವರ್ತಿ 20ಕ್ಕೂ ಬೆಂಗಾಳಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
First published:May 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...