ದೊಡ್ಮನೆ ಹೆಣ್ಮಕ್ಕಳಿಗೆ ಡ್ರಗ್ಸ್​ ಹೊಡೆಸಿ `ಮಾಂಸ’ದಂಧೆ: 48 MBA, MSC ವಿದ್ಯಾರ್ಥಿನಿಯರ ರಕ್ಷಣೆ!

ದೊಡ್ಡ ಮನೆ ಮಕ್ಕಳು ಡ್ರಗ್ಸ್​ಗಾಗಿ ಹೀಗೆಲ್ಲಾ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ರಕ್ಷಣೆ ಮಾಡಿದವರಲ್ಲಿ ಹೆಚ್ಚಿನ ಹುಡುಗಿಯರು ದೊಡ್ಡ ಮನೆಗಳಿಗೆ ಸೇರಿದ್ದಾರೆ ಮತ್ತು ತುಂಬಾ ವಿದ್ಯಾವಂತರಾಗಿದ್ದಾರೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
ಈಗಿನ ಕಾಲದ ಯುವಕ, ಯುವತಿಯರು ಡ್ರಗ್ಸ್(Drugs)​ಗಾಗಿ ಏನು ಮಾಡಲು ಸಿದ್ದರಾಗಿರುತ್ತಾರೆ. ನಶೆ ಏರಿಸಿಕೊಂಡ ಮೇಲೆ ಏನು ಮಾಡುತ್ತಿದ್ದೇವೆ ಎಂಬ ಅರಿವು ಕೂಡ ಅವರಿಗಿರುವುದಿಲ್ಲ. ಡ್ರಗ್ಸ್​ ಮುಕ್ತ ಭಾರತ ಮಾಡಬೇಕೆಂಬ ಅಭಿಮಾನ ಆರಂಭವಾಗಿದೆ ಅಷ್ಟೆ. ಆದರೂ, ಈ ದಂಧೆಯ ಕರಾಳತೆ ಮಾತ್ರ ಕಡಿಮೆಯಾಗಿಲ್ಲ. ಅದರಲ್ಲೂ ಈ ದೊಡ್ಡ ಮನೆ ಮಕ್ಕಳಿಗೆ ಈ ಡ್ರಗ್ಸ್​ ಮೇಲಿರುವ ಪ್ರೀತಿ ಆಪಾರ. ಸಿನಿಮಾ ತಾರೆ(Star actors)ಯರಿಂದ , ನಾರ್ಮೆಲ್​ ಜನರ ಕೈಗೆ ಈಸಿಯಾಗಿ ಡ್ರಗ್ಸ್​ ಸಿಗುತ್ತಿದೆ. ಈ ಬಗ್ಗೆ ಎಲ್ಲ ತಿಳಿದಿದ್ದರೂ ಪೊಲೀಸರು(Police) ಮಾತ್ರ ಕಣ್ಣು ಮುಚ್ಚಿ ಕೂತಿದ್ದಾರೆ. ಈ ಡ್ರಗ್ಸ್​ ದಂಧೆ ಯುವ ಪೀಳಿಗೆಯನ್ನು ನಾಶ ಮಾಡುತ್ತಿದೆ. ಡ್ರಗ್ಸ್​ ಹೊಡೆಸಿ ಅತ್ಯಾಚಾರ(Rape)ವೆಸಗಿರುವ ಘಟನೆಗಳನ್ನು ನಾವು ಕೇಳಿದ್ದೇವೆ. ಮಾದಕ ವ್ಯಸನಿಗಳಾಗಿರುವ ಯುವ ಪೀಳಿಗೆಯನ್ನು ಸರಿದಾರಿಯಲ್ಲಿ ನಡೆಸಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಆದರೆ, ಪೊಲೀಸರ ಕಣ್ಣು ತಪ್ಪಿಸಿ ಈ ಡ್ರಗ್ಸ್​ ದಂಧೆ ನಡೆಯುತ್ತಿದೆ. ಅಹಮದಾಬಾದ್​(Ahmadabad)ನಲ್ಲಿ ಪೊಲೀಸರು ಅತಿದೊಡ್ಡ ಸೆಕ್ಸ್​​ ಮತ್ತು ಡ್ರಗ್ಸ್​ ರಾಕೆಟ್(Sex & Drug Rocket)​​ ದಂಧೆಯನ್ನು ಬಯಲಿಗೆಳೆದಿದ್ದಾರೆ. ಇದರಲ್ಲಿ ಭಾಗಿಯಾದವರು ಯಾರು ಎಂದು ತಿಳಿದು ಪೊಲೀಸರೇ ದಂಗಾಗಿದ್ದಾರೆ. ಸರಿದಾರಿಯಲ್ಲಿ ನಡೆದು ದೇಶಕ್ಕೆ, ಮನೆಗೆ ಒಳ್ಳೆಗೆ ಹೆಸರು ತರಬೇಕಿದ್ದ 48 ವಿದ್ಯಾರ್ಥಿನಿಯರು ಈ ಡ್ರಗ್ಸ್​ ಹಾಗೂ ಸೆಕ್ಸ್​​ ರಾಕೆಟ್​ ದಂಧೆಯಲ್ಲಿ ಸಿಲುಕಿ ನಲುಗಿಹೋಗಿದ್ದಾರೆ. 

48 ದೊಡ್ಮನೆ ಹೆಣ್ಮಕ್ಕಳ ರಕ್ಷಣೆ!

ಅಹಮದಾಬಾದ್ ಪೊಲೀಸರು  48 ಹುಡುಗಿಯರನ್ನು ರಕ್ಷಣೆ ಮಾಡಿದ್ದಾರೆ. ಡ್ರಗ್ಸ್​ ನಶೆಯಲ್ಲಿ ಮಾಂಸ ದಂಧೆ ಮಾಡುತ್ತಿದ್ದ ದೊಡ್ಮನೆ ಹೆಣ್ಣುಮಕ್ಕಳನ್ನು ರಕ್ಷಿಸಿದ್ದಾರೆ. ಇದರಲ್ಲಿ ಎಂಬಿಎ, ಎಂಎಸ್​​ಸಿ ಓದಿಕೊಂಡಿರುವವರೇ ಹೆಚ್ಚಿದ್ದಾರೆ. ಈ ವಿಚಾರ ಕೇಳಿ ಪೊಲೀಸರಿಗೆ ಶಾಕ್​ ಆಗಿದೆ. ದೊಡ್ಡ ಮನೆ ಮಕ್ಕಳು ಡ್ರಗ್ಸ್​ಗಾಗಿ ಹೀಗೆಲ್ಲಾ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿದೆ. ರಕ್ಷಣೆ ಮಾಡಿದವರಲ್ಲಿ ಹೆಚ್ಚಿನ ಹುಡುಗಿಯರು ದೊಡ್ಡ ಮನೆಗಳಿಗೆ ಸೇರಿದ್ದಾರೆ ಮತ್ತು ತುಂಬಾ ವಿದ್ಯಾವಂತರಾಗಿದ್ದಾರೆ. ಡ್ರಗ್ಸ್​ ಜಾಲದಲ್ಲಿ ಸಿಲುಕಿ ಹೊರಬರಲಾಗದೇ ಮಾಂಸದಂಧೆಗೆ ಇಳಿದಿದ್ದರು. ಇದರಿಂದ ಹೊರಬರಲಾಗದೇ ಪರದಾಡುತ್ತಿದ್ದರಂತೆ. ಹುಡುಗಿಯರು ಹೇಳಿದ ಮಾತುಗಳು ಕೇಳಿ ಪೊಲೀಸರೇ ದಂಗಾಗಿ ಹೋಗಿದ್ದಾರೆ.

ಇದನ್ನು ಓದಿ: ಪ್ರತಿಭಟನೆ ಹಿಂಪಡೆಯುವ ಕುರಿತು ಇಂದು ನಿರ್ಧಾರ ಪ್ರಕಟಿಸಲಿರುವ ರೈತ ಸಂಘಟನೆಗಳು

ಡ್ರಗ್ಸ್​ ಹೊಡೆಸಿ ಮಾಂಸದಂಧೆ ಮಾಡುತ್ತಿದ್ದ ಕಿರಾತಕರರು

ಮೊದಲು ದೊಡ್ಡ ಮನೆ ಮಕ್ಕಳಿಗೆ ಡ್ರಗ್ಸ್​ ರುಚಿ ತೋರಿಸುತ್ತಿದ್ದರು. ಅದು ಚಟವಾಗಿ ಬದಲಾಗುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಕಿರಾತಕರು, ಅವರಿಗೆ ಡ್ರಗ್ಸ್​ ನೀಡಿ ವ್ಯಭಿಚಾರದ ಕೆಲಸ ಮಾಡಿಸುತ್ತಿದ್ದರಂತೆ. ಡ್ರಗ್ಸ್​ ಸೇವಿಸಿದ ಬಳಿಕ ಯಾವ ಸ್ಥಿತಿಯಲ್ಲಿ ಇರುತ್ತಿದ್ದೆ ಎಂದು ನನಗೆ ಗೊತ್ತಾಗುತ್ತಿರಲಿಲ್ಲ. ನಶೆ ಇಳಿದ ಬಳಿಕ ನನ್ನ ಹೊಟ್ಟೆ ನೋವುತ್ತಿತ್ತು. ಮೈಮೇಲೆ ಮಾರ್ಕ್​ಗಳು ಇರುತ್ತಿತ್ತು ಎಂದು ಹುಡುಗಿಯೊಬ್ಬಳು ಪೊಲೀಸರ ಬಳಿ ಹೇಳಿದ್ದಾಳೆ. ಇವರಿಗೆ ಚೆನ್ನಾಗಿ ಡ್ರಗ್ಸ್​​ ಹೊಡೆಸುತ್ತಿದ್ದ ಕಿರಾತಕರು, ಹುಡುಗಿಯರು ನಶೆಯಲ್ಲಿದ್ದಾಗ ದೊಡ್ಡ ದೊಡ್ಡ ಹೋಟೆಲ್​ಗಳಲ್ಲಿ ಇರುತ್ತಿದ್ದ ಗಿರಾಕಿಗಳ ಬಳಿ ಕಳಿಸಿಕೊಡುತ್ತಿದ್ದರಂತೆ.

ಇದನ್ನು ಓದಿ : Onlineನಲ್ಲಿ ಹೋಮ ಮಾಡ್ಸಿದ್ರೆ ನಿಂಗೆ ದೊಡ್ಡ ಕೆಲಸ ಸಿಗುತ್ತೆ: ಹೀಗೆ ಹೇಳಿ 38 ಲಕ್ಷ ಪಂಗನಾಮ ಹಾಕಿದ ದೇವಮಾನವ!

ಚೆನ್ನಾಗಿ ಓದಿಕೊಂಡಿದ್ದ ಯುವತಿಯರಿಗೆ ಡ್ರಗ್ಸ್​ ಚಟ!

ಇದೇ ರೀತಿಯ 48 ಯುವತಿಯರುನ್ನು ಪೊಲೀಸರು ಇಲ್ಲಿವರೆಗೂ ರಕ್ಷಣೆ ಮಾಡಿದ್ದಾರೆ. ಚೆನ್ನಾಗಿ ಓದಿಕೊಂಡಿದ್ದ ಯುವತಿಯರೇ ಈ ಡ್ರಗ್ಸ್​ ನಶೆಗೆ ದಾಸರಾಗಿದ್ದಾರೆ. ಡ್ರಗ್ಸ್​ಗಾಗಿ ಇಂತಹ ಕೆಲಸ ನಡೆಸುತ್ತಿದ್ದರು ಅವರೇ ಒಪ್ಪಿಕೊಂಡಿದ್ದಾರಂತೆ. ದೊಡ್ಡ ದೊಡ್ಡ ಮನೆ ಮಕ್ಕಳಿಗೂ ಈ ಕಿರಾತಕರು ಹಣ ಬೇಡ ನಮಗೆ, ನೀನು  ಈ ಕೆಲಸ ಮಾಡುವಂತೆ ಒತ್ತಾಯ ಮಾಡುತ್ತಿದ್ದರಂತೆ. ಈ ಬಗ್ಗೆ ಸ್ವತಃ ಪೊಲೀಸರು ರಕ್ಷಿಸಿದ ಯುವತಿಯರು ಹೇಳಿದ್ದಾರೆ.
Published by:Vasudeva M
First published: