ಮಹಾರಾಷ್ಟ್ರ: ಸುಮಾರು 50 ಕ್ಕೂ ಹೆಚ್ಚು ಯುವಕರು ವರರಂತೆ (Groom) ವೇಷಭೂಷಣ ತೊಟ್ಟು, ಕುದುರೆ (horse) ಏರಿ, ಬ್ಯಾಂಡ್ ಬಾಜಾ ಬಾರಾತ್ (Band Baja Baraat) ಜೊತೆಗೆ ಮೆರವಣಿಗೆ ನಡೆಸಿದರು. ಆದರೆ ಈ ಯುವಕರು ಹೋಗಿದ್ದು ಮದುವೆ (Marraige) ಮಂಟಪಕ್ಕಲ್ಲ, ಬದಲಾಗಿ ಸೊಲ್ಲಾಪುರದ ಜಿಲ್ಲಾಧಿಕಾರಿ ಕಚೇರಿಗೆ. ಹೌದು ಮಹಾರಾಷ್ಟ್ರದ (Maharashtra) ಸೊಲ್ಲಾಪುರದ ಜಿಲ್ಲಾಧಿಕಾರಿ ಕಚೇರಿಗೆ (Solapur collector office) ಯುವಕ ಗುಂಪೊಂದು ಮದುವೆಯಾಗಲು ವಧು (Bride) ಹುಡುಕಿಕೊಡಿ ಎಂದು ಸರ್ಕಾರಕ್ಕೆ (Government) ಮನವಿ ಮಾಡಿದ್ದಾರೆ. ಮಹಾರಾಷ್ಟ್ರದಲ್ಲಿ ಸ್ತ್ರೀ ಅನುಪಾತ ಹೆಚ್ಚಾಗುತ್ತಿರುವುದರಿಂದ ಮದುವೆಯಾಗಲು ವಧು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ವಧು-ವರ ಮೋರ್ಚಾ ಎಂಬ ಸಂಘಟನೆಯೊಂದು ಈ ಮೆರವಣಿಗೆಯನ್ನು ನಡೆಸಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅವಿವಾಹಿತರು ವಧುವನ್ನು ಹುಡುಕಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದೆ.
ಮಹಾರಾಷ್ಟ್ರದಲ್ಲಿ 1,000 ಹುಡುಗರಿಗೆ 920 ಹುಡುಗಿಯರಿದ್ದಾರೆ
ಪತ್ರದಲ್ಲಿ ಮಹಾರಾಷ್ಟ್ರದಲ್ಲಿ ಪುರುಷ- ಮಹಿಳೆಯರ ಅನುಪಾತವನ್ನು ಸುಧಾರಿಸಲು ಗರ್ಭಧಾರಣೆಯ ಪೂರ್ವ ಹಾಗೂ ಪ್ರಸವಪೂರ್ವ ನಿಯಂತ್ರಣ ತಂತ್ರಗಳ (ಪಿಸಿಪಿಎನ್ಡಿಟಿ) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಮನವಿ ಸಲ್ಲಿಸಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (2019-21) ಪ್ರಕಾರ, ಮಹಾರಾಷ್ಟ್ರದ ಲಿಂಗ ಅನುಪಾತವು 1,000 ಹುಡುಗರಿಗೆ 920 ಹುಡುಗಿಯರಿದ್ದಾರೆ. ಹೆಣ್ಣು ಭ್ರೂಣಹತ್ಯೆಯಿಂದಾಗಿ ಈ ಅಸಮಾನತೆ ಉಂಟಾಗಿದ್ದು, ಇದಕ್ಕೆ ಕಾರಣ ಸರ್ಕಾರವೇ ಆಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ನಂಗೆ ಇದುವರೆಗೂ 25 ಪ್ರಪೋಸಲ್ ಬಂದಿದ್ದು, ಎಲ್ಲವೂ ರಿಜೆಕ್ಟ್ ಆಗಿದೆ
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಡೈರಿ ವ್ಯಾಪಾರ ನಡೆಸುತ್ತಿರುವ 29 ವರ್ಷದ ಶಿಲ್ವಂತ್ ಕ್ಷೀರಸಾಗರ್ ಎಂಬ ಯುವಕ, ನನಗೆ 29 ವರ್ಷ, ಇನ್ನೂ ಮದುವೆಯಾಗಿಲ್ಲ. ಸೋಲಾಪುರ ಜಿಲ್ಲೆಯ ಗ್ರಾಮೀಣ ಭಾಗದವನು, ನಮ್ಮ ಕುಟುಂಬ ಡೈರಿ ವ್ಯಾಪಾರ ನಡೆಸುತ್ತಿದ್ದೇವೆ ಮತ್ತು ಎರಡು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ. ಪ್ರತಿ ಬಾರಿ ಮದುವೆ ವಿಚಾರ ಬಂದಾಗ ವಧು ಕೇಳುವ ಮೊದಲ ಪ್ರಶ್ನೆ ಎಂದರೆ ನಾನು ನಗರದಲ್ಲಿ ವಾಸಿಸುತ್ತಿದ್ದೀನಾ ಮತ್ತು ಉದ್ಯೋಗ ಮಾಡುತ್ತಿದ್ದೀನಾ ಅಥವಾ ಇಲ್ಲವೋ ಅಂತ. ಇದುವರೆಗೂ ಸುಮಾರು 25 ಮದುವೆ ಪ್ರಪೋಸಲ್ಗಳು ಬಂದಿದೆ. ಆದರೆ ಇದರಲ್ಲಿ ಹೆಚ್ಚಾಗಿ ಹುಡುಗಿ ಮನೆಯವರು ನಾನು ನಗರದಲ್ಲಿ ವಾಸಿಸುತ್ತಿಲ್ಲ ಮತ್ತು ಉದ್ಯೋಗವನ್ನು ಹೊಂದಿಲ್ಲ ಎಂದು ಮದುವೆಯಾಗಲು ರಿಜೆಕ್ಟ್ ಮಾಡಿದ್ದಾರೆ.
ನನ್ನ ಪ್ರೊಫೈಲ್ ಅನ್ನು ಕೆಲವು ಮ್ಯಾಟ್ರಿಮೋನಿಯಲ್ ಸೈಟ್ಗಳು ಮತ್ತು ಮ್ಯಾರೇಜ್ ಬ್ಯೂರೋಗಳಲ್ಲಿ ಹಾಕಿದ್ದೇನೆ, ಆದರೆ ಎಲ್ಲವೂ ವ್ಯರ್ಥವಾಗಿದೆ. ಯಾವುದೇ ಹುಡುಗಿ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಯನ್ನು ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ಅನಿಸುತ್ತದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಡಿಗ್ರಿ ಓದಿದ್ದರೂ ವಧು ಸಿಗ್ತಿಲ್ಲ
ನಂತರ ಟೈಲರಿಂಗ್ ಕೆಲಸ ಮಾಡುತ್ತಾ, ಎರಡು ಎಕರೆ ಭೂಮಿಯಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿರುವ ಮೊಹೋಲ್ ತಹಸಿಲ್ ಮೂಲದ 27 ವರ್ಷದ ಔದುಂಬರ್ ಎಂಬ ಯುವಕ ಮಾಧ್ಯಮದೊಂದಿಗೆ ಮಾತನಾಡಿದರು.
ಇದನ್ನೂ ಓದಿ: Relationship: ಮದುವೆ ಆಗಲು ಯಾಕೋ ಪುಕ ಪುಕ ಅಂತಾರೆ ಗಂಡಸರು! ಕಾರಣ ಇಲ್ಲಿದೆ
"ನನಗೆ ಇದುವರೆಗೆ ಎಂಟು ಮದುವೆ ಪ್ರಪೊಸಲ್ಗಳು ಬಂದಿವೆ. ಆದರೆ ಹುಡುಗಿಯ ಕುಟುಂಬದಿಂದ ಬರುವ ಮೊದಲ ಪ್ರಶ್ನೆ ನನಗೆ ಸರಿಯಾದ ಉದ್ಯೋಗವಿದೆಯೇ ಅಥವಾ ಇಲ್ಲವೇ ಎಂಬುದು. ಮುಂದಿನ ಪ್ರಶ್ನೆ ನಾನು ಹೆಚ್ಚು ಕೃಷಿ ಭೂಮಿ ಹೊಂದಿದ್ದೇನೋ ಅಥವಾ ಇಲ್ಲವೋ ಅಂತ. ವರನ ಆರ್ಥಿಕ ಸ್ಥಿತಿಯ ಬಗ್ಗೆ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿರುತ್ತಾರೆ.
ಡಿಗ್ರಿ ಓದಿದ್ದರೂ ವಧು ಸಿಗದೇ ಇರುವ ಇಂದಿನ ಸ್ಥಿತಿಗೆ ಪುರುಷ- ಮಹಿಳೆಯರ ಅನುಪಾತವೇ ಕಾರಣವಾಗಿದೆ. ಪಿಸಿಪಿಎನ್ಡಿಟಿ ಕಾಯ್ದೆಯು ಸರಿಯಾಗಿ ಅನುಷ್ಠಾನಗೊಂಡಿದ್ದರೆ, ಪರಿಸ್ಥಿತಿ ಬೇರೆ ಆಗಿರುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ