ನಿದ್ರಿಸುತ್ತಿದ್ದ ಗಂಡ, ಹೆಂಡತಿ, ಮಗುವಿನ ಬರ್ಬರ ಹತ್ಯೆ; ಶವದ ಜೊತೆ 3 ಗಂಟೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನ ಬಂಧನ

ನ. 24ರ ರಾತ್ರಿ ದಂಪತಿಯ ಮನೆಗೆ ತೆರಳಿದ್ದ ನಾಸಿರುದ್ದೀನ್ 30 ವರ್ಷದ ಮಹಿಳೆ, ಆಕೆಯ ಗಂಡ, ಮತ್ತು ಮಗುವನ್ನು ಕೊಂದಿದ್ದ. ಮಹಿಳೆಯ ಶವದ ಜೊತೆ ಲೈಂಗಿಕ ಕ್ರಿಯೆ ನಡೆಸಿ ವಾಪಾಸ್ ಹೊರಡುವಾಗ ಪಕ್ಕದ ರೂಮಿನಲ್ಲಿದ್ದ ದಂಪತಿಯ 10 ವರ್ಷದ ಮಗಳ ಮೇಲೂ ಅತ್ಯಾಚಾರವೆಸಗಿ ಕಲ್ಲಿನಿಂದ ಹೊಡೆದಿದ್ದ. ನಂತರ ಆಕೆಯ 4 ವರ್ಷದ ತಮ್ಮನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ.

Sushma Chakre | news18-kannada
Updated:December 3, 2019, 1:11 PM IST
ನಿದ್ರಿಸುತ್ತಿದ್ದ ಗಂಡ, ಹೆಂಡತಿ, ಮಗುವಿನ ಬರ್ಬರ ಹತ್ಯೆ; ಶವದ ಜೊತೆ 3 ಗಂಟೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನ ಬಂಧನ
ಹಂತಕ ನಾಸಿರುದ್ದೀನ್
  • Share this:
ಅಜಂಗರ್ (ಡಿ. 3): ದೇಶದಲ್ಲಿ ಸಾಮೂಹಿಕ ಅತ್ಯಾಚಾರ, ಕೊಲೆ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ ವಾರ ನಡೆದ ಹೈದರಾಬಾದ್​ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ, ರಾಂಚಿಯ ವಿಐಪಿ ಪ್ರದೇಶದಲ್ಲಿ ನಡೆದ ಕಾನೂನು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣಗಳು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿವೆ. ಅದೇರೀತಿ ಉತ್ತರ ಪ್ರದೇಶದಲ್ಲಿ ಮತ್ತೊಂದು ಹೇಯಕೃತ್ಯ ಬೆಳಕಿಗೆ ಬಂದಿದ್ದು, ಗಂಡ, ಹೆಂಡತಿ, ಮಗುವನ್ನು ಕೊಂದ ಹಂತಕ ಮಹಿಳೆಯ ಶವದ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ.

ಉತ್ತರ ಪ್ರದೇಶದ ಅಜಂಗರ್​ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 38 ವರ್ಷದ ನಾಸಿರುದ್ದೀನ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಗಂಡ-ಹೆಂಡತಿ ಮತ್ತು ಮಗುವನ್ನು ಅವರ ಮನೆಯಲ್ಲೇ ಹತ್ಯೆ ಮಾಡಿದ ಘಟನೆ ಒಂದು ವಾರದ ಹಿಂದೆ ನಡೆದಿದೆ. ಆರೋಪಿ ನಾಸಿರುದ್ದೀನ್ ಹರಿಯಾಣದಲ್ಲಿ ಕೂಡ ಇದೇ ರೀತಿಯ ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಶವದ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಕಾಮುಕ:
ರಾತ್ರಿ ಮಲಗಿದಾಗ ಮನೆಗೆ ನುಗ್ಗಿ 30 ವರ್ಷದ ಮಹಿಳೆ, ಆಕೆಯ ಗಂಡ ಮತ್ತು 4 ತಿಂಗಳ ಮಗನನ್ನು ಕೊಲೆ ಮಾಡಿದ ನಾಸಿರುದ್ದೀನ್ ನಂತರ ಆ ಮಹಿಳೆಯ ಶವದ ಜೊತೆಗೆ ಲೈಂಗಿಕ ಕ್ರಿಯೆ ನಡೆಸಿದ್ದ. ಅಷ್ಟೇ ಅಲ್ಲದೆ, ಪಕ್ಕದ ರೂಮಿನಲ್ಲಿ ಮಲಗಿದ್ದ ಆ ದಂಪತಿಯ 10 ವರ್ಷದ ಮಗಳ ಮೇಲೂ ಅತ್ಯಾಚಾರವೆಸಗಿದ್ದ. ನಂತರ ಕಲ್ಲಿನಿಂದ ಆ 10 ವರ್ಷದ ಹುಡುಗಿ ಮತ್ತು ಅವಳ ತಮ್ಮನ ತಲೆಗೆ ಹೊಡೆದು ಪರಾರಿಯಾಗಿದ್ದ. ಸದ್ಯಕ್ಕೆ ಆ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Namma Metro: ಬೆಂಗಳೂರು ಮೆಟ್ರೋದಲ್ಲಿ ಕೊಂಡೊಯ್ಯಬಹುದು ಪೆಪ್ಪರ್​ ಸ್ಪ್ರೇ; ಮಹಿಳೆಯರ ಸುರಕ್ಷತೆಗೆ ಹೊಸ ಕ್ರಮ

ಈ ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ಅಜಂಗರ್ ಎಸ್​ಪಿ ತ್ರಿವೇಣಿ ಸಿಂಗ್, 'ಮಹಿಳೆಯ ಮೃತದೇಹದೊಂದಿಗೆ 3 ಗಂಟೆಗಳ ಕಾಲ ಲೈಂಗಿಕ ಕ್ರಿಯೆ ನಡೆಸಿದ್ದ ನಾಸಿರುದ್ದೀನ್ ತನ್ನ ಮೊಬೈಲ್​ನಲ್ಲಿ ಅದರ ವಿಡಿಯೋ ಮಾಡಿಕೊಂಡಿದ್ದ. ಮನೆಗೆ ಹೋದ ನಂತರ ಆ ವಿಡಿಯೋವನ್ನು ತನ್ನ ಅತ್ತಿಗೆಗೆ ತೋರಿಸಿದ್ದ. ಆ ವಿಡಿಯೋ ನೋಡಿದ ಆತನ ಅತ್ತಿಗೆ ಆಘಾತಗೊಂಡಿದ್ದಳು. ಈ ಕೃತ್ಯ ಎಸಗುವ ಮೊದಲು ಡ್ರಗ್ಸ್​ ಸೇವಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಹಾಗೇ, ತಾನು ಅತ್ಯಾಚಾರ ನಡೆಸಿದ ಬಗ್ಗೆ ಯಾರಿಗೂ ಅನುಮಾನ ಬರಬಾರದು ಎಂದು ಕಾಂಡೋಮ್​ಗಳನ್ನು ತೆಗೆದುಕೊಂಡು ಹೋಗಿದ್ದ. ಹತ್ಯೆ ನಡೆಸಲು ಚಾಕು ಮತ್ತು ದೊಡ್ಡ ಕಲ್ಲುಗಳನ್ನು ತೆಗೆದುಕೊಂಡು ಹೋಗಿದ್ದರ ಬಗ್ಗೆ ಆತ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ' ಎಂದು ತಿಳಿಸಿದ್ದಾರೆ.

Bangalore Rains: ಬೆಂಗಳೂರಿನಲ್ಲಿ ಇಂದು ಎಷ್ಟು ಗಂಟೆಗೆ ಮಳೆಯಾಗಲಿದೆ ಗೊತ್ತಾ?ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ನ. 24ರಂದು ರಾತ್ರಿ ದಂಪತಿಯ ಮನೆಗೆ ತೆರಳಿದ್ದ ನಾಸಿರುದ್ದೀನ್ ಕೊಲೆ ನಡೆಸಲು ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಂಡಿದ್ದ. ಎಲ್ಲರೂ ಮಲಗಿದ್ದರಿಂದ ಸದ್ದಾಗದಂತೆ ಮನೆಯೊಳಗೆ ನುಸುಳಿದ್ದ. ಆಗ 30 ವರ್ಷದ ಮಹಿಳೆ, ಆಕೆಯ 35 ವರ್ಷದ ಗಂಡ, ಮತ್ತು ಮಗುವನ್ನು ಕೊಂದಿದ್ದ. ಮಹಿಳೆಯ ಶವದ ಜೊತೆ ಲೈಂಗಿಕ ಕ್ರಿಯೆ ನಡೆಸಿ ವಾಪಾಸ್ ಹೊರಡುವಾಗ ಪಕ್ಕದ ರೂಮಿನಲ್ಲಿದ್ದ ದಂಪತಿಯ 10 ವರ್ಷದ ಮಗಳು ಕಣ್ಣಿಗೆ ಬಿದ್ದಿದ್ದರಿಂದ ಆಕೆಯ ಮೇಲೂ ಅತ್ಯಾಚಾರವೆಸಗಿ ಕಲ್ಲಿನಿಂದ ಹೊಡೆದಿದ್ದ. ನಂತರ ಆಕೆಯ 4 ವರ್ಷದ ತಮ್ಮನ ಮೇಲೂ ಹಲ್ಲೆ ನಡೆಸಿ ಪರಾರಿಯಾಗಿದ್ದ.
First published: December 3, 2019, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading